Saturday 31 December 2011

ಶುಭಾಶಯಗಳು:

ಹೊಸ ವರುಷದ ಶುಭಾಶಯಗಳು ನನ್ನ ಎಲ್ಲಾ ಕನ್ನಡ ಪ್ರೇಮಿಗಳಿಗೆ.  ನಮ್ಮ ದೇಶದ ಕಣ್ಣುಗಳಾದ ನಮ್ಮ ರೈತ ಮತ್ತು ನಮ್ಮ ಸೈನಿಕರಿಗೆ ನನ್ನ ವಿಶೇಷ ನಮನಗಳು ಮತ್ತು ಶುಭಾಶಯಗಳು. ನೀವು ಈ ದೇಶದ ಆಸ್ತಿ.  ಹೊಸ ವರುಷ ೨೦೧೨ರಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆ ಯಾಗಲಿ.  ರೈತನಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ.  ಅವರಿಗೆ ನ್ಯಾಯವಾಗಿ ಸಿಗಬೇಕಾದ ಸಕಲ ಸೌಲಭ್ಯಗಳು ಸಿಗುವಂತಾಗಲಿ.  ಈ ದೇಶದ ಸ್ತಿತಿ ನೊಡಿ.  ತಾವು ಬೆಳೆದ ಬೆಳೆಗಳಿಗೆ ಬೇರೆಯವರು ಮೌಲ್ಯವನ್ನು ಕಟ್ಟುತ್ತಾರೆ.  ಈ  ಕೆಟ್ಟ ಪದ್ದತಿ ನಮ್ಮ ದೇಶದಿಂದ ತೊಲಗಲಿ.  ಯಾವುದೇ ಉತ್ಪಾದಕ ತಾನು ತಯಾರಿಸುವ ಉತ್ಪನ್ನಗಳಿಗೆ ತಾನೆ ಬೆಲೆ ಕಟ್ಟುತ್ತಾನೆ.  ಆದರೆ ನಮ್ಮ ರೈತನಿಗೆ ಆ ಸೌಭಾಗ್ಯವಿಲ್ಲ.  ಆ ಸೌಲಭ್ಯ ಹೊಸ ವರುಷದಲ್ಲಿ ಅವನಿಗೆ ದೊರಕುವಂತಾಗಲಿ.  ಅವನು ಸಾಲ ಕೂಪದಿಂದ ಹೊರಬರುವಂತಾಗಲಿ.  ರೈತನ ಆತ್ಮಹತ್ಯೆಯ ಸುದ್ದಿ ನಾವು ಎಂದೂ ಕೇಳದಂತಾಗಲಿ.  .
ನಮ್ಮ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಈ ಹೊಸ ವರ್ಷ ಸಂತೊಷವನ್ನು ಉಂಟುಮಾಡಲಿ.   ಕನ್ನಡ ಪ್ರೇಮಿಗಳ ಸಂಖ್ಯೆಹೆಚ್ಚಾಗಲಿ.  ವರುಷದ ೩೬೫ ದಿನಗಳೂ ಕನ್ನಡದಲ್ಲೆ ವ್ಯವಹರಿಸಿ ನವೆಂಬರ್ ಕನ್ನಡಿಗರು ಎಂಬ ಆಪಾದನೆಯಿಂದ ಹೊರಬರುವಂತಾಗಲಿ ನಮ್ಮ ಕನ್ನಡಿಗರು.  ಹೊಸ ವರ್ಷದಿಂದ ಕನ್ನಡದ ಮನಸ್ಸುಗಳು ಜಾಗೃತಗೊಳ್ಳಲಿ. ಕನ್ನಡ ಚಿತ್ರರಂಗ ಹೊರ ರಾಜ್ಯ/ಹೊರ ದೇಶಗಳಲ್ಲೂ ತೆರೆಕಾಣುವಂತಾಗಲಿ.  ನಮ್ಮ ನಾಟಕ, ರಂಗಭೂಮಿ, ಚಲನಚಿತ್ರ, ಜನಪದ, ಕಲೆ, ಸಾಹಿತ್ಯ, ಸಂಗೀತ  ಲೋಕಕ್ಕೆ ಒಳಿತಾಗಲಿ.  ನಮ್ಮ ಕನ್ನಡ ಕ್ರೀಡಾಪಟುಗಳು ದೇಶ ವಿದೇಶಗಲ್ಲಿ ಮಿಂಚುವಂತಾಗಲಿ.
ನಮ್ಮ ಕನ್ನಡದ ಕಂದಮ್ಮಗಳು ತಮ್ಮ ತಮ್ಮ ತಂದೆ ತಾಯಿಯರನ್ನು ಮಮ್ಮಿ, ಡ್ಯಾಡಿ ಎಂದು ಕರೆಯದೆ ಪ್ರೀತಿಯಿಂದ ಅಪ್ಪ, ಅಮ್ಮ ಎಂದು ಕರೆಯುವಂತಾಗಲಿ.  ಅಂಕಲ್, ಆಂಟಿಯರ ಬದಲಾಗಿ ಅಣ್ಣ, ಅಕ್ಕ, ಚಿಕ್ಕಪ್ಪ, ಚಿಕ್ಕಮ್ಮಗಳಾಗಲಿ.  ನಿಮ್ಮ ಮುದ್ದು ಬಾಯಿಯಿಂದ ಕನ್ನಡದ ಕತೆ, ಶಿಶು ಗೀತೆಗಳನ್ನು ಕೇಳುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುತ್ತಾ........

Friday 23 December 2011

ಮೊದಲ ತೊದಲ ಮಾತು

ಹಲೊ! ತಾತ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅತ್ತೆ, ಮಾವ, ಅಣ್ಣ, ಅಕ್ಕ ಎಲ್ಲ ಎದ್ದಿದ್ದೀರಾ? ಚೆನ್ನಾಗಿದ್ದೀರಾ? ನಾನು ಬಂದಿದ್ದೀನಿ ಗೊತ್ತಾ? ನಿನ್ನೆ ತಾನೆ ನಾನು ಹುಟ್ಟಿದೆ.  ನನಗೆ ಎನು ಹೆಸರು ಇಡಬೇಕು ಅಂತ ನಮ್ಮ ಅಪ್ಪ ತಲೆ ಕೆಡಿಸಿಕೊಳ್ತಾಇದ್ದ್ರೆ ನಮ್ಮ ಅಣ್ಣ ನನಗೆ ೨೪ * ೭ ಕನ್ನದ ಅಂತ ಹೆಸ್ರು ಇಟ್ಟುಬಿಟ್ಟ. ನಮ್ಮ ತಂದೆಗೆ ಭಾಳ ಖುಷಿ ಆಯ್ತು. ಯಾಕೆಂದರೆ ಅವರಿಗೆ ಕನ್ನಡ ಅಂದ್ರೆ ತುಂಬಾ ಇಷ್ಟ.  ನಾನು ಯಾವಾಗಲೂ ಕನ್ನಡದಲ್ಲೇ ಮಾತಾಡಲಿ ಅಂತ ನನಗೆ ೨೪ * ೭ ಕನ್ನಡ ಅಂತ ಹೆಸರು ಇಟ್ಟಿದ್ದಾರೆ ಗೊತ್ತಾ.  ನನ್ನ ಕಂಡ್ರೆ ಅವರಿಗೆ ತುಂಬಾ ಪ್ರೀತಿ.  ನಾನು ಕನ್ನದದಲ್ಲೇ ಮಾತಾಡ್ತೀನಿ.  ನೀವು ಆಷ್ಟೇ ನನ್ನ ಜೊತೆ ಕನ್ನಡದಲ್ಲೇ ಮಾತಾಡಬೇಕು.  ಇಲ್ಲಾ ಅಂದ್ರೆ ನಾನು ನಿಮ್ಮ ಜೊತೆ "ಟೂ" ಬಿಟ್ಟುಬಿಡುತ್ತೀನಿ.  ನನ್ನ ಜೊತೆ ನೀವು ಎಲ್ಲಾ ಇರ್ತೀರಾ ಅಲ್ವಾ.  ಸರಿ ನನಗೆ ನಿದ್ದೆ ಬರ್ತಿದೆ.  ಬರಲಾ, ನೀವು ನಿದ್ದೆ ಮಾದ್ಬೇಡಿ.  ನೀವು ಎನ್ ಗುರು ಕಾಫಿ ಅಯ್ತಾ (enguru.blogspot.com) ಚಿಕ್ಕಪ್ಪನ್ನ ನೋಡಿ ಮಾತಡ್ಸಿಕೊಂಡು ಬನ್ನಿ.  ನಮ್ಮ ತಂದೆ ನನಗೆ ಒಂದು ಕತೆ ಹೇಳ್ತೀನಿ ಅಂತ ಹೇಳಿತ್ತೀದ್ದಾರೆ.  ನಾನು ನಿಮಗೆ ಆದನ್ನು ನಾಳೆ ಹೆಳ್ತೀನಿ.
ಎಲ್ಲರಿಗೂ ಟಾಟ..

Thursday 22 December 2011

ಒಂದ್ಕಥೆ:

ಒ, ಆಗಲೆ ಕಥೆ ಕೇಳಕ್ಕೆ ಬಂದುಬಿಟ್ರಾ? ನೀವೆಲ್ಲಾ ತುಂಬಾ ಒಳ್ಳೆಯವರು, ಜಾಣ ಮರಿಗಳು.  ಈಗ ಕಥೆ ಹೆಳ್ಳಾ, ಅದ್ಸರಿ ನೀವು ಕಾಫಿ ಚಿಕ್ಕಪ್ಪನ್ನ ನೋಡಿದ್ರಾ? ಹೇಗಿದ್ದಾರೆ? ಎಸ್ಟೊಂದು ವಿಷ್ಯ ತಿಳ್ಕೊಂಡಿದ್ದಾರಲ್ವಾ (enguru.blogspot.com) ಅವಾಗಾವಾಗ ಅವರನ್ನು ಭೇಟಿ ಮಾಡ್ತಾ ಇರಿ ವಿಷ್ಯ ತಿಳಿದುಕೊಳ್ತಾ ಇರಿ. ಮತ್ತೆ ಇನ್ನೊಂದು ವಿಷ್ಯ ನಾನು ಕಥೆ ಹೇಳಬೇಕಾದರೆ ನೀವು ಮಧ್ಯದಲ್ಲಿ ಬಾಯಿ ಹಾಕಬಾರದು ಸರೀನಾ, ಮತ್ತೆ ಹೂ... ಹೂ... ಅಂತ ಅನ್ನಬೇಕು.  ಅನ್ನಲಿಲ್ಲಾ ಅಂದ್ರೆ ಕಥೆ ನಿಲ್ಲಿಸಿ ಬಿಡ್ತೀನಿ ಅಷ್ಟೆ.  ಅದು ತುಂಬಾ ದೊಡ್ಡ ಕಥೆ. ಅದ್ರೆ ನಾನು ಅದನ್ನು ಚಿಕ್ಕದಾಗಿ ನನಗೆ ಎಷ್ಟು ಜ್ನಾಪಕ ಇದ್ಯೊ ಅಷ್ಟು ಹೇಳ್ತೀನಿ.  ನಾನು ಪುಟ್ಟ ಪಾಪು ಅಲ್ವಾ.  ತಪ್ಪಾಗಿದ್ರೆ ಕ್ಷಮಿಸಿ ಮತ್ತೆ ಹೊ....ಹೂ.  ಅನ್ನಬೇಕು.

ನಮ್ಮ ದೇಶ ಮೊದಲು ತುಂಬಾ ದೊಡ್ಡದಾಗಿತ್ತಂತೆ.  ಅದರಲ್ಲಿ ನಾವೆಲ್ಲಾ ಒಟ್ಟಾಗಿ ವಾಸ ಮಾಡ್ತಿದ್ವಂತೆ.  ಯಾರೊ ಪರಂಗಿ ದೇಶದ ದೊಡ್ಡಪ್ಪ ಇಲ್ಲಿ ವ್ಯಾಪಾರ ಮಾಡ್ತೀವಿ ಜಾಗ ಕೊಡಿ ಅಂತ ಬಂದು ಇಲ್ಲೇ ಇದ್ದುಬಿಟ್ರಂತೆ.  ನಮ್ಮ ಹತ್ರ ಇರೊ ಹಣ, ಬಂಗಾರ ಎಲ್ಲಾ ತೆಗೆದುಕೊಂಡು ನಮ್ಮನ್ನ ಆಳುಗಳ ಥರ ನಡೆಸಿಕೊಳ್ತಾ ಇದ್ರಂತೆ.  ಆಮೇಲೆ ಗಾಂಧಿ ತಾತ ಬಂದು ನಮ್ಮ ದೇಶ ನಮಗೆ ಕೊಟ್ಟುಬಿಡಿ ಇಲ್ಲಾಂದ್ರೆ ನಾನು ಊಟ ಮಾಡಲ್ಲ ಮತ್ತು ನಮ್ಮ ಜನಾನು ಊಟ ಮಾಡಲ್ಲ ಅಂತ ಹೇಳಿ ಅವರನ್ನು ಒಡಿಸಿಬಿಟ್ರಂತೆ.  ಆವರು ಅವರ ದೇಶಕ್ಕೆ ಹೊಗೊ ಮೊದಲು ಒಂದು ಕೆಟ್ಟ ಕೆಲಸ ಮಾದಿಬಿಟ್ರಂತೆ.  ನಮ್ಮ ದೇಶನ್ನ ಭಾಗ ಮಾಡಿ ಭಾರತ ಮತ್ತು ಪಾಕಿಸ್ತಾನ ಅಂತ ಹೆಸೆರಿಟ್ಟು ಅವರವರೆ ಜಗಳ ಮಾಡಿಕೊಂಡಿರಲಿ ಅಂತ ಹೊಗ್ಬಿಟ್ರಂತೆ.  ಇವತ್ತಿಗೊ ಆ ಜಗಳ ನಿಂತಿಲ್ಲ.  ಎನು ನೀವು ಹೂ.....ಹೂ....ಅಂತಾನೆ ಇಲ್ಲಾ.  ಹೋಗಿ ನಾನು ಕಥೆ ಹೇಳಲ್ಲ.  ನಾಳೆ ಮಿಕ್ಕಿದ್ದು.  ಹೋಗೊ ಮೊದಲು ನೀವು ದೊಡ್ಡಪ್ಪಾ (www.totalkannada.com) ಗೆ ಹೋಗ್ಬಿಟ್ಟು ಬನ್ನಿ.  ಅಲ್ಲಿ ಕನ್ನಡದ ಗಡಿಯಾರ, ಕನ್ನಡದ ಪುಸ್ತಕಗಳು, ಅಡಕ ತಟ್ಟೆಗಳು ಮತ್ತೆ ಎಲ್ಲಾನೂ ಸಿಗತ್ತೆ.

Wednesday 21 December 2011

ಮುಂದ....

ಅದ್ಸರಿ ನನಗೇನು ತಿಂಡಿ ತಂದ್ರಿ.  ಎನೂ ತರ್ಲಿಲ್ವ.  ನಾಳೆ ತನ್ನಿ ರವೆವುಂಡೆ.  ಸರೀನಾ.  ಆಮೇಲಾನಾಯ್ತಂತೆ ನಾವೆಲ್ಲ ಭಾರತೀಯರು ಬೇರ ಬೇರ ಭಾಷೆ ಮಾತಾಡೊರೆಲ್ಲಾ ಅವರವರದೇ ರಾಜ್ಯಗಳನ್ನು ಕಟ್ತಿಕೊಂಡ್ರಂತೆ.  ಹಾಗೆ ನಾವೂನು ಕರ್ನಾಟಕ  ರಾಜ್ಯವನ್ನು ಕಟ್ಟಿಕೊಂಡ್ವಂತೆ.  ನಮ್ಮ ಅಕ್ಕಪಕ್ಕದ ಮನೆಯವರು ನಮ್ಮನ್ನು ನಮ್ಮ ಪಾಡಿಗೆ ನಮ್ಮನ್ನು ಇರಕ್ಕೆ ಬಿಡಲ್ಲ.  ಆಂಧ್ರ, ತಮಿಳುನಾಡು, ಕೇರಳ, ಗೋವಾ  ಮನೆಗಳೂರು ಅವಾಗಾವಾಗ ಜಗಳಕ್ಕೆ ಬರತಾರಂತೆ ಹೌದಾ ತಾತ.   ನಮ್ಮ ಕಾಸರಗೋಡು ಕೇರಳಕ್ಕೆ ಸೇರಿಕೊಳ್ಳಂತೆ.  ಈಗ ಕಾಸರಗೋಡು ನಮ್ದು ಕೊಡಿ ಅಂದ್ರೆ ಕೊಡ್ತಾರಾ? ಆಗ ನಿದ್ದೆ  ಮಾಡೂದು ಸ್ವಲ್ಪ ಕಮ್ಮಿ ಮಾಡಿದ್ರೆ ನಮ್ಗೆ ಕಾಸರಗೋಡು ಉಳಿತಾಇತ್ತು ಅಲ್ವಾ ಚಿಕ್ಕಪ್ಪಾ.  ಒಂದ್ಸಲ ಕೊಟ್ರೆ ಮುಗೀತು.  ಯಾರದ್ರೂ ಒದ್ಸಲ ಕೊಟ್ಟಿದ್ದನ್ನು ವಾಪಸ್ಸು ಮಾಡಿದ್ದು ನೋಡಿದೀರಾ.  ಈಗ ಬೆಳಗಾವಿ ನಮಗೆ ಕೊಡಿ ಅಂತ ಅದ್ಯಾರೊ ಠಾಕ್ರೆ ತಾತ ಕೆಳ್ತಿದ್ದಾರಂತೆ.  ನಮ್ಗೆ ಕೊಡಿ, ಇಲ್ಲಾಂದ್ರೆ ನಾವು ನ್ಯಾಯಾಲಯಕ್ಕೆ ಹೋಗ್ತೀವಿ ಅಂತಾರಂತೆ. ನಮ್ದೆಲ್ಲಾ ಬೇರೆಯವ್ರಿಗೆ ಕೊಟ್ರೆ ನಮ್ಗೆ ಕೊನೆಗೆ ಎನು ಸಿಗತ್ತೆ ಮಣ್ಣು ಅಂತ ನಮ್ಮ ತಂದೆ ಯಾವಾಗಲೂ ಹೆಳ್ತಾ ಇರ್ತಾರೆ. ನೀವೆಲ್ಲಾ ಸೇರಿ ಬೆಳಗಾವಿ ಉಳಿಸಿಕೊಳ್ತೀರಾ ಅಲ್ವಾ ದೊಡ್ಡಪ್ಪಾ,  ಆಣೆ ಮಾಡಿ ನನ್ನ ಮೇಲೆ.  ಊಳಿಸ್ಕೊಳ್ಳೇಬೇಕು. ಇಲ್ಲಾಂದ್ರೆ ಒಂದೊಂದೆ ಹೂಗ್ತಾಇರತ್ತೆ ಅಲ್ವಾ ಅಜ್ಜಿ.  ಮೊದಲೇ ನಮ್ದು ಚಿಕ್ಕ ಮನೆ.  ಈಗ್ಬೇರೆ ಎಲ್ಲ ಊರಿಂದನೂ ಇಲ್ಲೇ ವಾಸ ಮಾಡಕ್ಕೆ, ಕೆಲಸಕ್ಕೆ, ವ್ಯಾಪಾರಕ್ಕೆ ಅಂತ ಬಂದು ಇಲ್ಲೇ ಇದ್ದುಬಿಡ್ತಾರೆ.  ಒಳ್ಳೆ ಗಾಳಿ, ಮಳೆ ಜನ ಕೂಡ ಒಳ್ಳೆಯವರು ನಮ್ಗೆ ಅವರ ಭಾಷೆ ಬರದಿದ್ರೂ ಪರ್ವಾಗಿಲ್ಲ ಅವರೆ ನಮ್ಮ ಭಾಷೆ ಕಲಿತಾರೆ.  ಕನ್ನಡದವರು ತುಂಬಾ ಒಳ್ಳೆಯವರು ಅಂತ ಹೇಳಿ ನಮ್ಮನ್ನು ಹೊಗಳಿ ಹೊಗಳಿ ಅವರ ಕೆಲಸ ಮಾಡ್ಸಿಕೊಂಡು ಇಲ್ಲಿ ಬಂದು ೧೦ ವಷ೯ವಾದರೂ ಕನ್ನಡ ಕೆಲೀದೆ ನೆಮ್ಮದಿಯಾಗಿ ಬಾಳ್ತಾರೆ ಅಲ್ವಾ ಚಿಕ್ಕಮ್ಮಾ.  ಅದಲ್ದೆ ಈ ತಮಿಳು ಚಿಕ್ಕಪ್ಪ ಚಿಕ್ಕಮ್ಮ ಯಾವಾಗಲೂ ಜಗಳ ಅಡ್ತಾರೆ ನಮ್ಗೆ ನೀರು ಕೊಡಿ ನೀರು ಕೊಡಿ ಅಂತ.  ನಮ್ಗೇ ಕುಡಿಯಕ್ಕೆ, ವ್ಯವಸಾಯಕ್ಕೆ ನೀರಿಲ್ಲ.  ಇವ್ರಿಗೆ ನಾವು ಹೇಗೆ ಕೊಡೂದು.  ಏನೊ ಒಳ್ಳೆ ಮಳೆ ಬಂದ್ರೆ ಕೊಡ್ತೀವಪ್ಪ.  ಇಲ್ಲಾಂದ್ರೆ ಹೇಗೆ ಕೊಡೂದು ಅಲ್ವಾ ಅಕ್ಕಾ.  ಅವರಿಗೆ ಯಾರು ಬುದ್ದಿ ಹೇಳ್ತಾರೊ ನಾ ಕಾಣೆ.  ಹೀಗಿದೆ ನಮ್ಮ ರಾಜ್ಯದ ಕಥೆ.  ಕನ್ನಡದ ಕಥೆ.  ಇವತ್ತಿಗೆ ಇಷ್ಟು ಸಾಕು.  ನಾಳೆ ರವೆಉಂಡೆ ತನ್ನಿ ಮರೀಬೇಡಿ.  ಸರಿ, ಎಲ್ಲಾ ಕಥೆ ಕೇಳಿಸ್ಕೊಂಡ್ರಾ? ಇಲ್ಲಾ ನಿದ್ದೆ ಮಾಡ್ಬಿಟ್ರಾ? ಮೊದಲೇ ನಿದ್ದೆ ಜಾಸ್ತಿ ನಮಗೆ.  ಎಲ್ಲರಿಗೂ  ಟಾಟ........

ಕೊನೆ ಮಾತು:

ತಾತ, ತಾತ ನಂಗೆ  ರಾತ್ರಿ ನಿದ್ದೆನೇ ಬರ್ಲಿಲ್ಲ ಗೊತ್ತಾ ಯಾಕೆ ಅಂತ ನೀವು ಕೇಳ್ಳೇಇಲ್ಲ.  ನಾನು ರಾತ್ರಿ ಮಲಗಿದ್ಮೇಲೆ ಅಪ್ಪ ಅಣ್ಣಂಗೆ ಹೆಳ್ತಾಇದ್ರು.  ಅದೆನೂ ವಿಶ್ವಸಂಸ್ಥೆ ಅಂತ ಇದ್ಯಂತಲ್ಲ  ಅದು ೨/೩ ವಷದ ಹಿಂದೆ ಒಂದು ವರದಿಯಲ್ಲಿ ಹೇಳಿದ್ಯಂತೆ ಇನ್ನು ಸುಮಾರು ೧೦೦ ವರ್ಷಗಳ   ಅಂತರದಲ್ಲಿ ಜಗತ್ತಿನ ಅನೇಕ ಭಾಷೆಗಳು ನಶಿಸಿಹೂಗತ್ತೆ ಅಂತ.  ಹೌದಾ ತಾತ, ನಾನು ಸತ್ತುಹೊಗ್ತೀನಾ ತಾತ.  ನಂಗೆ ಸಾಯಕ್ಕೆ ಇಷ್ಟ ಇಲ್ಲ ತಾತ.  ನಾನು ಇನ್ನು ಸಾವಿರಾರು ಅಲ್ಲ,  ಲಕ್ಷ ಲಕ್ಷ ವರ್ಷ  ಬದುಕಬೇಕು ಅಜ್ಜಿ. ನನ್ನ ನೀವೆಲ್ಲಾ ಉಳಿಸಿಕೊಳ್ತಿರಾ ಆಜ್ಜಿ, ತಾತ, ದೊಡ್ಡಪ್ಪ, ದೊಡ್ಡಮ್ಮಾ, ಅಕ್ಕಾ, ಅಣ್ಣಾ.  ನನ್ನ ಸಾಯಕ್ಕೆ ಮಾತ್ರಾ ಬಿಡಿಬೇಡಿ.  ನಿಮ್ಗೆಲ್ಲ ಈವಾಗ ಆ ಪರಂಗಿ ಹುಡ್ಗಿ ಮೇಲೆ ಇಷ್ಟ.  ಅವಳು ಕೆಂಪಗೆ ಬೆಳ್ಗೆ ಇದಾಳೆ ಅಂತ. ನಾನು ಸ್ವಲ್ಪ ಕಪ್ಪು.  ಅದಕ್ಕೆ ನಿಮ್ಗೆ ಈಗ ಇಷ್ಟ ಇಲ್ಲ.  ಕಪ್ಪು ಕಸ್ತೂರಿ ಅಲ್ವಾ.  ಕನ್ನಡ ಕೂಡ ಕಸ್ತೂರಿ ಅಲ್ವಾ.  ಪರಂಗಿ ಭಾಷೆ ನನ್ನ ನುಂಗಿ ನೀರು ಕುಡಿಯಲು ಬರುತ್ತಿದೆ.   ನೀವುಗಳೆಲ್ಲ ಅದರಿಂದ ನನ್ನನ್ನು ಉಳಿಸಿಕೊಳ್ಳಿ.  ನಿಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಕ್ಳು, ಅವರ ಮರಿಮೊಕ್ಳು ಮುಮ್ಮಕ್ಳು ಹಾಗೆ ನಾನು ಎಲ್ಲರನ್ನು  ನೂಡಬೇಕು ಅಂತ ನನ್ನ ಆಸೆ ಗೊತ್ತಾ.  ಈ ಪರಂಪರೆ ಹೀಗೆ ಮುಂದುವರೆಯಬೇಕು ಇದೇ ನನ್ನ ಕೊನೆ ಮಾತು.  ನಂಗೆ ಮಾತು ಕೊಡಿ ನನ್ನನ್ನು ಉಳಿಸಿಕೊಳ್ತೀರ ಅಂತ.

Tuesday 20 December 2011

ನನ್ನ ಮಾತು:

ಕೇಳಿದ್ರಲ್ಲಾ ಸ್ನೇಹಿತರೇ, ಮಗು ಹೇಳಿದ ಕೊನೆ ಮಾತು.  ಹೀಗಿದೆ ನಮ್ಮ ಕನ್ನಡದ ಪರಿಸ್ಠಿತಿ.  ನಮ್ಮ ಭಾಷೆಗೆ ಸುಮಾರು ೨,೩೦೦ ವಷಗಳ ಇತಿಹಾಸ ಇದೆ ಅಂತಾನೆ ನಾವೆಲ್ಲಾ ಮರೆತುಬಿಟ್ಟಿದ್ದೇವೆ.  ಬನ್ನಿ ಸ್ನೇಹಿತರೇ ನಾವು ನೀವು ಎಲ್ಲಾರು ಸೇರಿಕೊಂಡು ನಮ್ಮ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ .  ನಮಗೆ ಯಾವ ಪರಭಾಷಿಕರ ಬಗ್ಗೆಯೂ ದ್ವೇಷ, ಅಸೂಯೆ, ಹೊಟ್ಟೆಕಿಚ್ಚಾಗಲಿ ಖಂಡಿತಾ ಇಲ್ಲ.  ನಾವು ನೀವು ಎಲ್ಲಾರು ಇಲ್ಲೇ  ಹುಟ್ಟಿ  ಬೆಳೆದು  ಓದಿ ವಿದ್ಯಾವಂತರಾಗಿದ್ದೇವೆ.  ಇಲ್ಲೇ  ಕೆಲಸ, ವ್ಯಾಪಾರ ವ್ಯವಹಾರ ಹೀಗೆ ಅನೇಕ ರೀತಿ ಬದುಕು ಕಟ್ಟಿಕೊಂಡಿದ್ದೇವೆ.  ಇಲ್ಲೇ ಮನೆ, ಮಠ, ಆಸ್ತಿ ಪಾಸ್ತಿ, ಹೆಂಡತಿ, ಮಕ್ಕಳು ಎಲ್ಲಾ ಗಳಿಸಿದ್ದೇವೆ.  ಅದೇ ರೀತಿ ಪರಭಾಷಿಕರು  ಇಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದಾರೆ.  ಅವರೂ ಮನೆ, ಮಠ, ಆಸ್ತಿಪಾಸ್ತಿ, ಹೆಂಡತಿ, ಮಕ್ಕಳು ಎಲ್ಲಾ ಇಲ್ಲೇ ಮಾಡಿಕೊಂದಿದ್ದಾರೆ.  ಪರಭಾಷಿಕರೇ ನೀವು ಇಲ್ಲಿ ಎಲ್ಲಾ ಗಳಿಸಿ ಕನ್ನಡಕ್ಕೆ ದ್ರೊಹ ಭಗೀಬೇಡಿ.  ಒಂದ್ಸಲ ಯೋಚನೆ ಮಾಡಿ, ನೀವು ಮೊದಮೊದಲು ಈ ಊರಿಗೆ ಬಂದಾಗ ನಿಮಗೆ ಇಲ್ಲಿನ ಭಾಷೆ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜಾಗ, ಹೊಸ ಜನ ಇಲ್ಲಿ ಎನು ಮಾಡಬೇಕು ಹೇಗಿರಬೇಕು ಅಂತಾನೂ ಗೊತ್ತಿರಲಿಲ್ಲ ಅಲ್ವಾ.  ಆಗ ನಮ್ಮ ಕನ್ನಡಿಗರು ಮಾಡಿದ ಸಹಾಯ ಉಪಕಾರ ಯಾವುದೂ ಮರೀಬೇಡಿ.  ನಾವು ನಿಮ್ಮ ಭಾಷೆಯಲ್ಲಿ ಮಾತಾಡಿ ನಿಮಗೆ ಮನೆ, ಪಡಿತರ ಚೀಟಿ, ಮಕ್ಕಳಿಗೆ ಶಾಲೆ, ಮಾಡಕ್ಕೆ ಒಂದು ಕೆಲಸ ಹಾಗೆ ಸಕಲ ಅನುಕೂಲಗಳನ್ನೊ ಮಾಡಿಕೊಟ್ಟಿದ್ದೇವೆ. ನಾವು ನಿಮ್ಮನ್ನ ಸ್ವಂತ ಗೆಳೆಯರಂತೆ  ಸಂಭಂಧಿಕರಂತೆ ನೋಡಿಕೊಂಡಿದ್ದೇವೆ.  ನಿಮಗೆ ಯಾವುದೇ ಅನಾನುಕೂಲಗಳಾಗದಂತೆ ನಮಗೆ ಸಾದ್ಯವಾದಷ್ಟೂ ಚೆನ್ನಾಗಿ ನೂಡಿಕೂಂಡಿದ್ದೆವೆ.  ಇದು ನಮ್ಮ ಕತವ್ಯ ಕೂಡ ಹೌದು.  ಅದೇ ರೀತಿ ನಮ್ಮ ಕನ್ನಡಿಗರಿಗೆ ನಿಮ್ಮ ಊರುಗಳಲ್ಲಿ ನೀವು ಸಹಾಯ ಮಾಡಿದ್ದೀರ, ಗೆಳೆಯರಂತೆ, ಸಂಭಂಧಿಕರಂತೆ ಕಂಡಿದ್ದೀರ.  ಇದೇ ನಮ್ಮ ಭಾರತೀಯರ ಹುಟ್ಟು ಗುಣ.  ಇದು ಇದೇ ರೀತಿ ಮುಂದುವರೆಯಲಿ.   ನೀವು ನಮ್ಮ ಭಾಷೆಯಲ್ಲಿ ಮಾತಾಡಿ, ಕನ್ನಡವನ್ನು ಚೆನ್ನಾಗಿ ಓದಕ್ಕೆ ಬರೆಯಲಿಕ್ಕೆ ಕಲಿಯಿರಿ, ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಕನ್ನಡ ಕಲಿಸಿ.  ನಮ್ಮ ಜೊತೆ ಕನ್ನಡದಲ್ಲಿ ವ್ಯವಹರಿಸಿ.  ನಿಮ್ಮ ಮನೆಯಲ್ಲಿ ನಿಮ್ಮ ಭಾಷೆಯಲ್ಲಿ ಮಾತಾಡಿ.  ಅನೇಕ ಕನ್ನಡ ಭಾಷಾಭಿಮಾನ ಕನ್ನಡಿಗರು, ಪರಭಾಷಿಕರು ನಮ್ಮ ಕನ್ನಡನಾಡಿಗೆ ಅನೇಕ ಕೊಡಿಗೆಗಳನ್ನು ಕೊಟ್ಟಿದ್ದಾರೆ ಅವರಿಗೆ ನಮ್ಮ ನಮನಗಳು ಮತ್ತು ಅಭಿನಂದನೆಗಳು.  ಈ ಕನ್ನಡನಾಡು ನಮಗೆ ಎಲ್ಲಾ ಕೊಟ್ಟಿದೆ.  ಈಗ ನಮ್ಮ ಸರದಿ ಅದನ್ನು ಉಳಿಸಿಕೊಳ್ಳೋಣ ಮತ್ತು ಬೆಳೆಸಿಕೊಳ್ಳೋಣ.   ನಾವೆಲ್ಲ ಒಂದಲ್ಲಾ ಒಂದು ದಿನ ಸತ್ತು ಹೋಗುತ್ತೇವೆ.  ನಾವು ಸತ್ತ ನಂತರವೂ ನಮ್ಮ ಕನ್ನಡ ಭಾಷೆ ಮತ್ತು ನಮ್ಮ ಕನ್ನಡನಾಡು ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತಾ............