Wednesday 31 October 2012

ಕನ್ನಡ ಬಳಸಿದರೆ ಮಾತ್ರ ರಾಜ್ಯೋತ್ಸವಕ್ಕೆ ಅರ್ಥ


ಮಕ್ಕಳಿಗೆ
ಕನ್ನಡ
ಕಳಿಸಿ!

ದೊಡ್ಡವರು
ಅದನ್ನು
ಬಳಸಿ!!

“ಸರ್ವರಿಗೂ ರಾಜ್ಯೋತ್ಸವದ ಶುಭಾಷಯಗಳು”

ನಮ್ಮ ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಕನ್ನಡ ಆಡಳಿತ ಭಾಷೆ ಜಾರಿಯಾಗಿ ದಶಕಗಳೇ ಸಂದಿವೆ. ಆದರೆ ಕನ್ನಡವು ನಿಜವಾಗಿ ಆಡಳಿತ ಭಾಷೆಯಾಗಲು ಕನ್ನಡಿಗರ ಸ್ವಪ್ರಯತ್ನ ಮತ್ತು ಅಖಂಡ ಬೆಂಬಲ ಬೇಕಾಗುತ್ತದೆ. ಇಲ್ಲದಿದ್ದರೆ ನಮ್ಮ ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯೆಂಬುದು ಕೇವಲ ಕಾಗದದಲ್ಲಿ ಮತ್ತು ಕಡತಗಳಲ್ಲಿ ಮಾತ್ರವೇ ಇರುತ್ತದೆ. ಮಹಾನಗರ ಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ, ಜಲಮಂಡಲಿ, ವಿದ್ಯುತ್ ಮಂಡಲಿ ಮುಂತಾದ ರಾಜ್ಯ ಸರ್ಕಾರದ ಕಛೇರಿಗಳಲ್ಲಿ ಸಾರ್ವಜನಿಕರು ಭೇಟಿಕೊಟ್ಟಾಗ ಅಲ್ಲಿ ಕಾಗದ ಪತ್ರಗಳ ಮುಖಾಂತರ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಯಸುವವರು ಕೇವಲ ಕನ್ನಡದಲ್ಲಿ ಮಾತ್ರ ಬರೆದರೆ ನಮ್ಮ ಎಲ್ಲಾ ಕಛೇರಿಗಳಲ್ಲೂ ಕನ್ನಡವನ್ನು ಕಾಣಬಹುದು.

ಇಂದಿನ ಪರಿಸ್ಥಿತಿ ಏನಾಗಿದೆಯೆಂದರೆ ಅಲ್ಲಿ ಭೇಟಿಕೊಡುವವರು ಮತ್ತು ಇನ್ನಿತರ ಪತ್ರ ವ್ಯವಹಾರಮಾಡುವವರು, ಅರ್ಜಿ ಮುಂತಾದವು ಕನ್ನಡದಲ್ಲಿದ್ದರೂ ಸಾಮಾನ್ಯವಾಗಿ ಆಂಗ್ಲ ಭಾಷೆಯನ್ನು ಬಳಸುವವರೇ ಹೆಚ್ಚು.  ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ ಕನ್ನಡವನ್ನು ಬಳಸುತ್ತಾರೆ, ಹೀಗಾದಾಗ ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡವೆನ್ನುವುದು ಕೇವಲ ಹಾಸ್ಯಾಸ್ಪದವಾಗುತ್ತದೆ. ಇನ್ನು ಹೊರಗಡೆ ಮಾಲ್ ಗಳಲ್ಲಿ, ಬ್ಯಾಂಕ್ ಗಳಲ್ಲಿ, ಸಿನಿಮಾ ಗೃಹ, ರಸ್ತೆ, ರೈಲು, ವಿಮಾನ ನಿಲ್ದಾಣ ಹೀಗೆ ಭೇಟಿ ಕೊಡುವ ಎಲ್ಲಾ ಸ್ಥಳಗಳಲ್ಲೂ ಕನ್ನಡವನ್ನೇ ಬಳಸಿದರೆ ಸಾಕು. ಕಾರ್ನಾಟಕದಲ್ಲಿ ಎಲ್ಲೆಲ್ಲೂ ಕನ್ನಡ ಕಾಣಬಹುದು.

ಕನ್ನಡವನ್ನು ಕೇವಲ ಹೃದಯದಲ್ಲಿಟ್ಟುಕೊಂಡರೆ ಸಾಲದು, ಅದನ್ನು ಸಾರ್ವಜನಿಕವಾಗಿ ಬಳಸಿದರೆ ಮಾತ್ರ ಮುಂದಿನ ಪೀಳಿಗೆಗೆ ಕನ್ನಡವು ಉಳಿದೀತು, ಕನ್ನಡದ ಬಗ್ಗೆ ಕೇವಲ ಅಭಿಮಾನವೊಂದಿದ್ದರೆ ಸಾಲದು, ಕನ್ನಡವನ್ನು ಸಾರ್ವಜನಿಕವಾಗಿ ಬಳಸಲು ಮೊದಲು ತಯಾರಾಗಬೇಕು. ಕನ್ನಡವನ್ನು ಹೊರಗಡೆ ಬಳಸಲು ಯಾವ ನಾಚಿಕೆಯ ಮತ್ತು ಅಂಜಿಕೆಯ ಅವಶ್ಯಕತೆಯಿಲ್ಲ. ನಮಗೆ ೮ ಜ್ನಾನಪೀಠ ಪ್ರಶಸ್ತಿ ಬಂದಿದೆ, ನಮ್ಮದು ಶಾಸ್ತ್ರೀಯ ಭಾಷೆ, ನಮ್ಮದು ೨೫೦೦ ವರ್ಷಗಳಷ್ಟು ಪುರಾತನ ಭಾಷೆ ಎಂಬ ಹೆಮ್ಮೆ ಮಾತ್ರ ಇದ್ದರೆ ಸಾಲದು. ಒಂದು ಕಡೆ ಸರ್ಕಾರ, ಕನ್ನಡಕ್ಕೆ ನಮ್ಮ ಮೊದಲ ಆದ್ಯತೆ, ಕನ್ನಡವೇ ಇಲ್ಲಿ ಆಡಳಿತ ಭಾಷೆಯೆಂದು ಹೇಳುತ್ತದೆ. ಮತ್ತೊಂದು ಕಡೆ ಸರ್ಕಾರಿ ಶಾಲೆಗಳನ್ನು ಒಂದೊಂದಾಗಿ ಮುಚ್ಚುತ್ತಲೇ ಹೊರಟಿದೆ. ಖಾಸಗಿ ಶಾಲೆಗಳಲ್ಲಿ ಕೇವಲ ಆಂಗ್ಲ ಭಾಷೆಗೆ ಮಾತ್ರ ಮಣೆ. ಇನ್ನು ಪೋಷಕರು ತಮ್ಮ ಮಕ್ಕಳಿಗೆ ಆಂಗ್ಲ ಮಾಧ್ಯಮವನ್ನೇ ಅಪ್ಪಿಕೊಳ್ಳುವರು. ಪ್ರಥಮ ಭಾಷೆಯಾಗಿ ಕನ್ನಡವನ್ನು ತೆಗೆದುಕೊಳ್ಳೂವ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡು ತೃತೀಯ ಭಾಷೆಯಾಗಿ ಹಿಂದಿಯನ್ನು ತೆಗೆದುಕೊಂಡು ಮಕ್ಕಳಿಗೆ ಕನ್ನಡದ ಗಂಧವೇ ಇಲ್ಲದಾಗಿ ಮಾಡುವ ಬಹಳಷ್ಟು ಕನ್ನಡಿಗರು ನಮ್ಮ ನಡುವೆಯೇ ಇದ್ದಾರೆ. ಈಗಿರುವ ಮಕ್ಕಳು ಕನ್ನಡದಲ್ಲಿ ಮಾತನಾಡುತ್ತಾರೆ, ಆದರೆ ಹಲವರಿಗೆ ಕನ್ನಡ ಓದಲು ಮತ್ತು ಬರೆಯಲು ಬರುವುದೇ ಇಲ್ಲ. ಮಕ್ಕಳಿಗೆ ಕೇವಲ ಕನ್ನಡವನ್ನು ಮಾತನಾಡಲು ಕಲಿಸಿದರೆ ಸಾಲದು, ಕನ್ನಡವನ್ನು ಓದಲು ಮತ್ತು ಬರೆಯಲು ಕಲಿಸಿಕೊಡಬೇಕು. ಇಲ್ಲದಿದ್ದರೆ ಓದಲು ಮತ್ತು ಬರೆಯಲು ಬಾರದ ಕನ್ನಡ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ, ಮುಂದೆ ಅವರ ಮಕ್ಕಳಿಗೆ ಕನ್ನಡ ಮಾತನಾಡಲೂ ಸಹ ಬರುವುದಿಲ್ಲ. ಹೀಗೆ ಕ್ರಮೇಣ ಕನ್ನಡ ನಶಿಸಿಹೋಗುತ್ತದೆ.

ಮುಖ್ಯವಾಗಿ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೂ ಕನ್ನಡವನ್ನು ಮನೆಯಲ್ಲೇ ಹೇಳಿಕೊಡಲು ಪ್ರಾರಂಭಿಸಬೇಕು. ನಮ್ಮ ರಾಜ್ಯದ ಮತ್ತು ಭಾಷೆಯ ಬಗ್ಗೆ ಅಭಿಮಾನ ಬೆಳಸಬೇಕು. ಕನ್ನಡದ ಕಥೆ, ಶಿಶು ಗೀತೆಗಳನ್ನು ಪರಿಚಯಿಸಬೇಕು. ಮಕ್ಕಳಿಗೆ ಓದಲು ಮತ್ತು ಬರೆಯಲು ಕನ್ನಡವನ್ನು ಶಾಲೆಯಲ್ಲಿ ಕಲಿಸದಿದ್ದರೆ ಕನ್ನಡ ಈ ತಲೆಮಾರಿಗೆ ಕೊನೆಯಾಗಬಹುದು. ಮನೆಗೆ ಕನ್ನಡ ದಿನಪತ್ರಿಕೆ/ಮಾಸ ಪತ್ರಿಕೆಯನ್ನು ತರಿಸಬೇಕು, ಅದನ್ನು ಓದಲು ಓದಲು ಮಕ್ಕಳಿಗೆ ಕಲಿಸಬೇಕು. ನಾಟಕ, ಹಾಡು ಮುಂತಾದ ಚಟುವಟಿಕೆಗಳಲ್ಲಿ ಮಕ್ಕಳು ಈಗಿನಿಂದಲೇ ಭಾಗವಹಿಸುವಂತಾಗಬೇಕು. ಆಗ ಮಾತ್ರ ಕನ್ನಡ ತಲತಲಾಂತ ಉಳಿಯುತ್ತದೆ ಮತ್ತು ರಾಜ್ಯೋತ್ಸವಕ್ಕೂ ಒಂದು ಅರ್ಥ ಬರುತ್ತದೆ.

ಅಮೇರಿಕಾ


ಅಮೇರಿಕಾ
ಪ್ರಕೃತಿಯ
ವಿಕೋಪಕ್ಕೆ
ಸಿಕ್ಕಿ ನರಳಿದೆ!

ಭಾರತ
ಭಷ್ಟ
ರಾಜಕಾರಣಿಗಳ
ಕೈಗೆ
ಸಿಕ್ಕಿ ಸೊರಗಿದೆ!!

Tuesday 30 October 2012

ಕನ್ನಡ


ನಿನಗೆ ಹಿಂದಿ ಬಂದರೂ
ನನ್ನ ಜೊತೆ
ಕನ್ನಡದಲ್ಲೇ
ಮಾತನಾಡುವೆ
ಏಕೆ?
ಇದು ನನ್ನ ಬಿಹಾರಿ
ಮಿತ್ರನ ಪ್ರಶ್ನೆ!

ಮತ್ತೆ

ನಿನಗೆ ಕನ್ನಡ
ಕಲಿಸುವುದು ಹೇಗೆ?
ಇದು ನನ್ನ ಪ್ರಶ್ನೆ!!


Monday 29 October 2012

“ವಿಶ್ವ ವಿಖ್ಯಾತ ಬೆಂಗಳೂರಿನ ಕಸ”





ಅಂದು

ಅಮೇರಿಕನ್ನರು
ಬಾಯ್ತುಂಬಾ
ಹೊಗಳಿದ್ರು
ಬೆಂಗಳೂರಿನ
ಪ್ರಗತಿ
ಕಂಡು!!

ಇಂದು

ಬಾಯ್ತುಂಬಾ
ಬೈದ್ರು
ಬೆಂಗಳೂರಿನ
ಕಸವನ್ನು
ಕಂಡು!!!

Sunday 28 October 2012

ನಿತ್ಯಾನಂದ



ಲವ್
ಮ್ಯಾರೇಜ್
ಬೆಸ್ಟಾ?
ಅರೇಂಜ್
ಮ್ಯಾರೇಜ್
ಬೆಸ್ಟಾ?

ಎರಡೂ
ಅಲ್ಲ

ಲಿವಿಂಗ್
ಟುಗೆದರ್
ಬೆಸ್ಟ್
ಅಂದ
ನಿತ್ಯಾನಂದ