Sunday 31 March 2013

ಕೋಪ! ತಾಪ!!


ಪಕ್ಷದಲ್ಲಿರುವ
ತನಕ
ಅದರದ್ದೇ
ಜಪ! ತಪ!!

ಹೊರ
ಹೋಗುವಾಗ
ಇಲ್ಲ ಸಲ್ಲದ
ಕೋಪ! ತಾಪ!!

Monday 25 March 2013

ಮೂಡಿದ್ದರೂ “ಮೂಡ್” ಇಲ್ಲದೆ


ದಂಪತಿಗಳಲ್ಲಿ ಜಾಸ್ತಿ ಮಾತಿಲ್ಲ
ಕಥೆಯಿಲ್ಲ, ಇಬ್ಬರೂ ಮೂಡಿಗಳು
ಅದೇನು ಸಂಸಾರ ಮಾಡ್ತಾರೊ
ಅದೂ ತುಂಬಿದ ಮನೆಯಲ್ಲಿ ಅಂದರು
ಸಣ್ಣ ಕುಹುಕದೊಂದಿಗೆ ಸ್ನೇಹಿತರು,
ನೆಂಟರು ಇಷ್ಟರು, ಅಂದೊಮ್ಮೆ!

ಅವರಿಗೆ ಉತ್ತರವೇನೋ ಎಂಬಂತೆ
ಮದುವೆಯಾಗಿ ಇಪ್ಪತ್ತು ವರ್ಷಗಳಲ್ಲಿ
ಆಯಿತು ಅರ್ಧ ಕ್ರಿಕೆಟ್ ಟೀಮಿನಷ್ಟು
“ಮೂಡ್” ಇಲ್ಲದೆಯೇ
ಪರಸ್ಪರ ಮೂಡಿನೊಂದಿಗೆ!  

ಅವನಿಗೆ ಮೂಡಿದ್ದರೆ ಇವಳಿಗಿಲ್ಲ
ಇವಳಿಗಿದ್ದರೆ ಅವನಿಗಿಲ್ಲ!
ಇಬ್ಬರಿಗೂ ಮೂಡು ಒಟ್ಟಿಗಿದ್ದರೆ
ಮನೆಯಲ್ಲಿ “ಮೂಡ್” ಇಲ್ಲ!
ಹೊರಗಡೆ ತರೋಣವೆಂದರೆ
ಆಗಲೇ ಕತ್ತಲಾಗಿದೆ ಅಂಗಡಿ
ತೆರೆದಿದೆಯೋ? ಇಲ್ಲವೋ? ಅನುಮಾನ!
ಮೂಡಿದ್ದರೂ “ಮೂಡ್” ಇಲ್ಲದೇ
ಮಲಗಬೇಕಾಯಿತು ತೆಪ್ಪಗೆ!

ಯಾವಾಗಲೋ ಒಮ್ಮೆ ಮೂಡು
ಬಂದು “ಮೂಡ್” ಇಲ್ಲದೆ ಆಯಿತು
ಆರತಿಗೋ, ಕೀರುತಿಗೋ
ಒಂದೋ ಎರಡೋ ಈಗೀಗ!!

Saturday 23 March 2013

ನಾಯಕ ನಟ


ಇದ್ದರೆ ಸಾಕೇ
ನಾಯಕ ನಟನೆಂಬ
ಶ್ರೀರಕ್ಷೆ?

ಮಾಡಿದ ತಪ್ಪಿಗೆ
ಅನುಭವಿಸಬೇಡವೇ
ಶಿಕ್ಷೆ??

ಗಂಡಾಂತರ


ಕ್ಷೇತ್ರದ
ಜನರ
ಅಭಿಲಾಷೆಯಂತೆ
ಪಕ್ಷಾಂತರ!

ಇವರಿಂದಲೇ
ಆಗುವುದು
ಗಂಡಾಂತರ!!

ಅಧಿಕಾರದಲ್ಲಿದ್ದಷ್ಟು
ದಿನ
ನಮ್ಮನ್ನು
ದೋಚಿದರು!

ಈಗ
ಮತ್ತದೇ
ಕಾರಣಕ್ಕಾಗಿ
ನಮ್ಮನ್ನು
ಬೇಡಲು
ಬಂದಿಹರು!!

Thursday 21 March 2013

ಭಿನ್ನಮತೀಯರು


ಇಂದು
ಎಲ್ಲರೂ
ಭಿನ್ನಮತೀಯರೇ!

ಸಮಯ
ನೋಡಿಕೊಂಡು
ಬೆನ್ನು
ತೋರಿಸುವವರೇ!!