ದೇಶ ಸೇವೆ ಮಾಡಬೇಕಾದ ಸುಮಾರು ೩೦,೦೦೦ ಸಾವಿರ ಸೈನಿಕರು, ದೇಶ ಸೇವೆಯನ್ನು ಮಾಡದೆ ಸೇನಾಧಿಕಾರಿಗಳ ಮನೆಯಲ್ಲಿ ಅವರ ಮನೆಕೆಲಸದಲ್ಲಿ ತೊಡಗಿಕೊಂಡಿರುವುದನ್ನು ಪತ್ರಿಕೆಯಲ್ಲಿ ಓದಿ ಬಹಳ ಬೇಸರವಾಯಿತು. ನಮ್ಮ ಸೈನಿಕರಿಂದ, ಈ ರೀತಿ ಮನೆ ಕೆಲಸ ಮಾಡಿಸುವುದು ಎಷ್ಟು ಸರಿ? ಯೋಧರ ಆತ್ಮ ಘನತೆಗೆ ಬೆಲೆ ಇಲ್ಲವೇ? ಈ ವ್ಯವಸ್ಥೆಗೆ "ಮನೆ ಮಗ" ಎಂಬ ಹೆಸರಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ವ್ಯಂಗವೂ ಸಹ. ಈಗ ಇಂಥಹ ಪದ್ದತಿಗೆ ರಕ್ಷಣಾ ಸಚಿವ ಎ.ಕೆ.ಆಂಟನಿ, ರಕ್ಷಣಾ ಸಚಿವಾಲಯ ಮತ್ತು ಸಂಸತ್ ಸ್ಥಾಯಿ ಸಮಿತಿ ಅಂತ್ಯವಾಡಲು ಹೊರಟಿರುವುದು ಒಳ್ಳೆಯ ಬೆಳವಣಿಗೆ. ಸಧ್ಯ, ಈಗಲಾದರೂ ಬುದ್ದಿಬಂತಲ್ಲಾ ಸಂಬಂದಪಟ್ಟವರಿಗೆ. ಇದು ಪೋಲೀಸ್ ವ್ಯವಸ್ಥೆಯಲ್ಲೂ ಸಹ ಇದೆ. ಇದಕ್ಕೆ ಕೂಡ ಮಂಗಳ ಹಾಡಬೇಕು. ನೋಡಿ ಇಂತಹ ಕೆಲಸಗಳನ್ನು ಮಾಡುವ ಸೈನಿಕರಾಗಲೀ, ಪೋಲೀಸ್ ನವರಾಗಲೀ ಯಾರ ಹತ್ತಿರವೂ ದೂರು ಕೊಡುವ ಹಾಗೂ ಇಲ್ಲ. ಕೊಟ್ಟರೆ ಕೆಲಸ ಹೋಗುವ ಭಯ. ಕೊಡದೆ ಇದ್ದರೆ ಅಧಿಕಾರಿಗಳ ಮನೆ ಕೆಲಸವನ್ನು ಮಾಡುವ ಅನಿವಾರ್ಯತೆ.
Wednesday, 18 July 2012
Saturday, 14 July 2012
ಕೊಳವೆಬಾವಿಯಲ್ಲಿ ಮಕ್ಕಳು:
ನಮ್ಮ ರಾಜ್ಯದ ರಾಯಚೂರು ಜಿಲ್ಲೆಯ ನೀರಮಾನ್ವಿಯ ಸಂದೀಪ, ಆಂಧ್ರ ಪ್ರದೇಶದ ವಾರಂಗಲ್ ನ ದರಾವತ್ ಮಹೇಶ್, ಗುಜರಾತ್ ನ ಬಕುಲ್ ಇವರುಗಳೆಲ್ಲಾ ಯಾರು ಗೊತ್ತಾ ನಿಮಗೆ? ಇವರು ನಮ್ಮ ದೇಶದ ಅತಿ ದೊಡ್ಡ ಕೋಟ್ಯಾಧಿಪತಿಗಳು ಅಥವಾ ದೊಡ್ಡ ಬಂಡವಾಳ ಹೂಡಿಕೆದಾರರು, ವ್ಯಾಪಾರಸ್ಥರು, ಹೊಸ ಸೂಪರ್ ಸ್ಟಾರ್ ಗಳು ಅಂತ ಹೀಗೆ ಏನೇನೋ ಕಲ್ಪಿಸಿಕೊಳ್ಳಬೇಡಿ. ಇವರುಗಳೆಲ್ಲಾ ನಮ್ಮ ಲಿಟಲ್ ಸ್ಟಾರ್ ಗಳು. ಆದರೆ ಇವರ ದೌರ್ಭಾಗ್ಯ. ಬಾಲ್ಯ ಅಂದರೆ ಏನು? ಎಂದು ತಿಳಿಯುವ ಮೊದಲೇ ನಮ್ಮನ್ನು ಅಗಲಿದ ಚಿಣ್ಣರು. ಇವರು ನಮ್ಮ ದೇಶದ ಅತಿ ನತದೃಷ್ಟ ೨/೩/೪/೬ ವರ್ಷದ ಮಕ್ಕಳು. ಈಗ ಇವರು ಯಾರು ನಮಗೆ ನೆನಪಿಲ್ಲ. ಹೊಸದಾಗಿ ಹರಿಯಾಣ ರಾಜ್ಯದ ಗುರುಗಾಂವ್ ನ ಬಾಲಕ ಮಾಹಿ ಮಾತ್ರ ಗೊತ್ತು. ಇನ್ನು ಬೇರೆ ಮಕ್ಕಳು ಇಂತಹ ಕೊಳವೆ ಬಾವಿಯಲ್ಲಿ ಬಿದ್ದು ಸಾಯುವವರೆಗೂ ನಮಗೆ ಈ ಬಾಲಕನ ಹೆಸರು ಜ್ಞಾಪಕಕ್ಕೆ ಇರುತ್ತದೆ. ಆಮೇಲೆ ಇವನ ಹೆಸರು ನಮಗೆ ಜ್ಞಾಪಕಕ್ಕೆ ಬರುವುದೇ ಇಲ್ಲ. ಇದು ನಮ್ಮ ಒಬ್ಬರ ತಪ್ಪಲ್ಲ. ನಮ್ಮ ದೇಶ ಇರುವುದೇ ಹೀಗೆ ಅಂತ ಒಮ್ಮೊಮ್ಮೆ ಅನ್ನಿಸುತ್ತದೆ. ಎಲ್ಲರೂ ಇದರ ಬಗ್ಗೆ ಮಾತನಾಡುತ್ತಾರೆ, ಸರ್ಕಾರವೂ ಇದರ ಬಗ್ಗೆ ಕಾನೂನು ಹೊರಡಿಸಿದೆ. ಕೊಳವೆ ಬಾವಿಯಲ್ಲಿ ನೀರು ಸಿಗದಿದ್ದರೆ ಅದನ್ನು ತಕ್ಷಣವೇ ಮುಚ್ಚಬೇಕೆಂದು ಕಾನೂನು ಇದು. ಹಾಗೆ ಮಾಡದಿದ್ದರೆ ನ್ಯಾಯಲಯ ನಿಂದನೆಯಾಗುತ್ತದೆ. ಆದರೆ ಏನೂ ಆಗಿಲ್ಲ. ಇದೇ ನಮ್ಮ ದುರದೃಷ್ಟ. ಇದಕ್ಕೆ ಯಾರು ಕಾರಣರು ಎಂದರೆ, ಒಂದು ರೀತಿಯಲ್ಲಿ ನಾವೆಲ್ಲರೂ ಕೂಡ.
ಹೀಗೆ ಕೊಳವೆ ಬಾವಿಯಲ್ಲಿ ಬಿದ್ದವರನ್ನು ಎತ್ತುವಾಗ ಸಾವಿರಾರು ಜನ ಅದನ್ನು ನೋಡಲು ೩-೪ ದಿನ ನೆರೆದಿರುತ್ತಾರೆ. ಆಮೇಲೆ ಕಾರ್ಯಾಚರಣೆ ಮುಗಿದ ಮೇಲೆ ಮನಗೆ ಹೋಗಿ ಊಟ ಮಾಡಿ ಬೆಚ್ಚಗೆ ಮಲಗಿ ಬಿಡುತ್ತಾರೆ. ದೇಶದ ಅಷ್ಟೂ ಭಾಷೆಯ ಸುದ್ದಿವಾಹಿನಿಗಳು ಅದನ್ನು ಎಡೆಬಿಡದೆ ೨೪ ಗಂಟೆಗಳೂ ಪ್ರಸಾರ ಮಾಡುತ್ತವೆ ಮತ್ತು ಕಾರ್ಯಾಚರಣೆಯು ಮುಗಿದ ಮೇಲೆ ಅವರೂ ಸುಮ್ಮನಾಗಿಬಿಡುತ್ತಾರೆ. ಅವರಿಗೆ ಟಿ.ಆರ್.ಪಿ. ಬಂದರೆ ಸಾಕು. ಈ ತರಹದ ಮುಚ್ಚಿಲ್ಲದ ಕೊಳವೆ ಬಾವಿಗಳು ನಮ್ಮ ದೇಶದಲ್ಲಿ ಇನ್ನೂ ಬಹಳ ಕಡೆ ಇದೆ. ಮುಂಜಾಗ್ರತೆ ವಹಿಸಿ ಅದನ್ನು ಮುಚ್ಚಲು ಯಾವ ಸಾವರ್ಜನಿಕರಾಗಲೀ, ಸುದ್ದಿವಾಹಿನಿಗಳಾಗಲೀ, ಆ ಊರಿನ ಜನರಾಗಲೀ, ಜನ ಪ್ರತಿನಿದಿಗಳಾಗಲೀ, ಯಾರೆಂದರೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅದೇ ಸಾವಿರಾರು ಜನ ಈ ಮೊದಲೇ ಒಬ್ಬೊಬ್ಬರು ಮೂರು ಹಿಡಿ ಮಣ್ಣನ್ನು ಆ ಕೊಳವೆ ಬಾವಿಯಲ್ಲಿ ಹಾಕಿ ಅದನ್ನು ಮುಚ್ಚಿಬಿಡಬಹುದಿತ್ತು. ಆದರೆ ಅದರ ಬಗ್ಗೆ ಯಾರೂ ಯೋಚನೆ ಸಹ ಮಾಡುವುದಿಲ್ಲ. ಇದು ನಮ್ಮ ದೇಶದ ಅತಿ ದೊಡ್ಡ ದುರಂತ.
ಸುಮಾರು ೬ ವರ್ಷದ ಹಿಂದೆ ಕುರುಕ್ಷೇತ್ರದ ಪ್ರಿನ್ಸ್ ಎಂಬ ಬಾಲಕ ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ಏಕೈಕ ಬಾಲಕ ನಮ್ಮ ದೇಶದಲ್ಲಿ. ಅವನ ಅದೃಷ್ಟ ಅವನನ್ನು ಕಾಪಾಡಿರಬೇಕು. ಆದರೆ ಮೇಲ್ಕಂಡ ಮಕ್ಕಳನ್ನು ನೆನಸಿಕೊಂಡರೆ ಕರುಳು ಚುರುಕ್ ಎನ್ನುತ್ತದೆ.

Thursday, 12 July 2012
ಜಾತ್ಯಾತೀತ:
ನಾವ್ಯಾರೂ ಹುಟ್ಟುವಾಗ ಇಂತಹದ್ದೇ ಜಾತಿ/ಧರ್ಮ/ರಾಜ್ಯ/ದೇಶ ದಲ್ಲೇ ಹುಟ್ಟಬೇಕೆಂದು ಬಯಸಿ ಈ ಭೂಮಿಗೆ ಬರಲಿಲ್ಲ. ಆದರೆ ನಾವು ದೊಡ್ಡವರಾಗಿ ಕೆಲಸ/ಮದುವೆ ವಯಸ್ಸಿಗೆ ಬಂದಾಗ ದಿಡೀರ್ ಆಗಿ ಈ ಜಾತಿ/ಧರ್ಮ ಮುಂದೆ ಬಂದುಬಿಡುವುದು ಎಲ್ಲರಿಗೂ ತಿಳಿದ ವಿಷಯ. ಅದು ಅಷ್ಟಕ್ಕೇ ನಿಲ್ಲದೆ ನಮ್ಮ ಜೀವನ ಪೂರ್ತಿ ನಮ್ಮ ಜೊತೆಜೊತೆಗೇ ಬರುತ್ತದೆ. ಕೆಲವರಿಗೆ ಇದು ವರವಾಗಿಯೂ, ಮತ್ತೆ ಕೆಲವರಿಗೆ ಶಾಪವಾಗಿಯೂ ಕಾಡುವುದುಂಟು. ನಮಗೆ ಇಷ್ಟವಿರಲಿ, ಬಿಡಲಿ ಇದರಿಂದ ಮಾತ್ರ ತಪ್ಪಿಸಿಕೊಳ್ಳುವುದು ಸಾದ್ಯವಾಗುವುದಿಲ್ಲ. ಕೆಲವರು ಅಂತರಜಾತೀಯ ವಿವಾಹವಾಗಿ ನಾವು ಜಾತ್ಯಾತೀತರೆಂದುಕೊಂಡರೂ ಅವರನ್ನು ಈ ಸಮಾಜ ಅವರ ಪಾಡಿಗೆ ಅವರನ್ನು ಸುಮ್ಮನೆ ಬಿಡುವುದಿಲ್ಲ. ಅವರನ್ನು ಮತ್ತು ಅವರ ಮಕ್ಕಳನ್ನು ಮುಂದೆ ಬಹಳ ಕಾಡುತ್ತಾರೆ. ಸಮಾಜದ ಶ್ರೀಮಂತ/ಜನಪ್ರಿಯ/ಗಣ್ಯ ವ್ಯಕ್ತಿಗಳಿಗೆ ಇದು ಅಷ್ಟಾಗಿ ಕಾಡದಿದ್ದರೂ ಮಧ್ಯಮ ವರ್ಗದ ಜನರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದುಂಟು. ಅಂತರ ಜಾತೀಯ/ಧರ್ಮ ವಿವಾಹವಾದ ಯುವ ಜೋಡಿಗಳು ಈ ಸಮಸ್ಯೆಯಿಂದ ಬಳಲಿ ಬೆಂಡಾಗಿದ್ದಾರೆ. ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತು. ಕೆಲವರು ಇದರಿಂದ ಹೊರಬರಲಾರದೆ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ತರಹದ ಅನೇಕ ಕುಟುಂಬಗಳನ್ನು ನಾವೆಲ್ಲರೂ ನೋಡಿ, ಕೇಳಿದ್ದೇವೆ. ಇದರಿಂದ ಬಿಡುಗಡೆಯೇ ಇಲ್ಲವೆನೋ? ನಮ್ಮ ರಾಷ್ಟ್ರಕವಿ ಕುವೆಂಪು "ಓ ನನ್ನ ಚೇತನ, ಆಗು ನೀ ಅನಿಕೇತನ" ಎಂದು ವಿಶ್ವ ಮಾನವನ ಕಲ್ಪನೆಯನ್ನು ನಮಗೆ ಕಟ್ಟಿಕೊಟ್ಟಿದ್ದಾರೆ. ಅದು ಕೇವಲ ಕಲ್ಪನೆಯಾಗೇ ಉಳಿದುಕೊಂಡಿದೆ. ಮಾನವೀಯತೆಯಿಂದ ಈ ಸಮಸ್ಯೆಗೆ ಪರಿಹಾರವನ್ನು ಅವರ ತಂದೆ, ತಾಯಿ, ಬಂಧು ಬಳಗದವರು/ಸ್ನೇಹಿತವರ್ಗದವರು ಕಂಡುಕೊಂಡರೆ ಮಾತ್ರ ಇದಕ್ಕೆ ಪರಿಹಾರದೊರಕಬಹುದು.
Saturday, 7 July 2012
ಕನ್ನಡ ಚಿತ್ರಗಳು ಮತ್ತು ಇನ್ ಬ್ರಾಂಡಿಗ್ ಹಣ :
ಕನ್ನಡ ಚಿತ್ರಗಳಿಗೆ ಇನ್ ಬ್ರಾಂಡಿಗ್ ಹಣ ಬರುತ್ತಿಲ್ಲ. ತೆಲುಗು/ತಮಿಳು/ಹಿಂದಿ ಚಿತ್ರಗಳು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತಾರೆ. ಆದರೆ ಕನ್ನಡ ಚಿತ್ರಗಳಿಗೆ ಎಲ್ಲಾ ಹಣವನ್ನು ನಿರ್ಮಾಪಕನೇ ತೆರಬೇಕು. ಕನ್ನಡದಲ್ಲಿ ಪುನೀತ್, ದರ್ಶನ್, ಸುದೀಪ್, ಗಣೇಶ್ ಮುಂತಾದ ನಟರಿದ್ದರೂ ಕಂಪನಿಗಳಿಂದ ಹಣ ಹುಟುವುದಿಲ್ಲ ಎಂದು ಹೇಳುತ್ತಾರೆ. ಅದಕ್ಕೆ ಮುಖ್ಯ ಕಾರಣ ಕನ್ನಡ ಚಿತ್ರಗಳಲ್ಲಿ ರೌಡಿಸಂ ಆಧಾರಿತ ಚಿತ್ರಗಳು ಜಾಸ್ತಿ. ನಾಯಕ ನಟರು ಕೈಯಲ್ಲಿ ಮಚ್ಚು ಹಿಡಿದರೆ ಕಾರ್ಪೊರೇಟ್ ಕಂಪನಿಗಳು ಹಣ ಹೂಡುವುದಿಲ್ಲ. ಕನ್ನಡದಲ್ಲಿ ಹೊಸ ನಟರಿಗೆ ಇನ್ ಬ್ರಾಂಡ್ ಹಣ ಹುಟ್ಟತ್ತೆ. ಆದರೆ ಪುನೀತ್, ದರ್ಶನ್, ಸುದೀಪ್ ಅಂತಹವರಿಗೆ ಹುಟ್ಟಲ್ಲ, ಕಾರಣ ಮತ್ತದೇ ಮಚ್ಚು. ಆದರೊ ನಮ್ಮ ನಿರ್ಮಾಪಕರು, ನಿರ್ದೇಶಕರಿಗೆ ಬುದ್ದಿ ಬರಲ್ಲ. ಕನ್ನಡ ಚಿತ್ರರಂಗಕ್ಕೆ ಇಂತಹ ಮೂಲಗಳಿಂದ ಹಣ ತರುವುದು ಗೊತ್ತಿಲ್ಲ. ಕಾರ್ಪೊರೇಟ್ ಕಂಪನಿಗಳು ಹಣ ಕೊಡಲು ತಯಾರಾದರೂ ಅವರನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮಗೆ ಬರಲ್ಲ. ನಮ್ಮ ನಿರ್ಮಾಪಕರು, ನಿರ್ದೇಶಕರು ಹೇಳುವುದು ಒಂದು ಮಾಡುವುದು ಮತ್ತೊಂದು ಹಾಗಾಗಿ ನಮ್ಮ ನಿರ್ಮಾಪಕರನ್ನು, ನಿರ್ದೇಶಕರನ್ನು ಕಾರ್ಪೊರೇಟ್ ಮಂದಿ ನಂಬುವುದಿಲ್ಲ. ಉಪೇಂದ್ರರ ಐಶ್ವರ್ಯ ಚಿತ್ರ, ದೇವ್ ಸನ್ ಆಫ್ ಮುದ್ದೇಗೌಡ ೫೦ ಲಕ್ಷ ಹಣ, ಅಲೆಮಾರಿ ಚಿತ್ರಗಳಿಗೆ ಸುಮಾರು ೧೦ ಲಕ್ಷ ಹಣ ಇನ್ ಬ್ರಾಂಡ್ ರೂಪದಲ್ಲಿ ಬಂದಿತ್ತು. ಇಂದ್ರಜಿತ್ ಲಂಕೇಶ್ ನನಗೆ ಪುನೀತ್,ಕಾಲ್ ಶೀಟ್ ಸಿಕ್ಕಿದರೆ ನನಗೆ ನಿರ್ಮಾಪಕರೇ ಬೇಡ. ನಾನು ಇನ್ ಬ್ರಾಂಡಿಗ್ ಹಣದಿಂದಲೇ ಚಿತ್ರ ತೆಗೆಯುತ್ತೇನೆ ಎನ್ನುತ್ತಾರೆ. ಇದು ಅವರ ಆತ್ಮವಿಶ್ವಾಸ ಮತ್ತು ತಾಕತ್ತು. ಇದು ಮೊನ್ನೆ ನಾನು ಒಂದು ಲೇಖನದಲ್ಲಿ ಓದಿದ್ದು.
ಇತರ ಚಿತ್ರರಂಗದವರು ನಮಗಿಂತ ಎಷ್ಟು ಮುಂದಿದ್ದಾರೆ ನೋಡಿ. ನಾವು ಅವರಿಂದ ಬಹಳ ಕಲಿಯಬೇಕಿದೆ. ಪರ ಭಾಷಾ ಚಿತ್ರಗಳು ಅದ್ದೊರಿಯಾಗಿರಲು ಕಾರಣ ಅವರ ಚಿತ್ರಗಳಿಗೆ ಕಾರ್ಪೊರೇಟ್ ಕಂಪನಿಗಳು ಹಣ ಹೂಡುತ್ತಾರೆ. ಚಿತ್ರದ ನಿರ್ಮಾಪಕರಿಗೆ ಅಷ್ಟಾಗಿ ನಷ್ಟವಾಗುವುದಿಲ್ಲ. ಚಿತ್ರದ ವೆಚ್ಚ ಸುಮಾರು ೫೦ ಕೋಟಿಯಷ್ಟಿದ್ದರೆ, ಇನ್ ಬ್ರಾಂಡಿಗ್ ಮೊತ್ತವೇ ಸುಮಾರು ಅದರ ಅರ್ಧದಷ್ಟಿರುತ್ತದೆ. ಇನ್ನು ಟಿ.ವಿ. ರೈಟ್ಸ್, ಆಡಿಯೊ ರೈಟ್ಸ್ ಮುಂತಾದವು ನಿರ್ಮಾಪಕನನ್ನು ಹೆಚ್ಚಿನ ನಷ್ಟದಿಂದ ಉಳಿಸುತ್ತವೆ ಮತ್ತು ಲಾಭಗಳಿಕೆಯಲ್ಲಿಯೂ ಕೂಡ ಚಿತ್ರ ಯಶಸ್ವಿಯಾಗುತ್ತದೆ. ನಿರ್ಮಾಪಕ ಆದಷ್ಟೂ ಸುರಕ್ಷಿತವಾಗಿರುತ್ತಾನೆ. ನಮ್ಮಲ್ಲಿ ಕೂಡ ಇಂತಹ ಪ್ರಯತ್ನಗಳಾಗಬೇಕು. ಹೀಗಾದಾಗ ನಮ್ಮ ಚಿತ್ರಗಳೂ ಕೂಡ ಅದ್ದೂರಿತನದಿಂದ ಕೂಡಿರುತ್ತದೆ. ನಾವುಗಳೂ ಬೇರೆಯವರಿಗೆ ಸ್ಪರ್ಧೆ ಒಡ್ಡಬಹುದು. ನಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಬಹುದು. ನಮ್ಮಲ್ಲಿ ಒಳ್ಳೆಯ ನಟ/ನಟಿ/ನಿರ್ಮಾಪಕ/ನಿರ್ದೇಶಕರು/ತಂತ್ರಜ್ಞರು ಎಲ್ಲರೂ ಇದ್ದಾರೆ. ಆದರೆ ಕಾರ್ಪೊರೇಟ್ ಮಂದಿಯ ಜೊತೆ ವ್ಯವಹರಿಸುವ ಚತುರತೆಯುಳ್ಳವರು ಕಡಿಮೆ. ನಮ್ಮಲ್ಲಿ ಚಿತ್ರವನ್ನು ಸರಿಯಾದ ರೀತಿಯಲ್ಲಿ ಪ್ರಚಾರ ಮಾಡುವವರೂ ಸಹ ಕಡಿಮೆ. ಪ್ರಚಾರ ಅಂದರೆ ಕೆಲಸಕ್ಕೆ ಬಾರದ ತಂತ್ರಗಳನ್ನು ಹೆಣೆಯುತ್ತಾರೆ. ಅದು ಈ ಕಾಲದಲ್ಲಿ ಪ್ರಯೋಜನವಾಗುವುದೇ? ಇಂತಹ ಸೂಕ್ಷವೂ ಗೊತ್ತಿಲ್ಲದಿರುವ ಕಾರಣವೇ ನಮ್ಮ ಚಿತ್ರಗಳು ಪರಭಾಷಾ ಚಿತ್ರದೊಂದಿಗೆ ಹೋಲಿಸಿದಾಗ ಸಪ್ಪೆಯೆನಿಸುತ್ತದೆ. ಮೊದಲು ಇದನ್ನು ನಾವು ಸರಿ ಮಾಡಿಕೊಳ್ಳಬೇಕು. ಯಾರೋ ಒಬ್ಬಿಬ್ಬರು ಇಂತಹ ಪ್ರಯತ್ನದಲ್ಲಿದ್ದಾರೆ, ಅದು ಏನೇನೂ ಸಾಲದು. ಸಂಬಂಧಪಟ್ಟವರು ಇದರ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಇದೆಲ್ಲಾ ಒಬ್ಬಿಬ್ಬರಿಂದ ಆಗುವ ಕೆಲಸವಲ್ಲ. ಚಿತ್ರ ರಂಗದ ಸಮಸ್ತರೂ ಇದರ ಬಗ್ಗೆ ಸಹಕಾರ ಕೊಡಬೇಕು. ತಾವು ನಟಿಸಿದ ಚಿತ್ರಕ್ಕೇ ಪ್ರಚಾರಕ್ಕೆ ಬರದೆ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳವ ನಮ್ಮ ನಟ/ನಟಿಯರಿಂದ ನಾವು ಇದನ್ನೆಲ್ಲಾ ನಿರೀಕ್ಷಿಸಬಹುದೇ???

Saturday, 30 June 2012
"ಕನ್ನಡದ ಪೂಜಾರಿ"
ಚಿಕ್ಕಮಗಳೂರು ಜಿಲ್ಲೆಯ ಹಿರೇಮಗಳೂರಿನ ಕಣ್ಣನ್ ಅವರ "ಹರಟೆ" ಕಾರ್ಯಕ್ರಮವನ್ನು (ಉದಯ ಟಿ.ವಿಯವರು ಪ್ರಸಾರ ಮಾಡುತ್ತಿದ್ದ) ಬಹಳಷ್ಜ್ಟು ಜನರು ನೋಡಿದ್ದಾರೆ. ಅದು ಬಹಳ ಜನಪ್ರಿಯವಾಗಿತ್ತು. ಈಗಲೂ ಹಬ್ಬ ಮುಂತಾದ ವಿಶೇಷ ಸಂಧರ್ಭದಲ್ಲಿ ಆ ಕಾರ್ಯಕ್ರಮ ಬರುತ್ತದೆ. ಅವರ ನಾಲಿಗೆ ಮೇಲೆ ಕನ್ನಡ ಕುಣಿದಾಡುವುದನ್ನು ನೋಡುವುದೇ ಒಂದು ಸೊಗಸು. ಒಂದು ಆಚ್ಚರಿಯ ಸಂಗತಿ ಎಂದರೆ ಅವರ ಮಾನೆಯ ಮಾತು ತಮಿಳು, ಅವರ ಕನ್ನಡ ಸೇವೆ ಬಹಳ ದೊಡ್ಡದು. ಅವರು ದೇವರಿಗೆ ಸಂಸ್ಕೃತ ಶ್ಲೋಕದ ಬದಲಿಗೆ ಕನ್ನಡದ ದೇವರನಾಮಗಳಿಂದ ಪೂಜೆಯನ್ನು ಸಲ್ಲಿಸಿ ಇತರ ಅರ್ಚಕರಿಗೆ ಮಾದರಿಯಾಗಿದ್ದಾರೆ. ಅನೇಕ ಭಕ್ತರ ಮನಗೆದ್ದಿದ್ದಾರೆ. ಹಿರೇಮಗಳೂರಿನ "ಶ್ರೀ ರಾಮ" ದೇವಸ್ಥಾನದಲ್ಲಿ ದೇವರಿಗೆ ಕನ್ನಡದಲ್ಲಿ ಮಾತ್ರ ಪೂಜೆ, ಪುನಸ್ಕಾರಗಳು. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲೂ, ಮದುವೆ, ಮುಂಜಿ ಮುಂತಾದ ಕಾರ್ಯಕ್ರಮಗಳು ಸಂಸ್ಕೃತದಲ್ಲಿ ನಡೆಯುವುದು ಎಲ್ಲರಿಗೂ ತಿಳಿದ ವಿಚಾರ. ಅದು ಎಷ್ಟು ಜನರಿಗೆ ಅರ್ಥವಾಗುವುದೋ, ಇಲ್ಲವೋ ತಿಳಿಯದು. ಅವರು ಮದುವೆ, ಮುಂಜಿ, ಮುಂತಾದ ಎಲ್ಲಾ ಶುಭ ಕಾರ್ಯಕ್ರಮವನ್ನೂ ಸಹ ಕನ್ನಡದಲ್ಲಿ ನೆರವೇರಿಸುವರು ಮತ್ತು ಅದರ ಅರ್ಥವನ್ನು ಎಲ್ಲರಿಗೂ ತಿಳಿಯುವ ಹಾಗೆ ಕನ್ನಡದಲ್ಲಿ ವಿವರಿಸುವರು. ಅವರು ತಮ್ಮಂತೆಯೇ ೮-೧೦ ಶಿಷ್ಯಂದಿರನ್ನೂ ತಯಾರು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದ ಉಳಿದ ದೇವಸ್ಥಾನಗಳಲ್ಲಿ ಕನ್ನಡದಲ್ಲಿ ಪೂಜೆ ಪುನಸ್ಕಾರಗಳು ನಡೆಯುವಂತಾಗಲಿ. ಯುವ ಅರ್ಚಕರು ಮತ್ತು ಯುವ ಭಕ್ತರು ಇದರ ಬಗ್ಗೆ ಯೋಚಿಸಿ ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಒಳ್ಳೆಯದು.
Thursday, 28 June 2012
ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೪
ಜನರಿಕ್ ಓಷಧಗಳಿಗೆ ಹೆಚ್ಚು ಪ್ರಚಾರವಿರುವುದಿಲ್ಲ ಅಷ್ಟೇ. ಬ್ರಾಂಡ್ ಓಷಧಗಳನ್ನು ತಯಾರಿಸುವ ಕಂಪನಿಗಳು ಓಷಧಗಳನ್ನು ಸಂಶೋಧಿಸುವಾಗ ತಮ್ಮ ಸಮಯ ಮತ್ತು ಸಾಕಷ್ಟು ಹಣವನ್ನು ಖರ್ಚುಮಾಡಿರುತ್ತವೆ. ಪ್ರಚಾರ ಮಾಡಬೇಕಿರುತ್ತದೆ, ಮಾರುಕಟ್ಟೆಯ ಸಮೀಕ್ಷೆ ಮಾಡಬೇಕಿರುತ್ತದೆ ಮತ್ತು ಆ ಓಷಧವನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಬೇಕಾಗಿರುತ್ತದೆ. ಹಾಗಾಗಿ ಬ್ರಾಂಡ್ ಓಷಧದ ಬೆಲೆ ಹೆಚ್ಚಾಗಿರುತ್ತದೆ. ಈ ಓಷಧಿಗಳಿಗೆ ಅದನ್ನು ತಯಾರಿಸುವ ಕಂಪನಿಗಳು ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿರುತ್ತವೆ. ಆಗ ಅದನ್ನು ಬೇರೆ ಕಂಪನಿಗಳು ಅದನ್ನು ತಯಾರು ಮಾಡುವಹಾಗಿಲ್ಲ. ಕೆಲವು ವರ್ಷಗಳ ನಂತರ ಹಕ್ಕುಸ್ವಾಮ್ಯ ರದ್ದಾಗುತ್ತದೆ. ಆಗ ಇತರೆ ಕಂಪನಿಗಳು ಆ ಬ್ರಾಂಡ್ ಓಷಧವನ್ನು ತಯಾರುಮಾಡಬಹುದು, ಆದರೆ ಅದೇ ಹೆಸರನ್ನು ಇಡುವಹಾಗಿಲ್ಲ. ಬೇರೆ ಹೆಸರಿನಲ್ಲಿ ಬಿಡುಗಡೆ ಮಾದಬಹುದು. ಉದಾ: ಹಕ್ಕುಸ್ವಾಮ್ಯ ರದ್ದಾದ ತಲೆನೋವಿನ ಮಾತ್ರೆಗೆ ಸಾರಿಡಾನ್ ಹೆಸರನ್ನು ಇಡುವ ಹಾಗಿಲ್ಲ.
ಹಕ್ಕುಸ್ವಾಮ್ಯ ರದ್ದಾದ ಓಷಧಗಳನ್ನು ಇತರೆ ಕಂಪನಿಗಳು ತಯಾರಿಸುವಾಗ, ಸಂಶೋಧನೆಗಾಗಿ ಹಣ ಖರ್ಚುಮಾಡಬೇಕಿಲ್ಲ, ಸಮಯ ಉಳಿಯುತ್ತದೆ ಮತ್ತು ಈಗಾಗಲೇ ಅದು ಪರೀಕ್ಷಿಲ್ಪಟ್ಟಿರುತ್ತದೆ. ಪುನ: ಮಾರುಕಟ್ಟೆಯ ಸಮೀಕ್ಷೆ ಬೇಕಿರುವುದಿಲ್ಲ. ಹೀಗಾಗಿ ಜನರಿಕ್ ಓಷಧಗಳನ್ನು ತಯಾರಿಸುವ ಕಂಪನಿಗಳಿಗೆ ಹೆಚ್ಚಿನ ಹಣ ಉಳಿತಾಯವಾಗುತ್ತದೆ. ಹೀಗಾಗಿ ಜನರಿಕ್ ಓಷಧಿಗಳು ಬಹಳ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ದೊರಕುತ್ತದೆ. ಈ ಓಷಧಿಗಳನ್ನು ವರ್ಲ್ಡ್ ಹೆಲ್ತ್ ಆರ್ಗನೈಜ಼ೇಷನ್ ಮಾನ್ಯ ಮಾಡಿದೆ. ಈ ಜನರಿಕ್ ಓಷಧಿಗಳು ನಮ್ಮ ದೇಶದಿಂದ ಹೊರ ದೇಶಗಳಿಗೆ ಲಕ್ಷಗಟ್ಟಲೆ ರಫ್ತಾಗುತ್ತಿದೆ, ಆದರೆ ಅದು ನಮ್ಮ ದೇಶದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ. ಇದು ನಮ್ಮ ದೇಶದ ಜನರ ದುರಂತವೇ ಸರಿ.
ಈಗ ಮಾರುಕಟ್ಟೆಯಲ್ಲಿ ಜನರಿಕ್ ಓಷಧಿಗಳು ದೊರೆಯುತ್ತವೆ, ಅದನ್ನು ಬಳಸಿಕೊಳ್ಳುವುದು ಬಿಡುವುದು ಅವರವರ ಇಚ್ಚೆಗೆ ಬಿಟ್ಟಿದ್ದು. ಇನ್ನೂ ಇದರ ಬಗ್ಗೆ ಹೆಚ್ಚಿನ ತಿಳುವಳಿಕೆ ಬೇಕಾಗಿದ್ದಲ್ಲಿ ಗೂಗಲ್ ನಲ್ಲಿ ಜನರಿಕ್ ಓಷಧಿಗಳು ಎಂದು ಹುಡುಕಿದರೆ ಅದರಲ್ಲಿ ಪುಟಗಟ್ಟಲೆ ಮಾಹಿತಿ ಸಿಗುತ್ತದೆ. ಆಸಕ್ತರು ಗಮನಿಸಬಹುದು. (ಮುಗಿಯಿತು)

Wednesday, 27 June 2012
ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೩
ಇದನ್ನು ಉದಾಹರಣೆಯೊಂದಿಗೆ ವಿವರಿಸಬೇಕಾದರೆ ನಮಗೆ ತಲೆನೋವು ಬಂದಾಗ ನಾವು ಸಾರಿಡಾನ್ ಮಾತ್ರೆಯನ್ನು ತೆಗೆದುಕೊಳ್ಳುತ್ತೇವೆ. ಸಾರಿಡಾನ್ ಮಾತ್ರೆ ನಮಗೆ ಮಾರುಕಟ್ಟೆಯಲ್ಲಿ ೧೫ ರೂಪಾಯಿಗಳಾಗುತ್ತದೆ (೧೦ಕ್ಕೆ.) ಅದೇ ನಾವು ಜನರಿಕ್ ಓಷಧ ಅಂಗಡಿಯಲ್ಲಿ ನಮಗೆ ತಲೆನೋವು ಹೋಗುವ ಮಾತ್ರೆ ಅಂದಾಜು ೨-೩ ರೂಪಾಯಿಗಳ ಒಳಗೆ ಸಿಗುತ್ತದೆ (೧೦ಕ್ಕೆ.) ಇದೇ ಜನರಿಕ್ ಮತ್ತು ಇತರೆ ಬ್ರಾಂಡ್ ಓಷಧಿಗಳ ವ್ಯತ್ಯಾಸ. ತಲೆನೋವು ನಿವಾರಿಸುವ ಅನೇಕ ಮಾತ್ರೆಗಳು ಮಾರುಕಟ್ಟೆಯಲ್ಲಿ ಲಭ್ಯ. ಅದನ್ನು ಇತರ ಕಂಪನಿಗಳೂ ಸಹ ತಯಾರಿಸುತ್ತವೆ, ಬೇರೆಬೇರೆ ಹೆಸರುಗಳಲ್ಲಿ (ಅನಾಸಿನ್, ಆಸ್ಪ್ರೋ, ಇತ್ಯಾದಿ.) ನಾವು ಯಾವ ಕಂಪನಿಯ ಮಾತ್ರೆಯನ್ನು ತೆಗೆದುಕೊಂಡರೂ ತಲೆನೋವು ಹೋಗುವುದಿಲ್ಲವೇ, ಹಾಗೆ ನಾವು ನಮಗೆ ತಲೆನೋವು ಬಂದಾಗ ಜನರಿಕ್ ಓಷಧಿಯನ್ನೂ ಸಹ ತೆಗೆದುಕೊಳ್ಳಬಹುದು. ಜನರಿಕ್ ಓಷಧಿಗಳಿಗೆ ಬೇರೆ ಬೇರೆ ರಾಸಾಯನಿಕ ಹೆಸರುಗಳು ಇರುತ್ತದೆ ಅಷ್ಟೇ. ಉದಾ: ಮಧುಮೇಹ ರೋಗಕ್ಕೆ ಜನರಿಕ್ ಓಷಧದ ಹೆಸರು ಮೆಟಫಾರ್ಮಿನ್ (Metapharmin) ಅದೇ ಬ್ರಾಂಡ್ ಓಷಧದ ಹೆಸರು ಗ್ಲುಕೋಫೇಜ್ (Glucophage) ಹಾಗೆಯೇ ಬಿ.ಪಿ.ಗೆ ಜನರಿಕ್ ಓಷಧದ ಹೆಸರು ಮೆಟಪ್ರೊಲಾಲ್ (Metaprolal) ಬ್ರಾಂಡ್ ಓಷಧದ ಹೆಸರು ಲೋಪ್ರೆಸ್ಸೊರ್ (Lopressor) ಇತ್ಯಾದಿ. ಜನರಿಕ್ ಓಷಧಗಳು ಬೇರೆ ಬೇರೆ ಆಕಾರಗಳಲ್ಲಿ ಇರಬಹುದು, ಅದು ಬೇರೆ ರುಚಿಯಲ್ಲಿರಬಹುದು ಮತ್ತು ಬೇರೆ ಬೇರೆ ಬಣ್ಣಗಳಲ್ಲಿರಬಹುದು. ಆದರೆ ಅದು ಯಾವುದೇ ಬ್ರಾಂಡ್ ಓಷಧದಂತೆಯೇ ಕೆಲಸಮಾಡುತ್ತದೆ ಮತ್ತು ಈ ಓಷಧಿಗಳು ಬ್ರಾಂಡ್ ಓಷಧಿಗಳಂತೆ ಪರಿಣಾಮಕಾರಿಯೂ ಹೌದು. ಜನರಿಕ್ ಓಷಧಗಳು ಸಹ ಸರ್ಕಾರದ ನೀತಿ ನಿಯಮಗಳಿಗೆ ಒಳಪಟ್ಟಿರುತ್ತದೆ. (ಮಿಕ್ಕಿದ್ದು ನಾಳೆಗೆ)
Tuesday, 26 June 2012
ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೨

ಪತ್ರಿಕೆಯಲ್ಲಿ ವರದಿಯಾಗಿರುವಂತೆ ಜನರಿಕ್ ಓಷಧಿಗಳಿಗೂ ಮತ್ತು ಇತರೆ ಬ್ರಾಂಡ್ ಓಷಧಿಗಳ ಬೆಲೆಯ ವ್ಯತ್ಯಾಸ ಈ ರೀತಿ ಇದೆ.
ಖಾಯಿಲೆ ಜನರಿಕ್ ಬ್ರಾಂಡ್
೧. ಹುಳದ ಮಾತ್ರೆ(೧ ಕ್ಕೆ) ೧.೬೦ ೧೮.೪೦
೨. ಬಿ.ಪಿ (೧೪ ಮಾತ್ರೆಗೆ) ೩.೬೦ ೪೬.೮೭
೩. ಬೊಜ್ಜು ನಿವಾರಕ (೧೦ ಮಾತ್ರೆಗೆ) ೧೨.೫೦ ೧೦೪.೪೯
೪. ಆಂಟಿ ಬಯೋಟಿಕ್ ೨೫೦ ಮೆಂ.ಜಿ
(೧೦ ಮಾತ್ರೆಗೆ) ೨೬.೫೦ ೯೨.೫೦
೫. ಆಂಟಿ ಬಯೋಟಿಕ್ ೫೦೦ ಮೆಂ.ಜಿ
(೧೦ ಮಾತ್ರೆಗೆ) ೧೩.೫೦ ೯೯.೫೦
೬. ಶೀತ (೧೦ ಮಾತ್ರೆಗೆ) ೧.೨೦ ೩೭.೫೦
೭. ಮಧುಮೇಹ (೨೦ ಮಾತ್ರೆಗೆ) ೮.೨೦ ೨೩.೭೯
೮. ನೋವು ನಿವಾರಕ(೧೫ ಮಾತ್ರೆಗೆ) ೨.೬೦ ೫೨.೩೦
೯. ಆಸಿಡಿಟಿ (೧೦ ಮಾತ್ರೆಗೆ) ೧೦.೬೦ ೮೦.೦೮
೧೦ ಜ್ವರ (೧೫ ಮಾತ್ರೆಗೆ) ೪.೬೦ ೧೮.೧೫
ಸುಲಭವಾಗಿ ಹೇಳಬೇಕೆಂದರೆ ಜನರಿಕ್ ಓಷಧಿಗಳೆಂದರೆ ಅದು ಬ್ರಾಂಡ್ ಓಷಧಿಗಳಲ್ಲ. ಮಾರುಕಟ್ಟೆಯಲ್ಲಿ ಜನರಿಕ್ ಓಷಧಿ ಮತ್ತು ಬ್ರಾಂಡ್ ಓಷಧಿಗಳು ದೊರೆಯುತ್ತವೆ. ಜನರಿಗೆ ಬ್ರಾಂಡ್ ಓಷಧಿಗಳ ಮೇಲೆ ಹೆಚ್ಚು ನಂಬಿಕೆ. ಜನರಿಕ್ ಓಷಧಿಗಳ ಮೇಲೆ ಇಲ್ಲ, ಹಾಗಾಗಿ ಈ ಓಷಧಿಗಳು ತುಂಬಾ ಹೆಸರುವಾಸಿಯಾಗಿಲ್ಲ. ಜನರಿಕ್ ಓಷಧಗಳ ಬಗ್ಗೆ ನಮ್ಮ ದೇಶದ ಹೆಚ್ಚಿನ ಜನರಿಗೆ ತಿಳಿದಿಲ್ಲ. ಇದು ಹೆಚ್ಚಿನ ಜನರಿಗೆ ಗೊತ್ತಾಗಿದ್ದು, ಇತ್ತೀಚಿನ " ಸತ್ಯಮೇವ ಜಯತೆ " ಕಾರ್ಯಕ್ರಮದಲ್ಲಿ ಅಮೀರ್ ಖಾನ್ ಇದರ ಬಗ್ಗೆ ತಿಳಿಸಿದಾಗಲೇ ಎಂದರೆ ಅದು ಅತಿಶಯೋಕ್ತಿ ಏನಲ್ಲ.
ಜನರಿಕ್ ಓಷಧಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವವರು, ವೈದ್ಯರಿಗೆ ಜನರಿಕ್ ಓಷಧಗಳನ್ನು ಬರೆದುಕೊಡುವಂತೆ ಕೇಳುವುದಿಲ್ಲ. ಕೇಳಲು ಏನೋ ಸಂಕೋಚ. ಮಾಹಿತಿ ಇರುವ ಹೆಚ್ಚಿನ ವೈದ್ಯರು ತಮ್ಮ ರೋಗಿಗಳಿಗೆ ಇದರ ಬಗ್ಗೆ ತಿಳಿಸುವುದಿಲ್ಲ. ವೈದ್ಯರು ಇದರಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಬೇಕು. ಕೆಲವರಿಗೆ ಜನರಿಕ್ ಓಷಧಿಗಳೆಂದರೆ ಏನೋ ಅಸಡ್ಡೆ. ಅದು ತಂಬಾ ಕಡಿಮೆ ಬೆಲೆಯಲ್ಲಿ ದೊರಕುವ ಕಾರಣ ಅದು ಸರಿಯಾಗಿ ಕೆಲಸ ಮಾಡುವುದಿಲ್ಲವೇನೋ ಎಂಬ ಅಂಜಿಕೆ. ಆದರೆ ಅದು ಹಾಗೇನೂ ಇಲ್ಲ. ಸಾರ್ವಜನಿಕರು ಜನರಿಕ್ ಓಷಧವೆಂದರೆ ಅಸಡ್ಡೆ ಪಡುವಂತಹದ್ದೇನೂ ಇಲ್ಲ. ಆ ಓಷಧಗಳೂ ಸಹ ಇತರೆ ಬ್ರಾಂಡ್ ಓಷಧಗಳ ಹಾಗೆಯೇ ಕೆಲಸ ಮಾಡುತ್ತದೆ. ಜನರಿಕ್ ಓಷಧವೂ ಸಹ ರೋಗಿಯನ್ನು ಗುಣಪಡಿಸುತ್ತದೆ. ಅದರಲ್ಲಿಯೂ ಸಹ ನಮ್ಮ ರೋಗವನ್ನು ಗುಣಪಡಿಸುವ ಶಕ್ತಿ ಇರುತ್ತದೆ. ನಮಗೆ ಈಗ ಏನಾಗಿದೆಯೆಂದರೆ ನಾವು ದಿನವೂ ಈ ಬ್ರಾಂಡ್ ಓಷಧಿಗಳ ಜಾಹೀರಾತುಗಳನ್ನು ನೋಡಿ ನೋಡಿ, ಅದರ ಬಗ್ಗೆ ಕೇಳಿ ಕೇಳಿ ನಮಗೆ ಅದೇ ಮೆದುಳಿನಲ್ಲಿ ಕುಳಿತುಕೊಂಡುಬಿಟ್ಟಿದೆ. ಈಗ ನಮಗೆ ಯಾರು ಏನೇ ಹೇಳಿದರೂ ರುಚಿಸದಂತಾಗಿಬಿಟ್ಟಿದೆ, ಹಾಗಾಗಿ ನಮಗೆ ವೈದ್ಯರೇ ಜನರಿಕ್ ಓಷಧಗಳನ್ನು ಶಿಫಾರಸ್ಸು ಮಾಡಿದರೂ ನಾವು ಅದನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿಯನ್ನು ನಾವೇ ತಂದುಕೊಂಡು ಬಿಟ್ಟಿದ್ದೇವೆ. (ಮಿಕ್ಕಿದ್ದು ನಾಳೆಗೆ)
Monday, 25 June 2012
ಬ್ರಾಂಡ್ ಮತ್ತು ಜನರಿಕ್ ಓಷಧಗಳು : ಭಾಗ-೧
ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು (ಕೇಂದ್ರ ಸರ್ಕಾರ) ಗ್ಲಾಕ್ಸೊಸ್ಮಿತ್ ಕ್ಲೈನ್, ರಾನ್ ಬಕ್ಸಿ, ಡಾ.ರೆಡ್ಡೀಸ್, ಮುಂತಾದ ಪ್ರಖ್ಯಾತ ಔಷಧಿ ತಯಾರಿಸುವ ಕಂಪನಿಗಳು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.೧,೧೨೩ ರಷ್ಟು ಹೆಚ್ಚು ದರದಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟಮಾಡುತ್ತಿವೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಔಷಧಿಗಳಿಗೆ ಗರಿಷ್ಟ ರೀಟೇಲ್ ದರವನ್ನು ನಿಗದಿಪಡಿಸಿ ಮಾರಾಟ ಮಾಡಬೇಕಾದ ಈ ಕಂಪನಿಗಳು ಅತ್ಯಧಿಕ ದರವನ್ನು ನಿಗದಿಪಡಿಸುತ್ತವೆ (ಸುಮಾರು ೧,೦೦೦ ಪಟ್ಟು.) ಇದರಲ್ಲಿ ವಿತರಕರು, ಸಗಟು ವ್ಯಾಪಾರದಾರರು, ರೀಟೇಲ್ ವ್ಯಾಪಾರಸ್ಥರು ಈ ವಂಚನೆಯಲ್ಲಿ ಪಾಲ್ಗೊಂಡು ಗ್ರಾಹಕರಿಗೆ ವಂಚಿಸುತ್ತಾರೆ ಎಂದು ತನ್ನ ವರದಿಯಲ್ಲಿ ತಿಳಿಸಿದೆ. ಈ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಸತ್ಯಮೇವ ಜಯತೆ ಕಾರ್ಯಕ್ರಮದ ನೆನಪು ಬಂತು.ಆ ಕಾರ್ಯಕ್ರಮದಲ್ಲಿ ಜನರಿಕ್ ಓಷದ ಮಳಿಗೆಗಳ ಬಗ್ಗೆ ವಿವರಿಸುತ್ತಾ ಸುಮಾರು ೨,೩೦೦ ಬೆಲೆಯ ಔಷಧಿಗಳು ಈ ರೀತಿಯ ಜನರಿಕ್ ಔಷಧ ಮಳಿಗೆಗಳಲ್ಲಿ ಕೇವಲ ೩೫೦ ರೂಪಾಯಿಗಳಿಗೆ ದೊರಕುತ್ತದೆ. ಇದು ಇತರೆ ಔಷಧ ಮಳಿಗೆ ಮತ್ತು ಜನರಿಕ್ ಔಷಧ ಮಳಿಗೆಗಳ ವ್ಯ್ತತ್ಯಾಸ. ಈ ರೀತಿಯ ಜನರಿಕ್ ಓಷಧ ಮಳಿಗೆಗಳು ನಮ್ಮ ದೇಶದ ಎಲ್ಲಾ ರಾಜ್ಯಗಳಲ್ಲೂ ಇದ್ದರೆ ಸಾರ್ವಜನಿಕರಿಗೆ ಬಹಳ ಉಪಯುಕ್ತವಾಗುವುದು ಎಂದು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯರು ತಿಳಿಸಿದ್ದರು. ಮೇಲಿನ ಸುದ್ದಿ ಇದನ್ನು ಪುಷ್ಟೀಕರಿಸುತ್ತದೆ. ಈ ಓಷಧಗಳನ್ನು ಕಂಡು ಹಿಡಿಯಲು, ತಯಾರಿಸಲು ಮತ್ತು ಜನರ ಮೇಲೆ ಪ್ರಯೋಗಿಸಿ ಅದು ಸೂಕ್ತವಾಗಿ ಕೆಲಸ ಮಾಡುತ್ತದೆ ಎಂದರೆ ಮಾತ್ರ ಆ ಓಷದವು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತದೆ. ಇಲ್ಲದ್ದಿದ್ದರೆ ಇಲ್ಲ. ಈ ಅವಧಿಯಲ್ಲಿ ನಮಗೆ ಬಹಳಷ್ಟು ಸಮಯ, ಹಣ ಖರ್ಚಾಗುತ್ತದೆ ಎಂದು ಈ ಕಂಪನಿಗಳ ವಾದ. ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡರೂ ೧,೦೦೦ ಪಟ್ಟು ಹೆಚ್ಚಿನ ಬೆಲೆ ಎಂದರೆ, ಅದು ಕಂಪನಿಗಳ ಧನದಾಹವೆಂದೇ ಹೇಳಬೇಕು.
ಜೂನ್ ೨೧ ರಿಂದ ಕರ್ನಾಟಕದ ೨೦ ಜಿಲ್ಲೆಗಳಲ್ಲಿ ಮಾರುಕಟ್ಟೆ ದರದ ಅರ್ಧಕ್ಕಿಂತ ಕಡಿಮೆ ದರದಲ್ಲಿ ಜನರಿಕ್ ಔಷಧ ಲಭ್ಯ ಎಂಬ ಮಾಹಿತಿ ರಾಜ್ಯ ಸರ್ಕಾರದಿಂದ ಬಂದಿದೆ. ನಗರದ ವಿಕ್ಟೋರಿಯಾ ಆಸ್ಪತ್ರೆಯ ಜನತಾ ಬಜಾರ್ ಮಳಿಗೆಯಲ್ಲಿ ದೊರಯುವ ಮಾಹಿತಿ ಇದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು. (ಈಗಾಗಲೇ ಅನೇಕ ಅಂಗಡಿಗಳಲ್ಲಿ ಜನರಿಕ್ ಓಷಧಗಳು ದೊರಕುತ್ತಿವೆ.) ವೈದ್ಯರು ತಮ್ಮ ಬಳಿ ಬರುವ ರೋಗಿಗಳಿಗೆ ಜನರಿಕ್ ಓಷಧಗಳನ್ನು ಶಿಫಾರಸ್ಸು ಮಾಡಿದರೆ ಒಳ್ಳೆಯದು. ಇಂದಿನ ದಿನಗಳಲ್ಲಿ ವೈದ್ಯಕೀಯ ಖರ್ಚು ಬಹಳ ಜಾಸ್ತಿಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬಹಳ ಹೊರೆಯಾಗುತ್ತಿದೆ. ಜನರೂ ಸಹ ವೈದ್ಯರಿಗೆ ಜನರಿಕ್ ಓಷಧಿಗಳನ್ನು ಬರೆದುಕೊಡುವಂತೆ ವಿನಂತಿಸಬೇಕು. ಸಾಧಾರಣವಾಗಿ ವೈದ್ಯರು ಜನರಿಕ್ ಓಷಧಗಳನ್ನು ಬರೆದುಕೊಡುವುದಿಲ್ಲ. ಅವರು ಬರೆದುಕೊಡುವುದು ಕೇವಲ ಬ್ರಾಂಡ್ ಓಷಧಿಗಳನ್ನೇ. ಅವರು ಯಾಕೆ ಬರೆದುಕೊಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ. "ವೈದ್ಯರು ಜನರಿಕ್ ಓಷಧಗಳನ್ನು ಶಿಫಾರಸು ಮಾಡಬೇಕು, ಇಲ್ಲದಿದ್ದರೆ ಅಂತಹವರನ್ನು ಗಂಭೀರವಾಗಿ ಪರಿಗಣಿಸಲಾಗುವುದು " ಎಂದು ಸರ್ಕಾರವೇನೋ ಹೇಳುತ್ತದೆ. ಆದರೆ ಅದು ನಮ್ಮ ದೇಶದಲ್ಲಿ ಸಾಧ್ಯವೇ ಎಂಬುದು ಪ್ರಶ್ನೆ. ಜನರಿಕ್ ಓಷದಗಳು ಕೇವಲ ಚಿಕ್ಕ ಪುಟ್ಟ ಖಾಯಿಲೆಗಳಿಗೆ ಮಾತ್ರವಲ್ಲದೇ ಕ್ಯಾನ್ಸರ್, ಮೂತ್ರ ಪಿಂಡ ರೋಗ, ಮಧುಮೇಹ, ಹೃದ್ರೋಗ ಮುಂತಾದ ಖಾಯಿಲೆಗಳಿಗೂ ಜನರಿಕ್ ಓಷಧಗಳು ಲಭ್ಯ. (ಮಿಕ್ಕಿದ್ದು ನಾಳೆಗೆ)
Tuesday, 19 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -8
ಕಳೆದ ಸಂಚಿಕೆಯಿಂದ
ನೀವು ಹೇಗೆ ಈ ವ್ಯವಹಾರದಲ್ಲಿ ಹಣ ಮಾಡಬಹುದು ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ : ನೀವು ಒಂದು ಇನ್ಫೋಸಿಸ್ ಶೇರನ್ನು ೨,೦೦೦ ರೊಪಾಯಿಗಳಲ್ಲಿ ಕೊಂಡು ಮುಂದೆ ನೀವು ಅದನ್ನು ೨,೫೦೦ ರೂಪಾಯಿಗಳಿಗೆ ಮಾರಿದರೆ ನಿಮಗೆ ೫೦೦ ರೂಪಾಯಿಗಳ ಲಾಭವುಂಟಾಗುವುದು. ನೀವು ಈ ಶೇರನ್ನು ಒಂದು ವರ್ಷದ ತನಕ ಇಟ್ಟುಕೊಂಡು ಮುಂದೆ ಅದನ್ನು ಮಾರಿದರೆ ನಿಮಗೆ ಬಂದ ಲಾಭಕ್ಕೆ ನೀವು ತೆರಿಗೆ ಕಟ್ಟುವ ಹಾಗಿಲ್ಲ. ನಿಮಗೆ ಕಂಪನಿಯಿಂದ ವರ್ಷಕ್ಕೊಮ್ಮೆ ಬರುವ ಲಾಭಂಶಕ್ಕೂ ತೆರೆಗೆ ಕಟ್ಟುವಹಾಗಿಲ್ಲ. ನೀವು ಶೇರನ್ನು ಒಂದು ವರ್ಷದ ಒಳಗೆ ಮಾರಿದರೆ ನಿಮಗೆ ಬರುವ ಲಾಭಕ್ಕೆ ನೀವು ತೆರಿಗೆ ಕಟ್ಟಬೇಕಾಗುತ್ತದೆ. ಅದೇ ಇನ್ಫೋಸಿಸ್ ಶೇರನ್ನು ನೀವು ೨,೦೦೦ ಕೊಂಡು ೧,೫೦೦ಕ್ಕೆ ಮಾರಿದರೆ ನಿಮಗೆ ೫೦೦ ರೊಪಾಯಿಗಳ ನಷ್ಟವುಂಟಾಗುತ್ತದೆ. ಶೇರುಗಳು ದಿನವೂ ಏರಿಳಿತದಲ್ಲಿ ತೊಡಗಿಕೊಂಡಿರುತ್ತವೆ. ನಿಮಗೆ ಮುಖ್ಯವಾಗಿ ಈ ವ್ಯವಹಾರದಲ್ಲಿ ಯಾವೆ ಶೇರನ್ನು ಯಾವಾಗ ಖರೀದಿಸಬೇಕು ಮತ್ತು ಅದನ್ನು ಯಾವಾಗ ಮಾರಾಟ ಮಾಡಬೇಕು ಎಂಬ ಜ್ಞಾನ, ಅತ್ಯಂತ ಅವಶ್ಯಕ. ಇದು ಇಲ್ಲದಿದ್ದ ಪಕ್ಷದಲ್ಲಿ ನೀವು ಈ ಶೇರು ಮಾರುಕಟ್ಟೆಯಿಂದ ದೂರವಿರುವುದು ಮೇಲು. ಆದರೆ ಇದನ್ನು ನಿಮಗೆ ಕಲಿಸುವ ವ್ಯವಸ್ಥೆ ಇದೆ. ಮೊದಲು ನಿಮಗೆ ಇದರ ಬಗ್ಗೆ ಆಸಕ್ತಿ ಇದ್ದರೆ ನೀವು ಒಂದು ಕೈ ನೋಡಬಹುದು.
ಇದು ಒಂದು ದೊಡ್ಡ ವ್ಯವಹಾರ. ವೈಜ್ಞಾನಿಕವಾಗಿ ದೀರ್ಘ ಕಾಲಕ್ಕೆ ಹಣ ಹೂಡಿದರೆ ಹೆಚ್ಚಿನ ಮಟ್ಟದ ಯಶಸ್ಸು ಸಿಗುತ್ತದೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಜ್ಞಾನ, ತಿಳುವಳಿಕೆ ಅತ್ಯವಶ್ಯಕ. ಈ ಲೇಖನ ಶೇರು ಮಾರುಕಟ್ಟೆಯ ಕುರಿತು ಒಂದು ಚಿಕ್ಕ ಮಾಹಿತಿ ಅಷ್ಟೇ. ಇದು ಒಂದು ದೊಡ್ಡ ಸರೋವರ ಇದ್ದಂತೆ. ಇದರಲ್ಲಿ ನಿತ್ಯವೂ ಕಲಿಕೆಯು ಇರುತ್ತದೆ.
ನಿಮಗೆ ಇದ್ಯಾವುದರ ತಲೆ ಬಿಸಿ ಬೇಕಾಗಿಲ್ಲ. ನಿಮಗೆ ಇವೆಲ್ಲವನ್ನು ಕಲಿಯಲು ಆಸಕ್ತಿ ಮತ್ತು ಸಮಯವಿಲ್ಲವೆಂದರೆ ಅಂಥವರು ಮ್ಯೂಚುಯ ಫಂಡ್ ನಲ್ಲಿ ಹಣ ಹೂಡಬಹುದು. ಇದಕ್ಕೂ ಸಹ ಸ್ವಲ್ಪ ಮಟ್ಟಿನ ಜ್ಞಾನ, ತಿಳುವಳಿಕೆ ಅತ್ಯವಶ್ಯಕ. (ಮುಗಿಯಿತು)

Monday, 18 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೭
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೭
ಕಳೆದ ಸಂಚಿಕೆಯಿಂದ
ಹೊಸದಾಗಿ ಶೇರು ಮಾರುಕಟ್ಟೆಯನ್ನು ಪ್ರವೇಶಿಸುವವರಿಗೆ " ಪ್ಯಾನ್ ಕಾರ್ಡ್ " ಅವಶ್ಯಕ. ಅವರು ಡಿಪಾಜಿಟರಿ ಪಾರ್ಟಿಸಿಪೆಂಟರಿ ಬಳಿ " ಡಿ ಮ್ಯಾಟ್ " ಖಾತೆ ಹೊಂದಿರಬೇಕು. (ಇದು ಒಂಥರಾ ಬ್ಯಾಂಕ್ ಖಾತೆ ಹೊಂದಿರುವ ಹಾಗೆ) ಇಂಡಿಯಾ ಇನ್ಫೋಲಿನ್, ಇಂಡಿಯಾ ಬುಲ್, ಮೋತಿಲಾಲ್ ಒಸ್ವಾಲ್, ಶೇರ್ ಖಾನ್, ವೇ ಟು ವೆಲ್ತ್ ಮುಂತಾದ ಕೆಲವು ಡಿಪಾಜಿಟರಿ ಪಾರ್ಟಿಸಿಪೆಂಟರಿಗಳನ್ನು ಅಥವಾ ಶೇರು ಬ್ರೋಕರ್ ಗಳನ್ನು ಶೇರು ಮಾರುಕಟ್ಟೆಯ ವ್ಯವಹಾರಕ್ಕಾಗಿ ಸಂಪರ್ಕಿಸಬಹುದು. ಶೇರುಗಳನ್ನು ಕೊಳ್ಳಲು/ಮಾರಲು ಇವರುಗಳು ನಿಮಗೆ ಸಹಾಯ/ಸಲಹೆ ನೀಡುತ್ತಾರೆ ಮತ್ತು ಇದಕ್ಕೆ ಕಮೀಷನ್ ಸಹ ಇರುತ್ತದೆ. ಇಂತಹ ಡಿಪಾಜಿಟರಿ ಪಾರ್ಟಿಸಿಪೆಂಟರಿಯಲ್ಲಿ ನೀವು ಹಣವನ್ನು ಜಮೆ ಮಾಡಿದರೆ ಅದರಲ್ಲಿ ನೀವು ಶೇರುಗಳನ್ನು ಕೊಳ್ಳಬಹುದು. ಮುಂದೆ ನೀವು ಶೇರುಗಳನ್ನು ಮಾರಿದರೆ ಆ ಹಣವು ನಿಮ್ಮ ಖಾತೆಗೆ ಜಮೆಯಾಗುವುದು. ನಿಮಗೆ ಬೇಕಾದಾಗ ನೀವು ಹಣವನ್ನು ವಾಪಸ್ಸು ಪಡೆಯಬಹುದು. ನೀವು ಈ ವ್ಯವಹಾರವನ್ನು ಆನ್ ಲೈನ್ ಮುಖಾಂತರವೂ ಮಾಡಬಹುದು. ಕೆಲವು ಬ್ಯಾಂಕ್ ಗಳಲ್ಲಿ ಡಿ ಮ್ಯಾಟ್ ಖಾತೆಯ ಸೌಲಭ್ಯವೂ ಇದೆ. ಊದಾ: ಐ.ಸಿ.ಐ.ಸಿ.ಐ., ಹೆಚ್.ಡಿ.ಎಫ಼್.ಸಿ., ಎಸ್.ಬಿ.ಐ. ಇತ್ಯಾದಿ. ಉಳಿತಾಯ ಖಾತೆಯನ್ನು ಡಿ ಮ್ಯಾಟ್ ಖಾತೆಗೆ ಲಿಂಕ್ ಮಾಡುವ ಸೌಲಭ್ಯವೂ ಸಹ ಇದೆ.
ಇವತ್ತು ಹಣ ಹೂಡಿ ನಾಳೆ ಅದು ಎರಡರಷ್ಟು, ಮೂರರಷ್ಟು ಆಗುವುದೆಂದು ನಂಬುವವರಿಗೆ ಇದು ಅವರ ಮೆಚ್ಚಿನ ತಾಣವಲ್ಲ. ಇದಕ್ಕೆ ಸ್ವಲ್ಪ ಹೆಚ್ಚಿನ ವಿದ್ಯೆ, ಬುದ್ದಿ, ಸಹನೆ, ತಾಳ್ಮೆ, ಧೈರ್ಯ, ಆಸಕ್ತಿ ಮುಂತಾದ ಅನೇಕ ವಿಷಯಗಳು ಬೇಕಾಗುತ್ತವೆ. ಎನ್.ಡಿ.ಟಿ.ವಿ ಪ್ರಾಫಿಟ್/ ಸಿ.ಎನ್.ಬಿ.ಸಿ. ಟಿ.ವಿ. ೧೮/ ಸಿ.ಎನ್.ಬಿ.ಸಿ ಆವಾಜ಼್/ಬ್ಲೂಮ್ ಬರ್ಗ್/ಜ಼ೀ ಬ್ಯುಸಿನೆಸ್/ಇ.ಟಿ ನೌ/ ಮುಂತಾದ ಟಿ.ವಿ ವಾಹಿನಿಗಳು ಇದರ ಬಗ್ಗೆ ಅನೇಕ ವಿಚಾರಗಳನ್ನು, ಮಾರುಕಟ್ಟೆಯ ವಿಶ್ಲೇಷಣೆಯನ್ನು ದಿನದ ೨೪ ಗಂಟೆಯೂ ಪ್ರಸಾರ ಮಾಡುತ್ತಿರುತ್ತವೆ. ಕನ್ನಡದಲ್ಲಿ ಸಧ್ಯಕ್ಕೆ ಟಿ.ವಿ.೯ ಪ್ರತಿದಿನ ಬೆಳಗ್ಗೆ ೮-೨೦ ರಿಂದ ೧೦ ನಿಮಿಷಗಳು " ಹಣ ಭವಿಷ್ಯ " ಎಂಬ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಅದೇ ರೀತಿ ಉದಯ ವಾರ್ತೆಗಳು ಮತ್ತು ಚಂದನ ವಾರಕ್ಕೆ ೩೦ ನಿಮಿಷ ಈ ಶೇರು ಮಾರುಕಟ್ಟೆ ಬಗ್ಗೆ ಕಾರ್ಯಕ್ರಮವನ್ನು ಬಿತ್ತರಿಸುತ್ತದೆ. ಆಂಗ್ಲ ಭಾಷಯಲ್ಲಿ ಬರುವ ಎಕನಾಮಿಕ್ಸ್ ಟೈಮ್ಸ್, ಮಿಂಟ್ ಬ್ಯುಸಿನೆಸ್ ಲೈನ್ ಮುಂತಾದ ಆಂಗ್ಲ ಭಾಷಾ ಪತ್ರಿಕೆಗಳು, ಔಟ್ ಲುಕ್ ಮನಿ, ಔಟ್ ಲುಕ್ ಬ್ಯುಸಿನೆಸ್, ದಲಾಲ್ ಸ್ಟ್ರೀಟ್ ಮುಂತಾದ ಪಾಕ್ಷಿಕಗಳು ಇದರ ಬಗ್ಗೆ ಅನೇಕ ವಿಚಾರ, ವಿಶ್ಲೇಷಣೆಯನ್ನು ಪ್ರಕಟಿಸುತ್ತದೆ. ಇದನ್ನು ಓದಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಆಂಗ್ಲ ಭಾಷೆಯಲ್ಲಿ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಶೇರು ಮಾರುಕಟ್ಟೆಯ ಬಗ್ಗೆ ಅನೇಕ ನಗರಗಳಲ್ಲಿ ಸೆಮಿನಾರುಗಳು ನಡೆಯುತ್ತವೆ. ಕುತೂಹಲವಿರುವವರು ಇಂತಹ ಸೆಮಿನಾರುಗಳಲ್ಲಿ ಭಾಗವಹಿಸಿ ಇದರ ಬಗ್ಗೆ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬಹುದು. ಬೆಂಗಳೂರಿನ ಪೂರ್ಣಿಮಾ ಚಿತ್ರಮಂದಿರದ ಸಮೀಪದಲ್ಲಿರುವ " ಬೆಂಗಳೂರು ಸ್ಟಾಕ್ ಎಕ್ಸ ಚೇಂಜ್ " ನಲ್ಲಿಯೂ ಸಹ ಹೊಸದಾಗಿ ಹಣ ಹೂಡುವ ಆಸಕ್ತಿ ದಾರರಿಗೆ ಇದರ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ. ಅಲ್ಲಿ ಒಂದು ಒಳ್ಳೆಯ ಗ್ರಂಥಾಲಯವೂ ಸಹ ಇದೆ. ಇದರ ಸೌಲಭವನ್ನೂ ಸಹ ನೀವು ಪಡೆಯಬಹುದು. ಡಾ.ಭರತ್ ಚಂದ್ರ, ರುದ್ರಮೂರ್ತಿ ಮುಂತಾದ ಅನೇಕ ಮಾರುಕಟ್ಟೆಯ ವಿಶ್ಲೇಷಕರು ಕನ್ನಡದಲ್ಲೂ ಸಹ ಎಲ್ಲರಿಗೂ ಅರ್ಥವಾಗುವ ಹಾಗೆ ತಿಳಿಸಿಕೊಡುವರು. ಇದಕ್ಕೆ ಸ್ವಲ್ಪ ಹಣ ಮತ್ತು ಸಮಯ ಖರ್ಚಾಗುತ್ತದೆ. ಹೀಗೆ ನೀವು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಹಣ ಹೂಡಿಕೆಮಾಡಿದರೆ ನೀವು ಯಶಸ್ಸು ಕಾಣಬಹುದು. (ಮಿಕ್ಕಿದ್ದು ನಾಳೆಗೆ)

Sunday, 17 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೬
ಶೇರು ಮಾರುಕಟ್ಟೆಯಲ್ಲಿನ ವ್ಯವಹಾರವು ಕ್ರಮಬದ್ದವಾಗಿ ಮತ್ತು ಹೂಡಿಕೆದಾರರ ಹಿತದೃಷ್ಟಿಯಿಂದ ಮತ್ತು ಕಾನೂನಾತ್ಮಕವಾಗಿ ನಡೆಯುವುದಕ್ಕೆ ಸೆಬಿ (SEBI ) (Securities and Exchange Board of India) ಎಂಬ ಸಂಸ್ಥೆ ಸರ್ಕಾರದ ಪರವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಬ್ರೋಕರ್ ಗಳು, ಸಬ್ ಬ್ರೋಕರ್ ಗಳು, ರಿಜಿಸ್ಟ್ರಾರ್ ಗಳು, ಲೀಡ್ ಮ್ಯಾನೇಜರ್ ಗಳು, ವ್ಯವಹಾರಕ್ಕೆ ಸಿದ್ದವಾಗಿರುವ ಕಂಪನಿಗಳು ಮುಂತಾದವರು ನೊಂದಾಯಿಸಿಕೊಳ್ಳಬೇಕು. ತಮ್ಮ ಕುಂದು ಕೊರತೆಗಳು ಏನಾದರೂ ಇದ್ದಲ್ಲಿ ಗ್ರಾಹಕರು ಸೆಬಿಯನ್ನು ಸಂಪರ್ಕಿಸಿ ನ್ಯಾಯ ಪಡೆದುಕೊಳ್ಳಬಹುದು. ಇದರಲ್ಲಿ ಎಲ್ಲಾ ತರಹದ ಸುಮಾರು ೫೦೦೦ ಕಂಪನಿಗಳು ನೊಂದಾಯಿಸಲ್ಪಟ್ಟಿರುತ್ತದೆ ಮತ್ತು ವಹಿವಾಟಿಗೆ ಲಭ್ಯವಾಗಿವೆ. ನಮ್ಮಲಿ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಮತ್ತು ಮುಂಬೈ ಸ್ಟಾಕ್ ಎಕ್ಸ್ ಚೆಂಜ್ ಎಂಬ ಎರಡು ಮುಖ್ಯ ಕೆಂದ್ರಗಳಿವೆ. ಅನೇಕ ರಾಜ್ಯಗಳಲ್ಲಿ ಇರುವ ಸ್ಟಾಕ್ ಎಕ್ಸ್ ಚೆಂಜ್ ವಿನಿಮಯ ಕೆಂದ್ರಗಳು ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.
ನೀವು ಕೆಲವು ವರ್ಷಗಳ ಹಿಂದೆ ನಡೆದ ಸತ್ಯಂ ಕಂಪನಿಯ ಅವ್ಯವಹಾರವನ್ನು ಗಮನಿಸಿದ್ದೀರಿ. ಅಂತಹ ಶೇರಿನಲ್ಲಿ ನೀವು ಹಣ ಹೂಡಿದ್ದರೆ ನಿಮಗೆ ನಷ್ಟವುಂಟಾಗಿರುತ್ತದೆ. ಅಂದು ಸುಮಾರು ೪೦೦-೪೫೦ ರೂಪಾಯಿಗಳಲ್ಲಿದ್ದ ಆ ಕಂಪನಿಯ ಶೇರು ಅದರ ಅವ್ಯವಹಾರ ಬಯಲಾಗುತ್ತಿದ್ದಂತೆ ಒಂದೆರೆಡು ದಿನಗಳಲ್ಲಿ ಅದು ಕೇವಲ ೬ ರೂಪಾಯಿಗೆ ಬಂದಿತ್ತು. ಸತ್ಯಂ ಶೇರುಗಳನ್ನು ೬ ರೂಪಾಯಿಗಳಿಗೆ ಆಂದು ಕೊಂಡವರಿಗೆ ಈಗ ೬೫ ರೊಪಾಯಿಗಳ ಲಾಭದಲ್ಲಿಇದ್ದಾರೆ. (ಈಗ ಅದು ಸುಮಾರು ೭೦-೮೦ ರೂಪಾಯಿಗಳ ಹತ್ತಿರ ಇದೆ.) ಶೇರು ಮಾರುಕಟ್ಟೆಯಲ್ಲಿನ ವ್ಯವಹಾರ ಈ ರೀತಿ ಇರುತ್ತದೆ. ಶೇರಿನ ಏರಿಳಿತ ಇಲ್ಲಿ ಅತ್ಯಂತ ಸಾಮಾನ್ಯ. ಹಾಗಾಗಿ ಹೂಡಿಕೆ ಮಾಡುವವರು ಮೈ ಎಲ್ಲಾ ಕಣ್ಣಾಗಿರಿಸಿಕೊಂಡು ಈ ಶೇರು ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು ಅತೀ ಮುಖ್ಯ.
ನೀವು ಹರ್ಷದ್ ಮೆಹ್ತ ಎಂಬ ವ್ಯಕ್ತಿಯನ್ನೂ ಸಹ ಈ ಸಮಯದಲ್ಲಿ ಜ್ಞಾಪಕ ಮಾಡಿಕೊಳ್ಳಬಹುದು. ೧೯೯೨ರಲ್ಲಿ ಅತೀ ದೊಡ್ಡ ಹಗರಣವಾಗಿ ಅದು ಗುರುತಿಕೊಂಡಿತ್ತು. ಸುಮಾರು ೫೦೦೦ ಕೋಟಿಗಳ ಅವ್ಯವಹಾರ ಅದಾಗಿತ್ತು. ಆ ವ್ಯಕ್ತಿ ಈಗ ಇಲ್ಲ. ಅವರು ೨೦೦೨ ರಲ್ಲಿ ಇಹಲೋಕ ಸೇರಿಕೊಂಡರು. ಕೇತನ್ ಪಾರೇಖ್ ಎಂಬ ಇನ್ನೊಂದು ಹಗರಣವೂ ಸಹ ಅತ್ಯಂತ ದೊಡ್ಡ ಸುದ್ದಿ ಮಾಡಿತ್ತು.
ಇದರಲ್ಲಿ ಹಣ ಹೂಡುವುದು ಹೇಗೆ? ಯಾರು ಹೂಡ ಬಹುದು? ನಾವು ಹೇಗೆ ಒಂದು ಕಂಪನಿಯ ಶೇರುಗಳನ್ನು ಕೊಳ್ಳುವುದು? ಎಲ್ಲಿ ಕೊಳ್ಳುವುದು? ಇದಕ್ಕೆ ಎಷ್ಟು ಬಂಡವಾಳ ಬೇಕು? ಎಂಬ ಅನೇಕ ಪ್ರಶ್ನೆಗಳು ಸಾಮಾನ್ಯರನ್ನು ಬಾಧಿಸಬಹದು. ಇದನ್ನು ಕಲಿಯುವುದು ಹೇಗೆ? ಎಂಬ ನರೆಂಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. (ಮಿಕ್ಕಿದ್ದು ನಾಳೆಗೆ)
Saturday, 16 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೫
ಕಳೆದ ಸಂಚಿಕೆಯಿಂದ
ನಿಮ್ಮಲ್ಲಿ ಹೆಚ್ಚಿನ ಹಣ ಇದೆ ಎಂದು ಎಲ್ಲಾ ಹಣವನ್ನೂ ಈ ಶೇರು ಮಾರುಕಟ್ಟೆಯಲ್ಲಿ ಹೂಡುವುದು ಜಾಣತನದ ಕೆಲಸವಲ್ಲ. ಹೂಡಿಕೆಯ ಮೊದಲು ನೀವು ಯಾವ ವಯಸ್ಸಿನಲ್ಲೀದ್ದೀರಿ ಮತ್ತು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಅರ್ಹರಿದ್ದೀರಿ ಎಂಬುದೂ ಬಹಳ ಮುಖ್ಯ. ಉದಾಹರಣೆಗೆ ನೀವು ೩೦ ವರ್ಷಗಳ ಒಳಗಿದ್ದರೆ ನೀವು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಬಹುದು. ನಿಮ್ಮಲ್ಲಿರುವ ಹಣದಲ್ಲಿ ಹೆಚ್ಚಿನ ಭಾಗವನ್ನು (ಸುಮಾರು ೬೦-೭೦% ಹಣವನ್ನು) ಶೇರು ಮಾರುಕಟ್ಟೆಯಲ್ಲಿ ಹೂಡಬಹುದು ಮತ್ತು ಉಳಿದ ಹಣವನ್ನು ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಲ್ಲಿ ಇಡಬಹುದು. ಆದರೆ ನಿಮಗೆ ೬೦ ವಷಗಳಾಗಿದ್ದರೆ ನೀವು ನಿಮ್ಮ ಎಲ್ಲಾ ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಬಾರದು. (ಸುಮಾರು ೨೫-೩೦%) ಹಣವನ್ನು ಶೇರು ಮಾರುಕಟ್ಟೆಯಲ್ಲಿ ಹೂಡಿ ಉಳಿದ ಹಣವನ್ನು ಬ್ಯಾಂಕ್ ನಲ್ಲಿ ನಿಶ್ಚಿತ ಠೇವಣಿಯಲ್ಲಿ ಇಡಬೇಕು. ಇದು ಒಂದು ಉದಾಹರಣೆ ಮಾತ್ರ. ನೀವು ಎಷ್ಟು ಹಣ ಹೂಡಬಹುದು ಮತ್ತು ನೀವು ಎಷ್ಟು ರಿಸ್ಕ್ ತೆಗೆದುಕೊಳ್ಳಲು ಅರ್ಹರಿದ್ದೀರಿ ಎಂಬುದು ಎಲ್ಲರಿಗಿಂತ ನಿಮಗೇ ಹೆಚ್ಚು ತಿಳಿದಿರುತ್ತದೆ.
ಅನೇಕ ಹಣಕಾಸು ತಜ್ಞರು ಯಾವಾಗಲೂ ಒಂದು ಮಾತು ಹೇಳುತ್ತಾರೆ. ಅದು ಬಹಳ ಮುಖ್ಯ ಕೂಡ ಹೌದು. ಮೊದಲು ನಿಮ್ಮ ಅವಶ್ಯಕತೆಗೆ ಹಣವನ್ನು ತೆಗೆದು ಇಡಿ. ಅದು ೩-೪ ತಿಂಗಳ ನಿಮ್ಮ ಮನೆಯ ಪ್ರತಿ ತಿಂಗಳ ಖರ್ಚಿನಷ್ಟಿರಬೇಕು. ನಂತರ ಪ್ರತಿ ತಿಂಗಳೂ ನಿಮಗೆ ಒಂದು ನಿಶ್ಚಿತವಾದ (ಫಿಕ್ಸೆಡ್ ಇನ್ ಕಂ) ಹಣವನ್ನು ಬರುವ ಹಾಗೆ ಮಾಡಿಕೊಳ್ಳಿ. ಅದು ನಿಮ್ಮ ಪ್ರತಿ ತಿಂಗಳ ಮನೆಯ ಖರ್ಚಿನಷ್ಟಿರಬೇಕು. ನಂತರ ಉಳಿದ ಹಣವನ್ನು ನೀವು ನಿಮ್ಮ ಹಣವನ್ನು ಬೆಳೆಸಲು ಉಪಯೋಗಿಸಿ. ಇದು ಅತ್ಯಂತ ನಿಜ ಕೂಡ ಹೌದು. ನಿಮಗೆ ವ್ಯವಹಾರದಲ್ಲಿ ಏನೇ ನಷ್ಟವುಂಟಾದರೂ ನಿಮ್ಮ ಮನೆ ಸುವ್ಯವಸ್ಥಿತವಾಗಿ ನಡೆಯಬೇಕು. ಅದಕ್ಕೆ ಯಾವುದೇ ತೊಂದರೆಯಾಗಬಾರದು. ಇದು ಅತ್ಯಂತ ಮುಖ್ಯ.
ನಮ್ಮಲ್ಲಿ ಹೆಚ್ಚಿನ ಹಣ ಇಲ್ಲ, ಹಾಗಾಗಿ ನಾವು ಈ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವ ಹಾಗಿಲ್ಲ ಎನ್ನುವ ಹಾಗಿಲ್ಲ. ಈಗ ನೀವು ಒಂದು ಶೇರನ್ನೂ ಕೂಡ ಖರೀದಿ ಮಾಡಬಹುದು. ಪ್ರತಿ ತಿಂಗಳೂ ಒಂದೊಂದು ಶೇರನ್ನು ಖರೀದಿಸಿ ನಿಮ್ಮ ಬಳಿ ಇಟ್ಟುಕೊಂಡು ಒಳ್ಳೆಯ ಬೆಲೆ ಬಂದಾಗ ಅದನ್ನು ಮಾರಬಹುದು. ನೀವು ಒಂದು ಸಲ ಈ ವ್ಯವಹಾರಕ್ಕೆ ಕಾಲಿಟ್ಟ ನಂತರ ನಿಮಗೆ ಅನೇಕ ಕಲ್ಪನೆಗಳು ಬರುತ್ತದೆ. ಅದರಂತೆ ಮುಂದುವರೆಸಿ.

Friday, 15 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೪
ಕಳೆದ ಸಂಚಿಕೆಯಿಂದ
ಈ ಶೇರು ಮಾರುಕಟ್ಟೆಯಲ್ಲಿ ಕೆಲವು ನಿಮಿಷಗಳ ಅಂತರದಲ್ಲಿ ಹಣ ಮಾಡಬಹುದು. ಕೆಲವರು ದಿನಗಳ ಅಂತರದಲ್ಲಿ, ಮತ್ತೆ ಕೆಲವರು ಅಲ್ಪಾವಧಿ ಹೂಡಿಕೆ/ಮಧ್ಯಾವದಿ ಹೂಡಿಕೆ ಮತ್ತು ದೀರ್ಘಕಾಲದಲ್ಲಿ ವೈಜ್ಞಾನಿಕವಾಗಿ ಹಣ ಹೂಡಿಕೆ ಮಾಡಿ ಲಾಭಗಳಿಸಿದವರಿದ್ದಾರೆ. ಈ ವ್ಯವಹಾರವನ್ನು ಜೂಜೆಂದು ಪರಿಗಣಿಸಿ ಸಾಕಷ್ಟು ಹಣವನ್ನು ಕೆಲವೇ ನಿಮಿಷಗಳ ಅಂತರದಲ್ಲಿ ಕಳೆದುಕೊಡವರಿದ್ದಾರೆ. ನೀವು ಹಣವನ್ನು ಹೂಡುವ ಕಂಪನಿಯ, ಹಳೆಯ ಕಂಪನಿಯಾಗಿದ್ದರೆ ಆ ಕಂಪನಿಯ ಬಗ್ಗೆ ಕೆಲವೊಂದು ಅಂಶಗಳನ್ನಾದರೂ ತಿಳಿದುಕೊಂಡಿರಬೇಕು. ನೀವು ಹೂಡುತ್ತಿರುವ ಕಂಪನಿಯು ಎಷ್ಟು ವರ್ಷ ಹಳೆಯದು? ಅದನ್ನು ಸ್ಥಾಪಿಸಿದವರು ಯಾರು? ಅದರಲ್ಲಿ ಯಾರು ಯಾರು ಪಾಲುದಾರರಾಗಿದ್ದಾರೆ? ಅದರಲ್ಲಿ ಆ ಕಂಪನಿಯ ಮುಖ್ಯಸ್ಥರು ಎಷ್ಟು ಹಣವನ್ನು ಹೂಡಿದ್ದಾರೆ? ನೀವು ಹೂಡುತ್ತಿರುವ ಕಂಪನಿಯ ಬ್ಯಾಲೆನ್ಸ್ ಶೀಟ್ ಹೇಗಿದೆ? ಅವರಿಗೆ ಸಾಲ ಕೊಟ್ಟಿರುವ ಬ್ಯಾಂಕ್ ಯಾವುದು? ಅವರು ಯಾರಿಗೂ ಸಾಲ ಕೊಡಬೇಕಾಗಿಲ್ಲದಿದ್ದಿರೆ, ಅವರ ಹತ್ತಿರ ಈಗ ಎಷ್ಟು ಹಣ ಉಳಿದಿದೆ? ಅವರು ಆ ಹಣವನ್ನು ಯಾವುದಕ್ಕೆ ಉಪಯೋಗಿಸುತ್ತಿದ್ದಾರೆ. ಅವರು ತಮ್ಮ ಲಾಭವನ್ನು (ಡಿವಿಡೆಂಟ್) ತಮ್ಮ ಶೇರುದಾರರಿಗೆ ಹಂಚುತ್ತಿದ್ದಾರೆಯೆ? ಹಂಚುತ್ತಿದ್ದರೆ ಎಷ್ಟು? ಮ್ಯೂಚುವಲ್ ಫಂಡ್ ಮತ್ತು ವಿದೇಶಿ ಹೂಡಿಕೆದಾರರು ಇದರಲ್ಲಿ ಹೂಡಿಕೆ ಮಾಡಿದ್ದಾರೆಯೆ? ಮಾಡಿದ್ದರೆ, ಎಷ್ಟು ಮಾಡಿದ್ದಾರೆ? ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿದು ಹೂಡಿಕೆ ಮಾಡಬೇಕಾಗುವುದು.
ನೀವು ಒಂದು ಹೊಸ ಕಂಪನಿಯಲ್ಲಿ ಹಣವನ್ನು ಹೂಡುವವರಾಗಿದ್ದರೆ ಕೆಲವು ಅಂಶಗಳನ್ನು ಕಂಪನಿಯ ಬಗ್ಗೆ ತಿಳಿದುಕೊಂದಿರಬೇಕಾದದ್ದು ಬಹಳ ಅತ್ಯವಶ್ಯಕ. ಉದಾ: ಕಂಪನಿಯನ್ನು ಸ್ಥಾಪಿಸುತ್ತಿರುವವರು ಯಾರು? ಅದರಲ್ಲಿ ಯಾರು ಯಾರು ಪಾಲುದಾರರಾಗಿದ್ದಾರೆ? ಮ್ಯೂಚುವಲ್ ಫಂಡ್ ಮತ್ತು ವಿದೇಶಿ ಹೂಡಿಕೆದಾರಾರು ಇದರಲ್ಲಿ ಹೂಡಿಕೆ ಮಾಡುತ್ತಿದ್ದಾರೆಯೆ? ಮಾಡುತ್ತಿದ್ದರೆ, ಎಷ್ಟು ಮಾಡುತ್ತಿದ್ದಾರೆ? ಅವರಿಗೆ ಯಾವ ಬ್ಯಾಂಕ್ ಸಾಲ ಕೊಟ್ಟಿದೆ? ಅವರು ತಯಾರಿಸುತ್ತಿರುವ ಪದಾರ್ಥಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆಯಾ? ಅವರು ಕಂಪನಿಯಲ್ಲಿ ಎಷ್ಟು ಹಣವನ್ನು (ಸ್ವಂತ ಹಣ) ಹೂಡಿದ್ದಾರೆ? ಅವರು ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವ ಕಾರಣವಾದರೂ ಏನು? ಯಾವುದೇ ಕಂಪನಿಯಾದರೂ ಮಾರುಕಟ್ಟೆಯನ್ನು ಪ್ರವೇಶಿಸುವ ಮೊದಲು ಸುಮಾರು ೩ ವರ್ಷಗಳಷ್ಟು ಹಳೆಯದಾಗಿರಬೇಕು ಮತ್ತು ಅದು ಆ ಮೂರು ವರ್ಷವೂ ಲಾಭದಲ್ಲಿ ಇರಬೇಕು. ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ತಿಳಿದುಕೊಂಡಿರಬೇಕು.
ಯಾರೋ ಹೇಳಿದರೆಂದು ಮತ್ತು ಕಂಪನಿಯ ಬಗ್ಗೆ ಜಾಹಿರಾತುಗಳನ್ನು ಪತ್ರಿಕೆ/ಟಿ.ವಿ.ಯಲ್ಲಿ ಓದಿ/ನೋಡಿ/ಕೇಳಿ ಹಣವನ್ನು ಕುರುಡು ನಂಬಿಕೆಯಿಂದ ಹೂಡಬಾರದು. ಯಾವುದೇ ಕೆಲಸ ಮಾಡುವುದಕ್ಕೂ ಒಂದು ರೀತಿ ನೀತಿ ಇರುತ್ತದೆ. ಅದನ್ನು ಪಾಲಿಸಿದರೆ ನಮಗೆ ಹೆಚ್ಚಿನ ನಷ್ಟವುಂಟಾಗುವದನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಅದರಲ್ಲಿ ಲಾಭವನ್ನುಗಳಿಸಲು ಸಹಾಯಕವಾಗುವುದು.

Thursday, 14 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೩
ಕಳೆದ ಸಂಚಿಕೆಯಿಂದ
೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫ ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.
ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು. ಪ್ರತಿ ಶೇರಿನ ಬೆಲೆ ೧೦ ರೂಪಾಯಿಗಳು. ಆ ನಿಮ್ಮ ೧೦೦ ಶೇರುಗಳು ನಿಮಗೆ ವರ್ಷಗಳು ಕಳೆದಂತೆ ಹೆಚ್ಚು ಬೋನಸ್ ಶೇರುಗಳಾಗಿ ಪರಿವರ್ತನೆ ಯಾಗಿ ಮತ್ತು ಆ ಶೇರುಗಳು ಮುಖಬೆಲೆ ಸೀಳಿಕೆ ಯಾಗಿ (ಸ್ಪ್ಲಿಟ್) ನಿಮ್ಮ ಹತ್ತಿರ ಈಗ ೧,೧೦೦ ಶೇರುಗಳಾಗುತ್ತಿತ್ತು. ಇಂದಿನ ರಿಲಯನ್ಸ್ ಶೇರುಗಳ ಬೆಲೆ ಸುಮಾರು ೭೦೦ ರೂಪಾಯಿಗಳು. ಅಂದರೆ ೧,೧೦೦ x ೭೦೦ = ೭,೭೦,೦೦೦ ರೂಗಳು. ನೀವು ಲಕ್ಷಾಧಿಪತಿಯಾಗುತ್ತಿದ್ದಿರಿ. ನಿಮ್ಮನ್ನು ನೀವು ನಂಬಲ್ಲಿಕ್ಕೇ ಆಗುತ್ತಿಲ್ಲ ಅಲ್ವಾ? ಇನ್ನು ನೀವು ಅಂದು ೧೦,೦೦೦ ರೂಪಾಯಿಗಳನ್ನು ಹೂಡಿದ್ದರೆ???. ಹೌದು, ನಿಜ. ಇದು ಶೇರುಮಾರುಕಟ್ಟೆಯ ರೀತಿ, ರಿವಾಜು, ಬೆಳವಣಿಗೆಯ ಪರಿ. ಇದೇ ರೀತಿ ಎ.ಬಿ.ಬಿ, ಬಿ.ಹೆಚ್.ಇ.ಎಲ್, ಇನ್ಫೋಸಿಸ್, ವಿಪ್ರೋ, ಎಲ್ ಅಂಡ್ ಟಿ, ಆಕ್ಸಿಸ್ ಬ್ಯಾಂಕ್, ಟೈಟಾನ್, ಐ.ಟಿ.ಸಿ, ಎಸ್.ಬಿ.ಐ, ಒ.ಎನ್.ಜಿ.ಸಿ, ಬಜಾಜ್, ಮುಂತಾದ ಕಂಪನಿಗಳಲ್ಲಿ ನೀವು ದೀರ್ಘಾವದಿಯಲ್ಲಿ ಹಣ ಹೂಡಿದ್ದರೆ ನೀವು ಇಂದು ಕೋಟ್ಯಾಧಿಪತಿಯಾಗುತ್ತಿದ್ದಿರಿ. ನಿಮಗೆ ಇದು ಗೊತ್ತಿದ್ದರೆ ನೀವೂ ಒಂದು ಕೈ ನೋಡುತ್ತಿದ್ದಿರಿ, ಅಲ್ವಾ? ಸಮಾಧಾನ...... ನೀವು ಈಗಲೂ ಇದರ ಬಗ್ಗೆ ಯೋಚಿಸಬಹುದು.
ಮಾರುಕಟ್ಟೆ ನಿಮಗೆ ಅನೇಕ ಅವಕಾಶಗಳನ್ನು ಈ ಹಿಂದೆಯೂ ಕೊಡುತ್ತಲೇ ಬಂದಿದೆ, ಮುಂದೆಯೂ ಕೊಡುತ್ತದೆ. ಆ ಅವಕಾಶಗಳನ್ನು ಸರಿಯಾಗಿ ಗುರುತಿಸಿ ನಮ್ಮ ಅನುಕೂಲಕ್ಕಾಗಿ ಬಳಸಿಕೊಳ್ಳುವುದು ಅವರವರ ಸ್ವಂತ ನಿರ್ಧಾರ. ಒಂದು ಟೆಂಟಿನ ಮನೆಯನ್ನು ಕಟ್ಟುವುದಕ್ಕೆ ಒಂದು ಗಂಟೆ ಸಮಯ ಸಾಕು. ಗುಡಿಸಿಲಿನ ಮನೆ ಕಟ್ಟುವುದಕ್ಕೆ ಒಂದು ದಿನ ಸಾಕು. ಶೀಟಿನ ಮನೆ ಕಟ್ಟುವುದಕ್ಕೆ ಮೂರು ದಿನ ಸಾಕು. ಒಂದು ಸಧೃಡ ಮನೆಯನ್ನು ಕಟ್ಟುವುದಕ್ಕೆ ಸುಮಾರು ೮-೯ ತಿಂಗಳು ಬೇಕಾಗಬಹುದು. ಒಂದು ದೊಡ್ಡ ಬಂಗಲೆ ಕಟ್ಟಲು ೩-೪ ವರ್ಷವೇ ಬೇಕಾಗಬಹುದು. ಕೊಟೆಯನ್ನು ಕಟ್ಟಲು ೨೫-೩೦ ವರ್ಷವೇ ಬೇಕಾಗಬಹುದು. ಹಾಗೆಯೇ ಒಂದು ಸುಂದರ ಸಧೃಡ ಬದುಕನ್ನು ಕಟ್ಟಿಕೊಟ್ಟಲು ತುಂಬಾ ಸಮಯ ಹಿಡಿಯುತ್ತದೆ. ಶೇರು ಮಾರುಕಟ್ಟೆಯಲ್ಲಿ ಹಣ ಹೂಡುವವರಿಗೆ ತಾಳ್ಮೆ ಮತ್ತು ಸಹನೆ ಅತ್ಯಂತ ಅವಶ್ಯಕ. (ಮಿಕ್ಕಿದ್ದು ನಾಳೆಗೆ)

Wednesday, 13 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೨

ನಮ್ಮ ದೇಶದ ಗುಜರಾತಿಗಳು ಮತ್ತು ಮಾರ್ವಾಡಿಗಳು ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವುದು ಹೆಚ್ಚಾಗಿ ಕಂಡುಬರುತ್ತದೆ. ನಮ್ಮ ಕನ್ನಡಿಗರು ಹೆಚ್ಚಾಗಿ ಬ್ಯಾಂಕ್/ಅಂಚೆ ಕಛೇರಿ ಗಳಲ್ಲಿ ನಿಶ್ಚಿತ ಠೇವಣಿಗಳಲ್ಲಿ ಹಣ ಇಟ್ಟು ಅವರು ಕೊಡುವ ೧೦-೧೧% ವಾರ್ಷಿಕ ಬಡ್ಡಿಗೆ ತೃಪ್ತಿಪಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಚಿನ್ನವನ್ನು ಒಡವೆ ರೂಪದಲ್ಲಿ ಇಟ್ಟುಕೊಂಡು ತಮ್ಮ ಕಷ್ಟ ಕಾಲದಲ್ಲಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುತ್ತಾರೆ. ಕನ್ನಡಿಗರು ಈ ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದು ಬಹಳ ಕಡಿಮೆ. ಒಂದು ಜ್ಞಾನದ ಕೊರತೆಯಾದರೆ, ಮತ್ತೊಂದು ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಹೆಚ್ಚಾಗಿ ಕನ್ನಡಿಗರು ಇಷ್ಟಪಡುವುದಿಲ್ಲ. ಆದ ಕಾರಣ ನಮ್ಮಲ್ಲಿ ಈ ಶೇರು ಮಾರುಕಟ್ಟೆಯ ಬಗ್ಗೆ ಕನ್ನಡದಲ್ಲಿ ಬಂದಿರುವ ಪುಸ್ತಕಗಳು ಬಹಳ ಕಡಿಮೆ. ಕೆಲವು ಪತ್ರಿಕೆಗಳು ಲೇಖನಗಳನ್ನು ಆಗಾಗ ಪ್ರಕಟಿಸುತ್ತವೆ. ಆದರೆ ಅದು ಬಹಳ ಕಡಿಮೆ. ನಮ್ಮ ಕನ್ನಡಿಗರು ಈ ಮಾರುಕಟ್ಟೆಯಿಂದ ದೂರ ಇರಲು ಇದೂ ಸಹ ಒಂದು ಕಾರಣವಿರಬಹುದು. ಆಂಗ್ಲ ಭಾಷೆಯಲ್ಲಿ ಈ ಮಾರುಕಟ್ಟೆಯ ಬಗ್ಗೆ ಸಂಭೃದ್ದ ಮಾಹಿತಿ ಇದೆ. ಗೊಗಲ್ ನಲ್ಲಿಯೂ ಸಹ ಅನೇಕ ಮಾಹಿತಿ ಪಡೆಯಬಹುದು.
ಪ್ರಪಂಚದ ೩ನೇ ಅತೀ ದೊಡ್ಡ ಶ್ರೀಮಂತ ವಾರನ್ ಬಫೆಟ್ ಶೇರು ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಸಂಪಾದಿಸಿರುವ ವ್ಯಕ್ತಿ. ಇವರ ಹೂಡಿಕೆ ಕಂಪನಿಯ ಹೆಸರು " ಬರ್ಕ್ ಶೈರ್ ಹಾಥ್ ವೇ ’ ಇವರು ತಮ್ಮ ೧೩-೧೪ನೇ ವಯಸ್ಸಿನಲ್ಲಿ ಈ ಶೇರು ಮಾರುಕಟ್ಟೆಯ ವ್ಯವಹಾರದಲ್ಲಿ ಇಳಿದು, " ಬಫೆಟ್ ಲೀ " ಮುಂತಾದ ಕೆಲವು ಕಂಪನಿಗಳನ್ನೂ ಸೃಷ್ಟಿಸಿದ್ದಾರೆ. ಭಾರತದಲ್ಲಿ ಶೇರು ಮಾರುಕಟ್ಟೆಯ ರಾಜನೆಂದು ಪ್ರಸಿದ್ದಿಗೆ ಬಂದವರು ರಾಕೇಶ್ ಜುಂಜುನ್ ವಾಲ. ಇವರು ಅತಿ ದೊಡ್ಡ ಮಾರುಕಟ್ಟೆಯ ವಿಶ್ಲೇಷಕರು ಹಾಗೂ ನಮ್ಮ ಶೇರು ಮಾರುಕಟ್ಟೆಯ ದೊಡ್ದ ಹೂಡಿಕದಾರರಲ್ಲಿ ಒಬ್ಬರು.
ದೂರದಿಂದ ಈ ಶೇರುಮಾರುಕಟ್ಟೆಯನ್ನು ನೋಡುವವರಿಗೆ ಇದೊಂದು ಜೂಜು ತಾಣವಾಗಿಯೂ, ಹತ್ತಿರದಿಂದ ನೋಡುವವರಿಗೆ ಇದೊಂದು ಹಣ, ಸಂಪತ್ತು ವೃದ್ದಿ ಮಾಡುವ ತಾಣವಾಗಿಯೂ ಕಾಣುತ್ತದೆ. ಇದರಲ್ಲಿ ಹಣ ತೊಡಗಿಸಿರುವ ಎಲ್ಲರೂ ಲಕ್ಷಾಧಿಪತಿಗಳೂ, ಕೋಟ್ಯಾಧಿಪತಿಗಳೂ ಆಗಿಲ್ಲ ಎಂಬುದೂ ಸಹ ಅಷ್ಟೇ ಸತ್ಯ. ಅನೇಕರು ತಾವು ಹೂಡಿದ ಹಣವೆಲ್ಲವನ್ನೂ ಕಳೆದುಕೊಂಡು ರಸ್ತೆಗೆ ಬಂದವರೂ ಇದ್ದಾರೆ ಎಂಬುದೊ ಸಹ ಸತ್ಯ. ಹಾಗದರೆ ಇದು ಏನು? ಇದೊಂದು ಮಾಯಾ ಜಿಂಕೆಯೇ? ಅಲ್ಲ, ಇದು ಎಲ್ಲಾ ತರಹದ ವ್ಯಾಪಾರದಂತೆಯೇ ಇದೂ ಸಹ ಒಂದು ವ್ಯವಹಾರ. ಎಲ್ಲ ವ್ಯವಹಾರದಲ್ಲೂ ಲಾಭ, ನಷ್ಟ ಇರುವಂತೆ ಇದರಲ್ಲಿಯೂ ಲಾಭ, ನಷ್ಟ ಎಲ್ಲವೂ ಇದೆ. (ಮಿಕ್ಕಿದ್ದು ನಾಳೆಗೆ)
Tuesday, 12 June 2012
ಶೇರು ಮಾರುಕಟ್ಟೆ : ಸರಣಿ ಲೇಖನ ಭಾಗ -೧
ಹಣ ಯಾರಿಗೆ ಬೇಡ? ಮನುಷ್ಯ ಹುಟ್ಟಿದಾಗಿನಿಂದ ಸಾಯುವ ವರೆಗೂ ಮತ್ತು ಅವನು ಸತ್ತಮೇಲೆ ಅವನ ಅಂತ್ಯಕ್ರಿಯಯನ್ನು ಮಾಡುವ ಅವನ ಮನೆಯವರಿಗೂ ಹಣ ಬೇಕೇಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾಮಕರಣದಿಂದ ತಿಥಿಯವರೆಗೆ. ನಾವು ನೀವೆಲ್ಲರೂ ನಮ್ಮ ಜೀವಿತ ಅವಧಿಯಲ್ಲಿ ಹಣವನ್ನು ನಮ್ಮ ಇತಿಮಿತಿಯಲ್ಲಿ ಸಂಪಾದಿಸುತ್ತೇವೆ. ಕೆಲವರು ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ಸ್ವಂತ ಉದ್ಯೋಗವನ್ನು ಮಾಡಿ, ಮತ್ತೆ ಕೆಲವರು ವ್ಯಾಪಾರ ವಹಿವಾಟು ಮಾಡಿ, ಮತ್ತೆ ಕೆಲವರು ಹಣದಿಂದ ಹಣವನ್ನು ಸಂಪಾದಿಸುತ್ತಾರೆ. ಮೊದಲ ಮೂರು ನಮಗೆಲ್ಲರಿಗೂ ತಿಳಿದ ವಿಷಯವೇ ಆಗಿದೆ. ಕೊನೆಯದಾದ ಹಣದಿಂದ ಹಣವನ್ನು ಸಂಪಾದಿಸುವುದು ಹೇಗೆ ಎಂಬುದರ ಬಗ್ಗೆ ಸ್ವಲ್ಪ ಗಮನ ಕೊಡೋಣ. ಇದನ್ನು ಬಂಡವಾಳ ಹೂಡಿಕೆ ಎಂದೂ ಸಹ ಕರೆಯುತ್ತಾರೆ. ಬಂಡವಾಳ ಎಂದರೆ ಏನು ಎಂಬುದರ ಬಗ್ಗೆ ಸ್ವಲ್ಪ ಚಿಂತನೆಯನ್ನು ಮಾಡೋಣವೇ?
ಬಂಡವಾಳ ಹೂಡುವುದೆಂದರೆ ಜನಸಾಮಾನ್ಯರಲ್ಲಿ ಅದು ಲಕ್ಷ/ಕೋಟಿಗಳ ರೂಪದಲ್ಲಿ ಇರುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಇದು ಸುಳ್ಳು. ಒಂದು ರೀತಿಯಲ್ಲಿ ಹೇಳಬೇಕೆಂದರೆ ಜನ ಸಾಮಾನ್ಯರೂ ಸಹ ಸ್ವಲ್ಪ ಮಟ್ಟಿನ ಬಂಡವಾಳ ಹೂಡಿಕೆದಾರರೇ. ಕೆಲವರು ತಮ್ಮ ಹೆಚ್ಚುವರಿ ಸಂಪಾದನೆಯನ್ನು ಅಥವಾ ತಮ್ಮ ಉಳಿತಾಯದ ಹಣವನ್ನು ನಿಶ್ಚಿತ ಠೇವಣಿಯಾಗಿ ಬ್ಯಾಂಕ್/ಅಂಚೆ ಕಚೇರಿಯಲ್ಲಿ ಇಟ್ಟು ಅದರಲ್ಲಿ ಬರುವ ಬಡ್ದಿಯನ್ನು ಪಡೆಯುತ್ತಾರೆ. ಇದೂ ಸಹ ನಿಮ್ಮ ಹಣ ವೃದ್ದಿಸುತ್ತದೆ. ಭೂಮಿಯ ಮೇಲೆ ಹಾಕಿದ ಹಣ ನಿಮ್ಮ ಮೂಲ ಹಣವನ್ನು ಅನೇಕ ಬಾರಿ ವೃದ್ದಿಸುತ್ತದೆ. ಚಿನ್ನ, ಬೆಳ್ಳಿಯ ಮೇಲೆ ಹಾಕಿದ ಹಣ ನಿಮಗೆ ದುಪ್ಪಟ್ಟು, ತಿಪ್ಪಟ್ಟಾಗುತ್ತದೆ. ಶೇರು/ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿದ ಹಣ ನಿಮಗೆ ಲಾಭವನ್ನು ತಂದುಕೊಡುತ್ತದೆ.
ಬ್ಯಾಂಕಿ/ಅಂಚೆ ಕಛೇರಿಯಲ್ಲಿ ಹಣ ಇಟ್ಟು ಬಡ್ಡಿ ತೆಗೆದುಕೊಳ್ಳುವುದು, ಭೂಮಿಯ ಮೇಲೆ ಹಣವನ್ನು ವಿನಿಯೋಗಿಸುವುದು, ಚಿನ್ನ ಬೆಳ್ಳಿಯ ಮೇಲೆ ಹಣವನ್ನು ಹೂಡಿಕೆ ಮಾಡುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಈ ಶೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್ ಬಗ್ಗೆ ನಮ್ಮ ಕನ್ನಡಿಗರಿಗೆ ಹಿಚ್ಚಿನ ಮಾಹಿತಿ ಇಲ್ಲ. ಕೇವಲ ಕನ್ನಡಿಗರಷ್ಟೇ ಅಲ್ಲ ನಮ್ಮ ಭಾರತ ದೇಶದಲ್ಲೂ ಸಹ ಈ ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿರುವವರು ಕೇವಲ ೨%. ನಮ್ಮ ಭಾರತ ದೇಶದ ಜನಸಂಖ್ಯೆಗೆ ಇಂದು ಸುಮಾರು ೧೨೦ ಕೋಟಿ, ಅದರಲ್ಲಿ ಶೇಕಡ ೨% ಎಂದರೆ ಅದು ಯಾವ ಮೂಲೆಗೆ. (ಮಿಕ್ಕಿದ್ದು ನಾಳೆಗೆ)

Saturday, 9 June 2012
ರೈತರ ಗೋಳು:
ನಮ್ಮ ರಾಜ್ಯ/ದೇಶದಲ್ಲಿ ಯಾವುದೇ ಸರ್ಕಾರ ಬಂದರೂ ನಮ್ಮದು ರೈತರ ಪರ ಸರ್ಕಾರ ಎಂದು ಹೇಳುತ್ತಲೇ ಅಧಿಕಾರಕ್ಕೆ ಬಂದಿದೆ. ನಿಜವಾಗಿ ರೈತರ ಪರ ಸರ್ಕಾರವೇ ಆದರೆ, ಸ್ವಾತಂತ್ರ್ಯ ಬಂದು ೬೫ ವರ್ಷಗಳಾದರೂ ನಮ್ಮ ರೈತರು ಯಾಕೆ ಉದ್ದಾರವಾಗಲಿಲ್ಲ? ಈಗಲೂ ನಮ್ಮ ದೇಶದಲ್ಲಿ ಒಂದು ಹೊತ್ತು ಊಟವೂ ಇಲ್ಲದೆ ನರಳುವರೆಷ್ಟೋ? ಇನ್ನು ನಮ್ಮ ರೈತರ ಪಾಡಂತೂ ಯಾವ ಶತೃವಿಗೂ ಬರಬಾರದು. ನಮ್ಮ ಅನೇಕ ರೈತರರು ಅವಿದ್ಯಾವಂತರು. ಸರಿಯಾದ ವ್ಯವಹಾರ ಜ್ಞಾನವೂ ಸಹ ಇಲ್ಲ. ಯಾರನ್ನೂ ನಂಬದ ಪರಿಸ್ಥಿತಿಗೆ ಅವರನ್ನು ತಂದು ಬಿಟ್ಟಿದೆ ಈ ಸಮಾಜ ಮತ್ತು ಸರ್ಕಾರ. ಅಭಿವೃದ್ದಿ ಕಾರ್ಯಗಳಿಗೆ ಭೂಮಿಯ ಕೊರತೆ ಊಂಟಾದರೆ ಸರ್ಕಾರಕ್ಕೆ ಮೊದಲು ಕಾಣ ಸಿಗುವುದು ನಮ್ಮ ರೈತರ ಭೂಮಿ. ಅಭಿವೃದ್ದಿಗಾಗಿ ಅವರ ಕೃಷಿಭೂಮಿಯನ್ನು ಸರ್ಕಾರ ಕಿತ್ತುಕೊಳ್ಳುತ್ತದೆ, ಮುಂದೆ ಅವರು ಅವರ ಜಮೀನಿನಲ್ಲೇ ಕೂಲಿ ಕೆಲಸ ಮಾಡಬೇಕಾದ ಅನಿವಾರ್ಯತೆ. ಕೃಷಿಭೂಮಿ ದಿನವೂ ಕಡಿಮೆಯಾಗುತ್ತಿದ್ದರೂ ಸರ್ಕಾರಕ್ಕೆ ಇದರ ಬಗ್ಗೆ ಚಿಂತೆ ಇಲ್ಲ. ಮತ್ತೊಂದೆಡೆ ಅವರು ಬೆಳೆದ ವಸ್ತುಗಳಿಗೆ ಸರಿಯಾದ ಬೆಲೆ ನಿಗದಿ ಮಾಡುವುದಿಲ್ಲ. ನೆರೆ ಬಂದು ಅವರ ಬೆಳೆಗಳಿಗೆ ಹಾನಿಯಾದರೆ ಅವರಿಗೆ ಪರಿಹಾರ ಸರಿಯಾಗಿ ಕೊಡುವುದಿಲ್ಲ. ಬರ ಬಂದರಂತೂ ಅವರನ್ನು ದೇವರೇ ಕಾಪಾಡಬೇಕು. ಇನ್ನು ಅವರಿಗೆ ಬ್ಯಾಂಕ್ ನಿಂದ ಸಾಲ ಸರಿಯಾಗಿ ದೊರಕುವುದಿಲ್ಲ, ದೊರಕಿದರೂ ಮಧ್ಯವರ್ತಿಗಳ ಕಾಟ. ಹೊರಗಿನಿಂದ ಸಾಲ ತಂದರೆ ಬಡ್ಡಿ ಕಟ್ಟಲಾಗದೆ ಅವರಿಗೆ ಆತ್ಮಹತ್ಯೆಯೇ ಪಾರಿಹಾರ. ರೈತ ವರ್ಷಕ್ಕೆ ಮೂರು ಬೆಳೆ ತೆಗೆಯಲು ಹೊರಟರೆ, ಅವನಿಗೆ ದಕ್ಕುವುದು ಕೇವಲ ಒಂದೊ, ಎರಡೋ. ಅದೂ ಸರಿಯಾಗಿ ಮಳೆಯಾದರೆ ಮಾತ್ರ. ನಮ್ಮ ದೇಶದ್ದು ಮಳೆ ಆದರಿತ ವ್ಯವಸಾಯ. ಮಳೆ ಇಲ್ಲ ಅಂದರೆ ಬೆಳೆ ಇಲ್ಲ. ಯಾರದೋ ಮಾತು ಕೇಳಿ ರಸಗೊಬ್ಬರವನ್ನು ಅಗತ್ಯಕ್ಕಿಂತ ಜಾಸ್ತಿ ಹಾಕಿ ಭೂಮಿಯಲ್ಲಿರುವ ಸತ್ವವನ್ನೇ ನಮ್ಮ ರೈತರು ಹಾಳುಮಾಡಿಕೊಂಡಿದ್ದಾರೆ. ನಮ್ಮ ರೈತರು ಸಾವಯುವ ಗೊಬ್ಬರವನ್ನು ಇನ್ನಾದರೂ ಉಪಯೋಗಿಸುವುದನ್ನು ಕಲಿಯಬೇಕು. ಎಲ್ಲದಕ್ಕಿಂತ ಹೆಚ್ಚಾಗೆ ಅವರು ಬೆಳೆದ ಬೆಳೆಗಳನ್ನು ಸರಿಯಾಗಿ ಸಂರಕ್ಷಿಸಿಡಲು ನಮ್ಮ ದೇಶದಲ್ಲಿ ಸರಿಯಾದ ಉಗ್ರಾಣಗಳಿಲ್ಲ ಎಂದರೆ ಅದಕ್ಕಿಂತ ದೊಡ್ಡ ವಿಪರ್ಯಾಸ ಇಲ್ಲ. ನಮ್ಮ ದೇಶದಲ್ಲಿ ಹೀಗೆ ಸುಮ್ಮನ ಕೊಳೆತ ಆಹಾರ ಧಾನ್ಯಗಳು ಸಾವಿರಾರು ಟನ್ ಗಳು. ಉಚ್ಚ ನ್ಯಾಯಾಲಯ ಕೂಡ ಇದನ್ನು ಸರಿಪಡಿಸಿ, ಅಲ್ಲದೇ ಹೀಗೆ ಆಹಾರ ಧಾನ್ಯಗಳು ಕೊಳೆತು ನಾಶವಗುವ ಬದಲು ಬಡವರಿಗೆ ಅದನ್ನು ಹಂಚಿ ಎಂದು ಆ ಮಾಡಿದ್ದರೂ ನಮ್ಮ ಸರ್ಕಾರಗಳಿಗೆ ಜಾಣ ಕಿವುಡು.
Friday, 8 June 2012
"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೩.
ಕಳೆದ ಸಂಚಿಕೆಯಿಂದ:
ವೈದ್ಯರು ನಮ್ಮದೇಶದಲ್ಲಿ ನೇತ್ರಗಳ ಕೊರತೆ ಬಹಳ ಇದೆ. ಸಾರ್ವಜನಿಕರು ತಾವು ಮರಣಹೊಂದಿದ ಮೇಲೆ ತಮ್ಮ ಕಣ್ಣುಗಳನ್ನು ಶರೀರದ ಜೊತೆ ಹೂಳುವ ಅಥವಾ ಸುಡುವ ಬದಲು ದಾನ ಮಾಡಿದರೆ, ಆ ಕಣ್ಣುಗಳಿಂದ ಇಬ್ಬರ ಅಂಧತ್ವ ನಿವಾರಿಸಬಹುದು ಎಂದು ವೈದ್ಯರು ಅನೇಕ ಬಾರಿ ಕರೆ ಕೊಟ್ಟಿರುತ್ತಾರೆ. ನಾಡಿನ ಗಣ್ಯರು ಮತ್ತು ಸಮಾಜದ ಕೆಲ ಬಂದುಗಳು ಈ ಕರೆಗೆ ಓಗೊಟ್ಟು ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ದಾನ ಮಾಡಿರುತ್ತಾರೆ. ಕರ್ನಾಟಕದಲ್ಲಿ ಈ ನೇತ್ರದಾನ ಮತ್ತು ದೇಹದಾನ ಸದ್ದಿಲ್ಲದೆ ನಡೆಯುತ್ತಿರುವುದಂತೂ ನಿಜ. ಆದರೂ ಆಗ ಬೇಕಾದ ಕೆಲಸ ಬೆಟ್ಟದಷ್ಟಿದೆ. ಇದೇ ರೀತಿ ಅಂಗಾಗ ದಾನಗಳೂ ಆಗೊಮ್ಮೆ ಈಗೊಮ್ಮೆ ಆಗುತ್ತಿರುತ್ತದೆ, ನಾವು ಈ ಬಗ್ಗೆ ಪತ್ರಿಕೆ/ಟಿ.ವಿಯಲ್ಲಿ ಓದಿ/ಕೇಳಿ ತಿಳಿದುಕೋಂಡಿರುತ್ತೇವೆ.

ನಮ್ಮ ಕರ್ನಾಟಕದಲ್ಲಿ ರಾಜ್ ಅವರು ತಾವು ಮರಣಹೊಂದಿದ ನಂತರೆ ತಮ್ಮ ಕಣ್ಣುಗಳನ್ನು ದಾನ ಮಾಡಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅವರ ಅಭಿಮಾನಿಗಳೂ ಸಹ (ಸುಮಾರು ೩೫,೦೦೦) ತಾವು ಸತ್ತ ನಂತರ ತಮ್ಮ ಕಣ್ಣುಗಳನ್ನು ಈ ಪವಿತ್ರ ಕಾರ್ಯಕ್ಕೆ ಉಪಯೋಗಿಸಲು ಬರೆದುಕೊಟ್ಟಿರುತ್ತಾರೆ. ನಾಡಿನ ಕೆಲವು ಗಣ್ಯರು, ಸಾರ್ವಜನಿಕರು ತಾವು ಸತ್ತ ನಂತರ ತಮ್ಮ ಮೃತ ಶರೀರವನ್ನು ದಾನ ಮಾಡಿದ್ದಾರೆ. ಅವರಲ್ಲಿ ನಟ ಲೋಕೇಶ್ ಸಹ ಒಬ್ಬರು. ರಾಜ್ ಪುತ್ರರು ಸಹ ತಮ್ಮ ದೇಹವನ್ನು ನಾವು ಸತ್ತ ನಂತರ ದಾನ ಮಾಡುತ್ತೇವೆ ಎಂದು ಬರೆದುಕೊಟ್ಟಿರುತ್ತಾರೆ.
ವಯುಕ್ತಿಕವಾಗಿ ಹೇಳಬೇಕೆಂದರೆ ನಾನು ಕೆಲವು ಬಾರಿ ರಕ್ತದಾನವನ್ನು ಮಾಡಿರುತ್ತೇನೆ. ಲಯನ್ಸ್ ಕಣ್ಣಿನ ಆಸ್ಪತ್ರೆಗೆ ನಾನು ನನ್ನ ನೇತ್ರಗಳನ್ನು ದಾನಮಾಡುತ್ತೇನೆಂದು ಬರೆದುಕೊಟ್ಟಿದ್ದೇನೆ. ನನಗೆ ದೇಹವನ್ನೂ ಮತ್ತು ಅದರ ಅಂಗಾಗಗಳನ್ನು ದಾನ ಮಾಡುವ ಇಚ್ಚೆ ಇದೆ. ಅದನ್ನೊ ಕೂಡ ಬರೆದುಕೊಡುವವನಿದ್ದೇನೆ. ಇದರ ಬಗ್ಗೆ ನನ್ನ ಮನೆಯವರಿಗೆ, ಸ್ನೇಹಿತರಿಗೆ ಮತ್ತು ಬಂಧುಬಳಗದವರಿಗೆ ಈಗಾಗಲೇ ಅನೇಕ ಸಲ ತಿಳಿಸಿಯೂ ಇದ್ದೇನೆ. (ಮುಗಿಯಿತು)
Thursday, 7 June 2012
"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೨.
ಕಳೆದ ಸಂಚಿಕೆಯಿಂದ:
ವೈದ್ಯರಿಗೆ ದೇಹದಾನ, ಅಂಗಾಗಗಳ ದಾನ ಮಾಡಲು ಯಾವುದೇ ಗೊಂದಲವಿರುವುದಿಲ್ಲ. ಅವರಿಗೆ ತಾವು ಸತ್ತ ನಂತರ ದೇಹವು ಏನಾಗುತ್ತದೆ ಎಂಬ ಬಗ್ಗೆ ಸರಿಯಾದ ತಿಳುವಳಿಕೆ ಇರುತ್ತದೆ, ಜ್ಞಾನ ಇರುತ್ತದೆ. ಹಾಗಾಗಿ ಈಗಿರುವ ಎಲ್ಲಾ ವೈದ್ಯರು, ದಾದಿಗಳು, ವೈದ್ಯಾಧಿಕಾರಿಗಳು, ವೈದ್ಯ ಶಾಸ್ತ್ರವನ್ನು ಭೋಧಿಸುವ ಶಿಕ್ಷಕರು, ಮುಂದೆ ಓದಲು ಬರುವ ವೈದ್ಯ ವಿದ್ಯಾರ್ಥಿಗಳು, ಅವರ ತಂದೆ ತಾಯಿಯರು ಮುಂದೆ ಬಂದು ತಮ್ಮ ದೇಹವನ್ನು, ತಾವು ಸತ್ತನಂತರ ದಾನವಾಗಿ ಕೊಡಲು ಘೋಷಿಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡಬಹುದು. ಈ ರೀತಿಯಾಗಿ ಅವರು ತಮ್ಮ ದೇಹದಾನವನ್ನು ಮಾಡಿಬೇರೆಯವರಿಗೆ ಮೇಲ್ಪಂಕ್ತಿಯಾಗಬಹುದು. ಮಠಾಧಿಪತಿಗಳು ತಾವು ಮರಣ ಹೊಂದಿದ ನಂತರ ನೇತ್ರ ದಾನ, ಅಂಗಾಗ ದಾನ ಮತ್ತು ದೇಹದಾನವನ್ನು ಮಾಡುವುದರ ಮೂಲಕ ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಬಹುದು. ಭಕ್ತರಿಗೆ ಅದೊಂದು ಪುಣ್ಯಕಾರ್ಯವೆಂದು ಅನ್ನಿಸಿ ತಾವೂ ಅದರ ಬಗ್ಗೆ ಯೋಚಿಸಬಹುದು. ಇದೇ ರೀತಿ ಶಾಸಕರು, ಮಂತ್ರಿಗಳು, ಮುಖ್ಯ ಮಂತ್ರಿಗಳು, ನಟರು, ಐ.ಎ.ಎಸ್, ಐ.ಪಿ.ಎಸ್ ಮುಂತಾದ ಅಧಿಕಾರಿಗಳು, ಸಮಾಜ ಹಿರಿಯ ಗಣ್ಯರು ಮುಂತಾದವರು ಸಹ ಇದರ ಬಗ್ಗೆ ಯೋಚಿಸಿ ಇತರರಿಗಿಎ ಮಾದರಿಯಾಗಬಹುದು.
ದಾನಗಳನ್ನು ಯಾರಿಗೂ ಹೇಳದೆ ಮಾಡಬೇಕು, ಆದರೆ ಕೆಲವು ದಾನಗಳನ್ನು ಮಾತ್ರ ಎಲ್ಲರಿಗೂ ತಿಳಿಸಿ ಮಾಡಬೇಕು. ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹದಾನ ಇವುಗಳನ್ನು ಎಲ್ಲರಿಗೂ ತಿಳಿಸಿ ಮಾಡಿದಾಗ ಅದು ಬೇರೆಯವರ ಮೇಲೂ ಪರಿಣಾಮ ಬೀರಿ ಅವರೂ ಸಹ ಇಂತಹ ದಾನಗಳನ್ನು ಮಾಡಲು ಮುಂದಾಗಬಹುದು.
ನಮ್ಮ ಬೆಂಗಳೂರಿನಲ್ಲಿ ಸಧ್ಯ " ಬೆಂಗಳೂರು ವೈದ್ಯಕೀಯ ವಿದ್ಯಾಲಯ " ಮತ್ತು " ಎಮ್.ಎಸ್.ರಾಮಯ್ಯ ವೈದ್ಯಕೀಯ ವಿದ್ಯಾಲಯ " ದಲ್ಲಿ ದೇಹವನ್ನು ದಾನ ಮಾಡುವುದಕ್ಕಾಗಿ ನೊಂದಾಯಿಸಿಕೊಳ್ಳಬಹುದು. ಅಂಗಾಗವನ್ನು ದಾನ ಮಾಡುವುದಕ್ಕಾಗಿ ಬೆಂಗಳೂರಿನ ನಿಮಾನ್ಸ್ನ್ ನಲ್ಲಿರುವ "ಜೋನಲ್ ಕೋ ಆರ್ಡಿನೇಶನ್ ಕಮಿಟಿ ಆಫ್ ಕರ್ನಾಟಕ ಫಾರ್ ಟ್ರಾನ್ಸ್ ಪ್ಲಾಂಟೇಷನ್" ಸಂಸ್ಥೆಗೆ ರಾಜ್ಯ ಸರ್ಕಾರ ಅಧಿಕಾರವನ್ನು ನೀಡಿದೆ. ಅಂಗದಾನ, ಅಂಗ ಕಸಿ ಎಲ್ಲವೂ ಈ ಸಂಸ್ಥೆಯ ಅಡಿಯಲ್ಲೇ ನಡೆಯಬೇಕು. ಇದಕ್ಕೆ ಕಾನೂನು ರೀತಿ ಅನುಮತಿ ಪಡೆಯಬೇಕು. ಮೂತ್ರಪಿಂಡ ದಾನವೂ ಸಹ ಎಲ್ಲರೂ ಮಾಡುವಹಾಗಿಲ್ಲ ಮತ್ತು ಮೂತ್ರ ಪಿಂಡ ಕಸಿಯೂ ಕಾನೂನಾತ್ಮಕವಾಗಿಯೇ ನಡೆಯಬೇಕು. ಮೊದಲು ವ್ಯಕ್ತಿಯ ಉಸಿರಾಟ ನಿಂತಾಗ ವ್ಯಕ್ತಿಯು ಮೃತಪಟ್ಟನೆಂದು ವೈದ್ಯಲೋಕ ಹೇಳುತ್ತಿತ್ತು. ಆದರೆ ಈಗ ವ್ಯಕ್ತಿಯ ಮೆದುಳು ಸತ್ತರೆ ಮಾತ್ರ ಸಾವು ಸಂಭವಿಸುತ್ತದೆ ಎಂದು ಇಂದಿನ ವೈದ್ಯಲೋಕ ಹೇಳುತ್ತದೆ. ಉಸಿರಾಟ ನಿಂತಿದ್ದು ಇನ್ನೇನು ವ್ಯಕ್ತಿಯ ಮೆದುಳೂ ಸಹ ತನ್ನ ಕಾರ್ಯ ನಿಲ್ಲಿಸುತ್ತದೆ ಎಂದಾಗ ವೈದ್ಯರು ದಾನದ ಅಂಗ ತೆಗೆಯುತ್ತಾರೆ. ನೇತ್ರಗಳನ್ನು ವ್ಯಕ್ತಿಯು ಸತ್ತ ನಂತರ ಅರ್ಧ ಗಂಟೆಯ ಒಳಗಾಗಿ ವೈದ್ಯರಿಗೆ ತಿಳಿಸಿದರೆ ಅವರೇ ಬಂದು ಮೃತಶರೀರದಿಂದ ಕಣ್ಣುಗಳನ್ನು ತೆಗೆದುಕೊಂಡು ಹೋಗುವರು. ಅದರಿಂದ ಮೃತ ಶರೀರಕ್ಕೆ ಯಾವುದೇ ಹಾನಿಯಾಗಲೀ ಅಥವಾ ಮುಖದ ಅಂದವಾಗಲೀ ಕೆಡುವುದಿಲ್ಲ. (ಮಿಕ್ಕಿದ್ದು ನಾಳೆಗೆ)

Wednesday, 6 June 2012
"ನೇತ್ರದಾನ, ದೇಹದಾನ ಮತ್ತು ಅಂಗಾಂಗ ದಾನ:- " ಸರಣಿ ಲೇಖನ ಭಾಗ - ೧.
ಹಿಂದು, ಇಸ್ಲಾಂ, ಕ್ರೈಸ್ತ, ಜೈನ, ಬುದ್ದ, ಸಿಖ್ ಹೀಗೆ ಎಲ್ಲಾ ಧರ್ಮಗಳೂ ದಾನಕ್ಕೆ ಅತ್ಯಂತ ಮಹತ್ವ ಕೊಟ್ಟಿದೆ. ಎಲ್ಲಾ ಧರ್ಮ ಗ್ರಂಥಗಳಲ್ಲೂ ಇದರ ಬಗ್ಗೆ ಉಲ್ಲೇಖವಿದೆ. ಮನುಷ್ಯ ಹುಟ್ಟಿದಾಗಿನಿಂದ ಸಾಯುವತನಕ ಅನೇಕ ದಾನ ಧರ್ಮಗಳನ್ನು ಮಾಡುತ್ತಲೇ ಬಂದಿದ್ದಾನೆ. ವಿದ್ಯಾ ದಾನ, ಅನ್ನ ದಾನ, ಭೊ ದಾನ, ಗೊ ದಾನ, ವಸ್ತ್ರ ದಾನ, ರಕ್ತ ದಾನ, ಮೂತ್ರ ಪಿಂಡ ದಾನ, ಅಂಗಾಗ ದಾನ, ಹೊಸದಾಗಿ ಬಂದಿರುವ ವೀರ್ಯ ದಾನ, ಮತ್ತು ಕೊನೆಯದಾಗಿ ದೇಹ ದಾನ ಹೀಗೆ ದಾನಗಳಲ್ಲಿ ಅನೇಕ ದಾನಗಳಿವೆ. ಪ್ರತಿಯೊಂದು ದಾನಕ್ಕೂ ಅದರದೇ ಆದ ಮಹತ್ವ, ಪವಿತ್ರತೆ ಇದೆ. ಅವಶ್ಯಕತೆ ಇರುವವರಿಗೆ ಇರುವವರು ಮಾಡುವ ದಾನ ಅತ್ಯಂತ ಪವಿತ್ರ ಮತ್ತು ಶ್ರೇಷ್ಠ.
ಮನುಷ್ಯ ತಾನು ಸತ್ತಮೇಲೂ ಮಾಡುವ ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಈ ಮೂರು ದಾನಗಳನ್ನು ಮಾಡಲು ಆ ವ್ಯಕ್ತಿಗೆ ಬೇರೆಯದೇ ಆದ ಮನಸ್ಟಿತಿ ಬೇಕಾಗುತ್ತದೆ. ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಮನುಷ್ಯ ಸತ್ತಮೇಲೆ ಮಾಡುವ ಈ ಮೂರು ದಾನಗಳನ್ನು ನೆರವೇರಿಸುವವರು ಅವರ ಮನೆಯವರು ಮಾತ್ರ. ಹಾಗಾಗಿ ದಾನ ಮಾಡಿದ ಮನುಷ್ಯ ಮತ್ತು ಅವರ ಮನೆಯವರು ಇಬ್ಬರೂ ಅಭಿನಂದನಾರ್ಹರು.
ಎಲ್ಲಾ ದಾನಗಳನ್ನೂ ಮಾಡುವ ಮನುಷ್ಯ ರಕ್ತದಾನ, ನೇತ್ರದಾನ, ಅಂಗಾಂಗ ದಾನ ಮತ್ತು ದೇಹ ದಾನವನ್ನು ಮಾಡಲು ಹಿಂಜರಿಯುವುದು ಜಾಸ್ತಿ. ರಕ್ತವನ್ನು ಕೊಟ್ಟರೆ ತನಗೆ ರಕ್ತ ಕಡಿಮೆಯಾಗುವುದು, ನಾನು ಶಕ್ತಿ ಹೀನನಾಗುವೆ ಎಂಬ ಭಯ ಈಗಲೂ ಅನೇಕರಿಗೆ ಇದೆ. ಹಾಗೆಯೇ ತಾನು ಸತ್ತ ನಂತರೆ ಕಣ್ಣುಗಳನ್ನು ದಾನ ಮಾಡಿದರೆ ಮುಂದಿನ ಜನ್ಮದಲ್ಲಿ ತಾನು ಕುರುಡನಾಗಿ ಹುಟ್ಟುವೆನೆಂದು, ಅಂಗಾಗ ದಾನ ಮಾಡಿದರೆ ತಾನು ಅಂಗವಿಕಲನಾಗಿ ಹುಟ್ಟುವೆನೆಂದು, ದೇಹ ದಾನ ಮಾಡಿದರೆ ತನಗೆ ಮುಕ್ತಿ ದೊರೆಯದೆಂದು ಅನೇಕರಿಗೆ ಭಯ ಮತ್ತು ಸಂಶಯ. ಸರಿಯಾದ ಮಾಹಿತಿಯ ಕೊರತೆ, ವಿದ್ಯೆ/ಬುದ್ದಿಯ ಕೊರತೆ, ಕೆಲವು ಮೂಡನಂಬಿಕೆಗಳು, ಧಾರ್ಮಿಕ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ರಕ್ತ ದಾನ, ನೇತ್ರದಾನ, ಅಂಗಾಂಗ ದಾನ, ದೇಹ ದಾನ ಮಾಡುವವರು ಬಹಳ ಕಡಿಮೆ. ಇದರ ಬಗ್ಗೆ ಅನೇಕ ವೈದ್ಯರು, ಬುದ್ದಿ ಜೀವಿಗಳು, ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಿಳುವಳಿಕೆ ಕೊಟ್ಟರೂ ಅದು ಎಲ್ಲಾ ಜನರನ್ನೂ, ಸಮುದಾಯವನ್ನೂ ಸರಿಯಾಗಿ ತಲುಪಿಲ್ಲವೆಂದೇ ಹೇಳಬೇಕು ನಮ್ಮ ದೇಶದಲ್ಲಿ ಮೃತ ಶರೀರಗಳು ವೈದ್ಯ ಶಾಸ್ತ್ರ ಕಲಿಯುವ ವಿದ್ಯಾರ್ಥಿಗಳಿಗಾಗಿ ಅತ್ಯಂತ ಅವಶ್ಯಕವಾಗಿ ಬೇಕಾಗಿವೆ. ಮೃತ ಶರೀರಗಳು ಸರಿಯಾದ ಪ್ರಮಾಣದಲ್ಲಿ ದೊರೆಯದೆ ವೈದ್ಯ ವಿದ್ಯಾರ್ಥಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಅವರ ಶಿಕ್ಷಣಕ್ಕೆ ಅಡಚಣೆಯುಂಟಾಗುತ್ತಿದೆ. (ಮಿಕ್ಕಿದ್ದು ನಾಳೆಗೆ)

Sunday, 3 June 2012
"ಶುದ್ದ ಜಲ-ಜೀವ ಜಲ"
ಕೇವಲ ೧೦ ಪೈಸೆಗೆ ೧ ಲೀಟರ್ ಶುದ್ದ ಕುಡಿಯುವ ನೀರು, ಕೆಲವು ಕಡೆ ೧ ರೊಪಾಯಿಗೆ ೨ ಲೀಟರ್ ಶುದ್ದ ಕುಡಿಯುವ ನೀರು, ಇಂತಹದ್ದನ್ನು ನೀವುಗಳು ಇತ್ತೀಚೆಗೆ ಕೇಳಿರಬಹುದು. ನಿಜ, ಇದು ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಇಂತಹ ಕಾರ್ಯಕ್ರಮವೊಂದು ಸದ್ದಿಲ್ಲದೆ ನಡೆಯುತ್ತಿದೆ. ಮೊದಲು ಕೋಲಾರದ ಒಂದು ಗ್ರಾಮೀಣ ಪ್ರದೇಶದಲ್ಲಿ ಈ ರೀತಿ "ಶುದ್ದ ಜಲ" ಘಟಕವೊಂದನ್ನು ಅಲ್ಲಿನ ಗ್ರಾಮೀಣ ವಾಸಿಗಳ ಸಂಘವೊಂದು ಮೊದಲ ಬಾರಿ ಸ್ಥಾಪಿಸಿತು. ಇತ್ತೀಚೆಗೆ ಹೆಚ್.ಕೆ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳ್ಳಿ ಎಂಬ ಶಾಸಕರು ಉತ್ತರ ಕರ್ನಾಟಕದಲ್ಲಿ ಇಂತಹ ಘಟಕಗಳನ್ನು ಸ್ಥಾಪಿಸಿ ಅಲ್ಲಿನ ಜನರಿಗೆ ಶುದ್ದ ನೀರನ್ನು ಕುಡಿಸುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅನೇಕ ಕೆರೆ, ನದಿಗಳು ಬತ್ತಿಹೋಗಿ ಅಲ್ಲಿನ ಜನರಿಗೆ, ದನ ಕರುಗಳಿಗೆ ಕುಡಿಯುವ ನೀರು ಸಿಗುತ್ತಿಲ್ಲ. ಅವರಿಗೆ ಬೋರ್ ವೆಲ್ ನೀರೇ ಆಧಾರ. ಆ ನೀರಿನಲ್ಲಿ ಫ್ಲೋರೈಡ್ ಅಂಶವು ಜಾಸ್ತಿ ಇದ್ದು, ಕುಡಿಯಲಾರದ ಹಾಗಿದೆ. ಆ ನೀರು ಆರೋಗ್ಯಕ್ಕೆ ಬಲು ಮಾರಕ. ಇಂತಹ ಘಟಕವನ್ನು ಸ್ಥಾಪಿಸಲು ಆಗುವ ಖರ್ಚು ಸುಮಾರು ೭ ಲಕ್ಷಗಳು. (ಘಟಕಕ್ಕೆ ಸುಮಾರು ೪.೫ ಲಕ್ಷಗಳು, ಕಟ್ಟಡಕ್ಕೆ ೧.೫ ಲಕ್ಷಗಳು ಮತ್ತು ಕೊಳವೆ ಬಾವಿಗಾಗಿ ಸುಮಾರು ೧ ಲಕ್ಷ.) ಒಂದು ಸಲಕ್ಕೆ ಇದು ಸುಮಾರು ೪ ಲಕ್ಷ ಲೀಟರ್ ನೀರನ್ನು ಶುದ್ದೀಕರಿಸುತ್ತದೆ. ನಂತರ ಅದರ ಫಿಲ್ಟರ್ ಗಳನ್ನು ಬದಲಾಯಿಸಿದರೆ ಆಯಿತು. ನಮ್ಮ ರಾಜ್ಯದಲ್ಲಿರುವ ಶಾಸಕರು, ನಟ/ನಟಿಯರು, ನಿರ್ಮಾಪಕರು, ಇನ್ಫೋಸಿಸ್, ಬಯೋಕಾನ್, ವಿಪ್ರೋ ಮುಂತಾದ ಕಂಪನಿಗಳು, ನಮ್ಮಲ್ಲಿರುವ ಶ್ರೀಮಂತ ಮಠಗಳು ಮತ್ತು ಸಮಾಜದ ಇತರೆ ಗಣ್ಯರು ಇಂತಹ ಘಟಕಗಳನ್ನು ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಬಿಸಿದರೆ ಅಲ್ಲಿನ ಜನತೆಗೆ ಶುದ್ದ ಕುಡಿಯುವ ನೀರು ದೊರಕಿದಂತಾಗುತ್ತದೆ. ನಗರ ಪ್ರದೇಶದಲ್ಲಿ ಇರುವ ನಮಗೆ ಇದರ ಅರಿವು ಬಹಳ ಕಡಿಮೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಶೌಚಾಲಯದ ಸಮಸ್ಯೆ ಬಹಳ ಇದೆ. ಇದರ ಬಗ್ಗೆಯೂ ಯೋಚಿಸಬಹುದು.
Saturday, 2 June 2012
" ವೈದ್ಯೋ ನಾರಾಯಣ ಹರಿ "
ಪ್ರತಿಯೊಂದು ವೃತ್ತಿಗೊ ಅದರದೇ ಆದ ಘನತೆ, ಗೌರವ, ಜವಾಬ್ದಾರಿ ಎಲ್ಲವೂ ಇರುತ್ತದೆ. ವೈದ್ಯರು, ಇಂಜಿನಿಯರ್ ಗಳು, ಐ,ಎ.ಎಸ್, ಐ,ಪಿ.ಎಸ್, ಚಾರ್ಟೆಡ್ ಅಕೌಂಟೆಂಟ್, ವಕೀಲರು, ನ್ಯಾಯಾಧೀಶರು ಹೀಗೆ ಸಮಾಜದಲ್ಲಿ ಅನೇಕ ಜನಪ್ರಿಯ ವೃತ್ತಿನಿರುತರಿರುತ್ತಾರೆ. ಪ್ರತಿಯೊಂದು ಹುದ್ದೆಯೂ ಅಪ್ರತಿಮ ವಿದ್ಯೆ, ಬುದ್ದಿ, ಕೌಶಲ್ಯ, ತಾಳ್ಮೆ, ಸಹನೆ, ಜವಾಬ್ದಾರಿ ಎಲ್ಲವನ್ನೂ ಬೇಡುತ್ತದೆ. ಅದರಲ್ಲೂ ವೈದ್ಯ ವೃತ್ತಿ ಒಂದು ತೂಕ ಹೆಚ್ಚೇ ಎಂದು ಹೇಳಿದರೆ ಯಾರೂ ತಪ್ಪು ತಿಳಿಯುವುದಿಲ್ಲ ಎಂದು ನನ್ನ ಭಾವನೆ. ಯಾಕೆಂದರೆ ಅದು ಜೀವದ ಪ್ರಶ್ನೆ, ಹುಟ್ಟು ಸಾವಿನ ಪ್ರಶ್ನೆ. ಒಂದು ಚೂರು ಹೆಚ್ಚು ಕಡಿಮೆಯಾದರೆ ಜೀವವೇ ಹೋಗುವುದು. ಬೇರೆಯ ವೃತ್ತಿಯಲ್ಲಿ ಒಂದು ವೇಳೆ ಹೆಚ್ಚು ಕಡಿಮೆಯಾದರೆ ಅದನ್ನು ಸರಿ ಮಾಡುವ ಅವಕಾಶವಿರುತ್ತದೆ. ಆದರೆ ವೈದ್ಯಕೀಯ ವೃತ್ತಿಯಲ್ಲಿ ಅಂಥಹ ಅವಕಾಶಗಳು ಇರುವುದೇ ಇಲ್ಲವೇನೋ? ಅಂಥಹದರಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೆಲಸ ಮಾಡುವ ವೈದ್ಯರು ಯಾವ ದೇವರಿಗೂ ಕಡಿಮೆ ಇಲ್ಲ. ಅದಕ್ಕಾಗಿಯೇ " ವೈದ್ಯೋ ನಾರಾಯಣ ಹರಿ " ಎಂದು ನಮ್ಮ ಧರ್ಮ, ಸಂಸ್ಕೃತಿ ವೈದ್ಯರಿಗೆ ಅತ್ಯಂತ ಮಹತ್ವದ ಸ್ಥಾನವನ್ನು ಕೊಟ್ಟಿದೆ. ಅವರನ್ನು ಕಣ್ಣಿಗೆ ಕಾಣುವ ದೇವರು ಎಂದು ಜನಸಾಮಾನ್ಯರು ನಂಬುತ್ತಾರೆ. ಅವರು ಯಾವ ಮಾತ್ರೆ, ಟಾನಿಕ್ ಹೀಗೆ ಏನು ಬರೆದು ಕೊಟ್ಟರೂ ಅದನ್ನು ಜನರು ತೆಗೆದುಕೊಳ್ಳುತ್ತಾರೆ. ಅವರು ಏನು ಹೇಳಿದರೂ ಹಾಗೆ ಕೇಳುತ್ತಾರೆ. ಅವರ ಮೇಲೆ ಜನರಿಗೆ ಅಷ್ಟು ವಿಶ್ವಾಸ, ನಂಬಿಕೆ. ಕೇವಲ ೧೦ನೇ ತರಗತಿ ಓದಿದವನೊಬ್ಬ ಕೈಯಲ್ಲಿ ಸ್ಕೆತಾಸ್ಕೋಪ್ ಹಿಡಿದು ಪ್ಯಾಂಟ್ ಮೇಲೆ ಬಿಳಿ ಕೋಟ್ ಹಾಕಿಕೊಂದು ಬಂದರೂ ಯಾವ ರೋಗಿಯಾಗಲೀ ಅಥವಾ ಅವರ ಸಂಬಂಧಿಕರಾಗಲೀ ಅವರನ್ನು ನೀವು ಎಷ್ಟು ಓದಿದ್ದೀರಾ ಎಂದು ಪ್ರಶ್ನೆ ಸಹ ಮಾಡುವುದಿಲ್ಲ ಅಷ್ಟು ನಂಬಿಕೆ ನಮ್ಮ ಜನರಿಗೆ ವೈದ್ಯರ ಮೇಲೆ. ನಮ್ಮ ದೇಶದಲ್ಲಿ ಅನೇಕ ವೈದ್ಯರು ನಿಜವಾಗಲೂ ದೇವರ ಸ್ಥಾನದಲ್ಲೇ ಇದ್ದಾರೆ.
ಇತ್ತೀಚೆಗೆ ಕ್ಷಯ ರೋಗ ಗ್ರಂಥಿಗಳ ಸಂಬಂಧಿ ರೋಗ ಹೊಂದಿದ್ದ ರೋಹಿತ್ ಎಂಬ ಬಾಲಕನಿಗೆ ಮೂತ್ರ ವಿಸರ್ಜನಾ ಚರ್ಮ ಸಂಬಂಧಿ ಶಸ್ತ್ರ ಚಿಕಿತ್ಸೆಯನ್ನು ಮಾಡಿರುವ ಸುದ್ದಿ ಬಂದಿದೆ. ಎದೆ ನೋವು ಮತ್ತು ತಲೆ ಸುತ್ತಿನ ಕಾರಣಕ್ಕಾಗಿ ಮುಂಬೈನ ಲೀಲಾವತಿ ಆಸ್ಪತ್ರೆ ಸೇರಿದ ರೋಗಿಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿರುವ ಸುದ್ದಿಯೂ ಬಂದಿದೆ. ಹೈದರಾಬಾದಿನಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಾಗಿ ಸೇರಿದ ೯ ಜನ ಶಾಶ್ವತ ಅಂಧರಾದ ಸುದ್ದಿ ಬಂದಿದೆ. ಮಧುಮಗನೊಬ್ಬ ತನ್ನ ಬಳತೋಳಿನಲ್ಲಿ ನೋವು ಕಾಣಿಸಿಕೊಂಡ ಕಾರಣ ವೈದ್ಯರಿಗೆ ತೋರಿಸಿದಾಗ ಅವರ ನಿರ್ಲಕ್ಷದಿಂದ ಸಾವನಪ್ಪಿರುವ ಘಟನೆ ನಗರದ ರವಿ ಕಿರ್ಲೋಸ್ಕರ್ ಆಸ್ಪತೆಯಲ್ಲಿ ನಡೆದಿದೆ. ಈ ತರಹದ ಸುದ್ದಿಗಳು ಆಗಾಗ ಕಿವಿಗೆ ಅಪ್ಪಳಿಸುತ್ತಲೇ ಇದೆ. ಇಂತಹ ವಿಷಯ ಪತ್ರಿಕೆಯಲ್ಲಿ ಓದಿದಾಗ, ಟಿ.ವಿಯಲ್ಲಿ ನೋಡಿದಾಗ ಮನಸ್ಸು ಕಸಿವಿಸಿಗೊಳ್ಳುತ್ತದೆ. ದೂರದಲ್ಲಿ ಕುಳಿತಿರುವ ನಮಗೇ ಹೀಗಾದರೆ, ತೊಂದರೆಗೆ ಒಳಗಾಗಿರುವವರು ಮತ್ತು ಅವರ ಮನೆಯವರ ಪರಿಸ್ತಿತಿ ಏನಾಗಬೇಕು?
ಈ ತರಹ ಕೆಲಸವು ನುರಿತ ವೈದ್ಯರಿಂದ ಆಗುವುದಿಲ್ಲ. ಯಾವ ವೈದ್ಯರಾಗಲೀ ಬೇಕಂತಲೇ ಇಂತಹ ಕೆಲಸವನ್ನು ಮಾಡುವುದಿಲ್ಲ. ಯಾರೊ ಒಬ್ಬಿಬ್ಬರು ಮಾಡಿದ ತಪ್ಪು ಎಲ್ಲಾ ವೈದ್ಯ ಸಮೂಹಕ್ಕೆ ಕಪ್ಪು ಚುಕ್ಕೆಯಾಗಬಾರದು. ಇದು ವೈದ್ಯರ ತಪ್ಪೋ ಅಥವಾ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಹಾಯಕರು ಮತ್ತಿತರ ತಪ್ಪೋ? ಇದೆಲ್ಲಾ ಯಾಕಾಗುತ್ತಿದೆ? ಅವರಿಗೆ ಸರಿಯಾದ ವಿದ್ಯೆಯ ಕೊರತೆಯೇ? ಬುದ್ದಿಯ ಕೊರತೆಯೇ? ಅನುಭವದ ಕೊರತೆಯೇ? ಶ್ರದ್ದೆಯ ಕೊರತೆಯೇ? ಭಾಷೆಯ ಸಮಸ್ಯೆಯೇ? ಕೆಲಸದ ಒತ್ತಡವೇ? ಅಥವಾ ಕೆಲಸದ ಬಗ್ಗೆ ನಿರ್ಲಕ್ಷವೇ? ಎಂಬುದರ ಬಗ್ಗೆ ವಿವರವಾಗಿ ವಿಚಾರಣೆ ನಡೆಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮೆಡಿಕಲ್ ಕೌನ್ಸಿಲ್ ಮತ್ತು ಸಂಭಂಧ ಪಟ್ಟ ಅಧಿಕಾರಿಗಳು, ಹಿರಿಯ ವೈದ್ಯರು, ನುರಿತ ಆಡಳಿತಕಾರರು ಇವರ ಮೇಲಿದೆ.
ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡರೆ ಮುಂದೆ ಇಂತಹ ತಪ್ಪುಗಳು ಆಗುವುದಿಲ್ಲ. ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ಮಾಡುವ ವೈದ್ಯರೇ ಬೇರೆಯಾಗಿರುತ್ತಾರೆ ಮತ್ತು ದಿನವೂ ರೋಗಿಗೆ ಚಿಕಿತ್ಸೆ ಕೊಡುವ ವೈದ್ಯರೇ ಬೇರೆಯಾಗಿರುತ್ತಾರೆ. ಅವರಲ್ಲಿ ಹೆಚ್ಚಿನ ರೀತಿಯ ಹೊಂದಾಣಿಕೆ ಇರಬೇಕಾಗುತ್ತದೆ. ಅದು ಇಲ್ಲದಿದ್ದರೆ ಇಂತಹ ತಪ್ಪುಗಳು ಸಂಭವಿಸುತ್ತದೆ. ಇದರ ಬಗ್ಗೆ ಸಂಭಂದಪಟ್ಟವರು ಯೋಚಿಸಬೇಕಾಗಿದೆ.

Thursday, 31 May 2012
" ಅಣ್ಣಾ ಬಾಂಡ್ "
ಮೊನ್ನೆ " ಅಣ್ಣಾ ಬಾಂಡ್ " ಚಿತ್ರ ನೋಡಲು ಹೋಗಿದ್ದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಚಿತ್ರ ನೋಡಿದ ಮೇಲೆ ಭ್ರಮನಿರಸನವಾಯಿತು. ರಾಘಣ್ಣ, ಶಿವಣ್ಣ, ಪುನೀತ್, ಪಾರ್ವತಮ್ಮ ಅವರುಗಳು ತಮ್ಮ ಸ್ವಂತ ಬ್ಯಾನರ್ ನಲ್ಲಿ ಚಿತ್ರವನ್ನು ತೆಗೆದಾಗ ಬಹಳಷ್ಟು ಸಮಯ ಕಥೆ, ಸಂಭಾಷಣೆ, ಹಾಡುಗಳು, ಸಂಗೀತ, ನಿರ್ದೇಶಕ ಹೀಗೆ ಎಲ್ಲದರ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಿ ನಂತರ ಶ್ರದ್ದೆ, ಪ್ರೀತಿಯಿಂದ ಚಿತ್ರವನ್ನು ಮಾಡಿರುವುದನ್ನು ನಾವೆಲ್ಲರೂ ಈ ಹಿಂದೆ ನೋಡಿದ್ದೇವೆ. ಅವರಿಗೆ ಕಥೆ ಒಪ್ಪಿಸುವುದು ಸುಲಭದ ಮಾತಲ್ಲ. ಇದು ಗಾಂಧಿನಗರದ ಪ್ರತಿಯೊಬ್ಬರಿಗೂ ಗೊತ್ತಿರುವ ವಿಷಯ. ಹಾಗಾಗಿ ಅವರ ಸ್ವಂತ ಬ್ಯ್ನಾನರ್ ಚಿತ್ರಗಳು ಅತ್ಯಂತ ಯಶಸ್ವಿಯಾಗಿರುತ್ತದೆ. ಇದು ರಾಜ್, ವರದಣ್ಣ ಅವರ ಕಾಲದಿಂದಲೂ ಬಂದಿರುವ ರೂಢಿ. ಆದರೆ ಅಣ್ಣಾ ಬಾಂಡ್ ವಿಷಯದಲ್ಲಿ ಇವರುಗಳು ಯಾಕೆ ಯಾಮಾರಿದರು? ನಿರ್ದೇಶಕ ಸೂರಿಯ ಬಗ್ಗೆ ವಿಪರೀತ ನಂಬಿಕೆಯೇ ಚಿತ್ರವನ್ನು ಹಾಳುಮಾಡಿದೆ. ಪುನೀತ್ ಅವರನ್ನು ಚಿತ್ರದಲ್ಲಿ ಸರಿಯಾಗಿ ದುಡಿಸಿಕೊಂಡಿಲ್ಲ. ಅವರನ್ನು ಕೇವಲ ಫೈಟ್ ಮತ್ತು ಡ್ಯಾನ್ಸ್ ಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಪುನೀತ್ ರಂತಹ ಸಹಜ ನಟನನ್ನು ಎಷ್ಟು ಚೆನ್ನಾಗಿ ಉಪಯೋಗಿಸಿಕೊಳ್ಳಬಹುದಾಗಿತ್ತು. ಇನ್ನು ಪ್ರಿಯಾಮಣಿ, ನಿಧಿ ಸುಬ್ಬಯ್ಯ, ಅವಿನಾಶ್, ಜಾಕಿ ಶರಾಫ್ ಪಾತ್ರ ಪೋಷಣೆಯೇ ಚೆನ್ನಾಗಿಲ್ಲ. ನಿಧಿ ಸುಬ್ಬಯ್ಯ ಅವರಿಗೆ ಪುನೀತ್ ಚಿತ್ರದಲ್ಲಿ ನಟಿಸುವ ಆಸೆ ಬಹಳ ಇತ್ತು. ಆದರೆ ಇದು ಕೇವಲ ಅವರ ಆಸೆ ಪೂರೈಸಿತು ಅಷ್ಟೆ. ಇದರಿಂದ ಅವರಿಗೆ ಏನೂ ಪ್ರಯೋಜನವಾದಂತಿಲ್ಲ. ರಂಗಾಯಣ ರಘು ಪಾತ್ರ ಕೂಡ ಅಷ್ಟೇ ಕೇವಲ ಮಾತು, ಅದೂ ಅರ್ಥವಿಲ್ಲದ ಬಡಬಡಿಕೆ. ಹಾಗಾಗಿ ಅವರ ಪಾತ್ರವೂ ಮನಸ್ಸಿಗೆ ನಿಲ್ಲುವುದಿಲ್ಲ. ಒಳ್ಳೆಯ ನಟರು, ದೊಡ್ಡ ಬ್ಯಾನರ್ ಮತ್ತು ಕನ್ನಡದ ಅತ್ಯಂತ ಜನಪ್ರಿಯ ನಟ ಇವೆಲ್ಲವನ್ನೂ ಇಟ್ಟುಕೊಂಡು ಒಂದು ಅತ್ಯದ್ಭುತ ಚಿತ್ರವನ್ನು ಕೊಡಬಹುದಾಗಿತ್ತು. ಆದರೆ ಸೂರಿ ಎಲ್ಲವನ್ನೂ ಹಾಳುಮಾಡಿಬಿಟ್ಟರು. ಸೂರಿ ನಾವು ನಿಮ್ಮನ್ನು ಕ್ಷಮಿಸುವುದಿಲ್ಲ. ಪುನೀತ್ ಅವರೇ ನಿಮ್ಮ ಮೇಲೆ ಬಹಳ ಜವಾಬ್ದಾರಿ ಇದೆ ಮತ್ತು ನಿಮ್ಮ ಮೇಲೆ ನಾವು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ನೀವು ನಮ್ಮನ್ನು ನಿರಾಸೆಗೊಳಿಸದಿರಿ.
ಪ್ರೇಮ್, ಸೂರಿ, ಯೋಗರಾಜ್ ಭಟ್, ಅವರುಗಳು ಹೀಗೇಕಾಗುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆ. ನೀವುಗಳು ಯಶಸ್ವಿ ಚಿತ್ರಗಳನ್ನು ಕೊಟ್ಟವರು. ಆದರೆ ಈಗ ಎಲ್ಲಿ ಹೊಯಿತು ನಿಮ್ಮ ಸೃಜನಶೀಲತೆ, ಕ್ರಿಯಾಶೀಲತೆ? ಏನೂ ಕೊಟ್ಟರೂ ಕನ್ನಡ ಜನ ನೋಡುತ್ತಾರೆ ಎಂಬ ಭ್ರಮೆಯೇ? ಬರೀ ಗಿಮಿಕ್ ನಿಂದ ಚಿತ್ರವನ್ನು ಗೆಲ್ಲಿಸಲಾಗುವುದಿಲ್ಲ. ಕಥೆ, ಚಿತ್ರಕಥೆ , ಸಾಹಿತ್ಯ, ಸಂಗೀತ, ಛಾಯಾಗ್ರಹಣ, ನಟನೆ ಇವುಗಳು ಯಾವುದೇ ಚಿತ್ರಕ್ಕೂ ಬಹಳ ಮುಖ್ಯ. ಇದರ ಮೇಲೆ ನಿರ್ದೇಶಕನ ಸೃಜನಶೀಲತೆ ಮತ್ತು ಅವನು ಅದನ್ನು ಹೇಗೆ ಕಟ್ಟಿಕೊಡುವವನು ಎಂಬುದರ ಮೇಲೆ ಚಿತ್ರದ ಯಶಸ್ಸು ಅಡಗಿರುವುದು. ಇದರಲ್ಲಿ ಯಾವುದೊಂದು ಸರಿಯಾಗಿಲ್ಲದಿದ್ದರೂ ಚಿತ್ರ ಮಲಗಿಕೊಂಡು ಬಿಡುತ್ತದೆ. ಇದು ನಿಮಗೆ ಗೊತ್ತಿಲ್ಲದ ವಿಷಯವೇನಲ್ಲ, ಅದರಲ್ಲೂ ಜನಪ್ರಿಯ ನಟ ಆ ಚಿತ್ರದಲ್ಲಿದ್ದರೆ ಚಿತ್ರದ ತೂಕ ಹೆಚ್ಚುತ್ತದೆ ಮತ್ತು ಆ ಚಿತ್ರದ ಬಗ್ಗೆ ಜನರ ಕುತೂಹಲ ಸಹ ಅತ್ಯಂತ ಮೇಲ್ಮಟ್ಟದಲ್ಲಿರುತ್ತದೆ. ಆದರೂ ಯಾಕೆ ನೀವು ಹೀಗೆ ಮಾಡುವಿರಿ? ಪ್ರೇಮ್ " ರಾಜ್ " ಚಿತ್ರವನ್ನು, ಭಟ್ಟರು " ಪರಮಾತ್ಮ " ಮತ್ತು ಸೂರಿ " ಅಣ್ಣಾ ಬಾಂಡ್ " ಚಿತ್ರವನ್ನು ಹಾಳು ಮಾಡಿಬಿಟ್ಟರು. ಈ ಮೂವರಿಗೂ ಪುನೀತ್ ಅವರ ಜನಪ್ರಿಯತೆ ಮತ್ತು ಅವರ ಸಹಜ ನಟನಾ ಕೌಶಲ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ಬರಲಿಲ್ಲ. ಈ ಮೂವರಿಗೂ ಒಂದು ಭ್ರಮೆ ಆವರಿಸಿಕೊಂಡಂತಿದೆ. ನಾವು ಹೇಗೆ ಮಾಡಿದರೂ ಚಿತ್ರವನ್ನು ಕನ್ನಡ ಪ್ರೇಕ್ಷಕರು ನೋಡುತ್ತಾರೆ ಎಂದು. ಕ್ಷಮಿಸಿ, ಅಭಿಮಾನಿ ದೇವರುಗಳಿಗೆ ವರ ಕೊಡುವುದೊ ಗೊತ್ತು ಮತ್ತು ಶಾಪ ಕೊಡುವುದೂ ಗೊತ್ತು.

Tuesday, 29 May 2012
ಜನರಿಕ್ ಔಷಧ ಮಳಿಗೆ
ಕಳೆದ ಭಾನುವಾರ ೨೭/೫/೧೨ ರಂದು ಪ್ರಸಾರವಾದ " ಸತ್ಯಮೇವ ಜಯತೆ " ಕಾರ್ಯಕ್ರಮವನ್ನು ನೋಡಿದವರಿಗೆ " ಜನರಿಕ್ ಡ್ರಗ್ಸ್ ಮಳಿಗೆ " ಬಗ್ಗೆ ಗೊತ್ತಿರುತ್ತದೆ. ನೋಡದೇ ಇರುವವರಿಗಾಗೆ ಜನರಿಕ್ ಓಷಧ ಮಳಿಗೆ ಎಂದರೆ ಏನು ಎಂಬ ಬಗ್ಗೆ ಚಿಕ್ಕ ಮಾಹಿತಿ. ಈಗ ನಾವು ಕೊಳ್ಳುತ್ತಿರುವ ಔಷಧಗಳನ್ನು ಜನರಿಕ್ ಔಷಧ ಮಳಿಗೆಯಲ್ಲಿ ಕೊಂಡರೆ ನಮಗೆ ಅದು ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ. ನಾವು ಅದನ್ನೇ ಇತರ ಔಷಧ ಅಂಗಡಿಗಳಲ್ಲಿ ಕೊಂಡರೆ ಒಂದಕ್ಕಿಂತ ಹೆಚ್ಚಿನೆ ಬೆಲೆಗೆ ಕೊಳ್ಳಬೇಕಾಗುತ್ತದೆ. ಉದಾಹರಣೆಗೆ ಕಾರ್ಯಕ್ರಮದಲ್ಲಿ ತೋರಿಸಿದಂತೆ ಸುಮಾರು ೨೩೦೦ ಬೆಲೆಯ ಔಷಧಿಗಳು ಈ ರೀತಿಯ ಜನರಿಕ್ ಔಷಧ ಮಳಿಗೆಗಳಲ್ಲಿ ಕೇವಲ ೩೫೦ ರೂಪಾಯಿಗಳಿಗೆ ದೊರಕುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಈ ರೀತಿಯ ಔಷಧ ಮಳಿಗೆಗಳು ಈಗ ಕೇವಲ ರಾಜಸ್ಥಾನ ರಾಜ್ಯದಲ್ಲಿ ಇದೆ. ಇದು ಇಡೀ ಭಾರತದಲ್ಲಿ ದೊರೆಯಬೇಕು ಎಂಬ ಸದಾಶಯದೊಂದಿಗೆ ಕಾರ್ಯಕ್ರಮ ಮುಗಿಯಿತು. ಒಂದು ಸೊಂತೋಷದ ಸುದ್ದಿ ಏನೆಂದರೆ ರಾಜ್ಯ ವೈದ್ಯ ಶಿಕ್ಷಣ ಇಲಾಖೆ ಜನರಿಕ್ ಡ್ರಗ್ಸ್ ಮಳಿಗೆ ಯನ್ನು ಪ್ರಾರಂ ಭಿಸುತ್ತಿದೆ. ಇಲ್ಲಿ ಜನರು ಶೇ.೫೦ರ ರಿಯಾಯಿತಿ ದರದಲ್ಲಿ ಔಷಧ ಪಡೆಯಬಹುದು ಎಂಬ ಸುದ್ದಿ ಇದೆ (೨೬/೫/೧೨ ಪತ್ರಿಕೆಯಲ್ಲಿ) ನಮ್ಮ ರಾಜ್ಯದ ೧೦ ವೈದ್ಯ ಕಾಲೇಜಿನಲ್ಲಿ ಜೂನ್ ೧೫ ರಿಂದ ಶೇ.೫೦ರ ರಿಯಾಯಿತಿ ದರದಲ್ಲಿ ಔಷಧ ದೊರಕಲಿದೆ. ಅದು ಯಾವ ಕಾಲೇಜು ಮತ್ತಿತರ ವಿವರಗಳು ಯಾರಿಗಾದರೂ ದೊರಕಿದರೆ ಅವರು ತಮ್ಮ ಫೇಸ್ ಬುಕ್ ನಲ್ಲಿ ಹಂಚಿಕೊಂಡು ಇತರರಿಗೆ ತಿಳಿಸಿದರೆ ಬಹಳ ಪ್ರಯೋಜನವಾಗುವುದು.
Monday, 28 May 2012
ರೆಬೆಲ್ ಸ್ಟಾರ್ " ಅಂಬರೀಷ್ "
" ಏ ಬುಲ್ ಬುಲ್ ಮಾತಾಡಕ್ಕಿಲ್ವಾ? " ಅಂತ ಕನ್ನಡ ಚಿತ್ರರಂಗಕ್ಕೆ ಪಡ್ಡೆ ಹುಡುಗನಾಗಿ ಕಾಲಿಟ್ಟ ಅಂಬಿ ನೋಡ ನೋಡುತ್ತಲೇ " ಇಲ್ಲೇ ಸ್ವರ್ಗ, ಇಲ್ಲೇ ನರಕ ಮೇಲೇನಿಲ್ಲಾ ಸುಳ್ಳು " ಎಂಬ ಅಧ್ಯಾತ್ಮದ ಪಾಠವನ್ನು ಮಾಡಿಬಿಟ್ಟರು. ಆಮೇಲೆ ಸ್ವಾಭಿಮಾನ ಅಡ್ಡ ಬಂದಾಗ "ಕುತ್ತೇ, ಕನ್ವರ್ ನಹೀ ಕನ್ವರ್ ಲಾಲ್ ಬೊಲೊ " ಎಂದು ಘರ್ಜಿಸಿದಾಗ ಎದುರಾಳಿ ಒಂದೇ ಏಟಿಗೆ ಸುಸ್ತು. ಈ ೪೦ ವರ್ಷಗಳಲ್ಲಿ ಅನೇಕ ಏಳು ಬೇಳುಗಳನ್ನು ಕಂಡ ಅಂಬಿ ಯಾವುದಕ್ಕೂ/ಯಾರಿಗೂ ಕೇರ್ ಮಾಡದ ವ್ಯಕ್ತಿತ್ವ ಅವರದು. ಅನೇಕ ನಿರ್ಮಾಪಕರು ಅವರು ಒಪ್ಪಿಕೊಂಡ ದುಡ್ಡು ಕೊಡದೇ ಹೊದರೂ ಅವರು ಯಾರನ್ನೂ ದೂಷಿಸಲಿಲ್ಲ. ಅವರ ಯಾವ ಚಿತ್ರಗಳು ನಿರ್ಮಾಪಕನಿಗೆ ಕೈ ಕಚ್ಚಲಿಲ್ಲ.
ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರಿಗೆ ಒಂದು ವಿಶಿಷ್ಟ ಸ್ಠಾನವಿದೆ. ಅಂಬಿ ಎಂದರೆ ಕಣ್ಣ ಮುಂದೆ ಬರುವುದು ಅವರ ಸ್ನೇಹ, ಹಾಸ್ಯ, ಕೀಟಲೆ, ಕೊಡುಗೈ ದಾನಿ. ಯಾವುದೇ ಸಮಸ್ಯೆ ಚಿತ್ರರಂಗದಲ್ಲಿ ಕಂಡುಬಂದರೆ ಅಲ್ಲಿ ಅಂಬಿಯ ಮಾತೇ ಅಂತಿಮ. ಚಿತ್ರರಂಗದಲ್ಲಿ ಅವರ ಮಾತನ್ನು ತಳ್ಳಿಹಾಕುವ ಧೈರ್ಯ ಯಾರಿಗೂ ಇಲ್ಲ. ಚಿತ್ರ ರಂಗದ ಒಳಹೊರಗನ್ನು ಚೆನ್ನಾಗಿ ಬಲ್ಲ ಅಂಬಿಯ ವ್ಯಕ್ತಿತ್ವದ ಮುಂದೆ ಬೇರೆಯವರ ಮಾತು ಗೌಣ. ಅಂಬರೀಷ್ ಅವರು ತಮ್ಮ ಕಲಾ ಜೀವನದಲ್ಲಾಗಲೀ, ನಿತ್ಯ ಜೀವನದಲ್ಲಾಗಲೀ ಹೆಚ್ಚು ತಲೆ ಕೆಡಿಸಿಕೊಳ್ಳದ ವ್ಯಕ್ತಿತ್ವ ಅವರದು. ಅವರು ಇನ್ನೂ ಹೆಚ್ಚಿನ ಗಮನ ನಟನೆಗೆ ಕೊಡಬಹುದಾಗಿತ್ತೇನೋ? ಅವರ ಸ್ನೇಹಿತರ ಬಳಗ ಬಹಳ ದೊಡ್ಡದು. ಅವರಿಗೆ ಇಡೀ ಭಾರತದಲ್ಲಿ ಮತ್ತು ಹೊರ ದೇಶದಲ್ಲಿ ಸಾವಿರಾರು ಸ್ನೇಹಿತರಿದ್ದಾರೆ. ಸ್ನೇಹ ಎಂದರೆ ಇನ್ನೊಂದು ಹೆಸರೇ ಅಂಬರೀಷ್.
ಪುಟ್ಟಣ್ಣನವರ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಅಂಬರೀಷ್ ತಮ್ಮ ರೆಬೆಲ್ ಪಾತ್ರದಿಂದ ನಮ್ಮ ಮನ ಸೊರೆಗೊಂಡವರು ನಾಗರಹೊಳೆ ಚಿತ್ರದ ಅಂಥೋಣಿ, ನಾಗರಹಾವು ಚಿತ್ರದ ಜಲೀಲ, ಕಿಲಾಡಿ ಜೊಡಿ ಚಿತ್ರದ ಕರಾಟೆ ಗುರು, ಶುಭ ಮಂಗಳ ಚಿತ್ರದ ಮೂಗ, ರಂಗನಾಯಕಿಯ ಪಾತ್ರ, ಹೀಗೆ ಬಂದು ಹಾಗೆ ಹೋಗುವ ಪಾತ್ರದಲ್ಲೂ ಅಂಬಿ ಸೂಪರ್. ಅವರ ಚಿತ್ರ ಜೀವನದಲ್ಲಿ " ಅಂತ " ಮತ್ತು " ಚಕ್ರವ್ಯೂಹ " ಸರ್ವಕಾಲೀನ ಯಶಸ್ವಿ ಚಿತ್ರಗಳು. ಅವರು ಸೌಮ್ಯ ಚಿತ್ರಗಳಲ್ಲಿ ನಟಿಸಿದ್ದು ಬಹಳ ಕಡಿಮೆ. ಅದರಲ್ಲಿ ಅತ್ಯಂತ ಗರ್ಮನಾರ್ಹವಾದದ್ದು " ಒಲವಿನ ಉಡುಗೊರೆ " ಮತ್ತು " ಹೃದಯ ಹಾಡಿತು ". ಅದನ್ನು ನೋಡಿದ ಪ್ರೇಕ್ಷಕರು ಅಂಬಿಯ ಇನ್ನೊಂದು ನಟನಾ ಮುಖವನ್ನು ನೋಡಿದರು.
ಮನೆಯಲ್ಲಿ ಹಿರಿಯರಿಗೆ ೬೦ ವರ್ಷತುಂಬಿದಾಗ ಅವರ ಬಂಧು, ಬಳಗ, ಸ್ನೇಹಿತರು ಎಲ್ಲರೂ ಒಟ್ಟಾಗಿ ಸೇರುವುದು ವಾಡಿಕೆ. ಇಂದು ಕನ್ನಡ ಚಿತ್ರರಂಗದ ಹಿರಿಯಣ್ಣ ಅಂಬರೀಷ್ ಅವರಿಗೆ ೬೦ ವರ್ಷದ ಸಂಭ್ರಮ. ಇದರ ಜೊತೆಗೆ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿ ೪೦ ವರ್ಷಗಳಾಗುತ್ತವೆ. ಕನ್ನಡ ಚಿತ್ರರಂಗವು ಮೂರು ದಿನ ಸ್ವಯಂಘೋಷಿತ ಬಂದ್ ಮಾಡಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾಲ್ಗೊಳ್ಳಲ್ಲಿದೆ. ಅಂಬಿಯನ್ನು ಹರಸಲು ಅಕ್ಕ ಪಕ್ಕದ ರಾಜ್ಯಗಳಿಂದ ಹೆಸರಾಂತ ನಟರು, ನಿರ್ದೇಶಕರು, ಸ್ನೇಹಿತರು ಬರಲಿದ್ದಾರೆ . ಅಂಬಿ ಅಭಿಮಾನಿಗಳಿಗೆ ಇದು ಮನೆ ಹಬ್ಬ ಇದ್ದಂತೆ. ಹುಡುಗಾಟದ ಹುಡುಗ ಅಂಬಿಗೆ " ಹುಟ್ಟು ಹಬ್ಬದ ಶುಭಾಶಯ " ಹೇಳಲು ಮರೆಯದಿರಿ.
ಸರ್, ನೀವು ಇನ್ನಾದರೂ ಸಿಗರೇಟ್ ಕಮ್ಮಿ ಮಾಡಿ. ನಿಮ್ಮನ್ನು ಪ್ರೀತಿಸುವ ಅಭಿಮಾನಿಗಳಿಗಾದರೂ ನೀವು ಸಿಗರೇಟ್ ಬಿಡಲೇಬೇಕು. ಇದು ನಮ್ಮ ಒತ್ತಾಯ ಕೂಡ ಹೌದು. ಇಲ್ಲ ಅಂತ ದಯವಿಟ್ಟು ಹೇಳಬೇಡಿ. ನೀವು ಒಮ್ಮೆ ಮಾತು ಕೊಟ್ಟರೆ ಮುಗೀತು. ಅದನ್ನು ಯಾವ ಕಾರಣಕ್ಕೂ ತೆಗೆಯುವುದಿಲ್ಲ. ನಮಗೆ ನೀವು ಬೇಕು. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ದೇವರು ಸುಖ, ಸಂತೋಷ, ಆರೋಗ್ಯ, ನೆಮ್ಮದಿ ಎಲ್ಲವನ್ನೂ ಕೊಟ್ಟು ಕಾಪಾಡಲಿ. ನಿಮಗೆ ಮತ್ತೊಮ್ಮೆ ಜನ್ಮ ದಿನದ ಶುಭಾಷಯಗಳು.

Saturday, 26 May 2012
ಕನ್ನಡ ಲಿಪಿಗಳು:
ಕನ್ನಡದಲ್ಲಿ ಇತ್ತೀಚೆಗೆ ಕನ್ನಡದ ಲಿಪಿಗಳನ್ನು ಸರಳೀಗೊಳಿಸಬೇಕು, ಕನ್ನಡದಲ್ಲಿ ಜಾಸ್ತಿ ಅಕ್ಷರಗಳಿವೆ ಅದನ್ನು ಕಡಿಮೆ ಮಾಡಬೇಕು. ಒತ್ತಕ್ಷರಗಳನ್ನು ಕಡಿಮೆ ಮಾಡಬೇಕು ಅವುಗಳನ್ನು ಬಳಸುವುದು ಕಷ್ಟ ಎಂಬ ವಾದ ವಿವಾದಗಳು ಹರಿದು ಬರುತ್ತಿವೆ. ಕೆಲವರಿಗೆ " ಶ, ಷ, ಸ, ಹ " ಮುಂತಾದ ಲಿಪಿಗಳು ಬೇಡ, ಮತ್ತೆ ಕೆಲವರಿಗೆ ಮಹಾ ಪ್ರಾಣ ಬೇಡ. ಇದು ಇಂದಿನ ಮಾತಲ್ಲ. ವರ್ಷಕ್ಕೊಂದು ಬಾರಿ ಹೀಗೆ ಸುಮ್ಮನೆ ಜನ ಸಾಮಾನ್ಯರಲ್ಲಿ ಗೊಂದಲವೆಬ್ಬಿಸುತ್ತಿದ್ದಾರೆ. ತಮಿಳಿನಲ್ಲಿ ’ಕ " ಅಕ್ಷರವಿಲ್ಲ, ಹಾಗಾಗಿ ಕನ್ನಡಕ್ಕೊ " ಕ " ಅಕ್ಷರ ಬೇಡ. " ಕ " ಬದಲಿಗೆ " ಗ " ಅಕ್ಷರವನ್ನು ಬಳಸೋಣ ಎಂಬ ಪುಕ್ಕಟ ಸಲಹೆ. ಅವರಿಗೆ " ಕ " ಅಕ್ಷರ ಬೇಡ ಎನಿಸಿದರೆ ಅದು ಅವರ ಇಚ್ಚೆ. (ಅವರು " ವಿನಾಯಕ "ನಿಗೆ " ವಿನಾಯಗ " ಎಂದು ಹೇಳಿದರೆ ನಾವು ಹಾಗೆಯೇ ಹೇಳಬೇಕೇನು) " ಕನ್ನಡ " ಕ್ಕೆ ಗನ್ನಡ ಎನ್ನಬೇಕೇನು? ನಾವು ಅವರಂತೆ ಯಾಕಾಗಬೇಕು? ಪ್ರತಿಯೊಂದು ಭಾಷೆಗೊ ಅದರದೇ ಆದ ಲಯ, ಸೊಗಸು, ವಯ್ಯಾರ, ಒನಪು ಇರುತ್ತದೆ. ಪ್ರತಿಯೊಂದು ಭಾಷೆಯೂ ಬೇರೆ ಬೇರೆಯಾಗಿದ್ದರೇನೇ ಚೆನ್ನ, ಅದೇ ವೈವಿದ್ಯತೆ. ಅನೇಕ ಭಾಷಾ ವಿಜ್ಞಾನಿಗಳು ಕನ್ನಡ ಒಂದು ಅತ್ಯದ್ಭುತ ಭಾಷೆ, ಅದು ವೈಜ್ಞಾನಿಕವಾಗಿ ೯೯.೯೯% ಸರಿಯಾಗಿದೆ. " ನಾವು ಏನನ್ನು ಹೇಳುತ್ತೇವೆಯೋ ಅದನ್ನೇ ಕನ್ನಡದಲ್ಲಿ ಬರೆಯಬಹುದು ಮತ್ತು ಏನನ್ನು ಬರೆಯುತ್ತೇವೆಯೋ ಅದನ್ನೇ ಓದಬಹುದು. ಇದು ಜಗತ್ತಿನಲ್ಲಿ ಕೇವಲ ಕೆಲವೇ ಕೆಲವು ಭಾಷೆಗಳಿಗೆ ಅನ್ವಯವಾಗುತ್ತದೆ " ಎಂದು ಅನೇಕ ಬಾರಿ ಹೇಳಿದ್ದಾರೆ. ಅದು ಸತ್ಯ ಕೂಡ ಹೌದು. ನಾವುಗಳು ಸ್ವಲ್ಪ ಸರಿಯಾಗಿ ಯೋಚಿಸಿದರೆ ನಮಗೆ ಅದು ಸರಿ ಎಂದು ಕೂಡ ಅನ್ನಿಸುತ್ತದೆ. ಕೆಲವರಿಗೆ ಅದೇಕೋ ಅದು ಪಥ್ಯವಾದಂತಿಲ್ಲ. ಕನ್ನಡದಲ್ಲಿ ಸಂಖ್ಯೆಗಳನ್ನೂ ಸಹ ಕನ್ನಡದ ಲಿಪಿಯಲ್ಲೇ ಬರೆಯಬಹುದು. ಇದೂ ಸಹ ಕೆಲವೇ ಭಾರತೀಯ ಭಾಷಗಳಲ್ಲಿ ಇಲ್ಲ.
ಮೊದಲು ನಮ್ಮ ವರ್ಣಮಾಲೆಯಲ್ಲಿ ೫೨ ಅಕ್ಷರಗಳು ಇದ್ದವು. ಕ್ರಮೇಣ ಅದನ್ನು ೫೦ ಕ್ಕೆ ಇಳಿಸಿದರು. ( " ೠ, ಆಃ " ಬೇಡ ಎಂದು.) ಈಗ ೪೯ ಕ್ಕೆ ಇಳಿಸಿದ್ದಾರೆ. ( " ಜ್ಞ" ಬೇಡ ಎಂದು.) ಮುಂದೆ ಅದನ್ನು ಎಷ್ಟಕ್ಕೆ ಇಳಿಸುತ್ತಾರೋ ಗೊತ್ತಿಲ್ಲ. ಈಗ ನಾವು ಬಳಸುತ್ತಿರುವ ಕನ್ನಡದಿಂದ ಯಾರಿಗಾದರೂ ತೊಂದರೆ ಉಂಟಾಗಿದ್ದರೆ, ಅವರು ಕನ್ನಡವನ್ನು ಚೆನ್ನಾಗಿ ಕಲಿತಿಲ್ಲ ಅಷ್ಟೇ. ಸ್ವಲ್ಪ ಪ್ರಯತ್ನ ಪಟ್ಟರೆ ಕಲಿಯಬಹುದು. ಅದು ಮಹಾ ದೊಡ್ಡ ವಿಷಯ ಅಲ್ಲ. ಈಗಿರುವ ಕನ್ನಡವನ್ನು ನಾವೆಲ್ಲೆರೂ ಕಲಿತಿಲ್ಲವೇ? ನಮ್ಮ ಮಕ್ಕಳೂ ಸಹ ಇದೇ ಕನ್ನಡವನ್ನು ಕಲಿತಿರುವುದು. ಚಿಕ್ಕ ಮಕ್ಕಳೂ ಸಹ ಕಲಿಯುವುದರಲ್ಲಿ ಹಿಂದೆ ಬಿದ್ದಿಲ್ಲ. ಮಕ್ಕಳು ಇನ್ನೂ ಚೆನ್ನಾಗಿ ಬೇಗ ಅರ್ಥಮಾಡಿಕೊಳ್ಳುತ್ತಾರೆ. ನಾವು ಮೊದಲು ಸರಿಯಾಗಿ ಕಲಿತು ನಂತರ ಅವರಿಗೆ ಕಲಿಸಬೇಕು ಅಷ್ಟೇ. ಇದನ್ನೇ ಕಷ್ಟ ಎಂದರೆ ಹೇಗೆ? ಒಂದೊಂದೇ ಲಿಪಿಯನ್ನು ಕಡಿಮೆ ಮಾಡಿಕೊಳ್ಳೂತ್ತಾ, ಕೊನೆಗೆ ಕನ್ನಡಕ್ಕೆ ಲಿಪಿ ಯಾಕೆ ಬೇಕು ಎಂಬ ವಾದ ಬಂದರೂ ಆಶರ್ಯವಿಲ್ಲ. ಈಗಿರುವ ಕನ್ನಡ ಹಳಗನ್ನಡ ಅಲ್ಲ, ಬಹಳ ಸರಳವಾಗಿದೆ. ಓದಲಿಕ್ಕಾಗಲೀ ಅಥವಾ ಬರೆಯಲಿಕ್ಕಗಲೀ ಕಷ್ಟ ಪಡಬೇಕಾಗಿಲ್ಲ. ಸ್ವಲ್ಪ ಪ್ರಯತ್ನ ಪಟ್ಟರೆ ಎಲ್ಲವೂ ಸರಳ, ಸುಲಭ. ಎಲ್ಲಕ್ಕಿಂತ ಮುಖ್ಯವಾಗಿ ಯಾವುದೇ ಭಾಷೆಯನ್ನಗಲೀ ಕಲಿಯಲು ಮೊದಲು ಪ್ರೀತಿ, ಅಭಿಮಾನವಿದ್ದರೆ ಸಾಕು. ಅದಿಲ್ಲದಿದ್ದರೆ ಎಲ್ಲವೂ ಕಷ್ಟ. ಭಾಷಾ ವಿದ್ವಾಂಸರು, ವಿಜ್ಞಾನಿಗಳು ಈ ಮೊದಲೇ ನಮಗೆ ಸುಂದರ, ಸುಮಧುರ ಲಿಪಿಯನ್ನು ಕೊಟ್ಟಿರಬೇಕಾದರೆ ನಾವು ಅದನ್ನು ಸರಿಯಾಗಿ ಉಪಯೋಗಿಸಿ ಅದನ್ನು ಜೀವಂತವಾಗಿ ಇಡಲು ಪ್ರಯತ್ನಿಸೊಣ. ಅದನ್ನು ಹಾಳು ಮಾಡುವುದು ಎಷ್ಟು ಸರಿ? ಇದರ ಬದಲು ಕನ್ನಡವನ್ನು ಆಂಗ್ಲ ಲಿಪಿಯಲ್ಲೇ ಬರೆಯಬಹುದಲ್ಲಾ? ಯಾಕೆ ಇಷ್ಟು ಕಷ್ಟ ಪಡಬೇಕು?
ಕನ್ನಡವು ಹಳಗನ್ನಡದಿಂದ ಸಾಕಷ್ಟು ರೂಪಾಂತರ ಹೊಂದಿ ನಡುಗನ್ನಡವಾಗಿ ಈಗ ಸರಳಗನ್ನಡವಾಗಿದೆ. ಇನ್ನಷ್ಟು ಅದನ್ನು ಎಳೆಯುವುದು ಬೇಡ. ಮತ್ತಷ್ಟು ಎಳೆದರೆ ತುಂಡಾಗುವುದು. " ಕನ್ನಡ ಒಂದು ರಾಷ್ಟ್ರೀಯ ಭಾಷೆ. ಅದು ತನ್ನದೇ ಆದ ಭಾಷೆ ಸಂಪತ್ತನ್ನು ಹೊಂದಿದೆ, ಹೀಗಾಗಿ ಬದಲಾವಣೆಯ ಆಲೋಚನೆಯೇ ಸರಿಯಲ್ಲ. ಭಾಷೆಯನ್ನು ಅದರ ಬೆಳವಣಿಗೆಯ ದೃಷ್ಟಿಯಿಂದ ನೋಡಬೇಕು. ಲಿಪಿ ಎಂಬುದು ಒಂದು ಸಂಸ್ಕೃತಿ. ಇದನ್ನು ಬದಲಿಸಿದರೆ ಸಂಸ್ಕೃತಿಯನ್ನೇ ಬದಲಿಸಿದಂತೆ " ಎಂದು ಡಾ.ಚಿದಾನಂದ ಮೂರ್ತಿಯವರು ಸರಿಯಾಗಿಯೇ ಹೇಳಿದ್ದಾರೆಂದು ನನ್ನ ಭಾವನೆ. ಕನ್ನಡದಲ್ಲಿ ಆಗಬೇಕಾದ ಕೆಲಸಗಳು ಬಹಳ ಇವೆ. ಆ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನಿಸೋಣ. ಅದು ಸರಿಯಿಲ್ಲ, ಇದು ಸರಿಯಿಲ್ಲ ಅಂತ ಹೇಳಿ ನಾವುಗಳು ನಿಂತ ಜಾಗದಲ್ಲೇ ಸುತ್ತಾಡುತ್ತಿದ್ದೇವೆ. ಇತರ ಭಾಷಿಕರು ನಮ್ಮಿಂದ ಈಗಾಗಲೇ ಬಹಳ ದೂರ ಸಾಗಿದ್ದಾರೆ. ನಾವೆಲ್ಲರೂ ಹೀಗೆ ತಪ್ಪುಗಳನ್ನೇ ಹುಡುಕುತ್ತಾ ಕಾಲ ಕಳೆಯುತ್ತಿದ್ದೇವೆ ಅಂತ ನನಗನಿಸುತ್ತದೆ.

Friday, 25 May 2012
ಯೋಜನೆಗಳು
ನಮ್ಮ ರಾಜ್ಯ/ದೇಶ, ಜನ ಸಾಮಾನ್ಯರಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ ಆ ಯೋಜನೆಗಳು ನಿಜವಾಗಿ ಕಾರ್ಯರೂಪಕ್ಕೆ ಬಂದರೆ ಎಷ್ಟು ಚೆನ್ನಾಗಿರುತ್ತಿತ್ತು, ಆದರೆ ಅದು ಹಾಗಾಗಿಲ್ಲ. ಇದು ನಮ್ಮ ದೇಶದ/ರಾಜ್ಯದ ಸಾಮಾನ್ಯ ಪ್ರಜೇಗೂ ಗೊತ್ತು. ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ನಮ್ಮ ಅಧಿಕಾರಿಗಳು ಎಡವಿದ್ದಾರೆ. ಒಮ್ಮೆ ರಾಜೀವ್ ಗಾಂಧಿಯವರು, ನಾನು ಒಂದು ರೂಪಾಯಿಯನ್ನು ಯಾವುದಾದರೂ ಯೋಜನೆಗೆ ಬಿಡುಗಡೆ ಮಾಡಿದರೆ ಅದು ಜನ ಸಮಾನ್ಯರಿಗೆ ತಲುಪುವಾಗ ಕೇವಲ ೧೬ ಪೈಸೆಗಳಾಗುವುವು ಎಂದು ಒಮ್ಮೆ ಹೇಳಿದ್ದರು. ಯೋಜನೆಗಳಿಗಾಗಿ ಬಿಡುಗಡೆಯಾಗುವ ಪ್ರತಿಯೊಂದು ಪೈಸೆಯೂ ನಿಜವಾದ ಅರ್ಥದಲ್ಲಿ ಉಪಯೋಗಕ್ಕೆ ಬರುವಂತಿದ್ದರೆ ನಮ್ಮ ರಾಜ್ಯ/ದೇಶ, ಇಡೀ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿರುತ್ತಿತ್ತು. ಅನೇಕ ಯೋಜನೆಗಳು ಕೇವಲ ದುಡ್ಡು ತಿನ್ನುವುದಕ್ಕಾಗಿಯೇ ರೂಪಗೊಂಡತಹವದ್ದು. ನಮ್ಮ ರಾಜ್ಯ/ದೇಶದ ಯಾವುದೇ ಯೋಜನೆಗಳನ್ನು ನೋಡಿ, ಅನೇಕ ಯೋಜನೆಗಳು ಪ್ರಾರಂಭದಲ್ಲಿ ತುಂಬಾ ಚೆನ್ನಾಗಿಯೇ ಇರುತ್ತವೆ, ಕ್ರಮೇಣ ಹಾದಿ ತಪ್ಪುತ್ತದೆ. ಉದಾಹರಣೆಗೆ: ಖಾಸಗಿ ಶಾಲೆಯಲ್ಲಿ ೨೫% ಬಡ ಮಕ್ಕಳಿಗೆ ಶಿಕ್ಷಣ, ಮಕ್ಕಳಿಗೆ ಬಿಸಿಯೂಟ, ರೈತರಿಗೆ ೨-೪% ಸಾಲ, ಗೊಬ್ಬರಕ್ಕೆ ಸಹಾಯಧನ, ಉಚಿತ ಶಿಕ್ಷಣ/ಆರೊಗ್ಯ, ಆಶ್ರಯ, ಭಾಗ್ಯಲಕ್ಷಿ ಯೋಜನೆಗಳು, ಮಕ್ಕಳಿಗೆ ಶಾಲೆಗೆ ಹೋಗಲು ಸೈಕಲ್, ಹೆಣ್ಣು ಮಕ್ಕಳಿಗೆ ಉಚಿತ ಹೊಲಿಗೆ ಯಂತ್ರ, ಸ್ವಂತ ಉದ್ಯೋಗಕ್ಕಾಗಿ ಸಾಲ, ಹೀಗೆ ಎಲ್ಲವೂ ಚೆನ್ನಾಗಿದೆ, ಆದರೆ ಅದು ಕೇವಲ ಕಾಗದದ ಮೇಲೆ. ನಿಜವಾಗಿ ಅದು ದೊರಕ ಬೇಕಾದವರಿಗೆ ದೊರಕಿದರೆ ಚೆನ್ನ. ಸಾರ್ವಜನಿಕರು ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಇಂತಹ ಯೋಜನೆಗಳನ್ನು ತಮ್ಮ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಕೆಲವರು ಇದರ ಪ್ರಯೋಜನವನ್ನೂ ಪಡೆದುಕೊಂಡಿದ್ದಾರೆ. ಆದರೆ ಸಾಮಾನ್ಯವಾಗಿ ಅದು ರಾಜಕೀಯ ವ್ಯಕ್ತಿಗಳ ಹಿಂಬಾಲಕರಿಗಾಗಿ ಉಪಯೋಗವಾಗುತ್ತಿದೆ. ಅನೇಕ ಕಾರಣಗಳಿಂದಾಗಿ ಅದು ತಲಪಬೇಕಾದ ಜನರಿಗೆ ತಲಪುವುದಿಲ್ಲ. ಎಲ್ಲೆಲ್ಲೂ ಕೇವಲ ರಾಜಕೀಯ ಕಾರಣಗಳೇ ತುಂಬಿರುತ್ತದೆ. ಅದರಿಂದ ನಮಗೇನು ಲಾಭ ಸಿಗುತ್ತದೆ ಎಂಬುದರ ಮೇಲೆಯೇ ಅದು ಅವಲಂಬಿಸಿರುತ್ತದೆ.
Wednesday, 23 May 2012
"ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ"
ಪಾಕೀಸ್ತಾನದಲ್ಲಿ ಬಾಲೀವುಡ್ ಚಿತ್ರಗಳಿಂದ ನಮ್ಮ ಚಿತ್ರಗಳಿಗೆ ಹೊಡೆತ ಬೀಳುತ್ತಿದೆ, ಆದ್ದರಿಂದ ಬಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಕೂಗು ಹಬ್ಬಿದೆ. ಈಗ ಹಾಲೀವುಡ್ ಚಿತ್ರಗಳು ಹಿಂದಿಗೆ ಡಬ್ ಆಗಿ ಭಾರತದಲ್ಲಿ ಬಿಡುಗಡೆ ಯಾಗುತ್ತಿವೆ. ಇಂತಹ ಡಬ್ ಆದ ಚಿತ್ರಗಳಿಂದ ಮೂಲ ಹಿಂದಿ ಚಿತ್ರಕ್ಕೆ ಧಕ್ಕೆ ಉಂಟಾಗುತ್ತಿದೆ. ಆದ್ದರಿಂದ ಡಬ್ ಆದ ಹಾಲೀವುಡ್ ಚಿತ್ರಗಳನ್ನು ನಿಷೇದಿಸಿ ಎಂದು ಮಹೇಶ್ ಭಟ್ ಮುಂತಾದ ಚಿತ್ರ ನಿರ್ದೇಶಕರು ಕೂಗೆಬ್ಬಿಸಿದ್ದಾರೆ. ಹಿಂದಿಯ ನಿರ್ಮಾಪಕರು ಕೂಡ ಇವರಿಗೆ ಜೊತೆಗೂಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ವೇದಿಕೆ ಸಹ ಸಿದ್ದವಾಗುತ್ತಿದೆ. ಡಬ್ಬಿಂಗ್ ನಿಷೇದಿಸುವಂತೆ ಕೇಂದ್ರ ಸಚಿವಾಲಯದ ಮೇಲೆ ಒತ್ತಡ ಹೇರಲು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಆಂಧ್ರ ಪ್ರದೇಶದ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸುರೇಶ್ ಬಾಬು ಡಬ್ಬಿಂಗ್ ವಿರೋಧಿ ನಿಲುವು ತಾಳಿದ್ದಾರೆ. ಇಂತಹ ಚಿತ್ರಗಳಿಂದ ನಮ್ಮ ಮಾರುಕಟ್ಟೆಗೆ ಹೊಡೆತ ಎಂದು ಹೇಳುತ್ತಾರೆ. ಮಲೆಯಾಳಂ ಚಿತ್ರರಂಗದಲ್ಲೂ ಡಬ್ಬಿಂಗ್ ನಿಷೇದಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಒಂದೆಡೆ ಹಿಂದಿ, ತೆಲುಗು, ಮಲೆಯಾಳಂ ಚಿತ್ರರಂಗದವರು ಡಬ್ ಚಿತ್ರಗಳ ವಿರೋಧಿಗಳಾಗುವ ಹೊತ್ತಿಗೆ ಕನ್ನಡದಲ್ಲಿ ಡಬ್ ಚಿತ್ರಗಳು ಬೇಕು ಎಂಬ ಕೂಗು. ಇದಕ್ಕಲ್ಲವೇ ಕವಿ ಹೇಳಿರುವುದು "ಇರುವುದೆಲ್ಲವ ಬಿಟ್ಟು ಇರದಿರುವದೆರೆಡೆಗೆ ಚೇತನ" ಎಂದು. ಮಿಕ್ಕ ವಿವರಗಳಿಗಾಗಿ ೨೦/೪/೧೨ ರ (www.vijayanextepaper.com) ನೋಡಿ.
Tuesday, 22 May 2012
ವಿಚ್ಚೇದನ ಸಮಸ್ಯೆ:
ನನ್ನ ಗಂಡ ಮದುವೆಯಾಗಿ ಎರಡು ತಿಂಗಳಾದರೂ ಫೇಸ್ ಬುಕ್ ನಲ್ಲಿ ತಾನು ಮದುವೆಯಾದ ಸುದ್ದಿಯನ್ನು ಅಪ್ ಲೋಡ್ ಮಾಡದ ಕಾರಣ ನನಗೆ ಅವನಿಂದ ವಿಚ್ಚೇದನ ಬೇಕು" ಎಂದು ಯುವತಿಯೊಬ್ಬಳು ನ್ಯಾಯಾಲಯದಲ್ಲಿ ಅರ್ಜಿಯನ್ನು ಹಾಕಿಕೊಂಡಿರುವ ಸುದ್ದಿ ಟಿ.ವಿಯಲ್ಲಿ ನೋಡಿ ವಿಚಿತ್ರವೆನಿಸಿತು. ಇಂದು ವಿಚ್ಚೇದನ ಸಮಸ್ಯೆ ಮಹಾನಗರಗಳಷ್ಟೆ ಅಲ್ಲ ಸಣ್ಣ ಪುಟ್ಟ ನಗರಗಳನ್ನೂ ಕಾಡುತ್ತಿದೆ. ಇಂದಿನ ಜನಾಂಗದ ತರುಣ/ತರುಣಿಯರು ವಿದ್ಯಾವಂತರು, ಬುದ್ದಿವಂತರು, ಆರ್ಥಿಕವಾಗಿಯೂ ಸಹ ತಮ್ಮ ಕಾಲಮೇಲೆ ನಿಲ್ಲಬಲ್ಲಂತವರು. ಸ್ವಲ್ಪ ತಾಳ್ಮೆ, ವಿಶ್ವಾಸ, ಪ್ರೀತಿಯಿಂದ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಜೀವನ ಸಾಗಿಸಿದರೆ ಅವರವರ ತಂದೆ ತಾಯಿಯರು ಕೊನೆಕಾಲದಲ್ಲಿ ನೆಮ್ಮದಿಯಿಂದ ಇರುವರೆನೋ? ಮದುವೆಯಾಗಿ ಮಗಳು ಒಂದೆರೆಡು ತಿಂಗಳಿಗೇ ತನ್ನ ತವರು ಮನೆಗೆ ಜಗಳವಾಡಿ ಕೊಂಡು ಬಂದರೆ ಅವರ ತಂದೆ ತಾಯಿ ಸಹ ಏನು ಮಾಡಿಯಾರು? ಮಗನಿಗೆ ಮದುವೆ ಮಾಡಿ ಸೊಸೆ ಬಂದ ಖುಷಿ ಕೆಲವೇ ತಿಂಗಳಲ್ಲಿ ಮರೆಯಾದರೆ, ಆ ಹಿರಿಯರನ್ನು ಸಂತೈಸುವವರು ಯಾರು? ಮನೆಯಲ್ಲಿ ಇನ್ನೂ ಮದುವೆಯಾಗದವರು ಇದ್ದರೆ ಅವರ ಮುಂದಿನ ಭವಿಷ್ಯದ ಬಗ್ಗೆ ಹಿರಿಯರಿಗೆ ಏನೂ ಮಾಡಲೂ ತೋಚುವುದಿಲ್ಲ. ಈಗ ಯಾವುದೋ ಕ್ಷುಲ್ಲಕ ಕಾರಣದಿಂದ ವಿಚ್ಚೇದವಾದರೆ ಮುಂದೆ ಅವರ ಜೀವನ ಹೇಗೆ? ಅಕಸ್ಮಾತ್ ಮಕ್ಕಳಿದ್ದರೆ ಅವರ ಗತಿ ಏನು? ಇವರ ಜಗಳದಲ್ಲಿ ಮಕ್ಕಳು ಪಾಪ ಏನು ಮಾಡಬೇಕು? ಹೀಗೆ ಪ್ರಶ್ನೆ ಮೇಲೆ ಪ್ರಶ್ನೆಗಳು. ಇಂದು ಮಾಡಿದ ತಪ್ಪು ಮುಂದೆ ಅವರಿಗೆ ಅರಿವಾದರೂ ಸಹ ಏನು ಪ್ರಯೋಜನ? ನೀವು ಬೇರೆ ಮದುವೆ ಆಗಬಹುದು, ಇಲ್ಲಾ ಒಂಟಿ ಜೀವನ ನಡೆಸಬಹುದು. ಅದು ನಿಮ್ಮ ಇಷ್ಟ, ನಿಮ್ಮ ಬದುಕು. ಆದರೆ ಅದು ನಿಮ್ಮ ಮಕ್ಕಳನ್ನು ಕಾಡಬಾರದು. ಅವರಿಗೆ ಅದು ಹೊರೆಯಾಗಬಾರದು. ಎಲ್ಲವನ್ನೂ ಗಮನಿಸಿ ಯಾರಿಗೂ ತೊಂದರೆ ಆಗದ ಹಾಗೆ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳ್ಬಲ್ಲ ಪ್ರಯತಿನಿಸಬಹುದು.
ದೈಹಿಕವಾಗಿ, ಮಾನಸಿಕವಾಗಿ ನಿಮಗೆ ಕಿರುಕುಳವಾಗುತ್ತಿದ್ದರೆ, ವರದಕ್ಷಿಣೆ ಮುಂತಾದ ಸಮಸ್ಯೆಗಳಿದ್ದರೆ ಅಥವಾ ನಿಮಗೆ ನಿಜವಾಗಿಯೂ ಅವನ/ಅವಳ ಜೊತೆ ಬಾಳುವುದು ಸಾದ್ಯವೇ ಆಗುವುದಿಲ್ಲ ಎಂದರೆ ಮಾತ್ರ ವಿಚ್ಚೇದನದ ಬಗ್ಗೆ ಯೋಚಿಸಬಹುದು. ವಿಚ್ಚೇದನ ಕಟ್ಟ ಕಡೆಯ ಅಸ್ತ್ರವಾಗಬೇಕೇ ಹೊರತು ಅದೇ ಮೊದಲ ಪರಿಹಾರವಾಗಬಾರದು. ಕಾಲವು ಯಾರನ್ನೂ ಕಾಯುವುದಿಲ್ಲ ಅಲ್ಲವೇ? ಮುಖ್ಯವಾಗಿ ನಾವು ಕಂಡ ಕನಸುಗಳೆಲ್ಲವೂ ನಿಜ ಜೀವನದಲ್ಲಿ ನನಸಾಗುವುದು ಬಹಳ ಕಷ್ಟ. ಕೇವಲ ೧೦% ಸಹ ಒಂದೊಂದು ಸಲ ನಿಜವಾಗುವುದಿಲ್ಲ. ಜೀವನವೆನ್ನುವುದು ಆಶ್ಚರ್ಯಗಳ ಅಗರ, ಅದು ಹೀಗೇ ಆಗುತ್ತದೆ ಎಂದು ಹೇಳುವುದಕ್ಕಾಗುತ್ತದೆಯೇ? ವಿಚ್ಚೇದನ ಬಯಸುವವರು ತಮ್ಮ ತಮ್ಮ ತಂದೆ, ತಾಯಿಯರನ್ನು, ಅವರು ಬದುಕುತ್ತಿರುವುದನ್ನು ನೋಡಿ ಅರಿತುಕೊಂಡರೆ, ಇಂತಹ ವಿಚ್ಚೇದನಕ್ಕೆ ಸ್ವಲ್ಪ ವಾದರೂ ಕಡಿವಾಣ ಹಾಕಬಹುದು. ಸಣ್ಣ ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿಕೊಂಡು ನಮ್ಮ ಹಿರಿಯರು ವಿಚ್ಚೇದನ ಪಡೆದಿದ್ದರೆ ಇಡೀ ಭಾರತದಲ್ಲಿ ಬರೀ ವಿಚ್ಚೇದಿತರೇ ತುಂಬಿರುತ್ತಿದ್ದರೆನೋ? ಪಾಶ್ಚಿಮಾತ್ಯ ದೇಶದಲ್ಲಿ ವಿಚ್ಚೇದನ ಒಂದು ಹಕ್ಕು ಎಂದು ಪರಿಗಣಿಸಿದರೆ, ನಮ್ಮ ದೇಶದಲ್ಲಿ ಒಂದು ಸಮಸ್ಯೆಯಾಗಿರುವುದು ವಿಪರ್ಯಾಸ.

Monday, 21 May 2012
ಮಾಜಿ ಶಾಸಕರ ನಿವೃತ್ತಿ ವೇತನ:
ನಮ್ಮ ರಾಜ್ಯದಲ್ಲಿ ಸುಮಾರು ೭೦೦ ಮಾಜಿ ಶಾಸಕರಾಗಿದ್ದಾರೆ. ಒಂದು ಸಲ ಶಾಸಕರಾದರೆ ೨೫,೦೦೦, ಎರಡು ಬಾರಿ ಶಾಸಕರಾದರೆ ೩೦,೦೦೦ ಮತ್ತು ಮೂರಕ್ಕಿಂತ ಹೆಚ್ಚು ಬಾರಿ ಶಾಸಕರಾದರೆ ೩೫,೦೦೦ ನಿವೃತ್ತಿ ವೇತನ ಜೀವನಪರ್ಯಂತ ಪಡೆಯಬಹುದು. ಆ ಶಾಸಕನ ಮರಣದ ನಂತರ ೫೦% ಅವರ ಕುಟುಂಬ ವರ್ಗ ಪಡೆಯಬಹುದು. ಶಾಸಕರು ಮಾಜಿಯಾದ ಬಳಿಕ ವಿಧಾನ ಪರಿಷತ್, ಸಂಸತ್ತು, ರಾಜ್ಯಸಭೆಗೆ ಆಯ್ಕೆಯಾಗಿ ಅಲ್ಲಿ ಮಾಜಿಗಳಾದರೆ ಎಲ್ಲಾ ಕಡೆಯೂ ನಿವೃತ್ತಿ ವೇತನ ಪಡೆಯಲು ಅರ್ಹರು.
ಜನ ಸಾಮಾನ್ಯರು ಒಮ್ಮೆ ಆಪರೇಷನ್ ಮಾಡಿಸಿಕೊಂಡರೆ ಲಕ್ಷ ಲಕ್ಷ ಖರ್ಚು. ಆದರೆ ಶಾಸಕರು ರಾಜೀನಾಮೆ ಕೊಟ್ಟು ಆಪರೇಷನ್ ಮಾಡಿಸಿಕೊಂಡರೆ ಕೋಟಿ ಕೋಟಿ ಸಂಪಾದನೆ. ಜೊತೆಗೆ ಮಂತ್ರಿ ಪದವಿ, ಗೂಟದ ಕಾರು, ಬಂಗಲೆ, ಸಹಾಯಕ, ಮತ್ತಿನ್ನೇನು ಬೇಕ್ರಿ?. ಹಾಜಿ ಶಾಸಕರಿಗೆ ವೇತನದ ಜೊತೆಗೆ ೫ ಲಕ್ಷ ಕಾರ್ ಲೋನಿಗೆ, ೫೦,೦೦೦ ಗಣಕಯಂತ್ರಕ್ಕೆ, ೫೦,೦೦೦ ವಿಮಾನ ಪ್ರಯಾಣಕ್ಕೆ, ವೈದ್ಯಕೀಯ ಖರ್ಚು ಬೇರೆ, ದೊರವಾಣಿಗೆ ೧೦,೦೦೦, ಪೆಟ್ರೋಲ್ ಗಾಗಿ ೪,೦೦೦, ಸಹಾಯಕ ಹುಡುಗನಿಗಾಗಿ ೫,೦೦೦, ಕ್ಷೇತ್ರದ ಭತ್ಯೆ ೧೫,೦೦೦ ಮತ್ತು ಶಾಸನ ಸಭೆ ನಡೆಯುವಾಗ ಒಂದು ದಿನಕ್ಕೆ ೬೦೦ ರೂಪಾಯಿಗಳು. ಒಂದು ಬಾರಿ ವಿದೇಶ ಸುತ್ತುವ ಯೋಗ, ಲ್ಯಾಪ್ ಟಾಪ್, ಮೊಬೈಲ್ ಉಚಿತ. ಅದೃಷ್ಟ ಚೆನ್ನಾಗಿದ್ದರೆ ವರ್ಷಕ್ಕೆ ೩-೪ ಬಾರಿ ರೆಸಾರ್ಟ್ ಯೋಗ. ಶಾಸಕರಾಗಲು ಬೇಕಾದ ಎಲ್ಲಾ ಅರ್ಹತೆಗಳು ನಿಮ್ಮಲ್ಲಿದ್ದರೆ ಒಮ್ಮೆ ಪ್ರಯತ್ನಿಸಿ. ಇನ್ನೇನು ಚುನಾವಣೆಗಳು ಬರುವ ಸಂಭವವಿದೆ.

Sunday, 20 May 2012
ಪಾಶ್ಚಿಮಾತ್ಯ ಕಂಪನಿಗಳ ಕುತಂತ್ರ:
ಪಾಶ್ಚಿಮಾತ್ಯ ಕಂಪನಿಗಳು ಕಾಳಿಕಾ ದೇವಿಯ ಕೈಯಲ್ಲಿ ಬೀರ್ ಬಾಟಲ್, ಬಿಕನಿಯ ಮೇಲೆ ಸರಸ್ವತಿ, ಲಕ್ಷ್ಮಿ ಚಿತ್ರಗಳು, ಚಪ್ಪಲಿ, ಬೂಟಿನ ಮೇಲೆ "ಓಂ" ಚಿಹ್ನೆ ಅಥವಾ ಹನುಮಾನ್, ಗಣಪತಿ ಚಿತ್ರಗಳನ್ನು ಮುದ್ರಿಸಿ ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆ ಬಿಡುತ್ತಿರುವುದು ನಿನ್ನೆ ಮೊನ್ನೆಯ ಮಾತಲ್ಲ. ಸುಮಾರು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಹಿಂದು ಸಂಘಟನೆಗಳು ಇದರ ಬಗ್ಗೆ ಕೂಗಿ ಗಲಾಟೆ ಎಬ್ಬಿಸಿದಾಗ ಮಾತ್ರ, ಕ್ಷಮಿಸಿ ಎನ್ನುವ ನಾಟಕ ಮಾಡುತ್ತಾರೆ. ಇದು ವಿಕೃತ ಮನಸ್ಸಿನ ಪರಮಾವಧಿ. ಇದು ಘೋರ ಅಪರಾಧ. ತಪ್ಪಿತಸ್ತರಿಗೆ ಸರಿಯಾದ ಶಿಕ್ಷೆ ಆದರೆ ಮಾತ್ರ ಇಂತಹ ವಿಕೃತಿಗೆ ಕಡಿವಾಣ ಹಾಕಬಹುದು. ಇದಕ್ಕಾಗಿಯೇ ಕಾನೂನು ಸಹ ಇದೆ. ಪ್ರತಿಯೊಂದು ಜಾತಿ/ಧರ್ಮಕ್ಕೊ ಅದರದೇ ಆದ ನಂಬಿಕೆ, ಸಂಸ್ಕೃತಿ, ಅಚಾರ, ವಿಚಾರಗಳು ಇರುತ್ತದೆ. ಅದನ್ನು ಹೀಯಾಳಿಸುವುದಾಗಲೀ, ವಿಕೃತವಾಗಿ ಚಿತ್ರಿಸುವ ಹಕ್ಕಾಗಲೀ ಯಾರಿಗೂ ಇಲ್ಲ. ನಿಜವಾದ ಧರ್ಮ ಪಾಲಕರು ಯಾರೂ ಇಂತಹ ಕೆಲಸವನ್ನು ಮಾಡುವುದಿಲ್ಲ. ತನ್ನ ಧರ್ಮವನ್ನು ಯಾರು ನಿಜವಾಗಿ ಪ್ರೀತಿಸುತ್ತಾರೋ, ಗೌರವಿಸುತ್ತಾರೊ ಅಂಥಹವರು ಮಾತ್ರ ಬೇರೆಯ ಧರ್ಮವನ್ನು ಗೌರವಿಸುತ್ತಾರೆ. ನಿಜವಾದ ಬಲಶಾಲಿ ಮಾತ್ರ ಮತ್ತೊಬ್ಬ ಬಲಶಾಲಿಯನ್ನು ಗೌರವಿಸುತ್ತಾನೆ.
Saturday, 19 May 2012
ಹಾಡುಗಳ ಮಹತ್ವ:
ನಮ್ಮ ಭಾರತೀಯ ಚಿತ್ರಗಳಲ್ಲಿ, (ಅದು ಯಾವುದೇ ಭಾಷೆಯಲ್ಲಿರಲಿ) ಹಾಡುಗಳಿಲ್ಲದಿದ್ದರೆ, ಏನೊ ಒಂದು ರೀತಿಯ ಹಪಹಪಿ. ಕೆಲವು ಚಿತ್ರಗಳು ಕೇವಲ ಹಾಡುಗಳಿಂದಲೇ ಯಶಸ್ವಿಯಾಗಿರುವುದುಂಟು. ನಮ್ಮಲ್ಲಿ ಚಲನಚಿತ್ರ ಗೀತೆಗಳಿಗೆ ಹೆಸರಾದ ಹಾಡುಗಾರರೆಂದರೆ, ಮುಖೇಶ್, ಮಹಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್, ಆಶಾ ಭೊನ್ಲೆ, ಹಿಂದಿ ಚಿತ್ರಗೀತೆಗಳಿಗೆ ಮತ್ತು ಘಂಟಸಾಲ, ಪಿ.ಬಿ.ಶ್ರೀನಿವಾಸ್, ಯೇಸುದಾಸ್, ಎಸ್.ಪಿ.ಬಾಲಸುಬ್ರಮಣ್ಯಂ, ಪಿ.ಆರ್.ಸುಶೀಲ, ಎಸ್.ಆರ್.ಜಾನಕಿ, ಚಿತ್ರ, ಎಲ್.ಆರ್.ಈಶ್ವರಿ ದಕ್ಷಿಣ ಭಾರತಕ್ಕೆ. ಇವರೆಲ್ಲಾ ಗಾನ ಗಂಧರ್ವ ಕಿನ್ನರರು. ನಮ್ಮ ರಾಜ್ ಕುಮಾರ್ ನಾಯಕ ನಟರಾಗಿದ್ದುಕೊಂಡು ಗಾಯನಕ್ಕಾಗಿ "ರಾಷ್ಟ್ರ ಪ್ರಶಸ್ತಿ" ಪಡೆದ ಭಾರತೀಯ ಚಿತ್ರರಂಗದ ಏಕೈಕ ಗಾನ ಗಂಧರ್ವ ಕಿನ್ನರ. ಹಾಡುಗಳು ಎಂದಾಕ್ಷಣ ತಕ್ಷಣಕ್ಕೆ ಹೊಳೆಯುವುದು. ಆ ಹಾಡುಗಳ ಸಾಹಿತ್ಯ, ಅದನ್ನು ಬರೆದವರು, ಸಂಗೀತ ಸಂಯೋಜನೆ ಮಾಡಿದವರು, ಹಾಡಿದವರು ಮತ್ತು ಆ ದೃಶ್ಯವನ್ನು ಕಟ್ಟಿಕೊಟ್ಟ ನಿರ್ದೇಶಕರು, ಈ ನಾಲ್ವರೂ ನೆನಪಾಗುತ್ತಾರೆ. ಈ ಎಲ್ಲಾ ಸರಸ್ವತಿ ಪುತ್ರ/ಪುತ್ರಿಯರಿಂದ ಒಂದು ಅದ್ಭುತ ಸೃಷ್ಟಿಯಾಗುತ್ತದೆ.
ಹಾಡುಗಳು ನಮ್ಮನ್ನು ಅಳಿಸತ್ತದೆ, ನಗಿಸುತ್ತದೆ, ನಿದ್ದೆ ಮಾಡಿಸುತ್ತದೆ, ಕುಣಿಸುತ್ತದೆ, ವಿರಹ ಉಂಟುಮಾಡತ್ತದೆ, ಪ್ರೀತಿ ಮೂಡಿಸುತ್ತದೆ, ಪ್ರೇಮಿಸುವಂತೆ ಮಾಡಿಸುತ್ತದೆ, ರಸಿಕನನ್ನಾಗಿ ಮಾಡುತ್ತದೆ, ಅಣ್ಣ-ತಂಗಿ ಬಾಂಧವ್ಯ ಬೆಸೆಯತ್ತದೆ, ತಂದೆ/ತಾಯಿ/ಗುರು/ಹಿರಿಯರನ್ನು ಗೌರವಿಸುವಂತೆ ಮಾಡಿಸುತ್ತದೆ, ಸ್ನೇಹಕ್ಕೆ ಕಟ್ಟು ಬೀಳಿಸುತ್ತದೆ, ದೈವಕ್ಕೆ ಶರಣಾಗಿಸುತ್ತದೆ, ದೇಶ ಭಕ್ತಿ ತುಂಬುತ್ತದೆ, ನಾಡು/ನುಡಿ ಬಗ್ಗೆ ಪ್ರೇಮ ಉಕ್ಕಿಸುತ್ತದೆ, ನಮ್ಮನ್ನು ನೋಯಿಸುತ್ತದೆ, ನಲಿಸುತ್ತದೆ, ಒಟ್ಟಾಗಿ ಕೂಡಿ ಬದುಕಲು ಕಲಿಸುತ್ತದೆ, ಒಬ್ಬಂಟಿಯಾಗಿದ್ದಾಗ ಸಂಗಾತಿಯಾಗುತ್ತದೆ, ಜೀವದ ಬೆಲೆ ತಿಳಿಸಿಕೊಡುತ್ತದೆ, ಅದಕ್ಕಿಂತ ಹೆಚ್ಚಾಗೆ ನಾವು ಸೋತಾಗ ನಮ್ಮನ್ನು ಕೈಹಿಡಿದು ಮುಂದೆ ನಡೆಸುತ್ತದೆ, ಬದುಕು ಕಟ್ಟಿಕೊಡತ್ತೆ. ಒಂದು ಕ್ಷಣ ನಮ್ಮನ್ನು ನಾವೇ ಮರೆಯುವಂತೆ ಮಾಡುತ್ತದೆ. ಹೀಗೆ ಎಲ್ಲವನ್ನೂ ಮಾಡುವ ಶಕ್ತಿ ಕೇವಲ ಹಾಡುಗಳಿವೆ. ಮೂರು ನಿಮಿಷದ ಹಾಡು ಇನ್ನೇನು ಮಾಡಬೇಕು? ಸಾಕಲ್ವಾ.....
ಅಣುಸ್ಥಾವರಗಳು:
ಜಪಾನ ಒಂದು ಪುಟ್ಟ ದ್ವೀಪ ರಾಷ್ಟ, ಅಲ್ಲಿ ಭೂಕಂಪ, ಸುನಾಮಿ ಸರ್ವೇಸಾಮಾನ್ಯ. ಕಳೆದ ವರ್ಷ ಮಾರ್ಚ್ ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಲ್ಲಿರುವ ಅನೇಕ ಅಣುಸ್ಥಾವರಗಳು ಹಾನಿಗೊಂಡವು. ಆಲ್ಲಿ ಪರಮಾಣು ವಿರೋಧಿ ಚಳುವಳಿ ಪ್ರಾರಂಭವಾಯಿತು. ಅಲ್ಲಿನ ಸರ್ಕಾರ ಜನರ ಪ್ರತಿಭಟನೆಗೆ ಮಣಿದು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರಗಳನ್ನು ಮುಚ್ಚಿದೆ. ನನಗೆ ಆಶ್ಚರ್ಯವಾದ ಸಂಗತಿ ಏನೆಂದರೆ, ಜಪಾನ್ ಸರ್ಕಾರ ತನ್ನ ಪ್ರಜೆಗಳ ಗೌರವ, ಆರೋಗ್ಯ ಮತ್ತು ಯೋಗಕ್ಷೇಮಮನ್ನು ಯಾವ ರೀತಿ ಕಾಪಾಡುತ್ತದೆ ಎಂದು. ಅಲ್ಲಿ ಇಲ್ಲಿಯ ತನಕ ವಿದ್ಯುತ್ ಅಭಾವ ಎಂಬುದೇ ಇಲ್ಲ. ಅಲ್ಲಿ ಪವರ್ ಕಟ್ ಮಾತೇ ಇಲ್ಲ. ಇದೆಲ್ಲವೂ ಅಣುಸ್ಥಾವರದಿಂದ ಆದ ಪ್ರಯೋಜನ. ಆದರೂ ಅವರಿಗೆ ತಮ್ಮ ಪ್ರಜೆಗಳ ಬಗೆಗಿನ ಕಾಳಜಿಗಾಗಿ ತನ್ನೆಲ್ಲಾ ಅಣುಸ್ಥಾವರವನ್ನು ಮುಚ್ಚಿದೆ ಎಂದರೆ ಅದು ನಿಜಕ್ಕೂ ಮೆಚ್ಚುವಂತಹದ್ದು. ಈಗ ಆಲ್ಲಿ ಯಾವುದೇ ಅಣುಸ್ಥಾವರ ಇಲ್ಲ. ನಾವು ಇಲ್ಲಿ ನಮ್ಮ ದೇಶದಲ್ಲಿ ಒಂದೊಂದೇ ಅಣು ಸ್ಥಾವರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದೇವೆ (ಈಗ ನಮ್ಮಲ್ಲಿ ೧೯ ಅಣುಸ್ಥಾವರವಿದೆ) ಜಪಾನ್ ರಾಷ್ಟ್ರವೇನೋ ಎಚ್ಚೆತ್ತುಕೊಂಡು ತನ್ನಲ್ಲಿದ್ದ ಎಲ್ಲಾ ಅಣುಸ್ಥಾವರವನ್ನು ಮುಚ್ಚಿದೆ. ಈಗ ಅದು ಪರಮಾಣು ಸ್ಥಾವರ ಮುಕ್ತ ರಾಷ್ಟ್ರ. ನಾವು ಈಗ ಪರಮಾಣು ರಾಷ್ಟ್ರವಾಗಲು ಹೊರಟಿದ್ದೇವೆ. ಈಗ ನಾವೂ ಕೂಡ ಭೂಕಂಪ, ಸುನಾಮಿಯ ಹಾವಳಿ ಅನುಭವಿಸಿದ್ದೇವೆ. ಅಕಸ್ಮಾತ್ ಭೂಕಂಪ, ಸುನಾಮಿಗಳು ಮತ್ತೊಮ್ಮೆ ಮಗದೊಮ್ಮೆ ಆಗಿ, ಇಂತಹ ಅಣುಸ್ಥಾವರಕ್ಕೆ ಧಕ್ಕೆ ಉಂಟಾದರೆ, ನಮ್ಮನ್ನು ಆ ದೇವರೇ ಕಾಪಾಡಬೇಕು.
ಅಣುಸ್ಥಾವರದಿಂದ ನಮಗೆ ವಿದ್ಯುತ್ ಕೊರತೆಯುಂಟಾಗುವುದಿಲ್ಲ, ನಿಜ ಆದರೆ ಅದರ ದುಶ್ಪರಿಣಾಮದಿಂದ ಜನರ ಜೀವಕ್ಕೆ ಅಪಾಯಯುಂಟಾದರೆ ಯಾರು ಹೊಣೆ? ಯಾಕೆಂದರೆ ಇದರಂದ ತೊಂದರೆಗೆ ಈಡಾಗುವುದು ಕೇವಲ ಬಡಜನತೆ, ಅಮಾಯಕರು. ರಾಜಕಾರಣಿಗಳಿಗೆ ಇದರಿಂದ ಏನೂ ತೊಂದರೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ, ರಾಜಕಾರಣಿಗಳಿಗೆ ಅದನ್ನು ಸರಿಯಾಗಿ ನಿಭಾಯಿಸುವುದು ಗೊತ್ತಿಲ್ಲ. ಇದಕ್ಕೆ ಪಕ್ಕಾ ಉದಾಹರಣೆಯೆಂದರೆ ಭೂಪಾಲ್ ದುರಂತ. ಭೂಪಾಲ್ ದುರಂತವು ಇನ್ನೂ ನಮ್ಮ ಕಣ್ಣ ಮುಂದಿದೆ. ಈಗಲೂ ನಾವು ಆ ಅನಾಹುತದಿಂದ ಎಚ್ಚೆತ್ತುಕೊಂಡಿಲ್ಲ. ಅಲ್ಲಿ ಆರೋಗ್ಯ ಸಮಸ್ಯೆ ಇದೆ. ಹುಟ್ಟುವ ಮಕ್ಕಳು ಅಂಗವಿಕಲರಾಗೇ ಹುಟ್ಟುತ್ತಿದ್ದಾರೆ. ಅವರನ್ನು ಕೇಳುವವರು ಯಾರೂ ಇಲ್ಲ. ಇನ್ನೂ ಅಲ್ಲಿನ ಜನಕ್ಕೆ ನ್ಯಾಯ ಸಿಕ್ಕಿಲ್ಲ. ಸಾವಿರಾರು ಜನರು ಅದರಿಂದ ತಮ್ಮ ಪ್ರಾಣವನ್ನೇ ಕಳೆದುಕೊಂಡರೆ, ಇಂದಿಗೂ ಅಲ್ಲಿ ಅಂಗವಿಕಲ ಮಕ್ಕಳು ಹುಟ್ಟುತ್ತಲೇ ಇದ್ದಾರೆ. ಇದು ಅದರಿಂದ ಉಂಟಾದ ಪರಿಣಾಮ. ನಮ್ಮ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ ನಾವುಗಳು ಪ್ರಜೆಗಳಾಗಿ ಕಾಣಿಸುವುದಿಲ್ಲ. ನಾವು ಅವರಿಗೆ ಕೇವಲ ಒಂದು ಮತವಾಗಿ ಕಾಣಿಸುತ್ತೇವೆ. ಇದು ನಮ್ಮ ದೌರ್ಭಾಗ್ಯ.

Thursday, 17 May 2012
"ರಘು ದೀಕ್ಷಿತ್" ಎಂಬ ಅಂತರರಾಷ್ಟೀಯ ಪ್ರತಿಭೆ:
"ನಿನ್ನಾ ಪೂಜೆಗೆ ಬಂದೇ ಮಾದೇಶ್ವರಾ," ಎಂಬ ಹಾಡಿನಿಂದ ಕನ್ನಡಿಗರಿಗೆ ಪರಿಚಿತವಾದ ಕಂಚಿನ ಕಂಠದ "ರಘು ದೀಕ್ಷಿತ್" ಎಂಬ ಅಚ್ಚ ಕನ್ನಡ ಪ್ರತಿಭೆ ನಮ್ಮ ರಾಜ್ಯ/ದೇಶದ ಗಡಿಗಳನ್ನು ದಾಟಿ ಈಗ ಅಂತರರಾಷ್ಟೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಿಸಲು ಹೊರಟಿದ್ದಾರೆ. ಅವರು ಅನೇಕ ದೇಶಗಳಲ್ಲಿ ಈಗಾಗಲೇ ನಮ್ಮ ಕನ್ನಡದ "ಶಿಶುನಾಳ ಷರೀಫ"ರ ಹಾಡುಗಳನ್ನು ಪಾಕ್ಷಿಮಾತ್ಯ ಸಂಗೀತದ ಧಾಟಿಯಲ್ಲಿ ಪ್ರಚಾರ ಪಡಿಸಿದ್ದಾರೆ. ಅವರು ಅಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದಾರೆ. ಅವರ ಬಗ್ಗೆ ಹೊರದೇಶದ ಅನೇಕ ಪತ್ರಿಕೆಗಳಲ್ಲಿ ಒಳ್ಳೆಯ ವಿಮರ್ಶೆಯನ್ನೂ ಪಡೆದುಕೊಂಡಿದ್ದಾರೆ. ಲಂಡನ್ನಿನ "ಗಾರ್ಡಿಯನ್" ಪತ್ರಿಕೆ "one of the happiest music bands" ಎಂದು ಇವರನ್ನು ಹೊಗಳಿದೆ. ಲಂಡನ್ ನಲ್ಲಿ ಇವರು ಪ್ರತಿ ವರ್ಷದ ಸಂಗೀತೋತ್ಸವದಲ್ಲಿ ಇವರು ಪ್ರದರ್ಶನವನ್ನು ಕೊಡುತ್ತಾರೆ. ಈಗ ರಘು ಬ್ರಿಟನ್ನಿನ ರಾಣಿ ೨ ನೇ ಎಲಿಜಬತ್ ಅವರ ಸಿಹಾಸನಾರೋಹಣದ ವಜ್ರ ಮಹೋತ್ಸದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಏಕೈಕ ಹಾಡುಗಾರ. ಹೆಚ್ಚಿನ ಮಾಹಿತಿಗೆ (www.vijaykarnataka.com) ನೋಡಬಹುದು. ಒಂದು ಬೇಸರದ ಸಂಗತಿ ಎಂದರೆ ಇವರಿಗೆ ಕನ್ನಡ ಚಿತ್ರರಂಗದಲ್ಲಿ ಸಲ್ಲಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲ. ಇವರಂತೆಯೇ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಬದ್ರಿ ಪ್ರಸಾದ್, ಶಾಸ್ತ್ರಿ, ವಾರಿಯರ್ ಮುಂತದವರು ಮತ್ತು ಗಾಯಕಿಯರಾದ ಎಂ.ಡಿ.ಪಲ್ಲವಿ, ಸುನೀತಾ, ಸಂಗೀತಾ ಕಟ್ಟಿ, ದಿವ್ಯಾ ರಾಘವನ್ ಹೀಗೆ ಇನ್ನೂ ಅನೇಕರಿದ್ದಾರೆ. ಇವರು ಹಾಡಿರುವ ಹಾಡುಗಳು ಜನಪ್ರಿಯವಾಗಿವೆ, ಕನ್ನಡಿಗರು ಇವರನ್ನು ಮೆಚ್ಚಿದ್ದಾರೆ. ಆದರೂ ಇವರುಗಳಿಗೆ ಕನ್ನಡ ಚಿತ್ರರಂಗದಿಂದ ಸಿಗಬೇಕಾದಷ್ಟು ಪ್ರೋತ್ಸಾಹ ಸಿಕ್ಕಿಲ್ಲ. ಸಂಬಂಧಪಟ್ಟವರು ಗಮನಿಸಿ ಇದನ್ನು ಸರಿಪಡಿಸಬೇಕು.
Tuesday, 15 May 2012
"ಕಠಾರಿವೀರ ಸುರಸುಂದರಾಗಿ"
ಸ್ವರ್ಗ, ನರಕ ಮತ್ತು ಒಳ್ಳೆಯದನ್ನು ಮಾಡಿದರೆ ಸ್ವರ್ಗ್ಪ ಪ್ರಾಪ್ತಿ, ಕೆಟ್ಟದ್ದನ್ನು ಮಾಡಿದರೆ ನರಕ ಕಟ್ಟಿಟ್ಟ ಬುತ್ತಿ ಎಂಬ ಕಲ್ಪನೆ ಶತಮಾನಗಳಷ್ಟು ಹಳೆಯದು. ಇದನ್ನು ಎಲ್ಲಾ ಧರ್ಮಗಳ ಜನರೂ ಸಮಾನ್ಯವಾಗಿ ನಂಬುತ್ತಾರೆ. ನಂಬಿಕೆ ಮತ್ತು ಭಾವನೆಗಳು ಅವರವರಿಗೆ ಬಿಟ್ಟಿದ್ದು, ಅದನ್ನು ಪ್ರಶ್ನಿಸುವುದು ತಪ್ಪು. ನಮ್ಮ ಪೂರ್ವಿಕರು ಬಹಳ "ಬುದ್ದಿವಂತ"ರು. ನಮ್ಮ ಜನರು ಯಾವಾಗಲೂ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿ, ಒಳ್ಳೆಯದನ್ನು ಯೋಚಿಸಲಿ ಎಂದು ಹರಿಯಬಿಟ್ಟ ಈ ಕಲ್ಪನೆ ಬಹಳ ಚೆನ್ನಾಗಿದೆ ಮತ್ತು ಇದು ಇದು ಎಲ್ಲಾ ಕಾಲಕ್ಕೂ ಅನ್ವಯ. ಇದನ್ನು ನೋಡಿದವರು ಮತ್ತು ಅನುಭವಿಸಿದವರು ನಮ್ಮ ನಡುವೆ ಯಾರೂ ಇಲ್ಲ ಮತ್ತು ಇರುವುದಕ್ಕೆ ಸಾಧ್ಯವೂ ಇಲ್ಲ. ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಇದರ ಬಗ್ಗೆ ಸುಂದರ ಚಿತ್ರಣವಿದೆ. ನಮ್ಮ ಚಿತ್ರರಂಗದ ಮಂದಿ ಅನೇಕ ಭಾರತೀಯ ಭಾಷೆಗಳಲ್ಲಿ ಸ್ವರ್ಗ ನರಕವನ್ನು ಇದು ಹೀಗೆ ಇರಬಹುದು ಎಂದು ಚಿತ್ರಿಸಿದ್ದಾರೆ. ನಮ್ಮ ಕನ್ನಡ ಚಿತ್ರರಂಗದ ಮಂದಿ ಇನೂ ಒಂದು ಹೆಜ್ಜೆ ಮುಂದೆ ಹೋಗಿ ಸ್ವರ್ಗ ಮತ್ತು ನರಕವನ್ನು ನಮ್ಮ ಕೈಗೆಟುಕುವಷ್ಟು ಹತ್ತಿರ ತಂದಿದ್ದಾರೆ "ಕಠಾರಿವೀರ ಸುರಸುಂದರಾಂಗಿ" ಎಂಬ ೩ ಡಿ ಚಿತ್ರದ ಮೂಲಕ. ಅದ್ಭುತವಾದ ಛಾಯಾಗ್ರಹಣ "ವೇಣು" ಅವರಿಂದ. ಈ ಚಿತ್ರದಲ್ಲಿ ನಿಜವಾದ ನಾಯಕ "ವೇಣು" ಎಂದರೆ "ಉಪೇಂದ್ರ" ಕೋಪ ಮಾಡಿಕೊಳ್ಳಬಾರದು. ಕನ್ನಡಕ್ಕೆ ನಿಜವಾದ ಡೈಲಾಗ್ ಕಿಂಗ್ "ಉಪೆಂದ್ರ" , ಕನ್ನಡಕ್ಕೆ ಒಬ್ಬರೇ ರೆಬೆಲ್ ಸ್ಟಾರ್ "ಅಂಬರೀಷ್", ಕನ್ನಡಕ್ಕೆ ಒಬ್ಬಳೇ ಪದ್ಮಾವತಿ "ರಮ್ಯಾ". ಈ ತರಹದ ಕಥೆಗಳಲ್ಲಿ ಕಥೆ ಹುಡುಕುವುದಕ್ಕೆಂತ ಚಿತ್ರದ ತಾಂತ್ರಿಕತೆಗೆ ಮಹತ್ವ ಕೊಡುವುದು ಒಳ್ಳೆಯದು. ಆ ನಿಟ್ಟಿನಲ್ಲಿ ಈ ಚಿತ್ರ "ಸೂಪರ್". ಚಿತ್ರವನ್ನು ಮನೆಮಂದಿಯೊಂದಿಗೆ ಕುಳಿತು ನೋಡಬಹುದು. ಮಕ್ಕಳನ್ನು ಕರೆದುಕೊಂಡು ಹೋಗಿ, ಖುಷಿಪಡುತ್ತಾರೆ. ಚಿತ್ರವನ್ನು ನಮ್ಮ ಕನ್ನಡಿಗರು ಗೆಲ್ಲಿಸಿದರೆ ಇನ್ನು ಮುಂದೆ ಕನ್ನಡದಲ್ಲೂ ೩ ಡಿ ಚಿತ್ರಗಳು ಹೆಚ್ಚಿಗೆ ಬರಬಹುದು. ಮುನಿರತ್ನಂ ಅವರನ್ನು ಖಂಡಿತವಾಗಿ ಅಭಿನಂದಿಸಬಹುದು ಅದ್ದೂರಿ ಚಿತ್ರವನ್ನು ಕನ್ನಡ್ದಿಗರಿಗೆ ಕೊಟ್ಟಿದ್ದಕ್ಕೆ. ಅವರು ಹೇಳಿರುವಂತೆ ಇದು ಕನ್ನಡದ ಮೊದಲ ೩ಡಿ ಚಿತ್ರವಂತೂ ಖಂಡಿತಾ ಅಲ್ಲ. ಈ ಮೊದಲು "ಕಾಡಿನ ಜಾತ್ರೆ" "ಸೂಪರ್ ಬಾಯ್" ಮತ್ತು "ನಮ್ಮ ಭೂಮಿ" ಎಂಬ ಚಿತ್ರಗಳು ತೆರೆಕಂಡಿತ್ತು. ಆ ಮೂರೂ ಚಿತ್ರಗಳು ಕನ್ನಡಿಗರಿಗೆ ಹಿಡಿಸದ ಕಾರಣ ಬಂದಷ್ಟೇ ವೇಗದಲ್ಲಿ ಕಂಬಿಕಿತ್ತಿತ್ತು.
"ಪರಿಸರ ಸ್ನೇಹಿ" ಸಮಾಧಿ
" ಪರಿಸರಕ್ಕೆ ಹಾನಿ ಮಾಡುವ ಶಾಶ್ವತ ಗೋರಿಗಳನ್ನು ನಿಷೇದಿಸಲು ಕೇರಳದ ಚರ್ಚ್ ಗಳು ಮುಂದಾಗಿವೆ. ಸೀಮೆಂಟ್ ನಿಂದ ನಿರ್ಮಿಸಿರುವ ಗೋರಿಗಳನ್ನು ಮತ್ತೆ ಬಳಸುವುದಕ್ಕೆ ಆಗುವುದಿಲ್ಲ ಮತ್ತು ಕಾಫಿನ್, ಪ್ಲಾಸ್ಟಿಕ್, ಪೈಬರ್ ನಿಂದ ತಯಾರಾದ ವಸ್ತುಗಳು ಭೂಮಿಯಲ್ಲಿ ಕೊಳೆಯುವುದಿಲ್ಲ. ಹಾಗಾಗಿ ಈ ಎಲ್ಲಾ ವಸ್ತುಗಳನ್ನು ನಿಷೇದಿಸಿ ಕೇರಳದ ಎರ್ನಾಕುಲಂನಲ್ಲಿರುವ "ಸೇಂಟ್ ಮೇರಿ ಕೆಥೆಡ್ರಲ್ ಬಾಸಿಲಿಕಾದ ಆಡಳಿತ ಮಂಡಲಿ "ಪರಿಸರ ಸ್ನೇಹಿ" ಸಮಾಧಿ ನಿರ್ಮಾಣ ಮಾಡಿದೆ. ಕ್ರಿಶ್ಚಿಯನ್ ಕುಟುಂಬಗಳು ಮೊದಲಿಗೆ ವಿರೋಧ ವ್ಯಕ್ತ ಪಡಿಸಿದರೂ, ಸಮಸ್ಯೆಯನ್ನು ಅವರಿಗೆ ಅರಿವಾಗುವ ಹಾಗೆ ವಿವರಿಸಿದ ಮೇಲೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಪರಿಸರಕ್ಕೆ ಹಾನಿಯುಂಟು ಮಾಡುವ ಸಮಾಧಿಗಳ ಬದಲು ಸರಳವಾಗಿ ಶವ ಸಂಸ್ಕಾರ ಮಾಡಿ ಸಮಾಧಿ ಮೇಲೆ ಹುಲ್ಲು ಮುಂತಾದವುಗಳನ್ನು ಇರಿಸುವ ವ್ಯವಸ್ಥೆಯನ್ನು ಚರ್ಚ್ ಗಳು ಜಾರಿಗೆ ತಂದಿವೆ " ಈ ಸುದ್ದಿಯು ಮೊನ್ನೆ ದಿನಪತ್ರಿಕೆಯನ್ನು ಓದುತ್ತಿರುವಾಗ ನನ್ನನ್ನು ಬಹಳ ಆಕರ್ಷಿಸಿತು. ಬೊಂಗಳೂರಿನಂತ ಮಹಾನಗರಗಳಲ್ಲಿ ಹೊಸದಾಗಿ ಸ್ಮಶಾನವನ್ನು ನಿರ್ಮಿಸಿಲ್ಲ. ಜಾಗದ ಸಮಸ್ಯೆ, ಜಾಗ ಇದ್ದರೂ ಅದರಲ್ಲಿ ನಿವೇಶನವನ್ನು (ಸೈಟ್) ಮಾಡಿ ವಿಂಗಡಿಸಿ ದುಡ್ಡು ಮಾಡುವ ಯೋಚನೆ. ಇರುವ ಹಳೇ ಸ್ಮಶಾನವನ್ನೇ ಜನರು ಅವಲಂಬಿಸಿದ್ದಾರೆ. ಆ ಸ್ಮಶಾನದಲ್ಲ್ಲಿ ಜಾಗದ ಸಮಸ್ಯೆ. ಜಾಗವು ಸಾಕಾಗುತಿಲ್ಲ. ವಿದ್ಯುತ್ ಚಿತಾಗಾರದಿಂದ ಇಂತಹ ಸಮಸ್ಯೆ ಪರಿಹಾರವಾದರೂ, ಶವವನ್ನು ನಮ್ಮ ದೇಶದಲ್ಲಿ ಹೂಳುವುದೇ ಹೆಚ್ಚು. ಎಲ್ಲಾ ಶವಗಳನ್ನು ಸುಡಲು ಹೇಳುವುದು ಆಗದ ಮಾತು. ಜಾತಿ/ಧರ್ಮ/ಸಂಪ್ರದಾಯ/ಆಚರಣೆಗಳು ಅಡ್ಡ ಬರುತ್ತದೆ. ನಮ್ಮ ದೇಶದ ಅನೇಕ ನಗರಗಳಲ್ಲೂ ಈ ಸಮಸ್ಯೆ ಇದೆ. ಇದಕ್ಕೆ ಏನಾದರೂ ಒಂದು ಪರಿಹಾರವನ್ನು ಸಂಬಂಧಪಟ್ಟವರು ಯೋಚಿಸಬೇಕು.
Tuesday, 1 May 2012
ನಮ್ಮ ಕನ್ನಡ ಸಾಫ್ಟ್ ವೇರ್ ಯುವ ಜನತೆ: ಭಾಗ-೨
ಹಿಂದಿನ ಸಂಚಿಕೆಯಿಂದ:
ಕನ್ನಡದ ಏಳಿಗೆಗಾಗಿ ಪಣ ತೊಟ್ಟಿರುವ ಈ ನಮ್ಮ ಯುವ ಪಡೆ ಏನ್ ಗುರು ಕಾಫಿ ಆಯ್ತಾ, ಗಾಂಚಲಿ ಬಿಡಿ ಕನ್ನಡ ಮಾತಾಡಿ, ಟ್ರಾನ್ಸ್ ಲೇಟರ್ ಕಮ್ಮುನಿಟಿ ಫ಼ಾರ್ ಕನ್ನಡ, ಕನ್ನಡ ಕಟ್ಟೆ, ಸ್ನೇಹಲೋಕ, ಫೇಸ್ ಬುಕ್ ಕನ್ನಡ ಸಂಘ, ಕನ್ನಡ ಕಲಾ ವೇದಿಕೆ ಮುಂತಾದ ಗುಂಪುಗಳನ್ನು ರಚಿಸಿ ನಮ್ಮ ರಾಜ್ಯ, ಭಾಷೆಯ ಬಗ್ಗೆ ಕಳಕಳಿ ಹೊಂದಿ ತಮ್ಮ ಕೈಲಾದ ಸೇವೆಯನ್ನು ಗಣಕಯಂತ್ರದ ಮೂಲಕ ಮಾಡಿ ಕನ್ನಡವನ್ನು ಜೀವಂತವಾಗಿ ಇಡಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ಎಷ್ಟು ಅಭಿನಂದಿಸಿದರೂ ಸಾಲದು. ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ.
ಗೂಗಲ್ ನ್ಯೂಸ್ ನಲ್ಲಿ ಬೇರೆ ಭಾಷೆಗಳ ವರದಿಗಳು ಬರುತ್ತಿವೆ, ಆದರೆ ಕನ್ನಡದಲ್ಲಿ ಬರುತ್ತಿಲ್ಲ ಇದಕ್ಕೆ ಏನಾದರೂ ಮಾಡೊಣ ಎಂದು ಒಬ್ಬರು ಹೇಳಿದರೆ, ಅವರಿಗೆ ಕೈ ಜೋಡಿಸಲು ಸಾವಿರಾರು ಮಂದಿ ನಮ್ಮ ಕನ್ನಡ ಯುವ ಸೈನ್ಯ ಸಿದ್ದ. ಹೀಗೆ ಕನ್ನಡವನ್ನು ಕಟ್ಟುವ ನಮ್ಮ ಯುವ ಸೈನ್ಯವನ್ನ್ನು ಎಲ್ಲಾ ಕನ್ನಡಿಗರು ಪ್ರೋತ್ಸಾಹಿಸಬೇಕಾದದ್ದು ಆದ್ಯ ಕರ್ತವ್ಯ. ಹೀಗೆ ನಮ್ಮ ಯುವ ಪಡೆ ಕನ್ನಡವನ್ನು ಸದ್ದಿಲ್ಲದೆ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ. ಈ ತಂತ್ರಾಶಗಳನ್ನು ನಾವು ಮೊಬೈಲ್, ಗಣಕಯಂತ್ರ, ಲ್ಯಾಪ್ ಟಾಪ್ ಮುಂತಾದವುಗಳಲ್ಲಿ ಅಡವಳಿಸಿಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಬಳಸುವುದೇ ನಾವು ಅವರಿಗೆ ಕೊಡುವ ಗೌರವ.
ಅನೇಕರು ಫೇಸ್ ಬುಕ್ ನಲ್ಲಿ ಆಂಗ್ಲ ಲಿಪಿಯಲ್ಲಿ ಕನ್ನಡವನ್ನು ಬರೆಯುತ್ತಾರೆ. ಅಂತಹವರು ದಯವಿಟ್ಟು ಇಂತಹ ತಂತ್ರಾಂಶಗಳನ್ನು ಬಳಸಿಕೊಂಡು ಕನ್ನಡದ ಲಿಪಿಯಲ್ಲೇ ತಮ್ಮ ಅಭಿಪ್ರಾಯಗಳನ್ನು, ಅನಿಸಿಕೆಗಳನ್ನು ಬಳಸಿದರೆ ಎಲ್ಲರಿಗೂ ಸಂತೋಷವಾಗುವುದು. ನಾವು ಕಚೇರಿಗಳಲ್ಲಿ ಸಾಮಾನ್ಯವಾಗಿ ಆಂಗ್ಲ ಭಾಷೆಯಲ್ಲಿ ಬರೆಯುತ್ತೇವೆ, ನಾವು ಕನ್ನಡವನ್ನು ಹೊರಗಡೆ ಬಳಸುವುದೂ ಸಹ ಕಮ್ಮಿ. ಕೇವಲ ನಾವು ಕನ್ನಡವನ್ನು ಮಾತನಾಡಿದರೆ ಸಾಲದು, ನಮಗೆ ಓದಲು ಮತ್ತು ಬರೆಯಲು ಬಂದರೆ ನಾವು ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಸಹಾಯಕವಾಗುವುದು.
ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುವವರು ಸಾವಿರಾರು ರೂಪಾಯಿಗಳನ್ನು ಸಂಪಾದಿಸುತ್ತಾರೆ., ಜೀವನವನ್ನು ಬಹಳ ಮೋಜಿನಲ್ಲಿ ಕಳೆಯುತ್ತಾರೆ. ಅವರಿಗೆ ಸಮಾಜದ ಬಗ್ಗೆ ಪ್ರೀತಿ, ಗೌರವ ಇಲ್ಲ, ಅವರು ಸಮಾಜಕ್ಕಾಗಿ ಏನೊ ಮಾಡುವುದಿಲ್ಲ ಎಂಬುದು ಅನೇಕರ ತಪ್ಪು ತಿಳುವಳಿಕೆ. (ಅಂತಹವರು ಇರಬಹುದು, ಇರಲಿ ಬಿಡಿ ಅವರ ಸಹವಾಸ ನಮಗೇಕೆ?) ನಮಗೆ ನಮ್ಮ ಕನ್ನಡದ ಹುಡುಗರು ಮುಖ್ಯ. ಅವರ ಸಾಧನೆ, ಪರಿಶ್ರಮ ಮುಖ್ಯ. ಈ ನಮ್ಮ ಕನ್ನಡ ಯುವ ಪಡೆಯ ಸಾಧನೆಗಳನ್ನು ನೋಡಿ. ಇಂತಹ ಅನೇಕ ಕೆಲಸಗಳನ್ನು ಸದ್ದಿಲ್ಲದೆ ಮಾಡುತ್ತಿರುತ್ತಾರೆ. ಅವರಿಗೆ ಒಳ್ಳೆಯದಾಗಲಿ. ಶುಭವಾಗಲಿ. (ಮುಗಿಯಿತು)

Subscribe to:
Posts (Atom)