Saturday, 8 June 2013

ಕಕ್ಕಾಬಿಕ್ಕಿ


ಗೆದ್ದ
ಉತ್ಸಾಹದಲ್ಲಿ
ಸರ್ಕಾರ
ಘೋಷಿಸಿಬಿಟ್ಟಿತು
ಒಂದು ರೂಪಾಯಿಗೆ
ಕೆ.ಜಿ. ಅಕ್ಕಿ!

ಬಿಸಿ ತುಪ್ಪ
ಉಗುಳಲೂ
ಆಗದೆ ನುಂಗಲೂ
ಆಗದೆ ಈಗ
ಕಕ್ಕಾಬಿಕ್ಕಿ!!

Friday, 7 June 2013

ವರ್ಷ ಪೂರ್ತಿ


ಇನ್ಫೋಸಿಸ್ ಗೆ
ಮತ್ತೆ ಬಂದರು
ನಾರಾಯಣ ಮೂರ್ತಿ!

ಒಂದು ರೂಪಾಯಿ
ಸಂಬಳಕ್ಕೆ
ದುಡಿಯುತ್ತಾರೆ
ವರ್ಷ ಪೂರ್ತಿ!!

Thursday, 6 June 2013

ಸಾಕ್ಷಿ


ಐ.ಪಿ.ಎಲ್
ಪಂದ್ಯಗಳಲ್ಲಿ
ಕಳ್ಳಾಟ
ನಡೆದಿರುವುದಕ್ಕೆ
ಶ್ರೀಶಾಂತ್
ಟವಲ್ಲೇ
ಸಾಕ್ಷಿ!

ಅದನ್ನು
ಹೇಳಬೇಕಾದವರು
ವಿಂದೂ
ಪಕ್ಕ
ಕುಳಿತ
ಧೋನಿ
ಪತ್ನಿ
ಸಾಕ್ಷಿ!!

Wednesday, 5 June 2013

ಗುಟ್ಕಾ


ಹೀಗೇ
ಅಗಿಯುತ್ತಿದ್ದರೆ
ಗುಟ್ಕಾ!

ಕುಡಿಯಲು
ನೀರೂ
ಸಹ
ಆಗದು
ಒಂದು
ಗುಟ್ಕು!!

Tuesday, 4 June 2013

ಪ್ರಮಾಣ ವಚನ


ಯಾರ ಯಾರ
ಹೆಸರಿನಲ್ಲೋ
ಶಾಸಕರಿಂದ
ಬೇಕಾಬಿಟ್ಟಿ
ಪ್ರಮಾಣ ವಚನ!

ವಿಧಾನಸೌಧದಲ್ಲಿ
ಕಾಟಾಚಾರಕ್ಕೆ
ಹಾಕುತ್ತಾರಾ
ಆಸನ?

Sunday, 2 June 2013

ಅಸ್ತಂಗತ


ಮೊನ್ನೆ ಸ್ನೇಹಿತರೊಬ್ಬರು
ಆದರು ಅಸ್ತಂಗತ
ಮನೆಯಲ್ಲಿ, ಮನದಲ್ಲಿ
ಸ್ನೇಹಿತರು, ನೆಂಟರಿಷ್ಟರಲ್ಲಿ ದುಖ: ನೋವು
ಯಾರಲ್ಲೂ ಹೇಳಿಕೊಳ್ಳಲಾಗದ ವೇದನೆ
ಮುಂದೇನು? ಯಾರಿಗೂ ಗೊತ್ತಿಲ್ಲ
ತಿಳಿದವರು ಇಲ್ಲವೇ ಇಲ್ಲ!

ಆಡಿಸುವಾತನಿಗೆ ಬೇಜಾರಾದರೆ
ಹೀಗೇ ಆಗುವುದೇನೋ ಅಂತಂದ್ರು ಒಬ್ಬರು
ಕಾಣದ ದೇವ್ರಿಗೆ ಕರುಣೆ ಇಲ್ಲ ಅಂದ್ರು ಮತ್ತೊಬ್ಬರು
ಹೋದವರಿಗೆ ಎಲ್ಲರಿಂದಲೂ, ಎಲ್ಲಾದರಿಂದಲೂ ಬಿಡುಗಡೆ
ಇರುವವರಿಗೆ ಬಂಧನ, ಜೀವಾವಧಿ ಶಿಕ್ಷೆ!

ಜೀವನ ಎಂದರೆ ಹೀಗೆ ಏನೋ?
ಯಾರಲ್ಲೂ ಉತ್ತರ ಇಲ್ಲ
ಇಷ್ಟವಿರಲಿ ಬಿಡಲಿ, ಕೇಳುವವರು ಯಾರು?
ಅನುಭವಿಸಲೇ ಬೇಕು, ಇರುವ ತನಕ
ಇದು ನಿಲ್ಲದ ಬವಣೆ!!