Friday, 5 July 2013

ಲೈಕು ಕಮೆಂಟು


ಫೇಸ್ ಬುಕ್ಕಲ್ಲಿ
ಬೇಕು
ಅಂದ್ರೆ
ಮೂರು
ಕಾಮೆಂಟು
ಎರಡು
ಲೈಕು!

ಮಾಡಬೇಕು
ತುಂಬಾ
ಗಿಮ್ಮಿಕ್ಕು!!

Thursday, 4 July 2013

ಸಿದ್ದುಗೆ ಗುದ್ದು


ತನ್ನದೇ
ಪಕ್ಷದ
ಹಿರಿಯರನ್ನು
ಮೀಟಿ ನಿಂತು
ಮುಖ್ಯಮಂತ್ರಿ
ಪದವಿ ಗಳಿಸಿ
ಬೀಗಿದರು
ಸಿದ್ದು!

ಪಕ್ಕದಲ್ಲೇ
ಇದ್ದು
ಎಲ್ಲವನ್ನೂ
ಗಮನಿಸಿದ
ಪರಮೇಶ್ವರ
ಸದ್ದಿಲ್ಲದೆ
ಕೊಡುತ್ತಾರೆಯೇ
ಒಂದು ಸಣ್ಣ
ಗುದ್ದು?

Wednesday, 3 July 2013

ಅಟ್ಟಹಾಸ


ನೀನು
ನನ್ನ
ಮರೆತು
ನಗ್ತಾ
ಇದೀಯ!

ನಾನು
ನಿನ್ನ
ಮರೀದೆ
ನಗ್ತಾ
ಇದೀನಿ!

ನನ್ನದು
ವಿಷಾದದ
ನಗು!

ನಿನ್ನದು
ಅಟ್ಟಹಾಸದ
ನಗು!!

Tuesday, 2 July 2013

ಬ್ರಹ್ಮಾಂಡ


ಮನಸ್ಸಲ್ಲೇ
ಮಂಡಿಗೆ
ತಿನ್ನುತ್ತಿದ್ದರೇನೋ
ನರೇಂದ್ರ ಶರ್ಮಾ
ನಾನೇ ಆಗವೆ
ಎಂದು
ಬಿಗ್ ಬಾಸ್!

ಆದರೆ
ಮರೆತರು
ಪಾಪ
ಬ್ರಹ್ಮಾಂಡದ
ಹಣೆಬರಹ
ಬರೆಯುವವನು
ಬೇರೆ ಬಾಸ್!!

Monday, 1 July 2013

ಕನ್ನಡಿಗರು


ಉತ್ತರಖಂಡದ
ಪ್ರವಾಹದಲ್ಲಿ
ಸಿಲುಕಿದ್ದ
ಸಾವಿರಾರು
ಜನರ ಪೈಕಿ
ಕನ್ನಡಿಗರನ್ನೇ
ಹುಡುಕಿ
ನಮ್ಮವರು
ರಕ್ಷಿಸಿದ್ದು
ಹೇಗೆ?

ನೆರೆದಿದ್ದ
ಸಹಸ್ರಾರು
ಜನರಲ್ಲಿ
ಯಾರು
ಇಂಗ್ಲೀಷಿನಲ್ಲಿ
ಮಾತನಾಡುತ್ತಿದ್ದರೋ
ಅವರೆಲ್ಲಾ
ಕನ್ನಡಿಗರೆಂದು
ಗುರುತಿಸಿದರು
ಹಾಗೆ!!