Tuesday, 24 September 2013

ಪ್ರಾಯಶ್ಚಿತ್ತ


ಐ.ಪಿ.ಎಲ್
ಪಂದ್ಯಗಳಲ್ಲಿ
ಕಳ್ಳಾಟ
ಆಡಿಸಿ
ಸಿಕ್ಕಿಬಿದ್ದಿದ್ದು
ಚೈನ್ನೈ
ತಂಡದ
ಮಾಲೀಕ!

ಉದ್ದುದ್ದಕ್ಕೆ
ತಲೆ
ಬೋಳಿಸಿ
ಪ್ರಾಯಶ್ಚಿತ್ತ
ಮಾಡಿಕೊಂಡಿದ್ದು
ಮಾತ್ರ
ಅದರ
ನಾಯಕ!!

Friday, 13 September 2013

ಸರ್ವಸ್ವ


ಬಿ.ಜೆ.ಪಿ
ಮಂದಿಗೆ
ಈಗ
ಮೋದಿಯೇ
ಸರ್ವಸ್ವ!

ಅಧ್ವಾನಿಯಲ್ಲಿ
ಉಳಿದಿಲ್ಲ
ಯಾವುದೇ
ಸ್ವಾರಸ್ಯ!!

Thursday, 12 September 2013

ಚೈನಾ ಚೈನು


ಸಿದ್ದು
ಹೊರಟರು
ನೋಡಿಕೊಂಡು
ಬರಲು
ಚೈನಾ!

ಬರುವಾಗ
ತರುತ್ತಾರೇನೋ
ನೋಡಬೇಕು
ಸೋನಿಯಾ,
ಕೊರಳಿಗೆ
ಹಾಕಲು
ದೊಡ್ಡ
ಚಿನ್ನದ
ಚೈನು!!

Wednesday, 11 September 2013

ಪ್ರಪೋಸ್


ನಿಮ್ಮ
ಹುಡ್ಗಿಗೆ
ಇಂಗ್ಲೀಷಿನಲ್ಲಿ
ಪ್ರಪೋಸ್
ಮಾಡಿದ್ರೂ
ಪರ್ವಾಗಿಲ್ಲ!

ಆದ್ರೆ
ಸಂಸಾರ
ಮಾತ್ರ
ಕನ್ನಡದಲ್ಲೇ
ಮಾಡಿ
ಏನಾಗಲ್ಲ!!

Monday, 9 September 2013

ಮೂಡ ನಂಬಿಕೆ


ಮೂಡ
ನಂಬಿಕೆಗಳಿಗೆ
ಹಾಕಬೇಕು
ಕಾನೂನಿನ
ಕಡಿವಾಣ!

ಇಲ್ಲದಿದ್ದರೆ
ಮುಂದೆ ಅವೇ
ಆಗಬಹುದು
ನಂಬಿಕೆಗಳಿಗೆ
ಹೂರಣ!!

Sunday, 8 September 2013

ಗಣಪತಿ


ನೀನೇನೋ
ಯಾರನ್ನೂ
ಮದುವೆಯಾಗದೆ
ಕೊನೆಯವರೆಗೂ
ಹಾಗೇ
ಉಳಿದುಬಿಟ್ಟು
ಬುದ್ದಿವಂತ
ದೇವರೆನಿಸಿಕೊಂಡು
ಬಿಟ್ಟೆ!

ನಿನ್ನ
ಭಕ್ತರೂ
ನಿನ್ನನ್ನೇ
ಅನುಕರಿಸಿದರೆ
ಈ ಪ್ರಪಂಚದ
ಗತಿಯೇನು
ಗಣಪತಿ ಬಪ್ಪಾ?