Sunday, 23 December 2012

ಜ್ಯೋತಿಷಿ


ಮೊನ್ನೆ ಪ್ರಳಯ
ಆಗೇ ಆಗತ್ತೇ
ಅಂದ ಜ್ಯೋತಿಷಿಯೊಬ್ಬರು
ಸಿಕ್ಕಿದ್ರು!

ಎಲ್ಲಿ ಸ್ವಾಮಿ,
ಪ್ರಳಯ ಅಗಲೇ
ಇಲ್ಲ ಅಂದೆ!

ಆಗತ್ತೆ ಸ್ವಾಮಿ
ಎಲ್ಲೂ ಹೋಗಲ್ಲ!

ಸಧ್ಯಕ್ಕೆ ಮುಂದಕ್ಕೆ
ಹೋಗಿದೆ ಅಷ್ಟೇ
ನಾವು, ಟಿ.ವಿಯವರು
ಎಲ್ಲಾ ಸೇರಿಕೊಂಡು
ಹೊಸ ದಿನ
ನಿಗದಿ ಮಾಡ್ತೀವಿ!

ಸಧ್ಯಕ್ಕೆ
ಸುಧಾರಿಸಿಕೊಳ್ಳಿ
ಅಂದ್ರು!!

Saturday, 22 December 2012

ಕನ್ನಡ ಬ್ಲಾಗ್


ಕನ್ನಡ ಬ್ಲಾಗ್ ನವರು
ಇಟ್ಟರೊಂದು
ಸ್ಪರ್ಧೆ!

ಬರೆಯಿರಿ
ಪ್ರೀತಿ
ಬಗ್ಗೆ!

(ಅ)

ಭಲೇ
ಕಿಲಾಡಿಗಳು

ಬರೆಯಲು
ನಾವಂತೆ!
ಪ್ರೀತಿಸಲು
ಅವರಂತೆ!!

(ಆ)

ಶುದ್ದ
ಅರಸಿಕರವರು

ಬರೆಯುವ
ಬದಲು
ಪ್ರೀತಿ
ಮಾಡಿ
ಎನ್ನಬಾರದಿತ್ತೇ??

ಮೊದಲ ಬಾರಿಗೆ ಒಂದು ಸಣ್ಣ ಪ್ರಯೋಗ ಮಾಡಿದ್ದೇನೆ. ಕವಿತೆಯ ಮೊದಲ ಅರ್ಧಬಾಗವನ್ನು (ಮೊದಲ ಆರು ಸಾಲು) ಹಾಗೆಯೇ ಉಳಿಸಿಕೊಂಡು ಉಳಿದರ್ಧ ಭಾಗವನ್ನು ಎರಡು ರೀತಿಯಲ್ಲಿ ಬೇರೆ ಬೇರೆ ಅರ್ಥ ಬರುವ ಹಾಗೆ ಬರೆಯಲು ಪ್ರಯತ್ನಿಸಿದ್ದೇನೆ. ಸಹೃದಯರಿಗೆ ಮೆಚ್ಚುಗೆಯಾಗಲಿ ಎಂಬ ಸದುದ್ದೇಶದಿಂದ ಮಾತ್ರ. ಅನ್ಯಥಾ ಭಾವಿಸುವುದಿಲ್ಲವೆಂಬ ನಂಬಿಕೆಯಿಂದ ಮತ್ತು ಕನ್ನಡ ಬ್ಲಾಗ್ ನವರ ಕ್ಷಮೆಯನ್ನು ಕೋರುತ್ತಾ……..

Friday, 21 December 2012

ಪ್ರಳಯದಿಂದ ಬಚಾವ್


ಇಂದು
ಫೇಸ್ ಬುಕ್ ನಲ್ಲಿ
ಬರುವ
ಎಲ್ಲಾ
ಬರಹಗಳಿಗೆ
ಲೈಕ್
ಒತ್ತಿ
ಬಿಡುತ್ತೇನೆ!

ಪ್ರಳಯದಿಂದ
ಬಚಾವಾಗಿ
ನಾನಿನ್ನೂ
ಬದುಕಿದ್ದೇನೆಂದು
ಎಲ್ಲರಿಗೂ
ತಿಳಿಸಬೇಕಲ್ಲಾ!!

Thursday, 20 December 2012

ಕೆ.ಜಿ.ಗೆ ಮುನ್ನೂರಿಪ್ಪತ್ತು


ನಿನ್ನೆ ಸಾಯಂಕಾಲ
ಚಿಕ್ಕಪೇಟೆ ಕಡೆಗೆ
ಹೋಗಿದ್ದೆ!

ಇವತ್ತು ರಾತ್ರಿ
ಪ್ರಳಯ ಆಗತ್ತೆ
ಅಂತ, ನಿನ್ನೆನೇ
ಅಂಗಡಿ ಖಾಲಿ
ಮಾಡ್ತಿದ್ರು!!

ಕೆ.ಜಿ.ಗೆ
ಮುನ್ನೂರಿಪ್ಪತ್ತು
ಅಂತ
ಕೂಗ್ತಿದ್ರು!!!

ಬರುತ್ತಾ ಹಾಗೆ
ಎರಡು ಕೆ.ಜಿ
ಚಿನ್ನ ತಂದೆ!!!!

Wednesday, 19 December 2012

ರೂಪಾಯಿ? ಡಾಲರ್??


ದೆಹಲಿಯಲ್ಲಿ
ಜೀವನ
ಮಾಡಲು
ಆರುನೂರು
ರೂಪಾಯಿ
ಸಾಕು.
ಅಲ್ಲಿನ
ಮುಖ್ಯಮಂತ್ರಿ
ಹೇಳಿಕೆ!

ಡಾಲರ್
ಲೆಕ್ಕದಲ್ಲಿ
ಅಂತ
ಹೇಳಲು
ಮರೆತಿರಬೇಕು
ಪಾಪ!!