Wednesday, 20 March 2013

ರಾಜಕೀಯ ನೇತಾರರು


ನನಗೆ
ಎಲ್ಲಾ
ರಾಜಕೀಯ
ನೇತಾರರೂ
ಒಂದೇ
ಥರ
ಕಾಣುತ್ತಾರೆ!

ಏಕೆಂದರೆ
ಅವರೆಲ್ಲರೂ
ಒಂದೇ
ರೀತಿ
ನಟಿಸುತ್ತಾರೆ!!

Tuesday, 19 March 2013

ಪ್ರಾಮಾಣಿಕ


ಎಲ್ಲರೂ
ಪ್ರಾಮಾಣಿಕರೇ
ಶುದ್ದ ಹಸ್ತರೇ

ಎಲ್ಲಿಯ
ತನಕ?

ಸಿಕ್ಕಿಹಾಕಿಕೊಳ್ಳುವ
ತನಕ!!

Monday, 18 March 2013

ದೇವ ಮಾನವ


ದೇವನೊಬ್ಬ
ಹಲವು
ನಾಮ!

ದೇವ ಮಾನವರು
ಅನೇಕ
ಹಾಕುವವರು
ಬಗೆಬಗೆಯ
ನಾಮ!!

Sunday, 17 March 2013

ವಿಜಯದ ಸಂಕೇತ


ವಿಜಯದ
ಸಂಕೇತವೆಂದು
ಯಡ್ಡಿ ತಮ್ಮ
ಎರಡು ಬೆರಳುಗಳನ್ನು
ತೋರಿಸುವುದನ್ನು
ಇನ್ನಾದರೂ
ನಿಲ್ಲಿಸಿದರೆ
ಒಳ್ಳೆಯದು!

ಇಲ್ಲದಿದ್ದರೆ
ಜನ ಅದನ್ನೇ
ತಪ್ಪಾಗಿ ತಿಳಿದು
ಅವರಿಗೆ ಅಷ್ಟೇ
ಸ್ಥಾನ ಕೊಟ್ಟರೆ
ಗತಿಯೇನು?

Saturday, 16 March 2013

ದ್ರೋಣಾ-ದ್ರೋಹಾ


ನಿನ್ನ
ಶಿಷ್ಯನನ್ನು
ಅಗ್ರ
ಪಟ್ಟಕ್ಕೇರಿಸಬೇಕೆಂದು
ನೀನಂದು
ಏಕಲವ್ಯನ
ಹೆಬ್ಬರಳನ್ನೇ
ಬಲಿತೆಗೆದುಕೊಂಡು
ಬಿಟ್ಟೆಯಲ್ಲಾ
ದ್ರೋಣಾ!

ಎಲ್ಲಾ
ತಿಳಿದು
ನೀನು
ಹೀಗೂ
ಮಾಡಬಹುದಾ
ದ್ರೋಹಾ?

Friday, 15 March 2013

ಪಕ್ಷಾಂತರಿ


ಒಂದೊಂದು ಸಲ
ಒಂದೊಂದು
ಪಕ್ಷವನ್ನು
ಅಧಿಕಾರಕ್ಕೆ
ತರುವ
ಮತದಾರರೇ
ನಿಜವಾದ
ಪಕ್ಷಾಂತರಿಗಳು!

ಅವರೇ
ನಮ್ಮ
ಆದರ್ಶ!

ಅವರನ್ನೇ
ನಾವು
ಅನುಕರಿಸುತ್ತೀವಿ,
ಅಂದರು
ಜನಪ್ರಿಯ
ಶಾಸಕರು!!