Tuesday, 21 May 2013

ಮದ್ಯ


ಅಗ್ಗದ
ದರದಲ್ಲಿ
ಮದ್ಯ!

ಅದೂ
ಒಂದು
ರೂಪಾಯಿಗೆ
ಅಂತ
ಹೇಳಲಿಲ್ಲ
ಸದ್ಯ!!

Monday, 20 May 2013

ಮಂತ್ರಿ ಸ್ಥಾನ


   (೧)

ಮಂತ್ರಿ ಸ್ಥಾನ
ಸಿಗದವರು
ಹೊರಗಡೆ
ತೋರಿಸಿಕೊಳ್ಳಲಾಗದೆ
ತಮ್ಮ ಸಿಟ್ಟು!

ಸುಮ್ಮನೆ
ಹಲ್ಲುಕಿಸಿಯುತ್ತಿದ್ದಾರೆ
ತಮ್ಮ ಎಲ್ಲಾ
ದುಖ: ಅದುಮಿಟ್ಟು!!

   (೨)                            

ಮಂತ್ರಿ ಸ್ಥಾನ
ಸಿಕ್ಕಿದವರು
ಹಲ್ಲು
ಕಿಸಿಯುತ್ತಿದ್ದಾರೆ!

ಸಿಗದವರು
ಹಲ್ಲು
ಕಡಿಯುತ್ತಿದ್ದಾರೆ!!

Sunday, 19 May 2013

ನೀತಿಪಾಠ


ಮುಖ್ಯಮಂತ್ರಿಯಿಂದ
ನೂತನ
ಸಚಿವರಿಗೆ
ನೀತಿಪಾಠ!

ಮರೆತು
ನೀವು
ಆಡಿದರೆ
ಆಟ!

ಮತದಾರ
ಕೊಡುತಾನೆ
ಚಾಟಿ ಏಟ!

ಆಗ
ನೀವೆಲ್ಲಾ
ಓಡಬೇಕು
ಒಂದೇ ಓಟ!!

Saturday, 18 May 2013

ಕ್ರಿಕೆಟ್ಟು


ಒಂದು ಕಾಲದಲ್ಲಿ
ಎಷ್ಟೊಂದು
ಘನತೆ
ಗಳಿಸಿತ್ತು
ಕ್ರಿಕೆಟ್ಟು!

ಈಗೀಗ
ದಿನದಿನಕ್ಕೂ
ಹಳ್ಳ ಹಿಡಿಯುತ್ತಿದೆ
ಕುಲಗೆಟ್ಟು!!

ಶ್ರೀಶಾಂತ (ಪದಗಳ ಮರು ಜೋಡಣೆ)


ನ್ಯಾಯವಾಗಿ
ಆಟ
ಆಡಲು
ನಿನಗೇನು
ದಾಡಿ
ಶ್ರೀಶಾಂತ?

ಮಾಡಿದ
ತಪ್ಪಿಗೆ
ಅನುಭವಿಸು
ಜೈಲಿನಲ್ಲಿ
ಏಕಾಂತ!!