Sunday, 23 June 2013

ಕಸಿವಿಸಿ


ಯಡ್ಡಿ
ಎಂಬ
ಬಿಸಿ
ತುಪ್ಪ
ಉಗುಳಿದ
ಮೇಲೆ
ಮತ್ತೆ
ನುಂಗಲು
ಬಿಜೆ.ಪಿ.ಗೆ
ಕಸಿವಿಸಿ!

ಇವರ
ನಾಟಕ
ಕಂಡು
ರಾಜ್ಯದ
ಜನರು
ಮನದಲ್ಲೇ
ನಕ್ಕರು
ಮುಸಿಮುಸಿ!!

Saturday, 22 June 2013

ಬಿಟ್ಟಿ ಪ್ರಚಾರ


ಅಕ್ಕಿ
ಚೀಲದ
ಮೇಲೆ
ಕೈ
ಮುದ್ರೆ
ಸಿದ್ದು
ಚಿತ್ರ!

ಸುಮ್ಮನೆ
ಅಲ್ಲ
ಕೊಟ್ಟಿದ್ದು
ತಿಂದ
ಮೇಲೆ
ಮಾಡಿ
ಬಿಟ್ಟಿ
ಪ್ರಚಾರ!!

Friday, 21 June 2013

ಮದ್ಯದಂಗಡಿ


ಉದ್ಯೋಗ
ಮಾಡುವವರು
ಕುಡಿಯಿರಿ
ಮದ್ಯ!!

ಮಾಡದವರು
ತೆರೆಯಿರಿ
ಅಂಗಡಿ
ಮದ್ಯದ್ದೇ!!

Thursday, 20 June 2013

ಜ್ಞಾನೋದಯ


ಭ್ರಮೆ
ಕಳಚಿದ
ಮೇಲೆ
ಯಡ್ಡಿಗೆ
ಆಯಿತು
ಜ್ಞಾನೋದಯ!

ಗುರುವಿನ
ಅಣತಿಯಂತೆ                     
ಮೋದಿಯನ್ನು
ಕಾಣಲು
ಹೊರಟ
ಶಿಷ್ಯ
ಧನುಂಜಯ!!

Wednesday, 19 June 2013

ಆಸ್ಕರ್


     (ಅ)

ನಿಮಗೆ ಹೆದ್ಧಾರಿ,
ಖರ್ಗೆಗೆ ರೈಲು
ಒಮ್ಮೆಗೆ
ಏಕಿಷ್ಟು
ಪ್ರೀತಿ?
ಮೇಡಮ್ ಗೆ
ಮಿ.ಆಸ್ಕರ್!

    (ಆ)

ಇನ್ನೇನು
ಲೋಕಸಭಾ
ಚುನಾವಣೆ
ಹತ್ತಿರ ಬರುತ್ತಿದೆ
ನಿಮಗೀಗ
ಮಂತ್ರಿ ಸ್ಥಾನ
ಏನನ್ನಿಸುತ್ತಿದೆ
ಮಿ.ಆಸ್ಕರ್!

ಕ್ಷಮಿಸಿ, ನನಗೆ
ಏನು ಹೇಳಲೂ
ತೋಚುತ್ತಿಲ್ಲ
ಬೆಟರ್ ಯು
ಆಸ್ಕ್ ಹರ್!!