ಆಮ್
ಆದ್ಮಿ
ಕಸ
ತೆಗಿತೀನಂತ
ತಗೊಂಡ
ಪೊರಕೆ
“ಕೈ”ಗೆ!
ಮಸಿ
ಮೆತ್ತಿಸಿಕೊಂಡ
ಮೈಗೆ!!
ಸಂಜಯ್ ದತ್ಗೆ
ಬೇಕೆಂದಾಗಲೆಲ್ಲಾ
ಪೆರೋಲ್!
ದುಡ್ಡೊಂದಿದ್ದರೆ
ಇಲ್ಲಿ ಎಲ್ಲವೂ
ಮಾಮೂಲ್!!
ಮೊನ್ನೆ
ದೂರದ
ನಾಡಿಂದ
ಬಂದಿತ್ತೊಂದು
ಮೆಸೇಜು!
ಕಳುಹಿಸಿದ್ದವರು
ಫೀ ಮೇಲು!
ಅವರಿಗೆ
ಬೇಕಂತೆ
ನನ್ನ
ಈ ಮೇಲು!
ಕಳುಹಿಸುತ್ತಾರಂತೆ
ಅವರ ವಿವಿಧ
ಭಾವ ಬಂಗಿಗಳ
ಫೋಟೋಸು
ಜೊತೆಗೊಂದಿಷ್ಟು
ಮೇಲು!
ಗೊತ್ತಾದರೆ
ಮನೆಯಲ್ಲಿರುವ
ಅಲಮೇಲು!
ಸುಮ್ಮನೆ
ಬಿಡುತ್ತಾಳಾ
ನನ್ನನ್ನು
ನೆಮ್ಮದಿಯಿಂದಿರಲು
ಆಮೇಲೂ!!
ಬೆಂಗಳೂರು
ಕ್ಲಬ್ಬಿಗೆ
ಸದಸ್ಯರಾಗಲು
ಹಾಕಿಕೊಳ್ಳಿ
ಅರ್ಜಿ!
ಆದರೆ
ಭಾರತೀಯ
ದಿರಿಸುಗಳು
ಅವರಿಗೆ
ಅಲರ್ಜಿ!!
ಸಿದ್ದು,
ನೀವು
ಎಲ್ಲೆಂದರಲ್ಲಿ
ಹೀಗೆ
ಮಾಡುತ್ತಿದ್ದರೆ
ನಿದ್ದೆ!
ಪಕ್ಕದಲ್ಲೇ
ಇರುವ
ಪರಮೇಶ್ವರ
ಕಸಿದುಕೊಳ್ತಾರೆ
ನಿಮ್ಮ
ಹುದ್ದೆ!!