ಬೆಂಗಳೂರು
ಮಹಾ
ನಗರ
ಪಾಲಿಕೆ
ಆಗಿದೆಯಂತೆ
ದಿವಾಳಿ!
ಆಗದೆ
ಮತ್ತೇನಾದೀತು?
ಬಂದು ಹೋದವರೆಲ್ಲಾ
ದಿನಾವೂ
ಮಾಡಿದರೆ
ದೀಪಾವಳಿ!!
ತುಂಬಿದ ಸಭೆಯಲ್ಲಿ
ತನ್ನ ಪ್ರಿಯ ಪತ್ನಿ
ಕೊಟ್ಟ ಕಂಠಿಹಾರವನ್ನು
ಆಂಜನೇಯ ಅಗಿದಗಿದು
ಉಗಿದರೂ ಏನೂ
ಹೇಳಲಾಗದೆ
ಸುಮ್ಮನೆ
ನೋಡುತ್ತಾ
ನಿಂತುಬಿಟ್ಟ
ತೇತ್ರಾಯುಗದ
ಆ ಶ್ರೀ ರಾಮ!
ವಿಧಾನಸೌಧದ
ಗೋಡೆಯನ್ನು
ಒಡೆದುರುಳಿಸಿದರೊ
ತುಟಿಬಿಚ್ಚದೆ
ಕುಳಿತುಬಿಟ್ಟ
ಕಲಿಯುಗದ
ನಮ್ಮ ಈ
ಸಿದ್ದರಾಮ!!
ಬಳಲಿ
ಬೆಂಡಾಗಿದ್ದ
ಯಡ್ಡಿಗೆ
ಆಯಿತು
ಜ್ಞಾನೋದಯ!
ಈಡುಗಾಯಿ
ಒಡೆದು
ಒಳಸೇರಿದರು
ಕಮಲದ
ಕಾರ್ಯಾಲಯ!!
ಹಿಂದೊಮ್ಮೆ
ನಾನಾಗಿದ್ದೆ
ಆಮ್ ಅದ್ಮಿ!
ಕಾರು
ಬಂಗಲೆ
ಎಲ್ಲಾ
ಬೇಕು
ನಾನೀಗ
ಬಡಾ ಆದ್ಮಿ!!
ಹೊಸ
ವರ್ಷದಂದು
ಕೇವಲ
ಕ್ಯಾಲಂಡರ್
ಬದಲಿಸಿದರೆ
ಸಾಲದು!
ನಮ್ಮ
ಕೊಳಕು
ಮನಸ್ಸುಗಳು
ಬದಲಿಸಿಕೊಳ್ಳದಿದ್ದರೆ
ಸುಖ,
ಶಾಂತಿ,
ನೆಮ್ಮದಿ
ಸಿಗದು!!