Friday, 24 October 2014

ಹಬ್ಬ


ಹೊಸ
ಬಟ್ಟೆ
ಹಾಕ್ಕೊಂಡ್ರಿ!

ಒಳ್ಳೆ
ಊಟ
ಮಾಡಿದ್ರಿ!

ಪಟಾಕೀನೂ
ಹೊಡೆದ್ರಿ!

ಒಟ್ನಲ್ಲಿ
ಭಾರಿ
ಜೋರಾಗಿ
ಹಬ್ಬ
ಮಾಡಿದ್ರಿ!

ಆದರೆ
ನೀವು
ಮಾಡಿದ
ಕಸ
ತೆಗೆದ್ರಾ??

Thursday, 23 October 2014

ಹೇಸರಗತ್ತೆ


ಇಪ್ಪತೈದು
ಸಾವಿರ
ಮತ
ಬೀಳತ್ತಂತೆ
ಕಾಂಗ್ರೆಸ್
ನಿಂದ
ನಿಂತರೂ
ಒಂದು
ಕತ್ತೆ!

ಸಧ್ಯ
ನಮ್ಮ
ಪುಣ್ಯ
ಹೇಳಲಿಲ್ಲ
ನಮ್ಮ
ಪ್ರಜೆಗಳೆಲ್ಲಾ
ಹೇಸರಗತ್ತೆ!!

Wednesday, 22 October 2014

ದೀಪ



ದೀಪ
ನೀನು
ನಮ್ಮೆಲ್ಲರ
ಬಾಳಿನ
ಬೆಳಕು!

ಹೋಗಲಾಡಿಸು
ನಮ್ಮ
ಮನದಲ್ಲಿ
ತುಂಬಿರುವ
ಕತ್ತಲೆಯೆಂಬ
ಕೊಳಕು!!

Tuesday, 21 October 2014

ಪಟಾಕಿ


ಹೊಡೆಯಬೇಡಿ
ಭಾರೀ
ಶಬ್ದ
ಬರುವ
ಪಟಾಕಿ!

ಹಾನಿ
ಮಾಡದಿರಲಿ
ನೀವು
ಅಂಟಿಸುವ
ರಾಕೆಟ್ಟು
ಒಳತೂರಿ
ಇನ್ನೊಬ್ಬರ
ಬಾಗಿಲು
ಕಿಟಕಿ!!
“ಎಲ್ಲರಿಗೂ ದೀಪಾವಳಿ ಶುಭಾಶಯಗಳು”

Monday, 20 October 2014

ಬಹುಮತ


ಹುಡುಕಬೇಕು
ಮೊದಲು
ಸೋನಿಯಾ
ತಮಗೆ
ಒಂದು
ಬಹು!

ಅವಳ
ದೆಸೆಯಿಂದಾದರೂ
ಸಿಗಬಹುದೇನೋ
ಬಹುಮತ!!