Monday, 31 October 2016

ಸತ್ಯ! ನಿತ್ಯ!!



ಆಗಲಿ
ಕನ್ನಡವೇ
ಸತ್ಯ!

ಆಗದಿರಲಿ
ಪರಭಾಷೆಯೇ
ನಿತ್ಯ!

ರಾಜ್ಯೋತ್ಸವದ ಶುಭಾಷಯಗಳು

Sunday, 30 October 2016

ರಾಮ ರಾಮ ರೇ



ಎಲ್ಲೂ ಕಂಡು ಕೇಳರಿಯದ ಮುಖಗಳು/ ನಿರ್ದೇಶಕರು/ನಿರ್ಮಾಪಕರು/ಸಂಗೀತ ನಿರ್ದೇಶಕರು ಮತ್ತು ತಂಡದ ಇತರ ಸದಸ್ಯರುಗಳು ಒಂದು ಸುಂದರ ಕನ್ನಡ ಚಿತ್ರ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರ ನಾನು ನಿನ್ನೆ ನೋಡಿದಾಗ ತುಂಬಾ ಇಷ್ಟ ಆಯ್ತು. ತಾವುಗಳು ನೋಡಿದ್ದರೆ ನಿಮ್ಮ ಸ್ನೇಹಿತರು ಬಂಧುಗಳಿಗೆ ನೋಡಲು ತಿಳಿಸಿ, ಇನ್ನೂ ನೋಡದಿದ್ದರೆ ಒಮ್ಮೆ ನೋಡಿ. ಎಲ್ಲರಿಗೂ ಖಂಡಿತಾ ಇಷ್ಟ ಆಗತ್ತೆ ಅನ್ನುವ ಭರವಸೆ ನನಗೆ ಇದೆ. ಈ ನಡುವೆ ಕನ್ನಡದಲ್ಲಿ ಹೊಸ ಪ್ರತಿಭ್ತೆಗಳು ಸುಂದರ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ, ಅವರಿಗೆ ಬೆಂಬಲ ಬೇಕು. ಸುಮ್ಮನೆ ಮನೆಯಲ್ಲಿ ಕುಳಿತು ಕನ್ನಡ ಚಿತ್ರಗಳು ಸರಿಯಾಗಿ ಬರುತ್ತಿಲ್ಲ ಎಂಬ ಕೊಂಕು ನುಡಿ ಬಿಟ್ಟು ಚಿತ್ರ ನೋಡಿ ಪ್ರೋತ್ಸಾಹಿಸಿದರೆ ಇನ್ನೂ ಒಳ್ಳೆ ಚಿತ್ರ ಬರಬಹುದೆಂಬ ಆಸೆಯಿಂದ……………

Thursday, 6 October 2016

ಸಾಕ್ಷಿ



ಕೇಳುತ್ತಿದ್ದಾರೆ
ಕೆಲವರು
ಭಾರತ
ಇತ್ತೀಚೆಗೆ
ನಡೆಸಿದ
ಧಾಳಿಗೆ
ಸಾಕ್ಷಿ!

ಭಾರತಮಾತೆ
ಹೊರಗಟ್ಟಿ
ಬಿಡು
ಕ್ರಿಮಿ
ಕೀಟಗಳನ್ನು
ನೀನೊಮ್ಮೆ
ಅಂದು
ಆಕ್ಷಿ……..

Friday, 30 September 2016

ದೀಪಾವಳಿ



ತಿಂಗಳ
ಮೊದಲೇ
ಭಾರತೀಯರಿಗೆ
ದೀಪಾವಳಿ!

ಇದು
ಪ್ರಧಾನಿ
ದೇಶಕ್ಕೆ
ಕೊಟ್ಟ
ಬಳುವಳಿ!!

Saturday, 24 September 2016

ಹಿಂಜರಿಕೆ



ಪ್ರಧಾನಿ
ಮೋದಿಗೆ
ಕಾವೇರಿ
ವಿಷಯದಲ್ಲಿ
ತಲೆ
ಹಾಕಲು
ಯಾಕೋ
ಹಿಂಜರಿಕೆ!

ಮುಂದೆ
ಅಮ್ಮನ
ಸಹಾಯ
ಬೇಕಾಗಬಹುದೆಂಬ
ಎಚ್ಚರಿಕೆ!!

Wednesday, 21 September 2016

ಡ್ಯಾಮು/ಡ್ರಮ್ಮು



ಅವರೇನೋ
ನೀರು
ತುಂಬಿಸಿಕೊಂಡರು
ಡ್ಯಾಮಲ್ಲಿ!

ನಮಗೆ
ಒಂದು
ತೊಟ್ಟೂ
ಕುಡಿಯಲು
ನೀರಿಲ್ಲ
ಡ್ರಮ್ಮಲ್ಲಿ!!