Tuesday, 18 February 2014

ಖಾಲಿ ಖಾಲಿ


ಅಣಕಿಸುತಿತ್ತು
ಕಾಗದ
ಏನಾದರೂ
ಬರಿ,
ಬಿಡಬೇಡ
ಇವತ್ತು
ನನ್ನನ್ನು
ಖಾಲಿ ಖಾಲಿ!

ತಲೆಯಲ್ಲಿ
ಇದ್ದರೆ
ತಾನೆ
ಬರೆಯುವುದು,
ಅದೂ
ಖಾಲಿ ಖಾಲಿ!!

Sunday, 16 February 2014

“ಯುವಿ” ಯವ್ವಿ


ಹದಿನಾಲ್ಕು
ಕೋಟಿಗೆ
ಬಿಕರಿ
ಯುವಿ!

ಆಶರ್ಯದಿಂದ
ಅಂದ,
ಯವ್ವೀ!!

Saturday, 15 February 2014

ಕಲಿಯುಗದ ರಾಮ


ಕಲಿಯುಗದ
ರಾಮ
ಆದ
ಪ್ರೇಮಕ್ಕೆ
ದಾಸ!

ಜನರ
ಬಾಯಿಗೆ
ಬಿತ್ತು
ಅವರ
ವಿನೋದ
ವಿಲಾಸ!!

ಬುಸ ಬುಸ


ಕೈಯಲ್ಲಿ
ಹಿಡಿದುಕೊಂಡು
ಪೊರಕೆ
ಆಮ್ ಆದ್ಮಿ
ತೆಗೆಯಲು
ಹೊರಟ
ಕಸ!

ಬಳಲಿ
ಬೆಂಡಾಗಿ
ಬಸವಳಿದು
ಅಂದನು
ಬುಸ ಬುಸ!!

Friday, 14 February 2014

ವ್ಯಾಲೆಂಟೈನಿನ ವಾಲೆಟ್ಟು


ಕೇಳಿದೆ
ನೀ
ಆಗುವೆಯಾ
ನನ್ನ
ವ್ಯಾಲೆಂಟೈನ್!

ಅವಳೆಂದಳು
ಮೊದಲು
ನೀ
ತೋರಿಸು
ನಿನ್ನ
ವಾಲೆಟ್ಟು!!