Monday 31 December 2012

ಹೊಸ ವರ್ಷ


ಹೊಸವರ್ಷದಂದು
ಖಂಡಿತಾ
ಕ್ಯಾಲೆಂಡರ್
ಬದಲಾಗತ್ತೆ!

ಬದಲಾಗದೆ
ಇರುವುದು
ನಮ್ಮ
ಕೊಳಕು
ಮನಸ್ಸುಗಳು
ಮಾತ್ರ!!

Saturday 29 December 2012

ರಾವಣ, ದುಶ್ಯಾಸನ


ಅಂದು
ಒಬ್ಬನೇ
ರಾವಣ,
ಒಬ್ಬನೇ
ದುಶ್ಯಾಸನ!

ಇಂದು
ರಸ್ತೆಗೆ
ನಾಲ್ಕಾರು
ರಾವಣರು,
ಹತ್ತಾರು
ದುಶ್ಯಾಸನರು!!

ಒಳಗೆ/ಹೊರಗೆ


ತಂದೆ ತಾಯಿ
ಮಕ್ಕಳಿಗೆ
ಗದರಿದ್ರೆ,
ಬೈದರೆ,
ಹೊಡೆದ್ರೆ
ನಾರ್ವೆಯಲ್ಲಿ
ಒಳಗೆ
ಹಾಕ್ತಾರೆ!

ನಮ್ಮ
ದೇಶದಲ್ಲಿ
ಕೊಲೆ,
ದರೋಡೆ,
ಅತ್ಯಾಚಾರ
ಮಾಡಿದ್ರೂ
ಹೊರಗೇ
ಉಳ್ಕೊತಾರೆ!!

Thursday 27 December 2012

ಹೂ ಮಾರೋ ಅಜ್ಜಿ


ಹೂ ಮಾರೋ
ಅಜ್ಜಿ ಬುಟ್ಟಿ ತುಂಬಾ
ಹೂವು ತುಂಬಿಕೊಂಡು
ಗಣೇಶನ ಗುಡಿ
ಪಕ್ಕದಲ್ಲಿ
ಮಾರಕ್ಕೆ ಕೂತ್ಲು!

ಗುಡಿಗೆ ಬರೋರು
ದಾರಿಲ್ಲಿ ಹೋಗೋರು
ಗಣೇಶನಿಗೆ
ಕೈ ಮುಗಿದ್ರೇ
ಹೊರತು
ಯಾರೂ ಹೂವು
ತಗೋಳ್ಲಿಲ್ಲ!!

ಕಾಲೇಜ್ ಕನ್ಯೆಯರು
ಹೂವನ್ನು ನೋಡಿ
ಕಣ್ಣರಳಿಸಿದರೇ ಹೊರತು
ಕಾಸು ಬಿಚ್ಚಲಿಲ್ಲ!
ಹೂವು ತಗೋಳ್ಲಿಲ್ಲ!!

ಆಟೋ, ಲಾರಿ, ಟ್ಯಾಕ್ಸಿ
ಡ್ರೈವರ್ ಗಳು
ಗಾಡಿ ನಿಲ್ಸಿ
ಹೂ ತಗೊಂಡಿದ್ದು ಬಿಟ್ರೆ
ಬೇರೆ ಯಾರೂ
ಕೇಳಲೇ ಇಲ್ಲ!

ಮಧ್ಯಾಹ್ನ ಆಯ್ತು
ಸಂಜೆ ಬಂತು
ಕತ್ತಲಾಗ್ತಾ ಇದೆ
ಹೂವು ಬಾಡ್ತಾ ಇದೆ
ಅಜ್ಜಿ ಸೊರಗ್ತಾ ಇದೆ
ವ್ಯಾಪಾರ ಇಲ್ಲ!

ಇನ್ಯಾರೂ ಬರಲ್ಲ ಅಂತ
ಮೇಲೆದ್ದ ಅಜ್ಜಿ
ಮಿಕ್ಕ ಹೂವು
ಗಣೇಶನಿಗೆ ಕೊಟ್ಟು
ಕಾಪಾಡಪ್ಪಾ
ನನ್ನಪ್ಪಾ ಎಂದು
ಕೈಮುಗಿದ್ಲು!!

Monday 24 December 2012

ನಿವೃತ್ತಿ


ರಾಜಕಾರಿಣಿಗಳಿಗಿಲ್ಲ
ನಿವೃತ್ತಿ
ಯಾಕೆ?

ಬಾಚೋದೇ
ನಮ್ಮ
ವೃತ್ತಿ!

ಅದಕ್ಯಾಕೆ
ನಿವೃತ್ತಿ
ಅಂತಾರಾ??