Sunday 9 December 2012

“ಮಿಸ್” ಕಾಲ್ (ಮುಂದುವರೆದ ಭಾಗ)


ಫೇಸ್ ಬುಕ್ಕಲ್ಲಿ
ನನ್ನ
“ಮಿಸ್ ಕಾಲ್”
ಕವನ
ಓದಿ
ನನಗೂ
ಒಬ್ರು
“ಮಿಸ್”
ಕಾಲ್
ಮಾಡಿದ್ರು!

“ಮಿಸ್”
ಹೊಗಳಿದ್ದೇ
ಹೊಗಳಿದ್ದು
ನಾನು
ಉಬ್ಬಿದ್ದೇ
ಉಬ್ಬಿದ್ದು

ಮಾತಾಡಿದ್ದೇ
ಮಾತಾಡಿದ್ದು
“ಕಾಲ್” ಗಾಗಿ
ಕಾದಿದ್ದೇ
ಕಾದಿದ್ದು!!

ಕೊನೆಗೊಂದು
ದಿನ
“ಮಿಸ್”
ಎದುರಾಗಿ
ನಾನೇ
ನಿಮ್ಮ
“ಮಿಸ್” ಕಾಲ್
ಗೆಳತಿ
ಎಂದಾಗ
ನಾನು
ಗಾಭರಿಯಿಂದ
ಓಡಿದ್ದೆ!!!

“ಮಿಸ್”
ಬೇರೆ
ಅಲ್ಲದೆ
ನನ್ನ
ಮಿಸಸ್ಸೇ
ಆಗಿದ್ದು
ಬೇರೆ
ಧ್ವನಿಯಲ್ಲಿ
ಮಾತಾಡಿ
ನನ್ನೇ
ಯಾಮಾರಿಸಿದ್ಲು!!!!

No comments:

Post a Comment