Wednesday 1 June 2016

ಫೇಸ್ಬುಕ್ ಸಾಲ



ಫೇಸ್ ಬುಕ್ಕಲ್ಲಿ
ಫೇಮಸ್
ಆದ್ರೆ
ಕೊಡ್ತಾರಂತೆ
ಸಾಲ!

ಕೇಳಿಸ್ಕೊಂಡ
ಮಲ್ಯ
ಅಂದ್ರಂತೆ
ಲೋ
ಸಿದ್ದಾರ್ಥ
ತಗೋಳೊ
ನಾಲ್ಕೈದು
ದೊಡ್ಡ
ಚೀಲ!!

“ತಿಥಿ”




ಹೆಸರಾಂತ ನಾಯಕ-ಇಲ್ಲ, ಹೆಸರಾಂತ ನಾಯಕಿ-ಇಲ್ಲ, ಹಾಸ್ಯ ಕಲಾವಿದರು-ಇಲ್ಲವೇ ಇಲ್ಲ, ಹೆಸರಾಂತ ನಿರ್ದೇಶಕ-ಇಲ್ಲ, ಹಾಡುಗಳು-ಇಲ್ಲ, ವಿದೇಶಿ ಅಥವಾ ದೇಶದ ಸುಂದರ ತಾಣಗಳಲ್ಲಿ ಚಿತ್ರಿಸಿದ್ದಾರಾ ಅಂತ ಹುಡುಕಿದರೆ ಅದೂ ಇಲ್ಲ, ನೃತ್ಯ, ಸಾಹಸ ದೃಶ್ಯ, ಐಟಂ ಸಾಂಗು ಕೇಳಲೇ ಬೇಡಿ, ಹೀಗೆ ಈ ಎಲ್ಲಾ ಇಲ್ಲಗಳ ಮಧ್ಯೆ ಏನೋ ಇದೆ ಅದೇ “ತಿಥಿ” ಎನ್ನುವ ಸುಂದರ ಕನ್ನಡ ಸೊಗಡಿನ ಚಿತ್ರ. ಏನಿದೆ ಅಂತ ಹುಡುಕಿಕೊಳ್ಳುವ ಕೆಲಸ ನಿಮಗೆ ಬಿಟ್ಟಿದ್ದು. ಈ ಚಿತ್ರ ಇಂದು ಅಂತರ ರಾಷ್ಟೀಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಆಸ್ಕರ್ ಪ್ರಶಸ್ತಿಗೆ ನಮ್ಮ ದೇಶದಿಂದ ಹೋಗಬಹುದಾದ ಚಿತ್ರ ಅಂತ ಸುದ್ದಿ ಕೂಡ ಹಬ್ಬಿದೆ. ನಮ್ಮ ರಾಜ್ಯದಲ್ಲೇ ಅಲ್ಲ, ಬೇರೆ ರಾಜ್ಯಗಳ ಜನರೂ ಅಷ್ಟೇ ಏಕೆ ವಿದೇಶದ ಹೆಸರಾಂತ ನಿರ್ದೇಶರೂ, ನಟರೂ ಮೆಚ್ಚಿ, ಹೊಗಳಿ ಬೇರೆಯವರಿಗೆ ನೀವೂ ನೋಡಿ ಅಂತ ಹೇಳ್ತಾ ಇರೋ ಚಿತ್ರ. ಇತ್ತೀಚೆಗೆ ಅಮೀರ್ ಖಾನ್, ಕಲ್ಕಿ, ಅನುರಾಗ್ ಬಸು ಮುಂತಾದ ಬಾಲಿವುಡ್ ನಟ/ನಿರ್ದೇಶಕರು ಮೆಚ್ಚಿ ತಮ್ಮ ಫೇಸ್ ಬುಕ್, ಟ್ವಿಟರ್ ನಲ್ಲಿ ಈ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನೀವು ಈಗಾಗಲೇ ನೋದಿದ್ದರೆ ತಮ್ಮ ಸ್ನೇಹಿತರು/ಬಂಧುಬಳಗ/ವಿಶ್ವಾಸಿಗಳಿಗೆ ತಿಳಿಸಿ, ನೋಡಿಲ್ಲದಿದ್ದರೆ ಖಂಡಿತಾ ನೋಡಿ. ನಿಮಗೆ ಇಷ್ಟ ಆಗೇ ಆಗತ್ತೆ. ಒಂದು ಒಳ್ಳೆ ಊಟ ಮಾಡಿದ ತೃಪ್ತಿ, ಮುಖದಲ್ಲಿ ಒಂದು ಕಿರುನಗೆ ಮನಗೆ ಹೋದ ಮೇಲೆ ರಾತ್ರಿ ಒಂದು ಒಳ್ಳೆ ನಿದ್ದೆ ಖಂಡಿತಾ ಸಿಗತ್ತೆ. ಇದಕ್ಕಿಂತ ಜಾಸ್ತಿ ಕೇಳಿದ್ರೆ ಸ್ವಾರ್ಥ ಅಗತ್ತೆ.