Monday, 14 November 2016

ಐನೂರು



ಮಂಗಳಾರತಿ
ತಟ್ಟೆಗೆ
ಹಾಕಿದ್ರು
ದೇವೇಗೌಡ್ರು
ಹಳೆ
ಐನೂರು!

ಅದನ್ನ
ನೋಡಿ
ಕಣ್ ಕಣ್
ಬಿಟ್ರು
ಐನೋರು!!

Thursday, 10 November 2016

ಬೀದಿಗೆ



ಮೊದಲೇ
ಹೇಳ್ದೆ
ವೋಟ್
ಹಾಕ್ಬೇಡ
ಮೋದಿಗೆ!

ನೋಡಿವಾಗ
ರಾತ್ರೋರಾತ್ರಿ
ಹಾಕ್ಭಿಟ್ಟ
ನಮ್ಮನ್ನೆಲ್ಲ
ಬೀದಿಗೆ!!

ಹೀಗಿರಬಹುದಾ ಸಂಭಾಷಣೆ ಕಪ್ಪುಹಣ ಇಟ್ಟವರದು?

Tuesday, 8 November 2016

ಕಪ್ಪು ಹಣ



ಕಪ್ಪು ಹಣ
ಇಟ್ಟವರಿಗೆ
ಬತ್ತಿ
ಇಟ್ಟರು
ಮೋದಿ!

ತೋರಿಸಿ
ಬಿಟ್ಟರು
ನಂದು
ಬೇರೆ
ಹಾದಿ!!

Monday, 31 October 2016

ಸತ್ಯ! ನಿತ್ಯ!!



ಆಗಲಿ
ಕನ್ನಡವೇ
ಸತ್ಯ!

ಆಗದಿರಲಿ
ಪರಭಾಷೆಯೇ
ನಿತ್ಯ!

ರಾಜ್ಯೋತ್ಸವದ ಶುಭಾಷಯಗಳು

Sunday, 30 October 2016

ರಾಮ ರಾಮ ರೇ



ಎಲ್ಲೂ ಕಂಡು ಕೇಳರಿಯದ ಮುಖಗಳು/ ನಿರ್ದೇಶಕರು/ನಿರ್ಮಾಪಕರು/ಸಂಗೀತ ನಿರ್ದೇಶಕರು ಮತ್ತು ತಂಡದ ಇತರ ಸದಸ್ಯರುಗಳು ಒಂದು ಸುಂದರ ಕನ್ನಡ ಚಿತ್ರ ಕಟ್ಟಿಕೊಟ್ಟಿದ್ದಾರೆ. ಈ ಚಿತ್ರ ನಾನು ನಿನ್ನೆ ನೋಡಿದಾಗ ತುಂಬಾ ಇಷ್ಟ ಆಯ್ತು. ತಾವುಗಳು ನೋಡಿದ್ದರೆ ನಿಮ್ಮ ಸ್ನೇಹಿತರು ಬಂಧುಗಳಿಗೆ ನೋಡಲು ತಿಳಿಸಿ, ಇನ್ನೂ ನೋಡದಿದ್ದರೆ ಒಮ್ಮೆ ನೋಡಿ. ಎಲ್ಲರಿಗೂ ಖಂಡಿತಾ ಇಷ್ಟ ಆಗತ್ತೆ ಅನ್ನುವ ಭರವಸೆ ನನಗೆ ಇದೆ. ಈ ನಡುವೆ ಕನ್ನಡದಲ್ಲಿ ಹೊಸ ಪ್ರತಿಭ್ತೆಗಳು ಸುಂದರ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ, ಅವರಿಗೆ ಬೆಂಬಲ ಬೇಕು. ಸುಮ್ಮನೆ ಮನೆಯಲ್ಲಿ ಕುಳಿತು ಕನ್ನಡ ಚಿತ್ರಗಳು ಸರಿಯಾಗಿ ಬರುತ್ತಿಲ್ಲ ಎಂಬ ಕೊಂಕು ನುಡಿ ಬಿಟ್ಟು ಚಿತ್ರ ನೋಡಿ ಪ್ರೋತ್ಸಾಹಿಸಿದರೆ ಇನ್ನೂ ಒಳ್ಳೆ ಚಿತ್ರ ಬರಬಹುದೆಂಬ ಆಸೆಯಿಂದ……………

Thursday, 6 October 2016

ಸಾಕ್ಷಿ



ಕೇಳುತ್ತಿದ್ದಾರೆ
ಕೆಲವರು
ಭಾರತ
ಇತ್ತೀಚೆಗೆ
ನಡೆಸಿದ
ಧಾಳಿಗೆ
ಸಾಕ್ಷಿ!

ಭಾರತಮಾತೆ
ಹೊರಗಟ್ಟಿ
ಬಿಡು
ಕ್ರಿಮಿ
ಕೀಟಗಳನ್ನು
ನೀನೊಮ್ಮೆ
ಅಂದು
ಆಕ್ಷಿ……..