Wednesday, 27 February 2013

ಅನ್ಯಾಯ



ರೈಲ್ವೆ
ಬಜೆಟ್ ನಲ್ಲಿ
ಮತ್ತೊಮ್ಮೆ
ರಾಜ್ಯಕ್ಕೆ
ಅನ್ಯಾಯ!

ಅಭಿಮಾನ
ಒಗ್ಗಟ್ಟು
ಯಾವುದೂ
ಇಲ್ಲದ
ನಮಗೆ
ಹೇಳಿ
ಹೇಗೆ
ಸಿಕ್ಕೀತು
ನ್ಯಾಯ!!

Tuesday, 26 February 2013

ಸ್ಪರ್ಧೆ ಮೇಲೆ ಸ್ಪರ್ದೆ


ಕನ್ನಡ ಬ್ಲಾಗ್ ನವರು
ಸುಮ್ಮನೇ ಕೂಡಲ್ಲ!

ನಮ್ಮನ್ನೂ ಸುಮ್ಮನೆ
ಕೂಡಲು ಬಿಡಲ್ಲ!

ಸ್ಪರ್ಧೆ ಮೇಲೆ
ಸ್ಪರ್ಧೆ ಇಡ್ತಾರೆ!

ಬಹುಮಾನನೂ
ಕೊಡ್ತಾರೆ!

ಹೀಗೇ ಅಲ್ಲವೆ
ಕನ್ನಡ ಬೆಳೆಸುವ
ಪರಿ!

ಇವರನ್ನು ನೋಡಿ
ಕಲಿಯುವುದು
ಬೇಕಾದಷ್ಟಿದೆ
ಬಿಡಿ!!

ಅನಿವಾರ್ಯ ಕರ್ಮ


ನಾಯಿ, ನರಿ
ಹಂದಿ, ಕತ್ತೆ
ಎಂದು ನಿಮ್ಮ
ನಿಮ್ಮಲ್ಲೇ
ಬಡಿದಾಡಿಕೊಳ್ಳುವ
ನೀವೂ ಒಬ್ಬ
ನಾಯಕರೇ?

ನಿಮ್ಮನ್ನು
ಒಪ್ಪಿಕೊಳ್ಳಬೇಕಾದ
ಅನಿವಾರ್ಯ
ಕರ್ಮ ನಮಗೇಕೆ
ಶಾಸಕರೇ??

Monday, 25 February 2013

ತರಬೇತಿ


ನಮ್ಮ
ರಾಜಕಾರಣಿಗಳನ್ನು
ಪಕ್ಕದ
ತಮಿಳುನಾಡಿಗೆ
ಕಳುಹಿಸುವುದು
ಒಳಿತು!

ಹಿಡಿದ
ಕೆಲಸವನ್ನು
ಪಟ್ಟಾಗಿ
ಕುಳಿತು
ಸಾಧಿಸುವುದು
ಹೇಗೆಂದು
ಕಲಿತು
ಬರಲು!!

Saturday, 23 February 2013

ಮರಣ ಶಾಸನ


ಕಾವೇರಿ
ಐ ತೀರ್ಪು

ನಮ್ಮವರಿಗೆ
ಮರಣ!

ಅವರಿಗೆ
ಶಾಸನ!!