Thursday, 30 October 2014

ಹುರ್ ಹುರ್


ಮೋದಿ
ಹೇಳಿದ್ರು
ಅಂತ
ಕೈಯಲ್ಲಿ
ಪೊರಕೆ
ಹಿಡಿದು
ನಿಂತು
ಬಿಟ್ರು
ತರೂರ್!

ಇಷ್ಟರಲ್ಲೇ
ಪಕ್ಷ
ಅವರನ್ನು
ಓಡಿಸಿಬಿಡತ್ತೇನೋ
ಹುರ್ ಹುರ್!

Wednesday, 29 October 2014

ಸ್ವಚ್ಚತಾ ಅಭಿಯಾನ


ಮೊದಲೇ
ಸ್ವಚ್ಚವಾಗಿದ್ದ
ರಸ್ತೆಗೆ
ಕಸ
ಸುರಿದು
ಪುನಃ
ಸ್ವಚ್ಚಗೊಳಿಸಿದರಂತೆ
ಸಚಿವ
ಹರ್ಷವರ್ಧನ!

ಸಾರ್ಥಕವಾಯಿತು
ಮೋದಿ
ಆರಂಭಿಸಿದ
ಸ್ವಚ್ಚತಾ
ಅಭಿಯಾನ!!

Tuesday, 28 October 2014

ದೇವೇಗೌಡ


ಪಂಜಾಬಿನ
ಭತ್ತದ
ತಳಿ
ಒಂದಕ್ಕೆ
ಅಲ್ಲಿನ
ರೈತರು
ಇಟ್ಟಿದ್ದಾರಂತೆ
ಹೆಸರು
ದೇವೇಗೌಡ!

ದೂರದ
ನಾಡಿಂದ
ನಮ್ಮ ಈ
ಮಾಜಿ
ಕನ್ನಡ
ಪ್ರಧಾನಿಗೆ
ಎಂತಹ
ಗೌರವ
ನೋಡ!!

Monday, 27 October 2014

ಸೋನಿಯಾ/ಸಾನಿಯಾ


ಸೋನಿಯಾಗೆ
ಸಾಲು
ಸಾಲು
ಸೋಲು!

ಸಾನಿಯಾಗೆ
ಪ್ರಶಸ್ತಿಗಳ
ಸಾಲು
ಸಾಲು!!

Sunday, 26 October 2014

ಭದ್ರ


ಹರಿಯಾಣದಲ್ಲಿ
ಇಷ್ಟು
ದಿನ
ನಿಮ್ಮ
ವ್ಯವಹಾರ
ಆಗಿತ್ತು
ಭದ್ರ!

ಇನ್ನು
ಮೇಲೆ
ಭ್ಹಾರೀ
ಕಷ್ಟ
ಅಲ್ಲವೇ
ವಾಧ್ರಾ??

Saturday, 25 October 2014

ಬುಲೆಟ್ ಟೈನ್


ಗೌಡ್ರ
ಆಸ್ತಿ
ಐದೇ
ತಿಂಗಳಲ್ಲಿ
ಆಯ್ತಂತೆ
ಡಬಲ್!

ಹಾಗಾದ್ರೆ
ಬುಲೆಟ್ ಗಿಂತ
ಫಾಸ್ಟು
ಅಂತಾಯ್ತು
ಅವರು
ಓಡಿಸುತ್ತಿರುವ
ರೈಲ್!!