Friday, 26 June 2015

ಅಂದು-ಇಂದು



ಅಂದು
ವಾಜಪೇಯಿಗೆ
ಜಯಲಲಿತ
ಮಮತಾ
ಕಾಟ!

ಇಂದು
ಮೋದಿಗೆ
ವಸುಂಧರಾ
ಸುಷ್ಮಾ
ಸ್ಮುತಿಯಿಂದ
ಸಂಕಟ!

ಒಟ್ಟಿನಲ್ಲಿ
ಬಿ.ಜೆ.ಪಿ
ಮಂದಿಗೆ
ಹೆಂಗಳೆಯರಿಂದ
ಪರದಾಟ!!

Wednesday, 17 June 2015

ಸುಷ್ಮ



ಅಂದುಕೊಂಡು
ಸಹಾಯ
ಮಾಡಿದರೇನೋ
ಸುಷ್ಮ
ಲಲಿತ ಮೋದಿಯನ್ನು
ನರೇಂದ್ರ ಮೋದಿ
ತಮ್ಮ!

ಪಾಪ
ಹಗಲಿರಳೂ
ಕಾಡುತ್ತಿದ್ದಾನೆ
ಆಗಿ
ಗುಮ್ಮ!!

Monday, 15 June 2015

ಮನಸ್ಸು



ಇರಬೇಕು
ದೊಡ್ಡದಾದ
ಮನಸ್ಸು!

ಸದಾ
ಅದರಲ್ಲಿ
ತುಂಬಿರಬೇಕು
ಹುಮ್ಮಸ್ಸು!!

Saturday, 13 June 2015

ನಮಸ್ಕಾರ



ನೀವು
ಮಾಡಿದರೆಷ್ಟು
ಬಿಟ್ಟರೆಷ್ಟು
ಯೋಗದ
ಹೆಸರಿನಲ್ಲಿ
ನನಗೆ
ನಮಸ್ಕಾರ
ಅಂತ
ಬೇಜಾರಾದ
ಸೂರ್ಯ!

ನಾನು
ದಿನವೂ
ಬರುವುದು
ನಿಮ್ಮನ್ನು
ಎಬ್ಬಿಸಿ
ಮಾಡಿರಿ
ಅಂತ
ಹೇಳಕ್ಕೆ
ನಿಮ್ಮ
ಕಾರ್ಯ!!

Friday, 12 June 2015

ಭಾರತೀಯ ಸೇನೆ



ಯಾರಿಗೂ
ಕಡಿಮೆ
ಇಲ್ಲ
ನಮ್ಮ
ಭಾರತೀಯ
ಸೇನೆ!

ಎದುರಿಸಲು
ಸದಾ
ಸಿದ್ದ
ಬಂದರೂ
ಎಂಥದೇ
ಬೇನೆ!!

Thursday, 11 June 2015

ನಮಸ್ಕಾರ



ಮನಸ್ಸು
ನಿರಾಳ
ಮಾಡಿದರೆ
ಸೂರ್ಯ
ನಮಸ್ಕಾರ!

ದೇಶದ
ಎಲ್ಲಾ
ಜನರು
ಮಾಡಿ
ಅಂದ್ರೆ
ವೋಟಿಗೆ
ಬೀಳತ್ತೆ
ಸಂಚಕಾರ!!