Saturday, 30 November 2013

ಯಡ್ಡಿ ಕಷ್ಟ


ಪಾಪ
ನೋಡಕ್ಕಾಗಲ್ಲ
ಯಡ್ಡಿ
ಕಷ್ಟ!

ಯಾರಾದ್ರೂ
ಕೊಡೀಪ್ಪಾ
ಒಂದು
ಖುರ್ಚಿನಾದ್ರೂ
ಕನಿಷ್ಠ!!

Friday, 29 November 2013

ಕಾರ್ಲೋಸ್


ನಾರ್ವೆಯ
ಕಾರ್ಲೋಸ್
ಚದುರಂಗದ
ಆಟದಲ್ಲಿ
ವಿಶ್ವವನ್ನೇ
ಗೆದ್ದ!

ಖುಷಿ
ತಡೆಯಲಾರದೆ
ಈಜುಕೊಳದಲ್ಲಿ
ಬಿದ್ದ!!

Thursday, 21 November 2013

ಸಾಹಿತಿ


ರಾಜಕೀಯದಿಂದ
ದೂರ ಇದ್ದರೆ
ಒಳಿತೇನೋ
ಸಾಹಿತಿ!

ಅರಿತು
ಮಾತನಾಡಿದರೆ
ಇನ್ನೂ ಚೆಂದ
ತನ್ನ ಇತಿ ಮಿತಿ!!

Tuesday, 19 November 2013

ವಿಜ್ಞಾನಿಯ ಸಿಟ್ಟು


ರಾಜಕಾರಣಿಗಳ
ಅಜ್ಞಾನ!

ಸರ್ಕಾರದಿಂದ
ಹೆಚ್ಚಿಗೆ
ಸಿಗುತ್ತಿಲ್ಲ
ಅನುದಾನ!

ಸೊರಗುತ್ತಿದೆ
ವಿಜ್ಞಾನ!!

Monday, 18 November 2013

ಬಿಚ್ಚೋದಿಲ್ಲ/ಮುಚ್ಚೋದಿಲ್ಲ


ನಮ್ಮ
ಈಗಿನ
ಪ್ರಧಾನಿ
ಮುಚ್ಚಿದ
ಬಾಯಿ
ಬಿಚ್ಚೋದಿಲ್ಲ!!

ಮುಂದೆ
ಆಗಲು
ಹೊಟಿರುವವರು
ಬಿಚ್ಚಿದ
ಬಾಯಿ
ಮುಚ್ಚೋದಿಲ್ಲ!!