Monday, 31 March 2014

ವಿಷ


ನಮ್ಮ
ರಾಜಕೀಯ
ನಾಯಕರುಗಳಿಗೆ
ಪಾಪ
ಪ್ರಸ್ತಾಪಿಸಲು
ಇಲ್ಲ
ವಿಷಯ!

ಅದಕ್ಕೇ
ಇರಬೇಕು
ಎದುರಾಳಿಗಳು
ಕಂಡರೆ
ಕಾರುತ್ತಾರೆ
ವಿಷ!!

Tuesday, 18 March 2014

ಚಾಯ್ ವಾಲ


ಅದೇನಪ್ಪಾ
ಈ ಪಾಟಿ
ಮೋದಿ ಬೆನ್ನ
ಹಿಂದೆ ಬೀಳ್ತೀಯಾ
ಕ್ರೇಜಿ ವಾಲ?

ಯಾಕೆ ನಿನಗೆ
ಕೊಟ್ಟ ಚಹಾದಲ್ಲಿ
ಸಕ್ಕರೆ ಬದಲು
ಉಪ್ಪು ಹಾಕಿ
ಕೊಟ್ಟನಾ ಆ
ಚಾಯ್ ವಾಲ??

Sunday, 16 March 2014

ಇಪ್ಪತ್ತು ಸಾವಿರ


ಕೇಜ್ರಿವಾಲ್
ಜೊತೆ
ಊಟ
ಮಾಡಕ್ಕೆ
ಕೊಡಬೇಕಂತೆ
ಸಾವಿರದ
ನೋಟು
ಇಪ್ಪತ್ತು!

ಪಾಪ
ಅವರಿಗೇನು
ಗೊತ್ತು?

ನಮ್ಮ
ದೇಶದಲ್ಲಿ
ಲಕ್ಷಾಂತರ
ಮಂದಿ
ಇದ್ದಾರೆ
ಊಟ
ಮಾಡದೆ
ಒಪ್ಪತ್ತು!!

Saturday, 15 March 2014

ದಡ್ಡ ದಡ್ಡಿ


ಯಡ್ಡಿ
ಹಿಂದೆ
ಹೋದ
ಧನಂಜಯ
ಆದ
ದಡ್ಡ!

ಆದರೆ
ಶೋಭಾ
ಮಾತ್ರ
ಆಗಲಿಲ್ಲ
ದಡ್ಡಿ!!

Monday, 10 March 2014

ಚುನಾವಣಾ ಅಭ್ಯರ್ಥಿ


ಬೇಕೆಂದರೆ
ರಾಜಕೀಯ
ಪಕ್ಷಗಳಿಂದ
ಟಿಕೀಟು!

ಪಾಪ
ಎಷ್ಟು
ಜನಕ್ಕೆ
ಹಿಡಿಯಬೇಕೋ
ಬಕೀಟು!!