Friday 7 March 2014

ಸುರಕ್ಷಿತ ಸ್ಥಳವೇ ಇಲ್ಲವೇ ಹೆಣ್ಣಿಗೆ? ತಾಯಿಯ ಗರ್ಭವೂ ಸೇರಿ.


ನಮ್ಮ ದೇಶದಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲೆ, ಮುಖ್ಯಮಂತ್ರಿ, ಲೋಕಸಭಾ ಸದನದ ಮುಖ್ಯಸ್ಥೆ ಹೀಗೆ ಅನೇಕ ಸಂವಿಧಾನದ ಮುಖ್ಯ ಸ್ಥಾನಗಳನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಎಲ್ಲರೆಂದ ಮೆಚ್ಚುಗೆಗೆ ಪಾತ್ರವಾದ ಮಹಿಳೆಯರು ಇದ್ದಾರೆ. ಇಂದು ಅವರು ಮಾಡದೆ ಇರುವ ಕೆಲಸವೇ ಇಲ್ಲ. ಆದರೆ ಹೆಣ್ಣಿಗೆ ತಾಯಿಯ ಗರ್ಭವೂ ಸೇರಿ ಮನೆಯ ಒಳಗೆ, ಹೊರಗೆ ಯಾವುದೂ ಸುರಕ್ಷಿತವಾದ ಸ್ಥಳ ಇಲ್ಲದೆ ಇರುವುದು ನಮ್ಮ ನಾಗರೀಕ ಸಮಾಜ ತಲೆ ತಗ್ಗಿಸಿ ನಿಲ್ಲ ಬೇಕಾಗಿದೆ. ಇದು ಕೇವಲ ನಮ್ಮ ದೇಶದ ಕಥೆ ಮಾತ್ರ ಅಲ್ಲ. ವಿಶ್ವದ ಅನೇಕ ದೇಶಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ.

ಅನೇಕ ಸಿದ್ದ ಉಡುಪು ಕಾರ್ಖಾನೆಗಳಲ್ಲಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಲಕ್ಷಾಂತರ ಮಹಿಳೆಯರು ಕಡಿಮೆ ಸಂಬಳದಲ್ಲಿ ತಮ್ಮ ಜೀವನ ಸಾಗಿಸುತ್ತಿರುವುದು ಸಹ ನೋವಿನ ಸಂಗತಿ. ಇನ್ನು ಕೆಂಪು ದೀಪದ ಕೆಳಗೆ ಪ್ರತಿ ದಿನ, ರಾತ್ರಿ, ಘಳಿಗೆ ಬಾಡಿಹೋಗುತ್ತಿರುವ ಕುಸುಮಗಳ ನೋವಿನ ಮಧ್ಯೆ ಬದುಕುತ್ತಿರುವ ಸಾವಿರಾರು ಮಹಿಳೆಯರು, ಇವರಿಗೆಲ್ಲಾ ಮಹಿಳಾ ದಿನ ಅಂತ ನಮಗೂ ಒಂದು ದಿನ ಇದೆ ಅನ್ನುವುದು ಕೂಡಾ ತಿಳಿದಿಲ್ಲವೇನೋ?.

ಕಲಿಯುಗ, ದ್ವಾಪರಯುಗದ ಕಾಲದಿಂದ, ಇಂದಿನವರೆಗೂ ಹೆಣ್ಣು ನೆಮ್ಮದಿಯಿಂದ ಬದುಕಿಲ್ಲ ಅಂತ ಚರಿತ್ರೆಯಿಂದ ತಿಳಿದುಬರುತ್ತದೆ. ರಾಜ್ಯ/ದೇಶದ ಮಧ್ಯೆ ಯುದ್ದವೇನಾದರೂ ನಡೆದರೆ ಮೊದಲು ಗುರಿಯಾಗುವುದು ಮಹಿಳೆಯೇ. ಇದಕ್ಕೆಲ್ಲಾ ಎಂದು ಕೊನೆ ಬೀಳುವುದೋ ಅಂದು ನಾವು ಪ್ರಗತಿ ಹೊಂದಿದ್ದೇವೆ ಎಂದು ಎದೆಯುಬ್ಬಿಸಿ ಹೇಳಬಹುದು.
ಯಾವ ದೇಶದಲ್ಲಿ ಮಹಿಳೆ/ಮಕ್ಕಳು/ವೃದ್ದರು ನೆಮ್ಮದಿಯಿಂದ, ಸಂತೋಷದಿಂದ ಇರುವರೋ ಅಂತಹ ರಾಜ್ಯ/ದೇಶ ಶ್ರೀಮಂತ ಸುಭಿಕ್ಷ, ಅಂತಹ ಕಾಲ ಶೀಘ್ರವಾಗಿ ಬರಲಿ. ಎಲ್ಲಾ ಮಹಿಳಾಮಣಿಗಳಿಗೆ ಶುಭವಾಗಲಿ

No comments:

Post a Comment