Wednesday, 25 December 2013

ಫೇಸ್ ಬುಕ್ ಎಂಬ “ಅಜೀಬ್ ದುನಿಯಾ”


ಫೇಸ್ ಬುಕ್ ನ
ಅಜೀಬ್ ದುನಿಯಾದ
ಸ್ನೇಹಿತರು
ಇಂದು ಒಂದೆಡೆ
ಸೇರಿದ್ರು!

ಮುಖ್ಯ
ಅತಿಥಿಗಳು
ಪುಸ್ತಕ
ಬಿಡುಗಡೆ
ಮಾಡಿದ್ರು!

ಬಂದವರು
ಚಪ್ಪಾಳೆ
ಹೊಡೆದ್ರು!

ಹೊರಗಡೆ
ಇತ್ತು
ಉಪಹಾರ!

ಒಳಗಡೆ
ಕೊಟ್ಟೂರಿನವನ
ಪ್ರವರ!

ಕೆಲವರು
ಅಲ್ಲಿಂದಿಲ್ಲಿಗೆ
ಓಡಾಡ್ತಿದ್ದರು!

ಇನ್ನು
ಕೆಲವರು
ನನ್ನ ಥರ
ಸುಮ್ಮನೆ
ಕೂತಿದ್ರು!

ಸಂತೋಷ್,
ಪವನ್
ಮತ್ತಿತರ
ಯುವ
ಕವಿಗಳು
ಚುಟುಕ,
ಕವನ
ಒದಿದ್ರು!

ಹೂ
ಇಸ್ಕೊಂಡ್ರು!

ಛೇ,
ನೀವಲ್ಲಿರಬೇಕಿತ್ತು,
ಒಟ್ಟಿಗೆ ತಿಂಡಿ
ತಿಂದು
ಕಾಫಿನೋ,
ಟೀನೋ
ಕುಡಿಬಹುದಾಗಿತ್ತು!

ಒಬ್ಬರನೊಬ್ಬರು
ಪರಿಚಯ ಮಾಡಿ
ಕೊಳ್ಳಬಹುದಾಗಿತ್ತು!

ಹಿರಿಯ
ಕವಿಗಳನ್ನು
ನೋಡಬಹುದಾಗಿತ್ತು!

ಪುಸ್ತಕ ಬರೆದ
ಕವಿಗಳ ಕೈ
ಕುಲುಕಬಹುದಾಗಿತ್ತು!

ನಾವು
ನಿಮ್ಮನ್ನು
ಕಾಯ್ತಾ ಇದ್ವಿ,
ಈಗ ಬರ್ತಾರೆ
ಆಗ ಬರ್ತಾರೆ
ಅಂತ, ಆದ್ರೆ
ನೀವು ಮಾತ್ರ
ಬರ್ಲೇ ಇಲ್ಲ!

ನಮ್ಮನ್ನು
ಮಾತನಾಡಿಸ್ಲೇ
ಇಲ್ಲ!

ಇನ್ನೊಂದ್ಸಲ
ಕರೆದ್ರೆ
ಮಿಸ್
ಮಾಡ್ಬೇಡಿ
ಪ್ಲೀಸ್!

ಒಟ್ಟಿನಲ್ಲಿ
ನೀವು
ಈ ಬಾರಿ
ತಪ್ಪಿಸಿಕೊಂಡ್ರಿ!

ನಮಗೆ
ಬೇಜಾರು
ಮಾಡಿದ್ರಿ!!

(ಪ್ರವರ ರ ಕ್ಷಮೆ ಕೋರಿ)

No comments:

Post a Comment