Wednesday 21 December 2011

ಮುಂದ....

ಅದ್ಸರಿ ನನಗೇನು ತಿಂಡಿ ತಂದ್ರಿ.  ಎನೂ ತರ್ಲಿಲ್ವ.  ನಾಳೆ ತನ್ನಿ ರವೆವುಂಡೆ.  ಸರೀನಾ.  ಆಮೇಲಾನಾಯ್ತಂತೆ ನಾವೆಲ್ಲ ಭಾರತೀಯರು ಬೇರ ಬೇರ ಭಾಷೆ ಮಾತಾಡೊರೆಲ್ಲಾ ಅವರವರದೇ ರಾಜ್ಯಗಳನ್ನು ಕಟ್ತಿಕೊಂಡ್ರಂತೆ.  ಹಾಗೆ ನಾವೂನು ಕರ್ನಾಟಕ  ರಾಜ್ಯವನ್ನು ಕಟ್ಟಿಕೊಂಡ್ವಂತೆ.  ನಮ್ಮ ಅಕ್ಕಪಕ್ಕದ ಮನೆಯವರು ನಮ್ಮನ್ನು ನಮ್ಮ ಪಾಡಿಗೆ ನಮ್ಮನ್ನು ಇರಕ್ಕೆ ಬಿಡಲ್ಲ.  ಆಂಧ್ರ, ತಮಿಳುನಾಡು, ಕೇರಳ, ಗೋವಾ  ಮನೆಗಳೂರು ಅವಾಗಾವಾಗ ಜಗಳಕ್ಕೆ ಬರತಾರಂತೆ ಹೌದಾ ತಾತ.   ನಮ್ಮ ಕಾಸರಗೋಡು ಕೇರಳಕ್ಕೆ ಸೇರಿಕೊಳ್ಳಂತೆ.  ಈಗ ಕಾಸರಗೋಡು ನಮ್ದು ಕೊಡಿ ಅಂದ್ರೆ ಕೊಡ್ತಾರಾ? ಆಗ ನಿದ್ದೆ  ಮಾಡೂದು ಸ್ವಲ್ಪ ಕಮ್ಮಿ ಮಾಡಿದ್ರೆ ನಮ್ಗೆ ಕಾಸರಗೋಡು ಉಳಿತಾಇತ್ತು ಅಲ್ವಾ ಚಿಕ್ಕಪ್ಪಾ.  ಒಂದ್ಸಲ ಕೊಟ್ರೆ ಮುಗೀತು.  ಯಾರದ್ರೂ ಒದ್ಸಲ ಕೊಟ್ಟಿದ್ದನ್ನು ವಾಪಸ್ಸು ಮಾಡಿದ್ದು ನೋಡಿದೀರಾ.  ಈಗ ಬೆಳಗಾವಿ ನಮಗೆ ಕೊಡಿ ಅಂತ ಅದ್ಯಾರೊ ಠಾಕ್ರೆ ತಾತ ಕೆಳ್ತಿದ್ದಾರಂತೆ.  ನಮ್ಗೆ ಕೊಡಿ, ಇಲ್ಲಾಂದ್ರೆ ನಾವು ನ್ಯಾಯಾಲಯಕ್ಕೆ ಹೋಗ್ತೀವಿ ಅಂತಾರಂತೆ. ನಮ್ದೆಲ್ಲಾ ಬೇರೆಯವ್ರಿಗೆ ಕೊಟ್ರೆ ನಮ್ಗೆ ಕೊನೆಗೆ ಎನು ಸಿಗತ್ತೆ ಮಣ್ಣು ಅಂತ ನಮ್ಮ ತಂದೆ ಯಾವಾಗಲೂ ಹೆಳ್ತಾ ಇರ್ತಾರೆ. ನೀವೆಲ್ಲಾ ಸೇರಿ ಬೆಳಗಾವಿ ಉಳಿಸಿಕೊಳ್ತೀರಾ ಅಲ್ವಾ ದೊಡ್ಡಪ್ಪಾ,  ಆಣೆ ಮಾಡಿ ನನ್ನ ಮೇಲೆ.  ಊಳಿಸ್ಕೊಳ್ಳೇಬೇಕು. ಇಲ್ಲಾಂದ್ರೆ ಒಂದೊಂದೆ ಹೂಗ್ತಾಇರತ್ತೆ ಅಲ್ವಾ ಅಜ್ಜಿ.  ಮೊದಲೇ ನಮ್ದು ಚಿಕ್ಕ ಮನೆ.  ಈಗ್ಬೇರೆ ಎಲ್ಲ ಊರಿಂದನೂ ಇಲ್ಲೇ ವಾಸ ಮಾಡಕ್ಕೆ, ಕೆಲಸಕ್ಕೆ, ವ್ಯಾಪಾರಕ್ಕೆ ಅಂತ ಬಂದು ಇಲ್ಲೇ ಇದ್ದುಬಿಡ್ತಾರೆ.  ಒಳ್ಳೆ ಗಾಳಿ, ಮಳೆ ಜನ ಕೂಡ ಒಳ್ಳೆಯವರು ನಮ್ಗೆ ಅವರ ಭಾಷೆ ಬರದಿದ್ರೂ ಪರ್ವಾಗಿಲ್ಲ ಅವರೆ ನಮ್ಮ ಭಾಷೆ ಕಲಿತಾರೆ.  ಕನ್ನಡದವರು ತುಂಬಾ ಒಳ್ಳೆಯವರು ಅಂತ ಹೇಳಿ ನಮ್ಮನ್ನು ಹೊಗಳಿ ಹೊಗಳಿ ಅವರ ಕೆಲಸ ಮಾಡ್ಸಿಕೊಂಡು ಇಲ್ಲಿ ಬಂದು ೧೦ ವಷ೯ವಾದರೂ ಕನ್ನಡ ಕೆಲೀದೆ ನೆಮ್ಮದಿಯಾಗಿ ಬಾಳ್ತಾರೆ ಅಲ್ವಾ ಚಿಕ್ಕಮ್ಮಾ.  ಅದಲ್ದೆ ಈ ತಮಿಳು ಚಿಕ್ಕಪ್ಪ ಚಿಕ್ಕಮ್ಮ ಯಾವಾಗಲೂ ಜಗಳ ಅಡ್ತಾರೆ ನಮ್ಗೆ ನೀರು ಕೊಡಿ ನೀರು ಕೊಡಿ ಅಂತ.  ನಮ್ಗೇ ಕುಡಿಯಕ್ಕೆ, ವ್ಯವಸಾಯಕ್ಕೆ ನೀರಿಲ್ಲ.  ಇವ್ರಿಗೆ ನಾವು ಹೇಗೆ ಕೊಡೂದು.  ಏನೊ ಒಳ್ಳೆ ಮಳೆ ಬಂದ್ರೆ ಕೊಡ್ತೀವಪ್ಪ.  ಇಲ್ಲಾಂದ್ರೆ ಹೇಗೆ ಕೊಡೂದು ಅಲ್ವಾ ಅಕ್ಕಾ.  ಅವರಿಗೆ ಯಾರು ಬುದ್ದಿ ಹೇಳ್ತಾರೊ ನಾ ಕಾಣೆ.  ಹೀಗಿದೆ ನಮ್ಮ ರಾಜ್ಯದ ಕಥೆ.  ಕನ್ನಡದ ಕಥೆ.  ಇವತ್ತಿಗೆ ಇಷ್ಟು ಸಾಕು.  ನಾಳೆ ರವೆಉಂಡೆ ತನ್ನಿ ಮರೀಬೇಡಿ.  ಸರಿ, ಎಲ್ಲಾ ಕಥೆ ಕೇಳಿಸ್ಕೊಂಡ್ರಾ? ಇಲ್ಲಾ ನಿದ್ದೆ ಮಾಡ್ಬಿಟ್ರಾ? ಮೊದಲೇ ನಿದ್ದೆ ಜಾಸ್ತಿ ನಮಗೆ.  ಎಲ್ಲರಿಗೂ  ಟಾಟ........

No comments:

Post a Comment