Saturday 31 December 2011

ಶುಭಾಶಯಗಳು:

ಹೊಸ ವರುಷದ ಶುಭಾಶಯಗಳು ನನ್ನ ಎಲ್ಲಾ ಕನ್ನಡ ಪ್ರೇಮಿಗಳಿಗೆ.  ನಮ್ಮ ದೇಶದ ಕಣ್ಣುಗಳಾದ ನಮ್ಮ ರೈತ ಮತ್ತು ನಮ್ಮ ಸೈನಿಕರಿಗೆ ನನ್ನ ವಿಶೇಷ ನಮನಗಳು ಮತ್ತು ಶುಭಾಶಯಗಳು. ನೀವು ಈ ದೇಶದ ಆಸ್ತಿ.  ಹೊಸ ವರುಷ ೨೦೧೨ರಲ್ಲಿ ಕಾಲಕಾಲಕ್ಕೆ ಉತ್ತಮ ಮಳೆ, ಬೆಳೆ ಯಾಗಲಿ.  ರೈತನಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ.  ಅವರಿಗೆ ನ್ಯಾಯವಾಗಿ ಸಿಗಬೇಕಾದ ಸಕಲ ಸೌಲಭ್ಯಗಳು ಸಿಗುವಂತಾಗಲಿ.  ಈ ದೇಶದ ಸ್ತಿತಿ ನೊಡಿ.  ತಾವು ಬೆಳೆದ ಬೆಳೆಗಳಿಗೆ ಬೇರೆಯವರು ಮೌಲ್ಯವನ್ನು ಕಟ್ಟುತ್ತಾರೆ.  ಈ  ಕೆಟ್ಟ ಪದ್ದತಿ ನಮ್ಮ ದೇಶದಿಂದ ತೊಲಗಲಿ.  ಯಾವುದೇ ಉತ್ಪಾದಕ ತಾನು ತಯಾರಿಸುವ ಉತ್ಪನ್ನಗಳಿಗೆ ತಾನೆ ಬೆಲೆ ಕಟ್ಟುತ್ತಾನೆ.  ಆದರೆ ನಮ್ಮ ರೈತನಿಗೆ ಆ ಸೌಭಾಗ್ಯವಿಲ್ಲ.  ಆ ಸೌಲಭ್ಯ ಹೊಸ ವರುಷದಲ್ಲಿ ಅವನಿಗೆ ದೊರಕುವಂತಾಗಲಿ.  ಅವನು ಸಾಲ ಕೂಪದಿಂದ ಹೊರಬರುವಂತಾಗಲಿ.  ರೈತನ ಆತ್ಮಹತ್ಯೆಯ ಸುದ್ದಿ ನಾವು ಎಂದೂ ಕೇಳದಂತಾಗಲಿ.  .
ನಮ್ಮ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಈ ಹೊಸ ವರ್ಷ ಸಂತೊಷವನ್ನು ಉಂಟುಮಾಡಲಿ.   ಕನ್ನಡ ಪ್ರೇಮಿಗಳ ಸಂಖ್ಯೆಹೆಚ್ಚಾಗಲಿ.  ವರುಷದ ೩೬೫ ದಿನಗಳೂ ಕನ್ನಡದಲ್ಲೆ ವ್ಯವಹರಿಸಿ ನವೆಂಬರ್ ಕನ್ನಡಿಗರು ಎಂಬ ಆಪಾದನೆಯಿಂದ ಹೊರಬರುವಂತಾಗಲಿ ನಮ್ಮ ಕನ್ನಡಿಗರು.  ಹೊಸ ವರ್ಷದಿಂದ ಕನ್ನಡದ ಮನಸ್ಸುಗಳು ಜಾಗೃತಗೊಳ್ಳಲಿ. ಕನ್ನಡ ಚಿತ್ರರಂಗ ಹೊರ ರಾಜ್ಯ/ಹೊರ ದೇಶಗಳಲ್ಲೂ ತೆರೆಕಾಣುವಂತಾಗಲಿ.  ನಮ್ಮ ನಾಟಕ, ರಂಗಭೂಮಿ, ಚಲನಚಿತ್ರ, ಜನಪದ, ಕಲೆ, ಸಾಹಿತ್ಯ, ಸಂಗೀತ  ಲೋಕಕ್ಕೆ ಒಳಿತಾಗಲಿ.  ನಮ್ಮ ಕನ್ನಡ ಕ್ರೀಡಾಪಟುಗಳು ದೇಶ ವಿದೇಶಗಲ್ಲಿ ಮಿಂಚುವಂತಾಗಲಿ.
ನಮ್ಮ ಕನ್ನಡದ ಕಂದಮ್ಮಗಳು ತಮ್ಮ ತಮ್ಮ ತಂದೆ ತಾಯಿಯರನ್ನು ಮಮ್ಮಿ, ಡ್ಯಾಡಿ ಎಂದು ಕರೆಯದೆ ಪ್ರೀತಿಯಿಂದ ಅಪ್ಪ, ಅಮ್ಮ ಎಂದು ಕರೆಯುವಂತಾಗಲಿ.  ಅಂಕಲ್, ಆಂಟಿಯರ ಬದಲಾಗಿ ಅಣ್ಣ, ಅಕ್ಕ, ಚಿಕ್ಕಪ್ಪ, ಚಿಕ್ಕಮ್ಮಗಳಾಗಲಿ.  ನಿಮ್ಮ ಮುದ್ದು ಬಾಯಿಯಿಂದ ಕನ್ನಡದ ಕತೆ, ಶಿಶು ಗೀತೆಗಳನ್ನು ಕೇಳುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುತ್ತಾ........

No comments:

Post a Comment