Tuesday 20 December 2011

ನನ್ನ ಮಾತು:

ಕೇಳಿದ್ರಲ್ಲಾ ಸ್ನೇಹಿತರೇ, ಮಗು ಹೇಳಿದ ಕೊನೆ ಮಾತು.  ಹೀಗಿದೆ ನಮ್ಮ ಕನ್ನಡದ ಪರಿಸ್ಠಿತಿ.  ನಮ್ಮ ಭಾಷೆಗೆ ಸುಮಾರು ೨,೩೦೦ ವಷಗಳ ಇತಿಹಾಸ ಇದೆ ಅಂತಾನೆ ನಾವೆಲ್ಲಾ ಮರೆತುಬಿಟ್ಟಿದ್ದೇವೆ.  ಬನ್ನಿ ಸ್ನೇಹಿತರೇ ನಾವು ನೀವು ಎಲ್ಲಾರು ಸೇರಿಕೊಂಡು ನಮ್ಮ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡೋಣ .  ನಮಗೆ ಯಾವ ಪರಭಾಷಿಕರ ಬಗ್ಗೆಯೂ ದ್ವೇಷ, ಅಸೂಯೆ, ಹೊಟ್ಟೆಕಿಚ್ಚಾಗಲಿ ಖಂಡಿತಾ ಇಲ್ಲ.  ನಾವು ನೀವು ಎಲ್ಲಾರು ಇಲ್ಲೇ  ಹುಟ್ಟಿ  ಬೆಳೆದು  ಓದಿ ವಿದ್ಯಾವಂತರಾಗಿದ್ದೇವೆ.  ಇಲ್ಲೇ  ಕೆಲಸ, ವ್ಯಾಪಾರ ವ್ಯವಹಾರ ಹೀಗೆ ಅನೇಕ ರೀತಿ ಬದುಕು ಕಟ್ಟಿಕೊಂಡಿದ್ದೇವೆ.  ಇಲ್ಲೇ ಮನೆ, ಮಠ, ಆಸ್ತಿ ಪಾಸ್ತಿ, ಹೆಂಡತಿ, ಮಕ್ಕಳು ಎಲ್ಲಾ ಗಳಿಸಿದ್ದೇವೆ.  ಅದೇ ರೀತಿ ಪರಭಾಷಿಕರು  ಇಲ್ಲಿ ಬಂದು ಬದುಕು ಕಟ್ಟಿಕೊಂಡಿದ್ದಾರೆ.  ಅವರೂ ಮನೆ, ಮಠ, ಆಸ್ತಿಪಾಸ್ತಿ, ಹೆಂಡತಿ, ಮಕ್ಕಳು ಎಲ್ಲಾ ಇಲ್ಲೇ ಮಾಡಿಕೊಂದಿದ್ದಾರೆ.  ಪರಭಾಷಿಕರೇ ನೀವು ಇಲ್ಲಿ ಎಲ್ಲಾ ಗಳಿಸಿ ಕನ್ನಡಕ್ಕೆ ದ್ರೊಹ ಭಗೀಬೇಡಿ.  ಒಂದ್ಸಲ ಯೋಚನೆ ಮಾಡಿ, ನೀವು ಮೊದಮೊದಲು ಈ ಊರಿಗೆ ಬಂದಾಗ ನಿಮಗೆ ಇಲ್ಲಿನ ಭಾಷೆ ಬರುತ್ತಿರಲಿಲ್ಲ. ಹೊಸ ಊರು, ಹೊಸ ಜಾಗ, ಹೊಸ ಜನ ಇಲ್ಲಿ ಎನು ಮಾಡಬೇಕು ಹೇಗಿರಬೇಕು ಅಂತಾನೂ ಗೊತ್ತಿರಲಿಲ್ಲ ಅಲ್ವಾ.  ಆಗ ನಮ್ಮ ಕನ್ನಡಿಗರು ಮಾಡಿದ ಸಹಾಯ ಉಪಕಾರ ಯಾವುದೂ ಮರೀಬೇಡಿ.  ನಾವು ನಿಮ್ಮ ಭಾಷೆಯಲ್ಲಿ ಮಾತಾಡಿ ನಿಮಗೆ ಮನೆ, ಪಡಿತರ ಚೀಟಿ, ಮಕ್ಕಳಿಗೆ ಶಾಲೆ, ಮಾಡಕ್ಕೆ ಒಂದು ಕೆಲಸ ಹಾಗೆ ಸಕಲ ಅನುಕೂಲಗಳನ್ನೊ ಮಾಡಿಕೊಟ್ಟಿದ್ದೇವೆ. ನಾವು ನಿಮ್ಮನ್ನ ಸ್ವಂತ ಗೆಳೆಯರಂತೆ  ಸಂಭಂಧಿಕರಂತೆ ನೋಡಿಕೊಂಡಿದ್ದೇವೆ.  ನಿಮಗೆ ಯಾವುದೇ ಅನಾನುಕೂಲಗಳಾಗದಂತೆ ನಮಗೆ ಸಾದ್ಯವಾದಷ್ಟೂ ಚೆನ್ನಾಗಿ ನೂಡಿಕೂಂಡಿದ್ದೆವೆ.  ಇದು ನಮ್ಮ ಕತವ್ಯ ಕೂಡ ಹೌದು.  ಅದೇ ರೀತಿ ನಮ್ಮ ಕನ್ನಡಿಗರಿಗೆ ನಿಮ್ಮ ಊರುಗಳಲ್ಲಿ ನೀವು ಸಹಾಯ ಮಾಡಿದ್ದೀರ, ಗೆಳೆಯರಂತೆ, ಸಂಭಂಧಿಕರಂತೆ ಕಂಡಿದ್ದೀರ.  ಇದೇ ನಮ್ಮ ಭಾರತೀಯರ ಹುಟ್ಟು ಗುಣ.  ಇದು ಇದೇ ರೀತಿ ಮುಂದುವರೆಯಲಿ.   ನೀವು ನಮ್ಮ ಭಾಷೆಯಲ್ಲಿ ಮಾತಾಡಿ, ಕನ್ನಡವನ್ನು ಚೆನ್ನಾಗಿ ಓದಕ್ಕೆ ಬರೆಯಲಿಕ್ಕೆ ಕಲಿಯಿರಿ, ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಕನ್ನಡ ಕಲಿಸಿ.  ನಮ್ಮ ಜೊತೆ ಕನ್ನಡದಲ್ಲಿ ವ್ಯವಹರಿಸಿ.  ನಿಮ್ಮ ಮನೆಯಲ್ಲಿ ನಿಮ್ಮ ಭಾಷೆಯಲ್ಲಿ ಮಾತಾಡಿ.  ಅನೇಕ ಕನ್ನಡ ಭಾಷಾಭಿಮಾನ ಕನ್ನಡಿಗರು, ಪರಭಾಷಿಕರು ನಮ್ಮ ಕನ್ನಡನಾಡಿಗೆ ಅನೇಕ ಕೊಡಿಗೆಗಳನ್ನು ಕೊಟ್ಟಿದ್ದಾರೆ ಅವರಿಗೆ ನಮ್ಮ ನಮನಗಳು ಮತ್ತು ಅಭಿನಂದನೆಗಳು.  ಈ ಕನ್ನಡನಾಡು ನಮಗೆ ಎಲ್ಲಾ ಕೊಟ್ಟಿದೆ.  ಈಗ ನಮ್ಮ ಸರದಿ ಅದನ್ನು ಉಳಿಸಿಕೊಳ್ಳೋಣ ಮತ್ತು ಬೆಳೆಸಿಕೊಳ್ಳೋಣ.   ನಾವೆಲ್ಲ ಒಂದಲ್ಲಾ ಒಂದು ದಿನ ಸತ್ತು ಹೋಗುತ್ತೇವೆ.  ನಾವು ಸತ್ತ ನಂತರವೂ ನಮ್ಮ ಕನ್ನಡ ಭಾಷೆ ಮತ್ತು ನಮ್ಮ ಕನ್ನಡನಾಡು ಉಳಿಯಲಿ, ಬೆಳೆಯಲಿ ಎಂದು ಆಶಿಸುತ್ತಾ............

No comments:

Post a Comment