Wednesday 21 December 2011

ಕೊನೆ ಮಾತು:

ತಾತ, ತಾತ ನಂಗೆ  ರಾತ್ರಿ ನಿದ್ದೆನೇ ಬರ್ಲಿಲ್ಲ ಗೊತ್ತಾ ಯಾಕೆ ಅಂತ ನೀವು ಕೇಳ್ಳೇಇಲ್ಲ.  ನಾನು ರಾತ್ರಿ ಮಲಗಿದ್ಮೇಲೆ ಅಪ್ಪ ಅಣ್ಣಂಗೆ ಹೆಳ್ತಾಇದ್ರು.  ಅದೆನೂ ವಿಶ್ವಸಂಸ್ಥೆ ಅಂತ ಇದ್ಯಂತಲ್ಲ  ಅದು ೨/೩ ವಷದ ಹಿಂದೆ ಒಂದು ವರದಿಯಲ್ಲಿ ಹೇಳಿದ್ಯಂತೆ ಇನ್ನು ಸುಮಾರು ೧೦೦ ವರ್ಷಗಳ   ಅಂತರದಲ್ಲಿ ಜಗತ್ತಿನ ಅನೇಕ ಭಾಷೆಗಳು ನಶಿಸಿಹೂಗತ್ತೆ ಅಂತ.  ಹೌದಾ ತಾತ, ನಾನು ಸತ್ತುಹೊಗ್ತೀನಾ ತಾತ.  ನಂಗೆ ಸಾಯಕ್ಕೆ ಇಷ್ಟ ಇಲ್ಲ ತಾತ.  ನಾನು ಇನ್ನು ಸಾವಿರಾರು ಅಲ್ಲ,  ಲಕ್ಷ ಲಕ್ಷ ವರ್ಷ  ಬದುಕಬೇಕು ಅಜ್ಜಿ. ನನ್ನ ನೀವೆಲ್ಲಾ ಉಳಿಸಿಕೊಳ್ತಿರಾ ಆಜ್ಜಿ, ತಾತ, ದೊಡ್ಡಪ್ಪ, ದೊಡ್ಡಮ್ಮಾ, ಅಕ್ಕಾ, ಅಣ್ಣಾ.  ನನ್ನ ಸಾಯಕ್ಕೆ ಮಾತ್ರಾ ಬಿಡಿಬೇಡಿ.  ನಿಮ್ಗೆಲ್ಲ ಈವಾಗ ಆ ಪರಂಗಿ ಹುಡ್ಗಿ ಮೇಲೆ ಇಷ್ಟ.  ಅವಳು ಕೆಂಪಗೆ ಬೆಳ್ಗೆ ಇದಾಳೆ ಅಂತ. ನಾನು ಸ್ವಲ್ಪ ಕಪ್ಪು.  ಅದಕ್ಕೆ ನಿಮ್ಗೆ ಈಗ ಇಷ್ಟ ಇಲ್ಲ.  ಕಪ್ಪು ಕಸ್ತೂರಿ ಅಲ್ವಾ.  ಕನ್ನಡ ಕೂಡ ಕಸ್ತೂರಿ ಅಲ್ವಾ.  ಪರಂಗಿ ಭಾಷೆ ನನ್ನ ನುಂಗಿ ನೀರು ಕುಡಿಯಲು ಬರುತ್ತಿದೆ.   ನೀವುಗಳೆಲ್ಲ ಅದರಿಂದ ನನ್ನನ್ನು ಉಳಿಸಿಕೊಳ್ಳಿ.  ನಿಮ್ಮ ಮಕ್ಕಳು, ಮೊಮ್ಮಕ್ಕಳು, ಮರಿಮೊಕ್ಳು, ಅವರ ಮರಿಮೊಕ್ಳು ಮುಮ್ಮಕ್ಳು ಹಾಗೆ ನಾನು ಎಲ್ಲರನ್ನು  ನೂಡಬೇಕು ಅಂತ ನನ್ನ ಆಸೆ ಗೊತ್ತಾ.  ಈ ಪರಂಪರೆ ಹೀಗೆ ಮುಂದುವರೆಯಬೇಕು ಇದೇ ನನ್ನ ಕೊನೆ ಮಾತು.  ನಂಗೆ ಮಾತು ಕೊಡಿ ನನ್ನನ್ನು ಉಳಿಸಿಕೊಳ್ತೀರ ಅಂತ.

No comments:

Post a Comment