Monday, 11 March 2013

ಅರುಳಾ? ಮರುಳಾ?


ಅರವತ್ತಾದ ಬಳಿಕ
ಕನಸೂ ನೂರಾರಿತ್ತು.
ಯಾವುದು ಮೂರ್ತ?
ಮತ್ಯಾವುದು ಅಮೂರ್ತ?

ಕಾಲು ಭಾರ, ಎತ್ತಿದ ಕೈ
ಇಳಿಸಕ್ಕಾಗಲ್ಲ, ಇಳಿಸಿದ್ದು ಎತ್ತಕ್ಕೆ.

ಬಿ.ಪಿ.ನೋ? ಶುಗರ್ರೋ?
ಅಥವಾ ಮತ್ಯಾವ್ದೋ?
ಹೇಳಕ್ಕೆ ಬರಲ್ಲಾ…

ಯಾರಿಗೆ ಸಹ್ಯ? ಮತ್ಯಾರಿಗೆ ಅಸಹ್ಯ?
ಕಾಲಿಗೆ ಬೀಳಕ್ಕೇ ಬರ್ತಾರೋ?
ಅಥವಾ ಎಳೆಯಕ್ಕೋ?

ಇಷ್ಟು ದಿನ ಸರಿ ಅದಂದ್ದು
ತಪ್ಪಾಗ್ತಿದೆಯಾ?
ಅಥವಾ ತಪ್ಪೇ ಸರೀನಾ?
ಸುಳ್ಳೇ ನಿಜ ಅಗ್ತಿದೆಯಾ?
ಇಲ್ಲಾ ನಿಜನೇ ಸುಳ್ಳಾ?

ಯಾವುದು ಆತ್ಮ?
ಇನ್ಯಾವುದು ಪರಮಾತ್ಮ?
ಧ್ಯಾನಾನಾ? ಯೋಗಾನಾ?
ಜನ್ಮನಾ? ಪುನರ್ಜನ್ಮನಾ?
ಸ್ವರ್ಗನಾ? ನಾರಕಾನಾ?

ಜೀವಕ್ಕೆ ಆಕ್ಕರೆಯೂ ಇಲ್ಲ,
ಸಕ್ಕರೆಯೂ ಇಲ್ಲ.

ಒಳಗೇ ನಕ್ಕರೆ ಯೋಗಿ
ನಾಲ್ಕು ಜನರ ಮುಂದೆ ಭೋಗಿ.

ಹುಚ್ಚಾ? ಬೆಪ್ಪಾ??
ಅರುಳಾ? ಮರುಳಾ?

No comments:

Post a Comment