Monday, 30 September 2013

ಪ್ರಸ್ತುತ


ಗಾಂಧೀ, ಇಂದು
ನೀನೆಷ್ಟು ಪ್ರಸ್ತುತ?

ನೋಟಿನ ಮೇಲೆ
ನಿನ್ನ ಚಿತ್ರ
ಇರುವುದಕ್ಕಷ್ಟಕ್ಕೇ
ಮಾಡಿಬಿಟ್ಟಿದ್ದಾರೆ
ನಿನ್ನನ್ನು ಸೀಮಿತ!!

Sunday, 29 September 2013

ಹಿತಾಸಕ್ತಿ


ಎಲ್ಲಾ
ರಾಜಕೀಯ
ಪಕ್ಷಗಳೂ
ಒಂದೇ!

ತಮ್ಮ
ಹಿತಾಸಕ್ತಿ
ಕಾಪಾಡಿಕೊಳ್ಳುವುದರಲ್ಲಿ
ಯಾವತ್ತೂ
ಬಿದ್ದಿಲ್ಲ
ಹಿಂದೆ!!

Wednesday, 25 September 2013

ಉಧಾರ್


ಸರ್ಕಾರ
ಕೊಡದೇ
ಇದ್ದರೂ
ಪರ್ವಾಗಿಲ್ಲ
ಆಧಾರ್!

ಕೊಟ್ಟರೆ
ಸಾಕು
ಉಧಾರ್

Tuesday, 24 September 2013

ಪ್ರಾಯಶ್ಚಿತ್ತ


ಐ.ಪಿ.ಎಲ್
ಪಂದ್ಯಗಳಲ್ಲಿ
ಕಳ್ಳಾಟ
ಆಡಿಸಿ
ಸಿಕ್ಕಿಬಿದ್ದಿದ್ದು
ಚೈನ್ನೈ
ತಂಡದ
ಮಾಲೀಕ!

ಉದ್ದುದ್ದಕ್ಕೆ
ತಲೆ
ಬೋಳಿಸಿ
ಪ್ರಾಯಶ್ಚಿತ್ತ
ಮಾಡಿಕೊಂಡಿದ್ದು
ಮಾತ್ರ
ಅದರ
ನಾಯಕ!!

Friday, 13 September 2013

ಸರ್ವಸ್ವ


ಬಿ.ಜೆ.ಪಿ
ಮಂದಿಗೆ
ಈಗ
ಮೋದಿಯೇ
ಸರ್ವಸ್ವ!

ಅಧ್ವಾನಿಯಲ್ಲಿ
ಉಳಿದಿಲ್ಲ
ಯಾವುದೇ
ಸ್ವಾರಸ್ಯ!!

Thursday, 12 September 2013

ಚೈನಾ ಚೈನು


ಸಿದ್ದು
ಹೊರಟರು
ನೋಡಿಕೊಂಡು
ಬರಲು
ಚೈನಾ!

ಬರುವಾಗ
ತರುತ್ತಾರೇನೋ
ನೋಡಬೇಕು
ಸೋನಿಯಾ,
ಕೊರಳಿಗೆ
ಹಾಕಲು
ದೊಡ್ಡ
ಚಿನ್ನದ
ಚೈನು!!