Saturday, 31 August 2013

ವಿಕೃತಿ


ಇಲ್ಲ ಸಲ್ಲದ್ದೆಲ್ಲಾ
ಬರೆದು ಕೆಲವರು
ಹೊಂದ ಬಯಸುತ್ತಾರೆ
ಪ್ರಖ್ಯಾತಿ!

ಸಮಾಜದ
ಮುಂದೆ
ಬೆತ್ತಲಾಗಿ
ತೋರಿಸುಕೊಳ್ಳುತ್ತಾತೆ
ತಮ್ಮ ವಿಕೃತಿ!!

Friday, 30 August 2013

ಮನ ಮೋಹನ


ನಾನೇನು
ಕಳ್ಳನೇ?
ಪ್ರಶ್ನಿಸಿದರು
ಪ್ರಧಾನಿ
ನೊಂದು
ಮನ!

ಅಗತ್ಯಕ್ಕಿಂತ
ಹೆಚ್ಚು ಮೌನ
ತಾಳಿದರೆ
ಜನ ಅದನ್ನೇ
ನಂಬುತ್ತಾರೆ
ಮೋಹನ!!

Thursday, 29 August 2013

ಭಂಡ


ರಸ್ತೆಯಲ್ಲಿ
ಉಗಿದು.
ಕಸ ಹಾಕಿ,
ಮಲ
ಮೂತ್ರ
ಮಾಡಿ
ಕಟ್ಟಬೇಡಿ
ದಂಡ!

ಆಗಬೇಡಿ
ಭಂಡ!!

Wednesday, 28 August 2013

ಒಳ್ಳೆಯವರು


ಮಕ್ಕಳಾಗಿದ್ದಾಗ
ನಾವೆಲ್ಲಾ
ಎಷ್ಟೊಂದು
ಒಳ್ಳೆಯರಾಗಿದ್ವಿ
ಯಾವಗಲೂ!

ಸಂಧರ್ಭಕ್ಕೆ
ಅನುಕೂಲವಾದರೆ
ಮಾತ್ರ
ಒಳ್ಳೆಯವರೇ
ಈಗಲೂ!!

Monday, 26 August 2013

ಕಿತಾಪತಿ


ಎರಡೂ
ಲೋಕಸಭಾ
ಕ್ಷೇತ್ರಗಳನ್ನು
ಉಳಿಸಿಕೊಳ್ಳಬಹುದಾಗಿತ್ತೇನೋ
ದಳಪತಿ!

ಬಹುಶಃ
ಮಾಡದಿದ್ದರೆ
ಕಿತಾಪತಿ!!

Sunday, 25 August 2013

ಲಕ್


ಚಿಕ್ಕ
ವಯಸ್ಸಿನಲ್ಲೇ
ರಮ್ಯಾಗೆ
ಹೊಡೆಯಿತು
ಲಕ್!

ಗೆದ್ದೇಬಿಟ್ಟರು
ಕೊಟ್ಟು
ಒಂದು
ಸಿಂಪಥಿ
ಲುಕ್!!