Friday 12 October 2012

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ : ಭಾಗ -೨


ಕಳೆದ ಸಂಚಿಕೆಯಿಂದ

ನಾವು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿ.ಜೆ.ಪಿ ಮತ್ತು ತೃತೀಯ ರಂಗದ ಅಧಿಕಾರವನ್ನು ಕೇಂದ್ರದಲ್ಲಿ ಕಂಡಿದ್ದೇವೆ. ನಮ್ಮ ರಾಜ್ಯದಲ್ಲೂ ಕಾಂಗ್ರೆಸ್, ಬಿ.ಜೆ.ಪಿ ಮತ್ತು ಜನತಾ ಪಕ್ಷದ ಅಧಿಕಾರವನ್ನೂ ಸಹ ಕಂಡಿದ್ದೇವೆ. ಯಾವ ಪಕ್ಷ ಕೆಂದ್ರದಲ್ಲಿ ಅಧಿಕಾರ ನಡೆಸಿದರೂ ಅದರ ಲಾಭ ಕರ್ನಾಟಕಕ್ಕೆ ಹೆಚ್ಚೇನೂ ಆಗಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ನಮ್ಮವರೇ ಪ್ರಧಾನ ಮಂತ್ರಿಗಳಾಗಿದ್ದಾಗಲೂ ಸಹ ನಮಗೆ ಹೆಚ್ಚು ಲಾಭವಾಗಿಲ್ಲ. ನಾವು ಎಲ್ಲವನ್ನೂ ಹೋರಾಟ ಮಾಡಿ ಗಳಿಸಿದ್ದೇ ಆಗಿದೆ ಹೊರತು ನಮಗೆ ನ್ಯಾಯವಾಗಿ ಸಿಗಬೇಕಾದ ಯಾವ ಸವಲತ್ತೂ ನಮಗೆ ಸಿಕ್ಕಿಲ್ಲ ಎಂಬುದು ನಮ್ಮ ದುರ್ದೈವ.

ಕಾವೇರಿ ನದಿಗೆ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಅಣೆಕಟ್ಟು ಕಟ್ಟಿ ನಮಗೆ ಅದರಿಂದ ನೆಮ್ಮದಿ ಸಿಗುವ ಬದಲು ಯಾವಗಲೂ ಗಲಾಟೆ, ಹೋರಾಟ, ನ್ಯಾಯಾಲಯದಲ್ಲಿ ಬಡಿದಾಟ, ಉಪವಾಸ ಸತ್ಯಾಗ್ರಹ ಹೀಗೆ ಅದರ ಸುಳಿಯಲ್ಲೇ ಸುತ್ತುತ್ತಿದ್ದೇವೆ. ಕಾವೇರಿ ನದಿ ನೀರಿನ ಹೋರಾಟವಂತೂ ಸುಮಾರು ೧೨ನೇ ಶತಮಾನದಿಂದ ನಡೆದುಕೊಂಡು ಬರುತ್ತಿದೆ. ಈಗಲೂ ಅದಕ್ಕೆ ಸರಿಯಾದ ಉಪಶಮನ ಸಿಕ್ಕಿಲ್ಲ. ಪ್ರತಿ ವರ್ಷವೂ ಒಂದಲ್ಲಾ ಒಂದು ತೊಂದರೆ ಅನುಭವಿಸುತ್ತಲೇ ಇದ್ದೇವೆ. ನಮ್ಮ ಪಕ್ಕದ ರಾಜ್ಯ ತಮಿಳು ನಾಡು ಯಾವ ಒಂದು ಹೋರಾಟ ನಡೆಸದೆ ಅದಕ್ಕೆ ಸಿಗಿಬೇಕಾದ ಪಾಲಿಗಿಂತಲೂ ಹೆಚ್ಚು ನೀರನ್ನು ಪ್ರತಿ ವರ್ಷವೂ ಉಪಯೋಗಿಸುತ್ತಲೇ ಇದೆ. ನಾವು ಪ್ರತಿ ವರ್ಷವೂ ಹೋರಾಡುತ್ತಲೇ ಇದ್ದೇವೆ. ಆದರೂ ಯಾವ ಒಂದು ಪ್ರಯೋಜನವೂ ಆಗುತ್ತಿಲ್ಲ.

ನಾವು ಉಪವಾಸ, ಕಾನೂನು ಹೋರಾಟ, ಪ್ರತಿಭಟನೆ, ಕರ್ನಾಟಕ ಬಂದ್ ಹೀಗೆ ಅನೇಕೆ ವಿಧಗಳಲ್ಲಿ ಪ್ರತಿಭಟಿಸಿದರೂ ನಮಗೇ ಹೆಚ್ಚಿನ ನಷ್ಟವಾಗುತ್ತಿದೆಯೇ ಹೊರತು, ನಮಗೆ ಅದರಿಂದ ಬಂದ ಲಾಭವಾದರೂ ಏನು? ಇದರಲ್ಲಿ ಕೇಂದ್ರ ಸಾರ್ಕಾರದಿಂದಾಗಲೀ, ಕಾವೇರಿ ಪ್ರಾಧಿಕಾರದಿಂದಾಗಲೀ ಮತ್ತು ನ್ಯಾಯಾಲಯಗಳಿಂದ ನಮಗೆ ಹೆಚ್ಚಿನ ನೆರವು ಸಿಕ್ಕಿಲ್ಲ. ಇದಕ್ಕೆ ಕಾರಣವೇನು? ನಾವು ಮಾಡುತ್ತಿರುವ ತಪ್ಪಾದರೂ ಏನು? ನಾವು ಮೊದಲು ಮಾಡಿದ ತಪ್ಪಿನಿಂದ ಈಗಲೂ ಪಾಠವನ್ನೇ ಕಲಿತಿಲ್ಲ. ಹೀಗಾದರೆ ಮುಂದೇನು? ಪ್ರತಿ ಸಾರಿ ಪ್ರಾಧಿಕಾರ ಅಥವಾ ನ್ಯಾಯಾಲಯ ತಮಿಳು ನಾಡಿಗೆ ನೀರನ್ನು ಬಿಡಿ ಎಂದು ತೀರ್ಪು ಕೊಟ್ಟಾಗ ನಾವು ಅದನ್ನು ವಿಧಿ ಇಲ್ಲದೆ ಪಾಲಿಸಬೇಕು ಇಲ್ಲದಿದ್ದರೆ ನ್ಯಾಯಾಲಯ ನಿಂದನೆ ಆಗುತ್ತದೆ ಮತ್ತು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರುವ ಸಂಧರ್ಭವೂ ಎದುರಾಗಬಹುದು.  ನಾವು ಈ ವಿಷಯದಲ್ಲಿ ಬುದ್ದಿವಂತಿಕೆಯನ್ನು ಉಪಯೋಗಿಸದೇ ಇರುವುದು ಹೆಚ್ಚಿನ ಸಂದರ್ಭದಲ್ಲಿ ಕಂಡುಬರುತ್ತದೆ. (ಮಿಕ್ಕದ್ದು ನಾಳೆಗೆ)

No comments:

Post a Comment