Monday 1 October 2012

ಆರ್.ಕೆ ನಾರಾಯಣ್:ಭಾಗ-೪


ಕಳೆದ ಸಂಚಿಕೆಯಿಂದ:

ಆರ್.ಕೆ ಯವರ ವಿಚಾರದಲ್ಲೂ ಹೀಗೇ ಆಗಿರುವಂತೆ ಕಾಣಿಸುತ್ತದೆ. ಅವರ ತಂದೆಯವರು ತಮಿಳುನಾಡಿನ ಯಾವುದೋ ಮೂಲೆಯಿಂದ ೭೦/೮೦ ವರ್ಷದ ಹಿಂದೆ ಕನ್ನಡನಾಡಿಗೆ ಭವಿಷ್ಯ ಆರಿಸಲು ಬಂದಾಗ ಇಲ್ಲಿನ ಪರಿಸರ, ಆಚಾರ, ವಿಚಾರ, ಸಂಸ್ಕೃತಿಗೆ ಹೊಂದಿಕೊಳ್ಳಬೇಕಾಗಿತ್ತು. ಆದರೆ ಅವರು ನಮ್ಮಲ್ಲಿ ಒಂದಾಗಲಿಲ್ಲ, ಒಂದು ದ್ವೀಪದಂತೆ ಇದ್ದುಬಿಟ್ಟರೇನೋ? ಹಾಗಾಗಿ ಕನ್ನಡಿಗರಿಗೆ ಅವರನ್ನು ನಮ್ಮವರೆಂದು ಭಾವುಸುವುದು ಕಷ್ಟವಾಗಬಹುದೆನೋ? ಅದರೂ ಸಹ ಅವರ ಸ್ಮಾರಕವನ್ನು ಯಾರೂ ಪ್ರಬಲವಾಗಿ ವಿರೋಧಿಸುತ್ತಿಲ್ಲ. ಅವರ ಮನೆಯನ್ನು ಸ್ಮಾರಕವನ್ನಾಗಿ ಮಾಡಿದರೆ ಆಮರಣಾಂತ ಉಪವಾಸ ಮಾಡುತ್ತೇವೆಂದಾಗಲೀ, ಕರ್ನಾಟಕ ಬಂದ್ ಮಾಡುತ್ತೇವೆಂದಾಗಲೀ, ಮತ್ತೊಂದಾಗಲೀ ಮಾಡುತ್ತಿಲ್ಲ. ಅದನ್ನು ವಿರೋಧಿಸುತ್ತಿರುವವರ ಪ್ರಶ್ನೆ ಎನೆಂದರೆ ಇದು ಸರಿಯಾ? ಎಂಬುದು ಅಷ್ಟೇ. ಅದನ್ನು ಕೇಳುವ ಹಕ್ಕೂ ಸಹ ಕನ್ನಡಿಗರಿಗೆ ಇಲ್ಲವೇ?

ನಮ್ಮ ಅನೇಕ ಸಾಹಿತಿಗಳ ಮನೆ ಹೇಗೆದೆ ಎಂಬುದು ಸರ್ಕಾರಕ್ಕೆ/ಸಾರ್ವಜನಿಕರಿಗೆ ಅರಿವಿಗೆ ಬರದೇನೂ ಇಲ್ಲ. ನಮ್ಮಲ್ಲಿ ಅ.ನ.ಕೃ, ತ.ರಾ.ಸು, ಟಿ.ಕೆ.ರಾಮರಾವ್ ಹೀಗೆ ಅನೇಕ ಲೇಖಕರ ಮನೆ ಈಗ ಹೇಗಿದೆ? ಎಂಬುದು ಸರ್ಕಾರಕ್ಕೆ/ಕನ್ನಡಿಗರಿಗೆ ತಿಳಿಯದ ವಿಷಯವೇನೂ ಅಲ್ಲ. ಒಂದು ಉದಾಹರಣೆಯೆಂದರೆ ಅ.ನ.ಕೃ ಅವರ ಮನೆ, ಅವರು ದಿವಂಗತರಾದ ಬಳಿಕ ಒಂದು ಚಪ್ಪಲಿ ಅಂಗಡಿಯಾಗಿ ಮಾರ್ಪಟ್ಟಿತ್ತು. ಆ ಹಳೆಯ ಮನೆಯನ್ನು ಅದರ ಈಗಿನ ಹೊಸ ಮಾಲೀಕರು ಒಡೆದು ಹಾಕಿ ಹೊಸ ಕಟ್ಟಡದಲ್ಲಿ ಅಂಗಡಿ/ಮನೆಯನ್ನು ಕಟ್ಟಿ ಈಗ ಬಾಡಿಗೆಗೆ ಇರಿಸಿದ್ದಾರೆ. ಕನ್ನಡಕ್ಕಾಗಿ ದುಡಿದ ಮಾತ್ತೋರ್ವ ವೀರ ಕನ್ನಡ ಸೇನಾನಿ ಮ.ರಾಮಮೂರ್ತಿಯವರ ಹಣೆಬರಹವೂ ಇಂತಹದ್ದೇ ಕಥೆ. ಹೇಳುತ್ತಾ ಹೋದರೆ ಈ ವಿಷಯವಾಗಿ ಒಂದು ದೊಡ್ಡ ಕಾದಂಬರಿಯನ್ನೇ ಬರೆಯಬಹುದು. (ಮಿಕ್ಕಿದ್ದು ನಾಳೆಗೆ)


No comments:

Post a Comment