Tuesday 16 October 2012

ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ : ಭಾಗ -೩


ಕಳೆದ ಸಂಚಿಕೆಯಿಂದ

ಒಂದು ಕಡೆ ತಮಿಳು ನಾಡು ಜೊತೆ ಕಾವೇರಿ ನೀರಿಗಾಗಿ ಉಚ್ಚ ನ್ಯಾಯಾಲಯದಲ್ಲಿ ಕಾದಾಟ, ಮಗದೊಂದು ಕಡೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಬೆಳಗಾವಿಗಾಗಿ ಹೋರಾಟ, ಆಂದ್ರ ಪ್ರದೇಶದೊಂದಿಗೆ ಕೃಷ್ಣಾ ನದಿ ನೀರಿಗಾಗಿ ಕಿತ್ತಾಟ, ಗೋವಾ ರಾಜ್ಯದೊಂದಿಗೆ ಮಹಾದಾಯಿ ನೀರಿಗಾಗಿ ಜಗಳ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಅರ್ಜಿ ಚೆನ್ನೈ ಮುಖ್ಯ ನ್ಯಾಯಾಲಯದಲ್ಲಿ ಹಾಗೇ ಉಳಿದುಕೊಂಡಿದೆ. ಕೇಂದ್ರ ಸರ್ಕಾರದ ಜೊತೆ ವಿದ್ಯುತ್, ಗೊಬ್ಬರ, ಬೀಜ, ಕಲ್ಲಿದ್ದಲು, ನೆರೆ/ಬರ ಪರಿಹಾರಕ್ಕೆ, ಕೆಂದ್ರದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ, ಹೀಗೆ ಎಲ್ಲದಕ್ಕೂ ನಾವು ಹೋರಾಡಲೇಬೇಕಾದ ಪರಿಸ್ಥಿತಿಗೆ ನಮ್ಮನ್ನು ನಾವು ದೂಡಿಕೊಂಡಿದ್ದೇವೆ. ನಮ್ಮನ್ನು ನೋಡಿ ಇತರೆ ರಾಜ್ಯದವರು ಮತ್ತು ನ್ಯಾಯಾಲಯವೂ ಸಹ ಕನ್ನಡಿಗರು ಜಗಳಗಂಡರು, ಇತರರೊಂದಿಗೆ ಹೊಂದಿಕೊಳ್ಳಲು ಬಾರದವರು ಎಂಬ ಹಣೆ ಪಟ್ಟಿ ಬೇರೆ ಕಟ್ಟಿದೆ.

ಇವೆಲ್ಲವನ್ನೂ ಕಂಡಾಗ ಇವೆಲ್ಲವನ್ನೂ ನಮಗೇ ಯಾಕೆ ಹೀಗಾಗುತ್ತಿದೆ ಎಂಬ ಭಾವನೆ ಬರುವುದು ಸಹಜ. ನಮ್ಮ ದೇಶದ ಯಾವೊಂದು ರಾಜ್ಯವೂ ಹೀಗೆ ಪ್ರತಿಯೊಂದಕ್ಕೂ ಹೋರಾಡುತ್ತಿರುವುದು ಕಂಡು ಬರುವುದಿಲ್ಲ. ಇದೆಲ್ಲಾ ನಮಗೇ ಯಾಕೆ ಆಗುತ್ತಿದೆ? (ಮಿಕ್ಕಿದ್ದು ನಾಳೆಗೆ)

No comments:

Post a Comment