Wednesday, 31 July 2013

ಜಟಾಪಟಿ


ಸಿದ್ದು
ಕುಮಾರಣ್ಣ
ವಿಧಾನಸೌಧ ದಲ್ಲಿ
ಜಟಾಪಟಿ!

ಮಾಡೊ
ಕೆಲಸ
ಬಿಟ್ಟು
ಜನರಿಗೆ
ಕೊಡ್ತಾ
ಇದಾರೆ
ಮನೋರಂಜನೆ
ಬಿಟ್ಟಿ!!

Tuesday, 30 July 2013

ನೂರು ಕೋಟಿ


ಇದ್ದರೆ
ನೂರು
ಕೋಟಿ
ರಾಜ್ಯಸಭಾ
ಸೀಟು!

ಇಲ್ಲದಿದ್ದರೆ
ಕಾಯಬೇಕು
ಅದರ
ಗೇಟು!!

Monday, 29 July 2013

ಕಮಾಲ್


ಸಿಕ್ಕಿ
ಹಾಕಿಕೊಂಡು
ಬಿಟ್ಟ
ಶ್ರೀಶಾಂತ್
ಐ.ಪಿ.ಎಲ್ ನಲ್ಲಿ
ಸೊಂಟದಲ್ಲಿ
ಸಿಗಿಸಿಕೊಂಡು
ಟವಲ್!

ಶ್ರೀನಿವಾಸ್
ರಾಜ್ ಕುಂದ್ರಾ
ತಪ್ಪಿಸಿಕೊಂಡು
ಬಿಟ್ರು
ಒಳಗೊಳಗೇ
ಏನೋ
ಮಾಡಿ
ಕಮಾಲ್!!

Sunday, 28 July 2013

ಭಾರತ ರತ್ನ


ಉಳಿಸಿಕೊಳ್ಳಲು
ಭಾರತ ರತ್ನ
ಪ್ರಶಸ್ತಿ
ಅನ್ತಾ ಇರಬೇಕು
ಕೊಟ್ಟವರಿಗೆ
ನಮೋ ನಮೋ!

ಇಲ್ಲದಿದ್ದರೆ
ಅನ್ತಾರೆ
ಸಾಲೆ ಭಾಗೋ!!

Saturday, 27 July 2013

ಐದು ಸಾವಿರ


ನಗರದಲ್ಲಿ
ಜೀವನ
ಮಾಡಲು
ಒಂದು
ಸಂಸಾರಕ್ಕೆ
ಸಾಕಂತೆ
ಐದು ಸಾವಿರ
ರೂಪಾಯಿ!

ಬಾಯಿ ತಪ್ಪಿ
ಅಂದಿರಬೇಕು
ಡಾಲರ್
ಬದಲಿಗೆ
ರೂಪಾಯಿ!!

Friday, 26 July 2013

ಕನಿಷ್ಠ


ಕೆಲವರಿಗೆ
ಕಾಂಗ್ರೆಸ್
ಇಷ್ಟ!

ಮತ್ತೆ
ಕಲವರಿಗೆ
ಬಿ.ಜೆ.ಪಿ
ಕಷ್ಟ!

ಇಷ್ಟ
ಕಷ್ಟಗಳ
ನಡುವೆ
ಪ್ರಜೆಗಳು
ಆಗದಿದ್ದರೆ
ಸಾಕು
ಕನಿಷ್ಠ!!