Saturday, 29 June 2013

ಇಂಗು ತಿಂದ ಮಂಗ


ಅಧಿಕಾರಕ್ಕೆ
ಬರಲು
ಮಾಡಿದರು
ನಿತೀಶ್
ಬಿ.ಜೆ.ಪಿ
ಸಂಗ!


ಪಾಪ ಈಗ
ನೋಡಿದರೆ
ಬಿ.ಜೆ.ಪಿ.
ಸ್ಥಿತಿ
ಆಯಿತು
ಇಂಗು
ತಿಂದ
ಮಂಗ!!

Friday, 28 June 2013

ಕೆ.ಆರ್.ಎಸ್


ಕೆ.ಆರ್.ಎಸ್
ತುಂಬುತ್ತಿದೆ
ಈಗಲೇ
ನೋಡಿಬಿಡಿ
ಸರಿಯಾಗಿ
ಕಣ್ ಬಿಟ್ಟು!

ಆಮೇಲೆ
ನೋಡಬೇಕಾದೀತು
ತಮಿಳುನಾಡಿಗೆ
ಹರಿಯುವುದನ್ನು
ಬಾಯ್ ಬಿಟ್ಟು!!

Wednesday, 26 June 2013

ಮೊಬೈಲ್:


ಮಾತು ಮನೆ ಕೆಡೆಸಿತು
ತೂತು ಒಲೆ ಕೆಡಿಸಿತು
ಹೀಗೊಂದು ಗಾದೆ ಮಾತು
ಈಗ ನೋಡಿದ್ರೆ
ಎಲ್ಲೆಲ್ಲೂ ಮಾತೇ ಮಾತು
ಎಲ್ಲರ ಕೈಯಲ್ಲೂ ಮೊಬೈಲೇ
ಯಾರು ಯಾರ ಹತ್ರ ಮಾತಾಡ್ತಾರೋ?

ಯಾವನಿಗ್ಗೊತ್ತು?
ಯಾಕೆ ಮಾತಾಡ್ತಾರೊ
ಆ ದೇವ್ರಿಗೊತ್ತು.
ಯು ಡೋಂಟ್ ಅಸ್ಕ್ ಮಿ ಯಾ!
ದಟ್ಸ್ ಮೈ ಪರ್ಸನಲ್ ಯು ನೊ!

ಗಂಡನಿಗೆ ಹೆಂಡ್ತಿ ಹತ್ರ ಮಾತಾಡಕ್ಕೆ ಟೈಮಿಲ್ಲ
ಹೆಂಡ್ತಿಗೆ ಗಂಡನತ್ರ
ಅಪ್ಪ ಅಮ್ಮಂಗೆ ಮಕ್ಕಳತ್ರ
ಮಕ್ಕಳಿಗೆ ಅಪ್ಪಾ ಅಮ್ಮನ ಹತ್ರ
ಇನ್ನು ತಾತ ಅಜ್ಜಿ, ಅಕ್ಕ ತಂಗಿ
ಅಣ್ಣ ತಮ್ಮ, ಕೇಳ್ಳೇಬೇಡಿ
ದೊಡ್ಡಪ್ಪ, ದೊಡ್ಡಮ್ಮ, ಚಿಕ್ಕಪ್ಪ ಚಿಕ್ಕಮ್ಮ
ಮರತೇ ಬಿಡಿ!

ಗುರುತು ಪರಿಚಯ ಇಲ್ದೋಇರೋರ ಹತ್ರ
ಮಾತು ಜಾಸ್ತಿ.
ಇರೋರ ಹತ್ರ ತುಂಬಾ ಕಮ್ಮಿ
ಜಾಸ್ತಿ ಮಾತಾಡಿದ್ರೆ ಮೊಬೈಲ್ನಲ್ಲಿ ಕ್ಯಾನ್ಸರ್ ಅಂದ್ರೂ ಅಷ್ಟೆ
ಟ್ಯೂಮರ್ ಅಂದ್ರೂ ಅಷ್ಟೆ
ನೊ ಫ಼ರ್ಕ್ ಪಡ್ತಾ ಯಾರ್!

ಯಾರಿಗೆ ಹೋಳೋಣಾ ನಮ್ಮ ಪ್ರಾಬ್ಲಂ
ಯಾರಿಗೂ ಹೇಳ್ಬೇಡಿ,
ನೀವೇ ಇಟ್ಕೊಳ್ಳಿ
ಮಾತಾಡಿ ಆಡಿ ಹೊಸ ಸಂಬಂಧ ಪಡೆದವರೆಷ್ಟೋ
ಆಡ್ದೇ ಆಡ್ದೇ ಸಂಬಂಧ ಕಳಕೊಂಡವರೆಷ್ಟೋ
ಜೋಬಲ್ಲಿ ಕರೆನ್ಸಿ ಇಲ್ದೇ ಇದ್ರೂ
ಮೊಬೈಲಲ್ಲಿ ಮಾತ್ರ ಇರಲೇಬೇಕು!!

Tuesday, 25 June 2013

ಸೈನಿಕರು


ನಮ್ಮ
ದೇಶದಲ್ಲಿ
ಏನೇ
ಆದ್ರೂ
ದುರಂತ
ಮೊದಲು
ಬರುವವರು
ಸೈನಿಕರು!

ನಂತರ
ಬಂದು
ನಾಟಕ
ಮಾಡುವವರು
ನೇತಾರರು!!

Monday, 24 June 2013

ಗುಲ್ಡು


ಚಿದಂಬರಂ
ಏನೋ
ಹೇಳ್ತಾರೆ
ತಗೋಬೇಡಿ
ಗೋಲ್ಡು!

ಈ ಮಾತನ್ನೇ
ಹೆಂಡ್ತಿಗೆ
ಅಂದ್ರೆ
ಅನ್ತಾಳೆ
ಗುಲ್ಡು!!