Saturday, 15 June 2013

ಚಿತೆಗಳು


ಚಿತೆಗಳು ಉರಿಯುತ್ತಿವೆ
ಧಗಧಹಿಸಿ ಎಲ್ಲವನ್ನೂ
ಮರೆಮಾಚುತ್ತಿವೆ!

ಕೂದಲು, ಉಗುರು, ರಕ್ತ, ಮಾಂಸ
ದೇಹದ ಎಲ್ಲಾ ಅಂಗಗಳು, ನರ ನಾಡಿಗಳು
ಒದೊಂದೋ ಅಥವಾ ಒಟ್ಟಿಗೆಯೋ ದಹಿಸುತ್ತಿವೆ!

ಇದುವರೆಗೂ ಜತನದಿಂದ
ಕಾಪಾಡಿದ ಕಾಮ, ಕ್ರೋಧ,
ಮೋಹ, ಲೋಭ, ಮದ,
ಮಾತ್ಸರ್ಯಗಳು ಕೊನೆಗೂ
ನಾನೇ ಗೆದ್ದೆ ಎಂದು ಅಣಕಿಸುತ್ತಿವೆ!

ಸ್ನೇಹ, ಪ್ರೀತಿ, ವಾತ್ಸಲ್ಯ,
ಭವ ಬಂಧನ, ಸಂಬಂಧಗಳು
ಕಳಚಿ ಬೆತ್ತಲಾಗುತ್ತಿವೆ!

ಇಷ್ಟು ದಿನ ಉಂಡ ನೋವು, ನಲಿವು,
ಸುಖ:, ದುಖ:, ಚಿಂತೆ, ರೋಗ, ರುಜಿನ
ಕೆಂಪಗೆ ಕಾದು, ಬೆಂದು
ಸುಟ್ಟು ಭಸ್ಮವಾಗುತ್ತಿವೆ!

ದೂರದಲ್ಲಿ ಯಾರಿಗೂ ಕಾಣದಂತೆ
ಒಂದು ಆರ್ತನಾದ ಕಂಡೂ ಕಾಣದಂತೆ
ಕಣ್ಣೀರಿಡುತ್ತಿದೆ!!

No comments:

Post a Comment