Thursday, 31 October 2013

ಸಿರಿಗನ್ನಡಂ ಗೆಲ್ಗೆ


ನಾಲಕ್ಕು ಜನ ಸೇರಿದಾಗ ಕನ್ನಡ
ಮಾತಾಡೋಕೆ ನಾಚಿಕೆ
ಕನ್ನಡ ಓದಕ್ಕೆ, ಬರೆಯಕ್ಕೆ ಬರಲ್ಲ!

ಕನ್ನಡ ಚಿತ್ರ ನೋಡಲ್ಲ
ಕಾವ್ಯ, ನಾಟಕ ಗೊತ್ತಿಲ್ಲ!

ಕಥೆ, ಕಾದಂಬರಿ ಓದಲ್ಲ
ಕನ್ನಡ ಪತ್ರಿಕೆ ತರಿಸಲ್ಲ!

ಮಕ್ಕಳ ಹತ್ರ ಏನಿದ್ರೂ ಇಂಗ್ಲೀಷೇ
ಅದರೂ ನಾವು ಕನ್ನಡಿಗರು!

"ಸಿರಿಗನ್ನಡಂ ಗೆಲ್ಗೆ"
ಸಿರಿಗನ್ನಡಂ ಬಾಳ್ಗೆ"
ಅನ್ನೋದು ಮಾತ್ರ ಬಿಡಲ್ಲ!!

Wednesday, 30 October 2013

ಬುದ್ದಿವಂತರ ಭಯ


ಅಮೇರಿಕಾದ
ದೊಡ್ಡಣ್ಣನಿಗೆ
ಬೆಂಗಳೂರಿನ
ಬುದ್ದಿವಂತರನ್ನು
ಕಂಡರೆ
ಭಯ!

ನಮಗೂ
ಅಷ್ಟೇ
ಇಲ್ಲಿನ
ಬುದ್ದಿವಂತರೆಲ್ಲಾ
ಅಲ್ಲಿಗೆ
ಹಾರಿ
ಹೋಗ್ತಾರಲ್ಲಾ
ಅನ್ನೋ
ಭಯ!!

Tuesday, 29 October 2013

ಕ್ಯಾಟಗಿರಿ…..ಜಿ


ಮುಖ್ಯಮಂತ್ರಿಗಳು
ಯಾರಿಗೆ
ಬೇಕಾದರೂ
ಕೊಡಬಹುದಂತೆ
ಬಿ.ಡಿ.ಎ
ನಿವೇಶನ
ಕ್ಯಾಟಗಿರಿ
ಜಿ!!

ಆದರೆ
ಅವರಿಗೆ
ಸದಾ
ಅನ್ನುತ್ತಿರಬೇಕಂತೆ
ಜಿ…ಜಿ…ಜಿ…!!

Monday, 28 October 2013

ನಿಧಿ


ಪಾಕಿಸ್ತಾನಕ್ಕೂ
ಬೇಕಂತೆ
ಸಿಕ್ಕಿದರೆ
ನಿಧಿ!

ಕೊಡದಿದ್ದರೆ
ಆಡ್ತಾರಂತೆನೋ
ಜಗಳ
ಸರಹದ್ದಿನ
ಬದಿ!!

Sunday, 27 October 2013

ಶೋಭನ್ ಸರ್ಕಾರ್


ಅಗಿಯಿರಿ
ಭೂಮಿ,
ಸಿಗತ್ತೆ
ಚಿನ್ನದ
ನಿಧಿ
ಅಂದರು
ಶೋಭನ್
ಸರ್ಕಾರ್!

ಹಿಂದೂ
ಮುಂದೂ
ನೋಡದೆ
ತಲೆ
ಆಡಿಸಿತು
ಪ್ರಜಾತಂತ್ರ
ಸರ್ಕಾರ್!!