Saturday, 26 January 2013

ಸಿದ್ದಾಂತ


ಎಲ್ಲಾ
ರಾಜಕೀಯ
ಪಕ್ಷಗಳದ್ದು
ಎರಡೇ
ಸಿದ್ದಾಂತ!

ಒಂದು
ಸರ್ಕಾರ
ರಚಿಸುವುದು!
ಮತ್ತೊಂದು
ಬೀಳಿಸುವುದು!

ಇದಕ್ಕಾಗಿ
ಮಾಡುವರು
ಹಲವು
ರಾದ್ದಾಂತ!!


Friday, 25 January 2013

ಗಣರಾಜ್ಯೋತ್ಸವ



ಇಂದು
ಗಣ
ರಾಜ್ಯೋತ್ಸವ!

ಇದು
ಗಣ್ಯರದೇ
ಉತ್ಸವ!

ಗಣರು
ಆಟಕ್ಕುಂಟು
ಲೆಕ್ಕಕ್ಕಿಲ್ಲ!

ಇದುವೇ
ಈ ದೇಶದ
ಕಟು ವಾಸ್ತವ!!

Thursday, 24 January 2013

ಕಥೆ ಬರೆಯಿರಿ


ಕನ್ನಡ ಬ್ಲಾಗ್ ನವರು
ಮತ್ತೊಮ್ಮೆ
ಇಟ್ಟರೊಂದು
ಸ್ಪರ್ಧೆ!

ಈ ಬಾರಿ
ಕಥೆ ಬರೆಯಿರಿ,
ಅದೂ
ನಿಮ್ಮಿಷ್ಟದಂತೆ!

ಆದರೆ ಬಹುಮಾನ
ಕೊಡುವುದು
ಅವರಿಗೆ ಇಷ್ಟವಾದರೆ
ಮಾತ್ರವಂತೆ!

ಮಿಕ್ಕವುಗಳನ್ನು
ಏನು
ಮಾಡುತ್ತಾರೋ
ತಿಳಿಯದು!

ಬಹುಶಃ
ಕನ್ನಡ
ಸಿನಿಮಾದವರಿಗೆ
ಕೊಡಬಹುದೇನೋ?

ಹೇಗಿದ್ದರೂ
ಅವರ ಬಳಿ
ಕಥೆಗಳೇ
ಇಲ್ಲವಂತಲ್ಲಾ!!

Wednesday, 23 January 2013

ಆರ್ಜಿ-ಮರ್ಜಿ



ಬೆಳೆ ನಷ್ಟ
ಭರ್ತಿ ಕೋರಿ
ತಮಿಳು ನಾಡು
ಸುಪ್ರೀಂ ಕೂರ್ಟ್ ನಲ್ಲಿ
ಅರ್ಜಿ!

ಈ ಬಾರಿಯಾದರೂ
ಸರಿಯಾಗಿ ಮಳೆ
ಸುರಿಸೆಂದು
ನಾವು
ಮಾಡಬೇಕು
ವರುಣದೇವನಲ್ಲಿ
ಮರ್ಜಿ!!

Tuesday, 22 January 2013

ಫೇಸ್ ಬುಕ್ ಸ್ನೇಹಿತರು


ಫೇಸ್ ಬುಕ್ ನಲ್ಲಿ
ಸ್ನೇಹಿತರು
ಒಟ್ಟಿಗೆ
ಸೇರುತ್ತಾರೆ
ತಮ್ಮಲ್ಲಿ
ಸಮಾನ
ಮನಸ್ಸಿದೆ
ಎಂದು
ತೋರಲು!

ಅದೇ
ನಮ್ಮ
ಶಾಸಕರೂ
ಒಟ್ಟಿಗೆ
ಸೇರುತ್ತಾರೆ
ಏನಾದರೂ
ಕಿತಾಪತಿ
ಮಾಡಲು!!