Sunday 12 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೨


ಕಳೆದ ಸಂಚಿಕೆಯಿಂದ:

ಲಕ್ಷ್ಮೀ ಪುತ್ರರು ಎಂಬ ಕಾರ್ಯಕ್ರಮವನ್ನು ನೋಡುತ್ತಿದ್ದಾಗ, ನಾನು ಬಹಳ ಹಿಂದೆ ಓದಿದ ರಾಬರ್ಟ್ ಕಿಯೋಸಾಕಿಯವರ ಪುಸ್ತಕಗಳು ನನಗೆ ನೆನಪಾದವು. ರಾಬರ್ಟ್ ಕಿಯೋಸಾಕಿಯವರ “ರಿಚ್ ಡ್ಯಾಡ್, ಪೂರ್ ಡ್ಯಾಡ್” ಸರಣಿಯ ಪುಸ್ತಕಗಳು ಇಂತಹ ವಿಷಯಗಳ ಬಗ್ಗೆ ಸೊಗಸಾಗಿ ವಿವರಿಸಲ್ಪಟ್ಟಿದೆ. ಆ ಸರಣಿಯ ನಾಲ್ಕೈದು ಪುಸ್ತಕಗಳನ್ನು ನಾನು ಓದಿದ್ದೇನೆ. ಅ ಪುಸ್ತಕಗಳಲ್ಲಿ ಬರುವ ಒಂದು ವಿದ್ಯಾವಂತ ತಂದೆಯ ಪಾತ್ರ ತನ್ನ ಮಗನಿಗೆ “ಶಾಲೆಗೆ ಹೋಗು, ಹೆಚ್ಚಿನ ಅಂಕಗಳನ್ನು ಪಡೆ ಮತ್ತು ಒಳ್ಳೆಯ ಸುರಕ್ಷಿತ ಉದ್ಯೋಗ ಗಳಿಸು ಎಂದು ಹೇಳಿದರೆ, ಮತ್ತೊಂದು ಶ್ರೀಮಂತ ಅವಿದ್ಯಾವಂತ ತಂದೆಯ ಪಾತ್ರ “ಶಾಲೆಗೆ ಹೋಗು, ಪದವಿಧರನಾಗು, ದೊಡ್ಡ ಉದ್ದಿಮೆದಾರನಾಗು, ಮತ್ತು ಯಶಸ್ವಿ ಹೂಡಿಕೆದಾರನಾಗು ಎಂದು ತನ್ನ ಮಗನಿಗೆ ಹೇಳುತ್ತದೆ.

 ಇದೇ ಲೇಖಕರ ಮತ್ತೊಂದು ಪುಸ್ತಕದಲ್ಲಿ “ನೀನು ಶ್ರೀಮಂತನಾಗಬೇಕು ಮತ್ತು ಸಂತೋಷದಿಂದ ಇರಬೇಕು ಎಂದಾದರೆ ಶಾಲೆಗೆ ಹೋಗಬೇಡ” ಎಂದು ಹೇಳುತ್ತದೆ. ಶಾಲೆಗಳಲ್ಲಿ ವಿದ್ಯೆ ಕಲಿಸುತ್ತಾರೆ, ಆದರೆ ಹಣ ಗಳಿಸುವುದು ಹೇಗೆ ಎಂಬುದನ್ನು ಕಲಿಸುವುದಿಲ್ಲ.  ಹಣ ಹೇಗೆ ಗಳಿಸಬೇಕು ಎಂಬುದನ್ನು ನಾವು ನಮ್ಮ ಸ್ವಪ್ರಯತ್ನದಿಂದ ಕಲಿಯಬೇಕು. ಈ ಪುಸ್ತಕಗಳು ಕನ್ನಡದಲ್ಲಿ ಅನುವಾದಗೊಂಡಿದೆಯೋ, ಇಲ್ಲವೋ ನನಗೆ ತಿಳಿಯದು. ಇದೇ ಲೇಖಕರ ಮತ್ತೊಂದು ಪುಸ್ತಕದಲ್ಲಿ (ಗೈಡ್ ಟು ಇನ್ವೆಸ್ಟಿಂಗ್) “ಶ್ರೀಮಂತರು ಯಾವುದರಲ್ಲಿ ಬಂಡವಾಳ ಹೂಡುತ್ತಾರೋ, ಅದರಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಆಸಕ್ತಿ ವಹಿಸುವುದಿಲ್ಲ ಎಂದು ಲೇಖಕರು ತಿಳಿಸುತ್ತಾರೆ. ಹೀಗೆ ಅನೇಕ ವಿಚಾರಧಾರೆಗಳು ಈ ಪುಸ್ತಕಗಳಲ್ಲಿ ಅಡಕವಾಗಿವೆ. ಇಂತಹ ಪುಸ್ತಕಗಳನ್ನು ಓದುವ ಮೂಲಕ ಹೆಚ್ಚಿನ ಜ್ಞಾನವನ್ನು ಅಸಕ್ತರು ಪಡೆಯಬಹುದು. ಲೇಖಕರನ್ನು ಮತ್ತು ಅವರ ವಿಚಾರ ಧಾರೆಗಳನ್ನು ತಿಳಿಯಲು ಮತ್ತು ಅವರ ಪುಸ್ತಕಗಳಿಗಾಗಿ, ಆಸಕ್ತರು www.richdad.com ನಲ್ಲಿ ನೊಂದಾಯಿಸಿಕೊಳ್ಳಬಹುದು.  (ಮಿಕ್ಕಿದ್ದು ನಾಳೆಗೆ)

No comments:

Post a Comment