Wednesday 15 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೫



ಕಳೆದ ಸಂಚಿಕೆಯಿಂದ:

ವಿದ್ಯಾವಂತರಾದ ಮಾತ್ರಕ್ಕೆ ಲಕ್ಷ್ಮಿ ಒಲಿದು ಬರುವುದಿಲ್ಲವೆನೋ? ಹಾಗಿದ್ದರೆ ನಮಗೆ ಪಾಠ ಕಲಿಸಿದ ಪ್ರಾಥಮಿಕ/ಮಾಧ್ಯಮಿಕ/ ಶಾಲೆಯ ಗುರುಗಳು, ಕಾಲೇಜಿನ ಪ್ರಾಧ್ಯಾಪಕರು, ಅಷ್ಜೇ ಏಕೆ ನಮ್ಮ ರಾಜ್ಯದ ಹೆಮ್ಮೆಯ ವಾಸ್ತುಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯನವರು, ಅಬ್ದುಲ್ ಕಲಾಂನಂತಹ ವಿಜ್ಞಾನಿಗಳು, ನಮ್ಮ ಸುತ್ತ ಮುತ್ತ ಇರುವ ವೈದ್ಯರು, ಇಂಜಿನಿಯರ್, ಸಿ.ಎ ಓದಿರುವವರು, ಸಾಪ್ಟ್ ವೇರ್ ಇಂಜಿನಿಯರ್, ಐ.ಎ.ಎಸ್, ಐ.ಪಿ.ಎಸ್ ಓದಿರುವವರು, ನಮ್ಮ ಕವಿವರ್ಯರು ಯಾಕೆ ಶ್ರೀಮಂತರ ಪಟ್ಟಿಯಲ್ಲಿಲ್ಲ? ಆದರೆ ಸಾಮಾನ್ಯವಾಗಿ ಅದು ಹಾಗೆ ಆಗುವುದಿಲ್ಲ. ಕೇವಲ ವಿದ್ಯೆ ಒಂದಿದ್ದರೆ ಮಾತ್ರ ಶ್ರೀಮಂತನಾಗಲು ಸಾಧ್ಯವಿಲ್ಲ. ಹೆಚ್ಚಿನ ವಿದ್ಯಾವಂತರು ಶ್ರೀಮಂತರ ಬಳಿ ಕೆಲಸ ಮಾಡುತ್ತಿರುತ್ತಾರೆ. ವಿಶ್ವದ ಅತಿ ಹೆಚ್ಚಿನ ಶ್ರೀಮಂತರ ಪಟ್ಟಿಯಲ್ಲಿರುವ ಹಲವರು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲವೆಂಬುದೂ ಸಹ ಅಷ್ಟೇ ಸತ್ಯ.

ನಮ್ಮ ದೇಶದಲ್ಲಿ ಹೆಚ್ಚಿನ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರಿಗೆ ಒಳ್ಳೆಯ ಕೆಲಸ ಸಿಕ್ಕಿದರೆ ಸಾಕು ಅವರ ಜೀವನ ಸುಖವಾಗಿರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಇರುತ್ತಾರೆ.  ಮಕ್ಕಳೂ ಸಹ ಚೆನ್ನಾಗಿ ಓದಿ ಅತಿ ಹೆಚ್ಚಿನ ಅಂಕಗಳನ್ನು ಪಡೆದು ಮೈಕ್ರೋಸಾಫ್ಟ್, ಇನ್ಫೋಸಿಸ್, ವಿಪ್ಪ್ರೋ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಸಿಕ್ಕಿದರೆ ಸಾಕು ತಮ್ಮ ಜೀವನ ಪಾವನವಾಯಿತು, ನಮ್ಮ ಜೀವನ ಇನ್ನು ಸುರಕ್ಷಿತವಾಯಿತು ಎಂದು ಭಾವಿಸುತ್ತಾರೆ. ಇನ್ನು ಕೆಲವರು ಸರ್ಕಾರಿ ಕೆಲಸದಲ್ಲಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೂತ್ತಾರೆ. ಇದರಾಚೆಗೆ ಹೆಚ್ಚು ಜನ ಯೋಚಿಸುವುದಿಲ್ಲ. ನಾವು ಬುದ್ದಿವಂತರಿದ್ದೇವೆ, ವಿದ್ಯಾವಂತರಿದ್ದೇವೆ, ನಾವೂ ಸಹ ಹೊಸ ಸಂಸ್ಥೆಗಳನ್ನು ಪ್ರಾರಂಭಿಸಬಹುದು ಎಂದು ಹೆಚ್ಚಿನ ಜನರು ಯೋಚಿಸುವುದೇ ಇಲ್ಲ. ಇನ್ನು ವೈದ್ಯ, ವಾಸ್ತುಶಿಲ್ಪ, ಸಿ.ಎ ಮುಂತಾದ ವಿದ್ಯಾರ್ಥಿಗಳ ಯೋಚನೆಯೂ ಇದಕ್ಕಿಂತ ಭಿನ್ನವಾಗೇನೂ ಇರುವುದಿಲ್ಲ. ಪಾಲಕರು ಮಕ್ಕಳಿಗೆ ಅದರಾಚೆಗೆ ಯೋಚಿಸುವುದನ್ನು ತಿಳಿಹೇಳಬೇಕು. ಅದೇ, ಶ್ರೀಮಂತರ ತಂದೆ ತಾಯಿಯರು ತಮ್ಮ ಮಕ್ಕಳಿಗೆ ಯಾವುದಾದರೂ ಹೊಸ ಉದ್ದಿಮೆಯನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತಾರೆ. (ಮಿಕ್ಕಿದ್ದು ನಾಳೆಗೆ)

No comments:

Post a Comment