Monday 13 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೩


ಕಳೆದ ಸಂಚಿಕೆಯಿಂದ:

ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ, ಆದರೆ ಬಡವನಾಗೇ ಸಾಯುವುದು ಖಂಡಿತಾ ನಿನ್ನದೇ ತಪ್ಪು ಎಂಬುದು ಬಿಲ್ ಗೇಟ್ಸ್ ಅವರ ಜನಪ್ರಿಯ ಹೇಳಿಕೆ. ಸಾಮಾನ್ಯರಾದ ನಾವುಗಳು ಅನೇಕ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ, ಹಾಗಾಗಿ ನಮಗೆ ಶ್ರೀಮಂತಿಕೆ ಸ್ವಲ್ಪ ದೂರ.  ಬಡವ/ಮಧ್ಯಮವರ್ಗದವನು ಶ್ರೀಮಂತನಂತೆ ಯೋಚಿಸಿ ಖರ್ಚು ಮಾಡಿದರೆ ಶ್ರೀಮಂತ, ಬಡವ/ಮಧ್ಯಮವರ್ಗದವನಂತೆ ಯೋಚಿಸಿ ಖರ್ಚು ಮಾಡುತ್ತಾನೆ. ಬಡವರಿಗೆ/ಮಧ್ಯಮವರ್ಗದವನರಿಗೆ ಹಣದ ಬೆಲೆ ಸರಿಯಾಗಿ ತಿಳಿದುಕೊಳ್ಳುವುದು ಕಷ್ಟಸಾಧ್ಯವಾದರೆ, ಶ್ರೀಮಂತನು ತಾನು ಸಂಪಾದಿಸುವ ಪ್ರತಿಯೊಂದು ಪೈಸೆಯೂ ಎಷ್ಟು ಅಮೂಲ್ಯವೆಂಬುದು ತಿಳಿದುಕೊಂಡಿರುತ್ತಾನೆ. ಬಡವರಿಗೆ/ಮಧ್ಯಮವರ್ಗದವರಿಗೆ ಒಂದೇ ಸಲ ದೊಡ್ಡ ಮೊತ್ತದ ಹಣಬಂದರೆ ಅವರಿಗೆ ಅದನ್ನು ಸರಿಯಾಗಿ ಕಾಪಾಡಿಕೊಳ್ಳುವುದೂ ಸಹ ಬರುವುದಿಲ್ಲ. ಬಂದ ಹಣವನ್ನು ಏನು ಮಾಡಬೇಕೆಂದು ಯೋಚಿಸಿದೆ ದೊಡ್ಡ ಮನೆ, ಕಾರು, ಕುಡಿತ ಹೀಗೆ ಎಲ್ಲದಕ್ಕೂ ಹಣವನು ವ್ಯಯಿಸಿ ಮುಂದೆ ಬಡವರಾಗೇ ಉಳಿದುಕೊಳ್ಳುವರು. ನೆಪೋಲಿಯನ ಹಿಲ್ ಅವರ “ಥಿಂಕ್ ಅಂಡ್ ಗ್ರೊ ರಿಚ್” ಪುಸ್ತಕವನ್ನು ಆಸಕ್ತರು ಗಮನಿಸಬಹುದು. ಈ ಪುಸ್ತಕವು ಕನ್ನಡಕ್ಕೆ ಅನುವಾದ ಮಾಡಲ್ಪಟ್ಟಿದೆ.



ಶ್ರೀಮಂತನು ತನ್ನಲಿರುವ ಹಣವನ್ನು ಹೇಗೆ ಬೆಳೆಸಬಹುದೆಂದು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾನೆ. ಬಡವರು/ಮಧ್ಯಮ ವರ್ಗದವರು ತಮ್ಮ ಹೆಚ್ಚಿನ ಸಮಯವನ್ನು ಕಾಡುಹರಟೆ, ಮನೋರಂಜನೆ ಹೀಗೆ ಸುಖಾಸುಮ್ಮನೆ ಕಳೆದರೆ, ಶ್ರೀಮಂತ ತನ್ನ ಹೆಚ್ಚಿನ ಸಮಯವನ್ನು ತನ್ನ ವ್ಯಾಪಾರ ವಹಿವಾಟಿನಲ್ಲಿ ಕಳೆಯುತ್ತಾನೆ. ಬಡವನಿಗೆ ಹೇಗೆ ಕೆಲಸ ಮಾಡಬೇಕೆಂದು ಮಾತ್ರ ಗೊತ್ತು, ಆದರೆ ಶ್ರೀಮಂತ ತನ್ನ ಕೆಲಸಗಾರರಿಂದ ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅರಿತಿರುತ್ತಾನೆ. ಬಡವರು/ಮಧ್ಯಮವರ್ಗದವನರು ಶ್ರೀಮಂತರಂತೆ ಯೋಚಿಸಿ, ಸರಿಯಾದ ನಿರ್ಧಾರ ಕೈಗೊಂಡು ಕಠಿಣ ಪರಿಶ್ರಮದಿಂದ ಮತ್ತು ತಮ್ಮ ಪ್ರಾಮಾಣಿಕ ನಡೆನುಡಿಗಳಿಂದ ಮುಂದೆಬರಬಹುದು.

ಶ್ರೀಮಂತರೆಂದರೆ ಯಾರು? ಶ್ರೀಮಂತನೆನೆಸಿಕೊಳ್ಳಲು ಎಷ್ಟು ಹಣವಿರಬೇಕು? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ. ನಿಮ್ಮ ಎದುರಿಗೆ ಕಂಡ ಬಿಕ್ಷುಕನಿಗೆ ನೀವು ಹತ್ತು ರೂಪಾಯಿಯನ್ನು ಕೊಡುವಿರಾದರೆ, ಅವನ ಕಣ್ಣಲ್ಲಿ ನೀವು ಶ್ರೀಮಂತರು. ನಿಮ್ಮ ಮನೆ ಕೆಲಸಮಾಡುವವರಿಗೆ ನೀವು ತಿಂಗಳಿಗೆ ೧೦೦೦ ರೂಪಾಯಿ ಸಂಬಳ ಕೊಡುವಿರಾದರೆ ಅವರ ಕಣ್ಣಲ್ಲಿ ನೀವು ಅವರಿಗಿಂತ ಶ್ರೀಮಂತರು. ನಿಮಗೆ ೨೫,೦೦೦ ರೂಪಾಯಿ ಸಂಬಳ ಕೊಡುವ ನಿಮ್ಮ ಯಜಮಾನ ನಿಮ್ಮ ಕಣ್ಣಲ್ಲಿ ಶ್ರೀಮಂತ. ಅವರ ಕಣ್ಣಿಗೆ ಮತ್ಯಾರೋ ಶ್ರೀಮಂತರಂತೆ ಕಂಡಿರುತ್ತಾರೆ,  ಪಟ್ಟಿ ಹೀಗೆಯೇ ಮುಂದುವರೆಯುತ್ತದೆ. ನಮ್ಮ ಜೀವನ ಶೈಲಿಯನ್ನು ಸ್ವಲ್ಪವೂ ಕಡಿಮೆಮಾಡಿಕೊಳ್ಳದೆ, ನಾವು ಯಾವ ಕೆಲಸ ಕಾರ್ಯವನ್ನೂ ಮಾಡದೆ ಎಷ್ಟು ತಿಂಗಳು/ವರ್ಷ ನಾವು ಕಳೆಯುತ್ತೇವೆ ಎಂಬುದರ ಮೇಲೆ ನಮ್ಮ ಶ್ರೀಮಂತಿಕೆ ಅಳೆಯಲ್ಪಡುವುದು. ಉದಾ: ನಮ್ಮ ಮನೆಯ ಖರ್ಚು ಸುಮಾರು ತಿಂಗಳಿಗೆ ೧೦,೦೦೦ ಇದ್ದು, ನಮ್ಮ ಹತ್ತಿರ ೧ ಲಕ್ಷ ರೂಪಾಯಿ ಇದ್ದರೆ ನಾವು ೧೦ ತಿಂಗಳ ಶ್ರೀಮಂತನೆಂದುಕೊಂಡರೆ ಅಡ್ಡಿಯಿಲ್ಲ. ಅನೀರಿಕ್ಷಿತವಾಗಿ ಏನಾದರೂ ನಮ್ಮ ಜೀವನದಲ್ಲಿ ಒಳ್ಳೆಯ/ಕೆಟ್ಟ ಘಟನೆಗಳು ಜರುಗಿದಾಗ, ಅದರ ನಿರ್ವಹಣೆಯ ಖರ್ಚು ಪ್ರತ್ಯೇಕ. (ಮಿಕ್ಕಿದ್ದು ನಾಳೆಗೆ)

No comments:

Post a Comment