Thursday 16 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೬


ಕಳೆದ ಸಂಚಿಕೆಯಿಂದ:
ಯಾವುದೇ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಹಣ ಬೇಕು ಎಂಬ ತಪ್ಪು ಕಲ್ಪನೆ ಅನೇಕರದ್ದು. ನಿಮ್ಮಲ್ಲಿ ಸಂಸ್ಥೆಯನ್ನು ಸ್ಥಾಪಿಸಲು ನಿಜವಾಗಿ ಯೋಚಿಸುವವರು ಹಣಕ್ಕಾಗಿ ಬೇರೆ ಬೇರೆ ಮೂಲಗಳನ್ನು ಹುಡುಕುತ್ತಿರುತ್ತಾರೆ. ಸಂಸ್ಥೆಯನ್ನು ಸ್ಥಾಪಿಸಲು ಹಣಕ್ಕಿಂತ ಮುಖ್ಯವಾಗಿ ಬೇಕಿರುವುದು ಒಂದು ಅತ್ಯದ್ಭುತವಾದ ಕಲ್ಪನೆ. ಉದಾ: ಇನ್ಫೋಸಿಸ್ ಸಂಸ್ಥೆಯನ್ನು ನಾರಾಯಣಮೂರ್ತಿಯವರು ಅವರ ಹೆಂಡತಿಯ ಬಳಿ ಹತ್ತು ಸಾವಿರ ರೊಪಾಯಿಯ ಸಾಲ ಪಡೆದು ಒಂದು ಚಿಕ್ಕ ಜಾಗದಲ್ಲಿ ೧೯೮೦ನೆಯ ಇಸವಿಯಲ್ಲಿ ಸ್ಥಾಪಿಸಿದ್ದರು. ಈಗ ನೋಡಿ ಅದು ಬೆಳೆದು ಹೇಗೆ ಹೆಮ್ಮರವಾಗಿ ನಿಂತಿದೆ ಎಂದು, ಅಂದು ಅವರ ಬಳಿ ಇದ್ದದ್ದು ಕೇವಲ ಒಂದು ಅದ್ಭುತವಾದ ಕಲ್ಪನೆ ಮತ್ತು ಅದು ಸಾಕಾರವಾಗುವ ಕನಸು. ನಿಮ್ಮಲ್ಲಿ ಹೊಸ ಕಲ್ಪನೆ ಇದ್ದರೆ ಯಾರು ಬೇಕಾದರೂ ಒದು ಸಂಸ್ಥೆಯನ್ನು ಸ್ಥಾಪಿಸಬಹುದು. ಹಣಕ್ಕಾಗು ನೀವು ಬ್ಯಾಂಕ್ ಮೊರೆ ಹೋಗಬಹುದು ಅಥವಾ ನಿಮ್ಮ ಕಲ್ಪನೆ ನಿಜವಾಗಿಯೂ ಚೆನ್ನಾಗಿದ್ದರೆ ಹಣ ಹೂಡುವವರು ಮುಂದೆ ಬರಬಹುದು, ಹೀಗೆ ಹಣ ಹೊಂದಿಸಲು ಅನೇಕ ದಾರಿಗಳೆವೆ. ನಾವು ಕಣ್ಣು ಬಿಟ್ಟು ನೋಡಬೇಕಷ್ಟೇ.


ವಿದ್ಯಾವಂತರು ಬೇರೆಯವರಿಗಾಗಿಯೇ ಕೆಲಸ ಮಾಡುವುದು ಹೆಚ್ಚು.  ಶ್ರೀಮಂತ ವ್ಯಕ್ತಿ ಅಂತಹ ಬುದ್ದಿವಂತರನ್ನು ತನ್ನ ಕೆಲಸಕ್ಕೆ ಸಂಬಳ ಕೊಟ್ಟು ತನಗಾಗಿ ದುಡಿಯುವಂತೆ ಮಾಡುತ್ತಾನೆ. ಇದೇ ಅವನ ಶ್ರೀಮಂತಿಕೆಯ ಗುಟ್ಟಿರಬಹುದೇ? ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಧೈರ್ಯ, ತಾಳ್ಮೆ, ಗುರಿ, ಕನಸು, ಸಾದಿಸಲೇ ಬೇಕೆಂಬ ಛಲ, ಸರಿಯಾದ ಸಮಯಕ್ಕೆ ಸೂಕ್ತವಾದ ಮತ್ತು ದೃಡವಾದ ನಿರ್ಧಾರ, ನಿರ್ಧಾರವನ್ನು ಪದೇಪದೇ ಬದಲಾಯಿಸದೆ ಇರುವುದು, ದೂರದೃಷ್ಟಿ, ಸಮಯದ ಮತ್ತು ಹಣಕಾಸಿನ ಸಾಕ್ತ ನಿರ್ವಹಣೆ, ಕೆಲಸಗಾರರ ಸೂಕ್ತ ನಿರ್ವಹಣೆ, ನಾಯಕತ್ವದ ಗುಣ, ನಿಖರ ಮಾಹಿತಿ, ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳದ ಗುಣ, ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಮಾನಸಿಕವಾಗಿ ದೃಡವಾಗಿರುವುದು, ಸಮಾಜದ ಬಗ್ಗೆ ಪ್ರೀತಿ, ವಿಶ್ವಾಸ, ಎಲ್ಲರೊಂದಿಗೂ ಹೊಂದಿಕೊಂಡುಹೋಗುವ ಗುಣ, ಇತರರಿಗಿಂತ ಭಿನ್ನವಾಗಿ ಯೋಚಿಸುವ ಗುಣ ಇವೆಲ್ಲವೂ ಇರುವವನು ಮಾತ್ರ ಶ್ರೀಮಂತನಾಗಲು ಅರ್ಹತೆಯನ್ನು ಹೊಂದಿರುತ್ತಾನೆ. (ಮಿಕ್ಕಿದ್ದು ನಾಳೆಗೆ)

No comments:

Post a Comment