Saturday 18 August 2012

ಲಕ್ಷ್ಮೀ ಪುತ್ರರಾಗುವುದು ಹೇಗೆ? –ಹೇಳದೇ ಉಳಿದ ಮಾತು:


ನೀವು ಯಾವುದೇ ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ಸಾಮಾನ್ಯವಾಗಿ ಅವರು ಕೇವಲ ಹಣಕಾಸಿನ ವಿಷಯದಲ್ಲಿ ಮಾತ್ರ ಶ್ರೀಮಂತರಾರಿರುವುದಿಲ್ಲ, ಅವರು ದೊಡ್ಡ ದಾನಿಗಳೂ ಸಹ ಆಗಿರುತ್ತಾರೆ. ಸಮಾಜಕ್ಕೆ ಅವರ ಕೊಡುಗೆ ಬಹಳಷ್ಟಿರುತ್ತದೆ. ಈ ಸಮಾಜದಿಂದ ನಾವು ಶ್ರೀಮಂತಿಕೆಯನ್ನು ಪಡೆದಿದ್ದೇವೆ, ಸಮಾಜಕ್ಕೆ ನಾವು ಏನಾದರೂ ಕೊಡಬೇಕೆಂಬ ಬಯಕೆ ಅವರಲ್ಲಿ ಸದಾ ಇರುತ್ತದೆ. ಕಾರ್ಲೋಸ್, ಬಿಲ್ ಗೇಟ್ಸ್, ವಾರನ್ ಬಫೇಟ್, ಲಕ್ಷ್ಮೀ ಮಿಟ್ಟಲ್ ಮುಂತಾದ ಶ್ರೀಮಂತರು, ಇನ್ಫೋಸಿಸ್, ವಿಪ್ರೋ, ಬಜಾಜ್, ಮುಂತಾದ ಸಂಸ್ಥೆಗಳು ಅವರ ಅದಾಯದಲ್ಲಿ ಇಂತಿಷ್ಟು ಭಾಗವನ್ನು ತೆಗೆದಿರಿಸಿ, ಅದನ್ನು ಸಮಾಜದ ಒಳಿತಿಗಾಗಿ ಬಳಸುತ್ತಿರುತ್ತಾರೆ, ದಾನ ಧರ್ಮಗಳನ್ನು ಮಾಡುತ್ತಿರುತ್ತಾರೆ.  ಬಿಲ್ ಗೇಟ್ಸ್ ತಮ್ಮ ೮೦% ಹಣವನ್ನು ಸಮಾಜದ ಓಳಿತಿಗಾಗಿ ಬಳಸಲು ನಿರ್ಧರಿಸಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರವೇನೆಂದರೆ ನಿಮಗೆ ಬೇರೆಯವರಿಗೆ/ಕಷ್ಟದಲ್ಲಿರುವವರಿಗೆ ಸಹಾಯ/ದಾನ/ಧರ್ಮ ಮಾಡುವ ಗುಣವಿದ್ದರೆ ಮಾತ್ರ ನಿಮ್ಮ ಸಂಪತ್ತು ವೃದ್ದಿಯಾಗುವುದು.  ನಿಜವಾದ ಶ್ರೀಮಂತನಿಗೆ ಇದರ ಗುಟ್ಟು ಗೊತ್ತು.

No comments:

Post a Comment