Tuesday, 30 April 2013

ಅಮೂಲ್ಯ


ಮತ
ಹಾಕುವ
ತನಕ
ಮತದಾರ
ಅಮೂಲ್ಯ!

ನಂತರ
ಅವನು
ಅಪಮೌಲ್ಯ!!

Monday, 29 April 2013

ತಿಮ್ಮಪ್ಪನ ಹುಂಡಿ


ಕೋಟಿ ಕೋಟಿ
ಹಣ ಸುರಿಯುತ್ತಾರೆ
ತಿಮ್ಮಪ್ಪನ
ಹುಂಡಿಗೆ!

ಮನಸ್ಸು ಬಾರದು
ಒಂದು ತುತ್ತು
ಅನ್ನ ನೀಡಲು
ಬಡವನ
ಹೊಟ್ಟೆಗೆ!

Sunday, 28 April 2013

ಕೆಸರು


ರಾಜಕಾರಣಿಗಳು
ಒಬ್ಬರ ಮೇಲೆ
ಒಬ್ಬರು
ಎರಚುತ್ತಾರೆ
ಕೆಸರು!

ಕಳೆದುಕೊಳ್ಳುತ್ತಾರೆ
ಅಳಿದುಳಿದ
ಕೊಂಚ
ಹೆಸರು!!

Saturday, 27 April 2013

ಆಯೋಗ್ಯರು


ಹಲ್ಲು ಕಿರಿದು
ಕೈ ಜೋಡಿಸಿ
ಪೋಸ್ಟರ್ ಗಳಲ್ಲಿ
ಮುಖ ತೋರಿಸುವ
ಅಯೋಗ್ಯರು!

ಹಾಕುತ್ತಿರಬೇಕು
ಹಿಡಿ ಶಾಪ
ಇಂತಹ ಅವಕಾಶ
ತಪ್ಪಿಸಿದಕ್ಕಾಗಿ
ಚುನಾವಣಾ
ಆಯೋಗಕ್ಕೆ!!

ತೆಂಗಿನ ಕಾಯಿ


ಸಾಕು
ಒಬ್ಬ
ಧನುಂಜಯ!

ಕೊಳೆಸಲು
ಯಡ್ಡಿಯ
ತೆಂಗಿನಕಾಯ!!

Thursday, 25 April 2013

ಕೋಟ್ಯಾಧಿಪತಿ!


ಪುನೀತ್ ಕೇಳುವ
ಎಲ್ಲಾ ಪ್ರಶ್ನೆಗಳಿಗೆ
ಉತ್ತರಿಸಿದರೆ ಮಾತ್ರ
ನೀವಾಗುವಿರಿ
ಕೋಟ್ಯಾಧಿಪತಿ!

ಅದಾಗದಿದ್ದರೆ
ತೆಪ್ಪಗೆ ಹೆಣ್ಣು ಹುಡುಕಿ
ಮದುವೆಯಾಗಿಬಿಡಿ!

ನಿಮ್ಮ ಹೆಂಡತಿಯೇ
ನಿಮಗೆ ಕೋಟಿ
ನೀವು ಅವರ ಪತಿ!

ಅದೀರಲ್ಲಾ ನೀವೂ
ಕೋಟ್ಯಾಧಿಪತಿ!!