Monday 10 September 2012

ದೇವರೆಲ್ಲಿದ್ದಾನೆ? ಭಾಗ-೩


ಕಳೆದ ಸಂಚಿಕೆಯಿಂದ

ಹೌದು, ದೇವರೆಲ್ಲಿದ್ದಾನೆ? ನೀವು ಆಸ್ತಿಕರನ್ನು ಕೇಳಿದರೆ ಅವರು ಕೊಡುವ ಉತ್ತರ “ದೇವರು ಎಲ್ಲಿಲ್ಲ ಸ್ವಾಮಿ, ಅವನು ಎಲ್ಲಾ ಕಡೆಯೂ ಇದ್ದಾನೆ, ಅವನು ಸರ್ವಾಂತಯಾಮಿ” ಎಂದು. ಇದೇ ಪ್ರಶ್ನೆಯನ್ನು ನೀವು ನಾಸ್ತಿಕರಿಗೆ ಕೇಳಿದರೆ ಅವರು ಕೊಡುವ ಉತ್ತರ “ದೇವರು ಎಲ್ಲಿಯೂ ಇಲ್ಲ, ಅಕಸ್ಮಾತ್ ಇದ್ದರೆ ಈ ಭೂಲೋಕ ಇಷ್ಟು ಕೆಟ್ಟು ಹೋಗುತ್ತಿತ್ತೇ? ನೀವು ಹೇಳುವ ಭಗವಂತ ನಿಜವಾಗಿಯೂ ಇದ್ದರೆ ಅವನು ಇಲ್ಲಿ ನಡೆಯುವ ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರ, ಹಿಂಸಾಚಾರ, ದಗಾ, ಮೋಸ, ದರೋಡೆ, ಕಪಟ, ನೀಚತನ ಎಲ್ಲವನ್ನೂ ನೊಡಿಕೊಂಡು ಸುಮ್ಮನಿರುತ್ತಿದ್ದನೇ, ಇಲ್ಲ ಸ್ವಾಮಿ ದೇವರು, ದಿಂಡಿರು ಯಾರೂ ಇಲ್ಲ, ಎಲ್ಲಾ ಸುಳ್ಳು” ಎಂಬ ಸಿದ್ದ ಉತ್ತರ ಅವರ ಬಾಯಿಂದ ಬರುತ್ತದೆ.

ಭೂಮಂಡಲದಲ್ಲಿ ಇರುವ ಎಲ್ಲಾ ಜಾತಿ, ಮತ, ಧರ್ಮಗಳಲ್ಲಿ ದೇವರ ಬಗ್ಗೆಸ್ವರ್ಗ, ನರಕಗಳ ಬಗ್ಗೆ, ಉಲ್ಲೇಖವಿದೆ, ಎಲ್ಲಾ ಜಾತಿ ಮತ, ಧರ್ಮದ ಹೆಚ್ಚಿನ ಜನ ದೇವರನ್ನು ನಂಬುತ್ತಾರೆ. ಪ್ರಪಂಚದಲ್ಲಿ ಆಸ್ತಿಕರೇ ಹೆಚ್ಚು, ನಾಸ್ತಿಕರು ಇದ್ದರೂ ಅದು ಬಹಳ ಕಡಿಮೆ. ಎಲ್ಲರೂ ಅವರವರ ಜಾತಿ, ಮತ ಧರ್ಮದ ಅಧಾರದಲ್ಲಿ ಅವರು ನಂಬುವ ದೇವರನ್ನು ಅವರದೇ ಆದ ವಿಧಿ, ವಿಧಾನದಲ್ಲಿ ಪೂಜಿಸುತ್ತಾರೆ, ಆರಾಧಿಸುತ್ತಾರೆ, ಅವನಲ್ಲಿ ತಮ್ಮ ಬೇಡಿಕೆಯನ್ನು ಇಡುತ್ತಾರೆ, ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ತಮ್ಮ ಬೇಡಿಕೆ ಈಡೇರಿದಾಗ ಮತ್ತಷ್ಟು ದೇವರನ್ನು ನಂಬುತ್ತಾರೆ. ತಮ್ಮ ಬೇಡಿಕೆ ಈಡೇರದಿದ್ದಾಗ ತಮ್ಮ ಅದೃಷ್ಠ ಸರಿಯಿಲ್ಲ ಎಂದು ತಮ್ಮನ್ನೇ ಹಳಿದುಕೊಳ್ಳುತ್ತಾರೆ.

ದೇವರು ನಿಜವಾಗಿಯೂ ಇದ್ದಾನಾ? ಇದ್ದರೆ ಅವನು ಎಲ್ಲಿದ್ದಾನೆ? ಅವನು ಹೇಗಿದ್ದಾನೆ? ಅವನು ನಮ್ಮಂತೆಯೇ ಮನುಷ್ಯರ ಥರ ಇದ್ದಾನೆಯೆ? ಅವನು ಸರ್ವಶಕ್ತನಾ? ಅವನಲ್ಲಿ ನಿಜವಾಗಿಯೂ ಎಷ್ಟು ಶಕ್ತಿ ಇದೆ? ಅವನು ಒಳ್ಳೆಯವನಾ? ಅವನು ಎಷ್ಟು ಒಳ್ಳೆಯವನು? ಕೆಟ್ಟವನಾ? ಎಷ್ಟು ಕೆಟ್ಟವನು?  ಕರುಣಾಮಯಿಯಾ? ಅವನ ಕರುಣೆ ಎಷ್ಟರಮಟ್ಟಿಗಿದೆ? ಹೀಗೆ ನೂರಾರು ಉತ್ತರವಿಲ್ಲದ ಪ್ರಶ್ನೆಗಳೇ ಜಾಸ್ತಿ. (ಮಿಕ್ಕಿದ್ದು ನಾಳೆಗೆ)

No comments:

Post a Comment