Wednesday 12 September 2012

ದೇವರೆಲ್ಲಿದ್ದಾನೆ? ಭಾಗ-೫


ಕಳೆದ ಸಂಚಿಕೆಯಿಂದ

ದೇವರಿರುವುದೇ ನಿಜವಾಗಿದ್ದರೆ, ಕೆಲವು ಮಕ್ಕಳು ಹುಟ್ಟುವಾಗಲೇ ಅಂಗವಿಕಲತೆಯಿಂದ, ಖಾಯಿಲೆಯಿಂದ ಬಳಲುತ್ತಾರೆ? ಕೆಲ ಮಕ್ಕಳು, ಹೆಂಗಸರು, ವೃದ್ದರು ಪಡ ಬಾರದ ಪಾಡು ಅನುಭವಿಸುತ್ತಾರೆ. ಕೆಲವರು ದಡ್ಡ ದರಿದ್ರರು, ಮತ್ತೆ ಕೆಲವರು ಮಾತ್ರ ಶ್ರೀಮಂತರು. ಕೆಲವರಿಗೆ ಮಾತ್ರ ವಿದ್ಯೆ ಬುದ್ದಿ ಇರುತ್ತದೆ, ಮತ್ತೆ ಕೆಲವರಿಗೆ ವಿದ್ಯಾ ಬುದ್ದಿ ನೈವೇದ್ಯ. ಕೆಲವರು ಮಾತ್ರ ಬಲಶಾಲಿಗಳಾದರೆ ಮತ್ತೆ ಹಲವರು ಶಕ್ತಿ ಹೀನರು. ತಿನ್ನಲು ಆಹಾರವಿಲ್ಲ, ನಿಲ್ಲಲು ನೆಲೆಯಿಲ್ಲ, ಉಡಲು ಬಟ್ಟೆಯಿಲ್ಲ, ಮತ್ತೆ ಕೆಲವರಿಗೆ ಎಲ್ಲಾ ಸುಖ ಸೌಲಭ್ಯಗಳು ಇವೆ.  ಒಳ್ಳೆಯ ಜನರು ಕಷ್ಟ ಕಾರ್ಪಣ್ಯದಿಂದ ನರಳುತ್ತಿರುವುದನ್ನು ನಾವು ದಿನವೂ ನೋಡುತ್ತೇವೆ. ನೀಚರು, ದುಷ್ಟರು ಚೆನ್ನಾಗಿಯೇ ಇರುತ್ತಾರೆ. ದೇವರು ಯಾಕೆ ಈ ರೀತಿ ಬೇಧ ಭಾವವನ್ನು ತೋರುತ್ತಾನೆ. ದೇವರ ಸೃಷ್ಠಿಯಲ್ಲಿ ಯಾಕೆ ಹೀಗೆ ಏರು ಪೇರು? ಅಥವಾ ದೇವರಿಗೆ ವೈವಿಧ್ಯಮಯ ಸೃಷ್ಠಿಯಲ್ಲಿ ಆಸಕ್ತಿಯೇ?

ನಾವೆಲ್ಲರೂ ಮತ್ತು ಈ ಬ್ರಹ್ಮಾಂಡ ಭಗವಂತನ ಸೃಷ್ಠಿಯೆಂದೇ ನಂಬಿದವರು, “ಒಂದು ಅಣುವಿಗೆ ಮತ್ತೊಂದು, ಮಗದೊಂದು ಅಣು ಸೇರಿ ಈ ಬೃಹತ್ ಬ್ರಹ್ಮಾಂಡ ಉಧ್ವವವಾಗಿದೆ. ನಾವು ಮೂಲ ಕಣವಾದ ದೇವಕಣದ ರಹಸ್ಯವನ್ನು ಗುರುತಿಸಿರುವೆವು” ಎಂದು ವಿಜ್ನಾನಿಗಳು ಹೇಳಿರುವುದನ್ನು ನಾವು ಇತ್ತೀಚೆಗೆ ಕೇಳಿದ್ದೇವೆ. ಅದು ನಿಜವಾಗಿಯೂ ದೇವಕಣದ ರಹಸ್ಯವೇ? ವಿಜ್ನಾನಿಗಳು ಚಂದ್ರನ ರಹಸ್ಯ ಕಂಡು ಹಿಡಿದು ಈಗ ಮಂಗಳನಲ್ಲಿಗೆ ತಮ್ಮ ದೃಷ್ಠಿ ನೆಟ್ಟಿದ್ದಾರೆ. ಉಳಿದ ಗ್ರಹಗಳ ಬಗ್ಗೆಯೂ ಬೆಳಕು ಚೆಲ್ಲಲು ಹೊರಟಿದ್ದಾರೆ. ನಾವು ನವಗ್ರಹಗಳನ್ನು ಪೂಜ್ಯನೀಯ ಭಾವದಿಂದ ನೋಡುತ್ತಿದ್ದೇವೆ. (ಮಿಕ್ಕಿದ್ದು ನಾಳೆಗೆ)

No comments:

Post a Comment